ಭಾರತದಲ್ಲಿ ಟ್ವಿಟರ್‌ ಸರ್ವರ್‌ ಡೌನ್‌! ಸಮಸ್ಯೆಗೆ ಅಸಲಿ ಕಾರಣ ಏನು?

|

ಜನಪ್ರಿಯ ಮೈಕ್ರೋಬ್ಲಾಗಿಂಗ್‌ ಸೈಟ್‌ ಟ್ವಿಟರ್ ಸರ್ವರ್‌ ಡೌನ್‌ ಆಗಿದೆ. ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಟ್ವಿಟರ್‌ಗೆ ಲಾಗ್‌ಇನ್‌ ಆಗದೇ ಸಾಕಷ್ಟು ಮಂದಿ ಸಮಸ್ಯೆ ಅನುಭವಿಸುತ್ತಿರುವ ಘಟನೆ ವರದಿಯಾಗಿದೆ. ಭಾರತದಲ್ಲಿ ಡೆಸ್ಕ್‌ಟಾಪ್‌ನಲ್ಲಿ ಟ್ವಿಟರ್‌ ಖಾತೆ ಪ್ರವೇಶಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಟ್ವಿಟರ್‌ ಫೀಡ್ ಪೇಜ್‌ ಅನ್ನು ಲೋಡ್ ಮಾಡಿದಾಗ "ಏನೋ ತಪ್ಪಾಗಿದೆ, ಆದರೆ ಚಿಂತಿಸಬೇಡಿ - ಮತ್ತೆ ಪ್ರಯತ್ನಿಸಿ" ಎಂದು ಓದುವ ಪಾಪ್ಅಪ್ ಕಾಣಿಸಿಕೊಳ್ಳುತ್ತಿದೆ.

ಟ್ವಿಟರ್‌

ಹೌದು, ಟ್ವಿಟರ್‌ ಬಳಕೆದಾರರಿಗೆ ಸರ್ವರ್‌ ಡೌನ್‌ ಸಮಸ್ಯೆ ಎದುರಾಗಿದ್ದು, ಟ್ವಿಟರ್‌ ಬಳಕೆದಾರರು ಖಾತೆಯನ್ನು ಪ್ರವೇಶಿಸಲು ಸಾಧ್ಯವಿಲ್ಲದೆ ಸಮಸ್ಯೆ ಅನುಭವಿಸಿದ್ದಾರೆ. ಆದರೆ ವೆಬ್ ಬಳಕೆದಾರರು ತಮ್ಮ ಫೀಡ್ ಅನ್ನು ಪ್ರವೇಶಿಸಲು ಸಾಧ್ಯವಾಗದಿದ್ದರೂ, ಅಪ್ಲಿಕೇಶನ್ ಬಳಕೆದಾರರು ತಮ್ಮ ಟ್ವಿಟರ್‌ನೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾದ್ರೆ ಟ್ವಿಟರ್‌ ಸರ್ವರ್‌ ಡೌನ್‌ ಆಗುವುದಕ್ಕೆ ಕಾರಣ ಏನು? ಸರ್ವರ್‌ ಡೌನ್‌ ಬಗ್ಗೆ ಟ್ವಿಟರ್‌ ಏನು ಹೇಳಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟ್ವಿಟರ್‌

ಟ್ವಿಟರ್‌ ಭಾರತದಲ್ಲಿ ಕೂಡ ಸರ್ವರ್‌ ಡೌನ್‌ ಸಮಸ್ಯೆ ಎದುರಿಸುತ್ತಿದೆ. ಈಗಲೂ ಕೂಡ ಪೀಡ್‌ ಪೇಜ್‌ ಅನ್ನು ಪ್ರವೇಶಿಸುವುದಕ್ಕೆ ಸಾಧ್ಯವಾಗ್ತಿಲ್ಲ ಎಂದು ಬಳಕೆದಾರರು ವರದಿ ಮಾಡುತ್ತಿದ್ದಾರೆ. ಡೌನ್‌ಡಿಟೆಕ್ಟರ್ ಪ್ರಕಾರ, ಟ್ವಿಟರ್ ವಿಶ್ವದ ಕೆಲವು ಭಾಗಗಳಲ್ಲಿ ಸರ್ವರ್‌ ಸಮಸ್ಯೆಗೆ ಗುರುಯಾಗಿದೆ. 94% ಬಳಕೆದಾರರು ಟ್ವಿಟರ್ ವೆಬ್‌ನಲ್ಲಿ ತಮ್ಮ ಸಮಸ್ಯೆಗಳನ್ನು ವರದಿ ಮಾಡುತ್ತಿದ್ದರೆ, ಶೇಕಡಾ 6 ರಷ್ಟು ಜನರು ಮೊಬೈಲ್ ಅಪ್ಲಿಕೇಶನ್‌ನೊಂದಿಗೆ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಸರ್ವರ್‌

ಇಲ್ಲಿಯವರೆಗೆ ಸರ್ವರ್‌ ಡೌನ್‌ ಸಮಸ್ಯೆಯನ್ನು ಬಗೆಹರಿಸಿರುವ ಬಗ್ಗೆ ಇನ್ನು ಕೂಡ ಯಾವುದೇ ವರದಿಯಾಗಿಲ್ಲ. ಟ್ವಿಟರ್‌ ಡೌನ್‌ ಬೆಳಿಗ್ಗೆಯಿಂದ ಶುರುವಾಗಿದ್ದು, ಕೆಲವು ಪ್ರದೇಶಗಳಲ್ಲಿ ಇನ್ನು ಕೂಡ ಮುಂದುವರೆದಿದೆ. ಆದರೆ ಕೆಲವು ಪ್ರದೇಶಗಳಲ್ಲಿ ಈ ಸಮಸ್ಯೆ ಬಗರಹರಿದಿದ್ದು, ಬಳಕೆದಾರರು ತಮ್ಮ ಟ್ವಿಟರ್‌ ಖಾತೆಗಳಿಗೆ ಪ್ರವೇಶವನ್ನು ಪಡೆದಿದಿದ್ದಾರೆ. ಇನ್ನು ಟೆಸ್ಲಾ ಸಿಇಒ ಎಲೋನ್ ಮಸ್ಕ್ ಟ್ವಿಟರ್‌ ಅನ್ನು ಸ್ವಾಧೀನಪಡಿಸಿಕೊಂಡ ದಿನದಿಂದಲೂ ಟ್ವಿಟರ್‌ ಸಾಕಷ್ಟು ಸುದ್ದಿಯಲ್ಲಿದ್ದು, ಇದೀಗ ಸರ್ವರ್‌ ಡೌನ್‌ ಸಮಸ್ಯೆಯ ಕಾರಣಕ್ಕೆ ಸುದ್ದಿಯಾಗಿದೆ.

ಎಲೋನ್‌

ಇನ್ನು ಎಲೋನ್‌ ಮಸ್ಕ್‌ ಟ್ವಿಟರ್‌ ಅನ್ನು ಸ್ವಾಧಿನಪಡಿಸಿಕೊಂಡ ನಂತರ ಟ್ವಟಿರ್‌ ಸಂಪೂರ್ಣ ಬಳಕೆದಾರರ ಪರಿಶೀಲನೆ ಪ್ರಕ್ರಿಯೆಯನ್ನು ಪರಿಷ್ಕರಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ಇದನ್ನು ಎಲಾನ್‌ ಮಸ್ಕ್ ಅವರು ಭಾನುವಾರ ಟ್ವೀಟ್‌ನಲ್ಲಿ ದೃಢಪಡಿಸಿದ್ದಾರೆ. ಒಟ್ಟಾರೇ ಪರಿಶೀಲನೆ ಪ್ರಕ್ರಿಯೆಯನ್ನು ಇದೀಗ ಅಪ್‌ಡೇಟ್‌ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಅದರಂತೆ ಟ್ವಿಟರ್‌ ಇನ್ಮುಂದೆ ಯಾವುದೇ ಸಮಯದಲ್ಲಿ ನಿಷೇಧಿತ ಬಳಕೆದಾರರು ಮತ್ತು ಖಾತೆಗಳನ್ನು ಮರಳಿ ತರುವುದಿಲ್ಲ ಎಂದು ಮಸ್ಕ್ ಹೇಳಿದ್ದಾರೆ.

ಟ್ವಿಟರ್‌

ಇದಲ್ಲದೆ ಟ್ವಿಟರ್‌ ಖಾತೆಗಳು ಬ್ಲೂ ಟಿಕ್ ಪಡೆಯಬೇಕಾದರೆ ಮಾಸಿಕವಾಗಿ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಹೇಳಲಾಗಿದೆ. ಇದು ಭಾರತದಲ್ಲಿ ಯಾವಾಗ ಪ್ರಾಂಭವಾಗಲಿದೆ ಎಂಬುದರ ಬಗ್ಗೆ ಇನ್ನು ಕೂಡ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇದಲ್ಲದೆ ಟ್ವಿಟರ್‌ನ ಸಿಇಒ ಉದ್ಯೋಗಿಗಳನ್ನು ವಜಾಗೊಳಿಸುವ ಬಗ್ಗೆ ಕೂಡ ಚರ್ಚೆ ನಡೆಯುತ್ತಿದ್ದು, ಇದರ ಬಗ್ಗೆ ಟ್ವಿಟರ್‌ ಯಾವುದೇ ಅಧಿಕೃತ ಪ್ರತಿಕ್ರಿಯೆಯನ್ನು ನೀಡಿಲ್ಲ.

ಎಲಾನ್‌

ಇನ್ನು ಎಲಾನ್‌ ಮಸ್ಕ್‌ ಅವರು ಟ್ವಿಟರ್ ಖರೀದಿ ಮಾಡಿದ ಬಳಿಕ 'the bird is freed' (ಹಕ್ಕಿ ಈಗ ಮುಕ್ತವಾಗಿದೆ) ಎಂದು ಮೊದಲ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಸಾಕಷ್ಟು ವೈರಲ್ ಆಗಿತ್ತು ಇನ್ನು ಟ್ವಿಟ್ಟರ್ ಅನ್ನು ತಮ್ಮ ತೆಕ್ಕೆಗೆ ಪಡೆಯುವ ಮುನ್ನ ಎಲಾನ್ ಮಸ್ಕ್ ಬುಧವಾರ ಟ್ವಿಟರ್‌ನ ಪ್ರಧಾನ ಕಛೇರಿಗೆ ನಗುವಿನೊಂದಿಗೆ ಮತ್ತು ಪಿಂಗಾಣಿ ಸಿಂಕ್ ಅನ್ನು ಹೊತ್ತೊಯ್ದರು, ತರುವಾಯ 'ಅದು ಮುಳುಗಲು ಬಿಡಿ' (let that sink in) ಎಂದು ಟ್ವೀಟ್ ಮಾಡಿದರು. ಅವರು ತಮ್ಮ ಟ್ವಿಟ್ಟರ್ ಪ್ರೊಫೈಲ್‌ನಲ್ಲಿ ತಮ್ಮ ವಿವರಣೆಯನ್ನು 'ಚೀಫ್ ಟ್ವಿಟ್' (Chief Twit) ಎಂದು ಬದಲಾಯಿಸಿದ್ದು ಕೂಡ ವರದಿಯಾಗಿತ್ತು.

Best Mobiles in India

English summary
Twitter faces problem in accessing feed page in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X