ಟ್ವೀಟರ್‌ ವಿವಾದ: ತರೂರ್‍ ಪತ್ನಿ ಸುನಂದ ಪುಷ್ಕರ್‌ ನಿಗೂಢ ಸಾವು

Posted By: Staff

ಟ್ವೀಟರ್‌‌ನಲ್ಲಿ ಆರೋಪ-ಪ್ರತ್ಯಾರೋಪ ಘಟನೆಯಲ್ಲಿ ತೊಡಗಿದ್ದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆಯ ಸಹಾಯಕ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ.ದೆಹಲಿಯ ಖಾಸಗಿ ಹೋಟೆಲ್‌‌ನಲ್ಲಿ ಸುನಂದಾ ಶವ ಶುಕ್ರವಾರ ರಾತ್ರಿ ಪತ್ತೆಯಾಗಿದೆ.

ಕಾಂಗ್ರೆಸ್‌ ಪಕ್ಷದಲ್ಲಿ ಅತಿ ಹೆಚ್ಚು ಟ್ವೀಟರ್‌‌ ಫಾಲೋವರ್‌‌ ಹೊಂದಿರುವ ಶಶಿ ತರೂರ್‌ ಪತ್ನಿ ಸುನಂದಾ ಪುಷ್ಕರ್ ನಾಲ್ಕು ದಿನಗಳ ಹಿಂದೆ ಪಾಕಿಸ್ತಾನದ ಪತ್ರಕರ್ತೆ ನನ್ನ ಪತಿ ಶಶಿ ತರೂರ್ ಮೇಲೆ ಕಣ್ಣು ಹಾಕಿದ್ದಾಳೆ,ಆಕೆ ಐಎಸ್ ಐ ಏಜೆಂಟ್ ಎಂದು ಹೇಳಿರುವ ಸುದ್ದಿ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.

ಮಾಧ್ಯಮಗಳಲ್ಲಿ ಈ ಸುದ್ದಿ ಹರಿದಾಡುತ್ತಿದ್ದಂತೆ ಎಚ್ಚೆತ್ತ ಶಶಿ ತರೂರ್‌ ನಂತರ ತಮ್ಮ ಫೇಸ್‌‌ಬುಕ್‌ ಪೇಜ್‌ನಲ್ಲಿ ಸುನಂದಾ ಜೊತೆಗೂಡಿ ಜಂಟಿ ಹೇಳಿಕೆಯನ್ನು ನೀಡಿ ಮಾಧ್ಯಮಗಳ ಸುದ್ದಿ ಅಲ್ಲಗಳೆದಿದ್ದು,ನಮ್ಮ ಖಾಸಗಿ ಬದುಕಿನ ಸುದ್ದಿಗಳನ್ನು ಪ್ರಕಟಿಸಿಬೇಡಿ ಎಂದು ಮಾಧ್ಯಮಗಳಲ್ಲಿ ವಿನಂತಿಸಿದ್ದರು.

ಜೊತೆಗೆ ಸುನಂದ ಪುಷ್ಕರ್‍ ಸಹ ಮಾಧ್ಯಮಗಳ ಸುದ್ದಿಯನ್ನು ಅಲ್ಲಗಳೆದಿದ್ದು ನನ್ನ ಪತಿದೇವ ನನ್ನನ್ನು ಬಿಟ್ಟು ಬೇರೆ ಯುವತಿಯರ ಹಿಂದೆ ಬೀಳುವ ವ್ಯಕ್ತಿಯಲ್ಲ ಎಂದು ಶಶಿ ತರೂರ್‌ ಬಗ್ಗೆ ತಮ್ಮ ನಿಲುವನ್ನು ಸಮರ್ಥಿ‌ಸಿ ಟ್ವೀಟ್‌‌‌ ಮಾಡಿದ್ದರು.

ಈ ಎಲ್ಲಾ ಘಟನೆಗಳ ನಡೆದು ಮೂರೇ ದಿನದಲ್ಲಿ ಸುನಂದ ಪುಷ್ಕರ್‌ ದೆಹಲಿಯ ಹೊಟೆಲ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಟ್ವೀಟರ್‌ನಲ್ಲಿ ಶಶಿ ತರೂರ್‌ರಂತೆ ಸಕ್ರಿಯವಾಗಿದ್ದ ಸುನಂದ ಪುಷ್ಕರ್‌ ಇದುವರೆಗೂ 5,229 ಟ್ವೀಟ್‌ ಮಾಡಿದ್ದು ನಿನ್ನೆ ಸಹ ಸ್ನೇಹಿತರಿಗೆ,ಮೀಡಿಯಾದ ವ್ಯಕ್ತಿಗಳಿಗೆ ಟ್ವೀಟ್‌ ಮಾಡಿದ್ದರು.ಇಷ್ಟೇಲ್ಲಾ ಘಟನೆ ನಡೆದು ವಿವಾದ ಸುಖಾಂತ್ಯವಾಯಿತು ಎಂದು ಭಾವಿಸುವಷ್ಟರಲ್ಲೇ ಸುನಂದ ಪುಷ್ಕರ್‌ ನಿಗೂಢವಾಗಿ ಸಾವನ್ನಪ್ಪಿದ್ದು ಶಶಿ ತರೂರ್‌ ಟ್ವೀಟರ್‌ ಪ್ರೇಮ ಪ್ರಸಂಗ ಮಾಧ್ಯಮಗಳಲ್ಲಿ ಬಿಸಿ ಬಿಸಿ ಚರ್ಚೆ‌ಗೆ ಕಾರಣವಾಗಿದೆ.

ಹೀಗಾಗಿ ಇಲ್ಲಿ ಶಶಿ ತರೂರ್‌,ಸುನಂದ ಪುಷ್ಕರ್‌ ಟ್ವೀಟ್‌, ಜೊತೆಗೆ ಶಶಿ ತರೂರ್‌ ಜೊತೆಗೆ ಸಂಬಂಧ ಇದೆ ಎನ್ನುವ ಆರೋಪ ಹೊಂದಿರುವ ಪಾಕಿಸ್ತಾನ ಪರ್ತಕರ್ತೆಯ ಮೆಹರ್ ಟ್ವೀಟ್‌‌, ಶಶಿ ತರೂರ್‌ ಮತ್ತು ಸುನಂದ ಪುಷ್ಕರ್‌ ಫೇಸ್‌‌ಬುಕ್‌ನಲ್ಲಿ ಜಂಟಿಯಾಗಿ ಪ್ರಕಟಿಸಿದ‌ ಪೋಸ್ಟ್‌ಗಳನ್ನು ನೀಡಲಾಗಿದೆ.

Post by Shashi Tharoor.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot