ಬಳಕೆದಾರರ ಸಂಖ್ಯೆ ಹೆಚ್ಚಿಸಲು ಹೊಸ ಪಾಲುದಾರಿಕೆ ಮಾಡಿಕೊಂಡ ಟ್ರೂ ಕಾಲರ್‌!

|

ಅಪರಿಚಿತ ಸಂಖ್ಯೆಗಳಿಂದ ಯಾವುದಾದರೂ ಕರೆ ಬಂದರೆ ಮೊದಲು ನೆನಪಾಗೋದೆ ಟ್ರೂ ಕಾಲರ್‌ ಅಪ್ಲಿಕೇಶನ್‌. ಇದೇ ಕಾರಣಕ್ಕೆ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಕೆದಾರರು ಟ್ರೂ ಕಾಲರ್‌ ಅಪ್ಲಿಕೇಶನ್ ಅನ್ನು ಬಳಸುತ್ತಾರೆ. ಇನ್ನು ಟ್ರೂ ಕಾಲರ್‌ ಅಪ್ಲಿಕೇಶನ್‌ ಕೂಡ ಬಳಕೆದಾರರ ಅನುಕೂಲಕ್ಕಾಗಿ ಹಲವು ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ಭಾರತ, ಇಂಡೋನೇಷ್ಯಾ, ಮಲೇಷಿಯಾ ಮತ್ತು ಲ್ಯಾಟಿನ್ ಅಮೆರಿಕದಂತಹ ಮಾರುಕಟ್ಟೆಗಳ ಸ್ಮಾರ್ಟ್‌ಫೋನ್‌ಗಳಲ್ಲಿ ಟ್ರೂಕಾಲರ್ ಅಪ್ಲಿಕೇಶನ್ ಅನ್ನು ಸಂಯೋಜಿಸಲು ಜಾಗತಿಕ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ತಯಾರಕರೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.

ಅಪ್ಲಿಕೇಶನ್‌

ಹೌದು, ಟ್ರೂ ಕಾಲರ್‌ ಅಪ್ಲಿಕೇಶನ್‌ ಜಾಗತಿಕವಾಗಿ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ತಯಾರಕರೊಂದಿಗೆ ಹೊಸ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಮುಂದಿನ ದಿನಗಳಲ್ಲಿ ಬರುವ ಸ್ಮಾರ್ಟ್‌ಫೋನ್‌ಗಳು ಟ್ರೂ ಕಾಲರ್‌ ಅಪ್ಲಿಕೇಶನ್‌ ಅನ್ನು ಮೊದಲೇ ಒಳಗೊಂಡಿರುತ್ತದೆ ಎನ್ನಲಾಗಿದೆ. ಇದರಿಂದ ಭವಿಷ್ಯದಲ್ಲಿ ಟ್ರೂ ಕಾಲರ್‌ ಅಪ್ಲಿಕೇಶನ್‌ ಸ್ಮಾರ್ಟ್‌ಫೋನ್ ತಯಾರಕರೊಂದಿಗೆ ಕೆಲಸ ಮಾಡುವ ಗುರಿಯನ್ನು ಇನ್ನಷ್ಟು ಉತ್ತಮ ಪಡಿಸಲಿದೆ ಎನ್ನಲಾಗಿದೆ. ಹಾಗಾದ್ರೆ ಟ್ರೂ ಕಾಲರ್‌ ಅಪ್ಲಿಕೇಶನ್‌ ಮಾಡಿಕೊಂಡಿರುವ ಪಾಲುದಾರಿಕೆಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟ್ರೂಕಾಲರ್ ಅಪ್ಲಿಕೇಶನ್‌

ಟ್ರೂಕಾಲರ್ ಅಪ್ಲಿಕೇಶನ್‌ ಜಾಗತಿಕವಾಗಿ ಅತಿ ಹೆಚ್ಚು ಡೌನ್‌ಲೋಡ್ ಮಾಡಿದ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಆದರೂ ಪ್ರತಿಯೊಬ್ಬ ಸ್ಮಾರ್ಟ್‌ಫೋನ್ ಬಳಕೆದಾರರೂ ಟ್ರೂ ಕಾಲರ್‌ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುತ್ತಾರೆ ಎಂದು ಹೇಳಲಾಗುವುದಿಲ್ಲ. ಹೆಚ್ಚಿನ ಸ್ಮಾರ್ಟ್‌ಫೋನ್ ಬಳಕೆದಾರರು ಟ್ರೂ ಕಾಲರ್‌ ಅನ್ನು ಡೌನ್‌ಲೋಡ್ ಮಾಡಲು ಸ್ನೇಹಿತರು ಮತ್ತು ಕುಟುಂಬದವರ ಸಹಾಯವನ್ನು ಪಡೆದಯುವುದು ಸಾಮಾನ್ಯವಾಗಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಟ್ರೂಕಾಲರ್ ಹೊಸ ಹೆಜ್ಜೆ ಇಟ್ಟಿದೆ. ಇದಕ್ಕಾಗಿ ಹಲವು ಸ್ಮಾರ್ಟ್‌ಫೋನ್‌ ತಯಾರಕರೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಟ್ರೂಕಾಲರ್‌

ಇದರಿಂದ ಟ್ರೂಕಾಲರ್‌ನ ಇತ್ತೀಚಿನ ಆವೃತ್ತಿಯು ವಿಶ್ವದ ಪ್ರಮುಖ ಸ್ಮಾರ್ಟ್‌ಫೋನ್ ತಯಾರಕರಲ್ಲಿ ಸಂಯೋಜಿಸಲ್ಪಟ್ಟಿದೆ. ಈ ಕಾರಣದಿಂದ ಗ್ರಾಹಕರು ತಮ್ಮ ಹೊಸ ಫೋನ್ ಅನ್ನು ಸೆಟ್‌ ಮಾಡಿದ ತಕ್ಷಣವೇ ಟ್ರೂಕಾಲರ್‌ ಅನ್ನು ರನ್‌ ಮಾಡಬಹುದು. ಇದು ಟ್ರೂಕಾಲರ್‌ನಲ್ಲಿ ಹೊಸ ಸಕ್ರಿಯ ಬಳಕೆದಾರರನ್ನು ಸ್ವಯಂಚಾಲಿತವಾಗಿ ಕ್ರಿಯೆಟ್‌ ಮಾಡದಿದ್ದರೂ, ಹೆಚ್ಚಿನ ಗ್ರಾಹಕರು ಟ್ರೂಕಾಲರ್‌ನ ಫೀಚರ್ಸ್‌ಗಳನ್ನು ಅನ್ವೇಷಿಸಲು ಅನುಮತಿಸಲಿದೆ.

ಟ್ರೂ ಕಾಲರ್‌

ಇನ್ನು ಭಾರತದಲ್ಲಿ ಟ್ರೂ ಕಾಲರ್‌ 220 ಮಿಲಿಯನ್‌ಗಿಂತಲೂ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿದೆ. ಮುಂಬರುವ ಮೂರು ವರ್ಷಗಳಲ್ಲಿ ಈ ಸಂಖ್ಯೆಯು ಇನ್ನು ಹೆಚ್ಚಾಗುವ ಗುರುಯನ್ನು ಟ್ರೂ ಕಾಲರ್‌ ಹೊಂದಿದೆ. ಇನ್ನಷ್ಟು ವೇಗವಾಗಿ ಬೆಳೆಯುವುದಕ್ಕಗಿ ಈ ರೀತಿಯ ಪಾಲುದಾರಿಕೆಗಳೊಂದಿಗೆ ನಾವು ಉತ್ತಮ ಸಾಮರ್ಥ್ಯವನ್ನು ನೀಡುತ್ತೇವೆ ಎಂದು ಟ್ರೂ ಕಾಲರ್‌ ಅಪ್ಲಿಕೇಶನ್‌ ಹೇಳಿಕೊಂಡಿದೆ. ಸದ್ಯ ಟ್ರೂಕಾಲರ್ ಮುಂದಿನ ಎರಡು ವರ್ಷಗಳಲ್ಲಿ ಹಲವಾರು ಮಾರುಕಟ್ಟೆಗಳಲ್ಲಿ 100 ಮಿಲಿಯನ್ ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ಕವರ್ ಮಾಡಲು ಯೋಜಿಸಿದೆ. ಹೊಸ ಪಾಲುದಾರಿಕೆಯು ಟ್ರೂಕಾಲರ್ ಅನ್ನು ಫ್ಯಾಕ್ಟರಿಯಿಂದ ಸ್ಮಾರ್ಟ್‌ಫೋನ್‌ನೊಂದಿಗೆ ಸಂಯೋಜಿಸಲು ಅನುಮತಿಸಲಿದೆ ಎನ್ನಲಾಗಿದೆ.

ಟ್ರೂ ಕಾಲರ್‌

ಇದಲ್ಲದೆ ಕಳೆದ ವರ್ಷವಷ್ಟೇ ಟ್ರೂ ಕಾಲರ್‌ ಕಾಲ್‌ ರೆಕಾರ್ಡ್‌ ಫೀಚರ್ಸ್‌ ಅನ್ನು ಎಲ್ಲಾ ಬಳಕೆದಾರರಿಗೂ ಲಭ್ಯವಾಗುವಂತೆ ಮಾಡಿತ್ತು. ಇದರಿಂದ ಬಳಕೆದಾರರು ಇಂಟರ್‌ನೆಟಟ್‌ ಇಲ್ಲದೆ ಹೋದರೂ ಕೂಡ ಕರೆಗಳನ್ನು ಟ್ರೂ ಕಾಲರ್‌ನಲ್ಲಿ ರೆಕಾರ್ಡ್‌ ಮಾಡಬಹುದಾಗಿದೆ. ಅಲ್ಲದೆ ಬೇರೆಯವರೊಂದಿಗೆ ನಿಮ್ಮ ಕಾಲ್‌ ರೆಕಾರ್ಡಿಂಗ್‌ಗಳನ್ನು ಶೇರ್‌ ಮಾಡುವುದಕ್ಕೂ ಅವಕಾಶವಿದೆ. ಇನ್ನು ಕಾಲ್‌ ರೆಕಾರ್ಡಿಂಗ್‌ ಫೀಚರ್ಸ್‌ ಅನ್ನು ಟ್ರೂ ಕಾಲರ್‌ ಅಪ್ಲಿಕೇಶನ್‌ ಮೊದಲ ಬಾರಿಗೆ 2018 ರಲ್ಲಿಯೇ ಪರಿಚಯಿಸಿತ್ತು, ಆದರೆ ಆಗ ಈ ಫೀಚರ್ಸ್‌ ಪಾವತಿಸಿದ ಚಂದಾದಾರರಿಗೆ ಮಾತ್ರ ಲಭ್ಯವಿತ್ತು. ಇದೀಗ ತನ್ನ ಎಲ್ಲಾ ಬಳಕೆದಾರರಿಗೆ ಫೀಚರ್ಸ್‌ ಅನ್ನು ಪರಿಚಯಿಸಿದೆ.

Best Mobiles in India

Read more about:
English summary
Truecaller has partnered with several global Android smartphone manufacturers

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X