Subscribe to Gizbot

ಬದಲಾದ ಟ್ವಿಟ್ಟರ್ ಹೊಸತನಕ್ಕೆ ನಾಂದಿ

Written By:

ಸಾಮಾಜಿಕ ಜಾಲತಾಣಗಳು ನಮ್ಮ ಜೀವನದ ಬಹು ಮುಖ್ಯ ಅಂಗವಾಗಿ ಈಗ ಪಾತ್ರವಹಿಸುತ್ತಿವೆ. ನಮ್ಮ ಎಷ್ಟೋ ಕಲಸ ಕಾರ್ಯಗಳನ್ನು ಇದನ್ನು ನೆಚ್ಚಿಕೊಂಡೇ ನಾವು ನಡೆಸುತ್ತೇವೆ.

ಇಂದಿನ ಲೇಖನದಲ್ಲಿ ನಾವು ನಿಮಗಾಗಿ ಹೊಸ ಸುದ್ದಿಯೊಂದನ್ನು ತಲುಪಿಸಲಿದ್ದೇವೆ...ಹೌದು ಟ್ವಿಟ್ಟರ್ ಖಾತೆ ಬದಲಾಗುತ್ತಿದೆ. ಬದಲಾಗಿದೆ ತನ್ನೆಲ್ಲಾ ಹಳೆಯ ಸ್ವರೂಪಗಳನ್ನು ಬದಿಗೊತ್ತಿ ತನ್ನ ಬಳಕೆದಾರರ ಮುಂದೆ ಹೊಸ ರೂಪದಲ್ಲಿ ಕಾಣಿಸಿಕೊಳ್ಳಲಿದೆ.

ಹೊಸ ರೂಪದಲ್ಲಿ ಟ್ವಿಟ್ಟರ್

ನೀವು ಈಗಾಗಲೇ ಟ್ವಿಟ್ಟರ್ ಖಾತೆದಾರರಾಗಿದ್ದರೆ ನಿಮಗಿನ್ನು ನಿಮ್ಮ ಖಾತೆಯ ಹೊಸ ರೂಪ ಖಂಡಿತ ಖುಷಿ ನೀಡುತ್ತದೆ. ಬ್ಯಾಕ್‌ಗ್ರೌಂಡ್, ಸೆಟ್ಟಿಂಗ್ಸ್, ಪೋಸ್ಟ್ ಹೀಗೆ ಹಂತ ಹಂತದ ಬದಲಾವಣೆಯನ್ನು ಈ ಖ್ಯಾತ ಜಾಲತಾಣ ಮಾಡಹೊರಟಿದೆ. ಕಳೆದ ತಿಂಗಳೇ ಇದನ್ನು ಘೋಷಿಸಿದ್ದ ಟ್ವಿಟ್ಟರ್ ಈಗಾಗಲೇ ಕೆಲವೊಂದು ಬದಲಾವಣೆಗಳನ್ನು ತನ್ನ ಬಳಕೆದಾರ ಖಾತೆಯಲ್ಲಿ ಮಾಡಿಕೊಂಡಿದೆ.

ದೊಡ್ಡದಾದ ಪ್ರೊಫೈಲ್ ವೈಶಿಷ್ಟ್ಯಗಳು, ದೊಡ್ಡ ಹೆಡ್ಡರ್ ಚಿತ್ರಗಳು, ಹೊಸ ಟೈಮ್‌ಲೈನ್ ನ್ಯೂಸ್ ಹೀಗೆ ಇದರ ವೈಶಿಷ್ಟ್ಯಗಳು ಮುಂದುವರಿಯುತ್ತಲೇ ಹೋಗುತ್ತದೆ. ಆದರೆ ಕೆಲವು ಖಾತೆದಾರರ ಖಾತೆಗಳಲ್ಲಿ ಈ ಬದಲಾವಣೆಗಳು ಕಂಡು ಬರದೇ ಇದ್ದು ಇನ್ನೂ ಪ್ರಗತಿಯಲ್ಲಿದೆ.

ಫೇಸ್‌ಬುಕ್‌ಗೆ ಹೋಲಿಸಿದಾಗ ಟ್ವಿಟ್ಟರ್ ಹಲವಾರು ಬದಲಾವಣೆಗಳನ್ನು ತನ್ನ ಖಾತೆಯಲ್ಲಿ ಮಾಡಿಕೊಂಡಿದೆ. ಫೇಸ್‌ಬುಕ್ ತನ್ನದೇ ಹಳೆಯ ಸ್ವರೂಪದಲ್ಲಿ ಮುಂದುವರಿಯುತ್ತಿದ್ದು ಅಷ್ಟೊಂದು ಆಕರ್ಷಣೀಯವಾಗಿಲ್ಲ ಆದರೆ ಟ್ವಿಟ್ಟರ್ ಬದಲಾವಣೆಯತ್ತ ಮುಖ ಮಾಡಿದ್ದು ನಿಚ್ಚಳವಾಗಿ ಕಂಡುಬಂದಿದೆ. ಹೊಸ ರೂಪದಲ್ಲಿ ಹೊಸ ವಿನ್ಯಾಸದಲ್ಲಿ ತನ್ನ ಬಳಕೆದಾರರ ಪ್ರೀತಿ ಪಾತ್ರನಾಗಲು ಹೊರಟಿದೆ.

ಬಳಕೆದಾರರ ಖಾತೆಗಳಲ್ಲಿ ಟ್ವಿಟ್ಟರ್ ಈ ಬದಲಾವಣೆಗಳನ್ನು ತಂದಿದ್ದು ತನ್ನ ಖ್ಯಾತಿಯನ್ನು ಹೆಚ್ಚು ಪ್ರಚುರಪಡಿಸಲು. ಇದನ್ನು ಬಳಸುವವರ ಸಂಖ್ಯೆ ಇದೀಗ ಹೆಚ್ಚಾಗಿದ್ದು ಸಾಮಾಜಿಕ ಅಂಕಿ ಅಂಶಗಳ ಗಣನೀಯ ಸಾಧನೆಯನ್ನು ನಮ್ಮ ಮುಂದಿಡಲು ಟ್ವಿಟ್ಟರ್ ಸಹಕಾರಿಯಾಗಿದೆ. ಬದಲಾವಣೆಯೇ ಜಗದ ನಿಯಮ ಎಂಬಂತೆ ಬದಲಾದ ಟ್ವಿಟ್ಟರ್‌ಗೆ ಹಾಯ್ ಎನ್ನೋಣವೇ????

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot