ಇನ್ಮುಂದೆ ಟ್ರೂ ಕಾಲರ್‌ನಲ್ಲೂ ಗ್ರೂಪ್‌ ವಾಯ್ಸ್‌ ಕಾಲ್‌ ಮಾಡಲು ಅವಕಾಶ!

|

ಜನಪ್ರಿಯ ಟ್ರೂ ಕಾಲರ್‌ ಅಪ್ಲಿಕೇಶನ್‌ ತನ್ನ ಆಂಡ್ರಾಯ್ಡ್ ಬಳಕೆದಾರರಿಗಾಗಿ ಹೊಸ ಅಪ್ಡೇಟ್‌ ಅನ್ನು ಪರಿಚಯಿಸಿದೆ. ಇನ್ನು ಈ ಅಪ್ಡೇಟ್‌ನಲ್ಲಿ ಗ್ರೂಪ್‌ ವಾಯ್ಸ್‌ ಕಾಲ್‌, ಸ್ಮಾರ್ಟ್ ಎಸ್‌ಎಂಎಸ್ ಮತ್ತು ಇನ್‌ಬಾಕ್ಸ್ ಕ್ಲೀನರ್‌ನಂತಹ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಬಳಕೆದಾರರ ಪ್ರತಿಕ್ರಿಯೆಯ ಆಧಾರದ ಮೇಲೆ ಈ ಹೊಸ ಫೀಚರ್ಸ್‌ಗಳನ್ನು ಅನಾವರಣಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ.

ಟ್ರೂ ಕಾಲರ್‌

ಹೌದು, ಟ್ರೂ ಕಾಲರ್‌ ಆಂಡ್ರಾಯ್ಡ್‌ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇನ್ಮುಂದೆ ಟ್ರೂ ಕಾಲರ್‌ ಗ್ರೂಪ್‌ ವಾಯ್ಸ್‌ ಕಾಲ್‌ ಅನ್ನು ಸಹ ಬೆಂಬಲಿಸಲಿದೆ. ಈ ಗ್ರೂಪ್‌ ಕಾಲ್‌ನಲ್ಲಿ ನೀವು ಒಂದೇ ಸಮಯದಲ್ಲಿ ಎಂಟು ಜನರೊಂದಿಗೆ ಮಾತನಾಡುವ ಅವಕಾಶವನ್ನು ನೀಡಿದೆ. ಇದಲ್ಲದೆ ಸ್ಪ್ಯಾಮ್ ಅನ್ನು ಫಿಲ್ಟರ್ ಮಾಡಲು, ಉಪಯುಕ್ತ ಮಾಹಿತಿಯನ್ನು ವರ್ಗೀಕರಿಸಲು ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಹಾಗಾದ್ರೆ ಟ್ರೂ ಕಾಲರ್‌ ಪರಿಚಯಿಸಿರುವ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಕಾಲರ್‌

ಟ್ರೂ ಕಾಲರ್‌ ಪರಿಚಯಿಸಿರುವ ಗ್ರೂಪ್‌ ಕಾಲ್‌ ವೀಡಿಯೋ ಸಾಕಷ್ಟು ಉಪಯುಕ್ತ ಫಿಚರ್ಸ್‌ ಹೊಂದಿದೆ. ಗ್ರೂಪ್‌ ಕಾಲ್‌ ಸಮಯದಲ್ಲಿ, ಟ್ರೂಕಾಲರ್ ಬಳಕೆದಾರರ ಅರಿವಿಲ್ಲದೆ ಗುಂಪಿನಲ್ಲಿ ಸ್ಪ್ಯಾಮ್ ಬಳಕೆದಾರರನ್ನು ಸೇರಿಸಿದ್ದರೆ ಅವರನ್ನು ಗುರುತಿಸಲು ಸಹಾಯ ಮಾಡುತ್ತದೆ. ಬಳಕೆದಾರರು ತಮ್ಮ ಫೋನ್‌ಬುಕ್‌ಗೆ ಸೇರಿಸದಿದ್ದರೂ ಸಹ ಹೊಸದಾಗಿ ಭಾಗವಹಿಸುವವರನ್ನು ವಾಯ್ಸ್‌ ಕಾಲ್‌ಗೆ ಸೇರಿಸಲು ಅವಕಾಶ ನೀಡಿದೆ. ಅಪ್ಲಿಕೇಶನ್ ಗ್ರೂಪ್‌ಕಾಲ್‌ನಲ್ಲಿ ಭಾಗವಹಿಸುವವರ ಪ್ರತಿ ನಗರವನ್ನು ಪ್ರತಿಬಿಂಬಿಸುತ್ತದೆ ಮತ್ತು ಇನ್ನೊಬ್ಬ ಬಳಕೆದಾರರು ಮತ್ತೊಂದು ಕರೆ ಅಥವಾ ಆಫ್‌ಲೈನ್‌ನಲ್ಲಿ ನಿರತರಾಗಿದ್ದಾರೆಯೇ ಎಂಬುದನ್ನು ಸಹ ಸೂಚಿಸುತ್ತದೆ. ಈ ಎಲ್ಲಾ ಗ್ರೂಪ್‌ ಕಾಲ್‌ಗಳನ್ನು ಸಿಮೆಟ್ರಿಕ್‌ ಎನ್‌ಕ್ರಿಪ್ಶನ್‌ ಮೂಲಕ ಸುರಕ್ಷಿತಗೊಳಿಸಲಾಗಿದೆ ಎಂದು ಟ್ರೂಕಾಲರ್ ಹೇಳಿದೆ.

ಎಸ್‌ಎಂಎಸ್

ಸ್ಮಾರ್ಟ್ ಎಸ್‌ಎಂಎಸ್ ಎಂಬ ಮತ್ತೊಂದು ಫೀಚರ್ಸ್‌ ಕೂಡ ಟ್ರೂಕಾಲರ್‌ಗೆ ಸೇರಿದೆ. ಇದು ಸ್ಪ್ಯಾಮ್ ಅನ್ನು ಗುರುತಿಸಲು ಮತ್ತು ಫಿಲ್ಟರ್ ಮಾಡಲು, ಉಪಯುಕ್ತ ಮಾಹಿತಿಯನ್ನು ವರ್ಗೀಕರಿಸಲು ಮತ್ತು ಬಾಕಿ ಇರುವ ಪಾವತಿಗಳನ್ನು ನಿಮಗೆ ನೆನಪಿಸಲು ಸಹಾಯ ಮಾಡುತ್ತದೆ. ಈ ಫೀಚರ್ಸ್‌ ಭಾರತ, ಕೀನ್ಯಾ, ನೈಜೀರಿಯಾ ಮತ್ತು ದಕ್ಷಿಣ ಆಫ್ರಿಕಾದ ಬಳಕೆದಾರರಿಗೆ ಹೊರಹೊಮ್ಮಲಿದೆ. ಇದು ಶೀಘ್ರದಲ್ಲೇ ಈಜಿಪ್ಟ್, ಇಂಡೋನೇಷ್ಯಾ, ಮಲೇಷ್ಯಾ, ಸ್ವೀಡನ್ ಮತ್ತು ಯುಎಸ್ನಲ್ಲಿ ಲಭ್ಯವಾಗಲಿದೆ.

ಟ್ರೂಕಾಲರ್

ಇದಲ್ಲದೆ ಕೆಲವೇ ಸೆಕೆಂಡುಗಳಲ್ಲಿ ಹಳೆಯ, ಅನಗತ್ಯ ಸಂದೇಶಗಳನ್ನು ತೆರವುಗೊಳಿಸಲು ಬಳಕೆದಾರರಿಗೆ ಸಹಾಯ ಮಾಡಲು ಟ್ರೂಕಾಲರ್ ಹೊಸ ಇನ್‌ಬಾಕ್ಸ್ ಕ್ಲೀನರ್ ಅನ್ನು ಪರಿಚಯಿಸಿದೆ. ಇದು ಮೆನುವಿನಿಂದ ಇನ್‌ಬಾಕ್ಸ್ ಕ್ಲೀನರ್ ನೀವು ಎಷ್ಟು ಹಳೆಯ ಒಟಿಪಿಗಳು ಮತ್ತು ಸ್ಪ್ಯಾಮ್ ಎಸ್‌ಎಂಎಸ್‌ಗಳನ್ನು ಸಂಗ್ರಹಿಸಿದ್ದೀರಿ ಎಂಬುದನ್ನು ತೋರಿಸುತ್ತದೆ ಮತ್ತು ‘ಕ್ಲೀನ್ ಅಪ್' ಬಟನ್‌ನಲ್ಲಿ ಮತ್ತೊಂದು ಟ್ಯಾಪ್ ನಿಮ್ಮ ಪ್ರಮುಖ ಡೇಟಾಗೆ ಪರಿಣಾಮ ಬೀರದಂತೆ ಹಳೆಯ ಎಸ್‌ಎಂಎಸ್‌ಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ತೆಗೆದುಹಾಕಲಿದೆ.

Best Mobiles in India

English summary
Truecaller has rolled out an update for Android users, bringing in features like group voice calling, Smart SMS, and Inbox Cleaner.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X