ಗೂಗಲ್ ವಿರುದ್ಧ 344 ಕೋಟಿ ದಾವೆ ಹೂಡಿದ 'ತುಳಸಿ ಗಬ್ಬಾರ್ಡ್'!

|

ಗೂಗಲ್ ತನ್ನ ಮುಕ್ತ ಭಾಷಣವನ್ನು ಉಲ್ಲಂಘಿಸಿದೆ ಎಂದು ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ, ಡೆಮಾಕ್ರಟಿಕ್ ಪಕ್ಷದ ತುಳಸಿ ಗಬ್ಬಾರ್ಡ್ ಅವರು ₹ 344 ಕೋಟಿ (5 ಕೋಟಿ ಡಾಲರ್‌) ಪರಿಹಾರ ಕೋರಿ ದಾವೆ ಹೂಡಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ನಾನು ಕೈಗೊಂಡ ಪ್ರಚಾರದ ಪ್ರಸಾರಕ್ಕೆ ಸಂಬಂಧಿಸಿ ಗೂಗಲ್ ತಾರತಮ್ಯ ಧೋರಣೆ ಅನುಸರಿಸಿದೆ ಎಂದು ಆರೋಪಿಸಿರುವ ತುಳಸಿ ಗಬ್ಬಾರ್ಡ್ ಅವರು, ಇದು ನನ್ನ ವಾಕ್ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನ ಎಂದು ಹೇಳಿದ್ದಾರೆ.

ಗೂಗಲ್ ವಿರುದ್ಧ 344 ಕೋಟಿ ದಾವೆ ಹೂಡಿದ 'ತುಳಸಿ ಗಬ್ಬಾರ್ಡ್'!

ಹೌದು, ಚುನಾವಣಾ ಪ್ರಚಾರ ಕಾರ್ಯ ಪ್ರಸಾರ ಮಾಡಲು ನಾನು ಗೂಗಲ್‌ನಲ್ಲಿ ಜಾಹೀರಾತು ಖಾತೆಯನ್ನು ಹೊಂದಿದ್ದೇನೆ. ಜೂನ್‌ನಲ್ಲಿ ನನ್ನ ಮೊದಲ ಸಂವಾದ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಪ್ರಸಾರವನ್ನು ಸಂಸ್ಥೆ ಕೆಲ ಕಾಲ ಸ್ಥಗಿತಗೊಳಿಸಿತು. ಏಕೆಂದರೆ, ಪ್ರಚಾರ ಜಾಹೀರಾತು ಖಾತೆ ಆಫ್‌ಲೈನ್‌ನಲ್ಲಿ ಉಳಿದಿದೆ. ಇದರಿಂದ ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡಿದಂತಾಗಿದೆ ಎಂದು ತುಳಸಿ ಗಬ್ಬಾರ್ಡ್ ಅವರು ಮಾಹಿತಿ ತಂತ್ರಜ್ಞಾನ ದೈತ್ಯ ಸಂಸ್ಥೆ ಗೂಗಲ್‌ ಮೇಲೆ ಆರೋಪಿಸಿದ್ದಾರೆ.

ಇಷ್ಟು ಮಾತ್ರ ಆರೋಪವಲ್ಲದೇ, ನನ್ನ ಅಭಿಯಾನದ ವಿರುದ್ಧ ಗೂಗಲ್‌ನ ತಾರತಮ್ಯದ ಕ್ರಮಗಳು ಅಂತರ್ಜಾಲ ಹುಡುಕಾಟದ ಮೇಲೆ ಅವರ ಸಂಪೂರ್ಣ ಪ್ರಾಬಲ್ಯ ಎಷ್ಟು ಅಪಾಯಕಾರಿ ಎಂಬುದನ್ನು ತಿಳಿಸುತ್ತಿದೆ ನಮ್ಮ ಸಾರ್ವಜನಿಕ ಪ್ರವಚನದಲ್ಲಿ ದೊಡ್ಡ ಟೆಕ್ ಕಂಪನಿಗಳ ಪ್ರಾಬಲ್ಯವು ನಮ್ಮ ಪ್ರಮುಖ ಅಮೆರಿಕನ್ ಮೌಲ್ಯಗಳಿಗೆ ಹೇಗೆ ಬೆದರಿಕೆ ಹಾಕುತ್ತದೆ ಎಂಬುದರ ಪ್ರತಿಬಿಂಬಿಸುತ್ತದೆ ಎಂದು ಅವರು ಭಾಷಣದಲ್ಲಿ ಹೇಳಿರುವುದು ಇದೀಗ ಗೂಗಲ್ ಏಕಸ್ವಾಮ್ಯದ ಮೇಲೆ ಮತ್ತೊಮ್ಮೆ ಪ್ರಶ್ನೆ ಮೂಡುವಂತೆ ಮಾಡಿದೆ.

ಗೂಗಲ್ ವಿರುದ್ಧ 344 ಕೋಟಿ ದಾವೆ ಹೂಡಿದ 'ತುಳಸಿ ಗಬ್ಬಾರ್ಡ್'!

ಇತ್ತೀಚೆಗಷ್ಟೇ ಅಮೆರಿಕಾ ಸಂಸತ್ ಗೆ ಆಯ್ಕೆಯಾಗಿದ್ದ ಮೊದಲ ಭಾರತೀಯ ಮೂಲದ ಅಮೆರಿಕಾ ಹಿಂದೂ ಮಹಿಳೆ ತುಳಸಿ ಗಬ್ಬಾರ್ಡ್ ಅವರು 2020ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಗಬ್ಬಾರ್ಡ್ ಅವರು ಡೆಮಾಕ್ರೆಟಿಕ್ ಪಕ್ಷದಿಂದ ಸ್ಪರ್ಧಿಸಲಿದ್ದು, ಡೆಮಾಕ್ರೆಟಿಕ್ ಪಕ್ಷದ ರಾಷ್ಟ್ರೀಯ ಸಮಿತಿಯ ಮಾಜಿ ಉಪಾಧ್ಯಕ್ಷರೂ ಆಗಿದ್ದಾರೆ. ಸದ್ಯ ಅಮೆರಿಕಾದ ಪ್ರಬಲ ಸಶಸ್ತ್ರ ಸೇವಾ ಸಮಿತಿ ಮತ್ತು ವಿದೇಶಾಂಗ ವ್ಯವಹಾರ ಸಮಿತಿ ಸದಸ್ಯರಾಗಿದ್ದಾರೆ.

'ಹಾನರ್ ವ್ಯೂ 20' ಮೇಲೆ 12 ಸಾವಿರ ಡಿಸ್ಕೌಂಟ್!..ಮೊಬೈಲ್ ಮಾರುಕಟ್ಟೆಯಲ್ಲಿ ಸಂಚಲನ!

ಅಮೆರಿಕಾ ಜನತೆ ಆರೋಗ್ಯ ಸಮಸ್ಯೆಗಳ ಜೊತೆ ಹವಾಮಾನ ಬದಲಾವಣೆ ಮತ್ತು ನ್ಯಾಯಾಂಗದಲ್ಲಿ ಸುಧಾರಣೆಯಂತಹ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳನ್ನು ಎದುರಿಸುವುದು ನನ್ನ ಮೊದಲ ಉದ್ದೇಶ ಎಂದು ತುಳಸಿ ಗಬ್ಬಾರ್ಡ್ ತಿಳಿಸಿದ್ದಾರೆ. ಈ ಮಧ್ಯೆ, ಅಧ್ಯಕ್ಷೀಯ ಚುನಾವಣೆಗೆ ದೇಣಿಗೆ ಸಂಗ್ರಹಿಸಲು ತುಳಸಿ ಗಬ್ಬಾರ್ಡ್ ಅವರ ಬೆಂಬಲಿಗರು ನಿರತರಾಗಿದ್ದಾರೆ. ದೊಡ್ಡ ಸಂಖ್ಯೆಯಲ್ಲಿರುವ ಭಾರತೀಯ ಅಮೆರಿಕ್ಕನ್ನರು ಹಾಗೂ ಸಮರ್ಥ ಅಭಿಯಾನ ಕೈಗೊಳ್ಳಲು ಸ್ವಯಂಸೇವಕರ ಪಡೆಯನ್ನು ರಚಿಸಿಕೊಳ್ಳುತ್ತಿದ್ದಾರೆ.

Most Read Articles
Best Mobiles in India

English summary
The Gabbard campaign has said it was told by Google they wanted to verify billing information and policy compliance, neither of which was a problem. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more