ಟ್ವಿಟರ್‌ನಿಂದ ಮಧ್ಯಂತರ ಮುಖ್ಯ ಅನುಸರಣಾ ಅಧಿಕಾರಿಯ ನೇಮಕ!

|

ಭಾರತ ಸರ್ಕಾರದ ಹೊಸ ಐಟಿ ನಿಯಮಗಳನ್ನು ಅನುಸರಿಸಿ, ಟ್ವಿಟರ್ ಈಗ ಭಾರತದಲ್ಲಿ ಮಧ್ಯಂತರ ಮುಖ್ಯ ಅನುಸರಣೆ ಅಧಿಕಾರಿಯನ್ನು(interim Chief Compliance Officer) ನೇಮಿಸಿದೆ. ಕಂಪನಿಯು ಶೀಘ್ರದಲ್ಲಿಯೇ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಜೊತೆಗೆ ಮಾಹಿತಿ ಹಂಚಿಕೊಳ್ಳಲಾಗುವುದು ಎಂದು ಹೇಳಿದೆ.

ಟ್ವಿಟ್ಟರ್

ಈ ಕುರಿತು ಮಾಹಿತಿ ನೀಡಿರುವ ಟ್ವಿಟ್ಟರ್ ವಕ್ತಾರರು, ಹೊಸ ಮಾರ್ಗಸೂಚಿಗಳನ್ನು ಅನುಸರಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಪ್ರತಿ ಹಂತದಲ್ಲೂ ಪ್ರಗತಿಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಮಧ್ಯಂತರ ಮುಖ್ಯ ಅನುಸರಣೆ ಅಧಿಕಾರಿಯನ್ನು ಉಳಿಸಿಕೊಳ್ಳಲಾಗಿದೆ ಮತ್ತು ವಿವರಗಳನ್ನು ಶೀಘ್ರದಲ್ಲೇ ಸಚಿವಾಲಯದೊಂದಿಗೆ ಹಂಚಿಕೊಳ್ಳಲಾಗುವುದು. ಹೊಸ ಮಾರ್ಗಸೂಚಿಗಳನ್ನು ಅನುಸರಿಸಲು ಟ್ವಿಟರ್ ಎಲ್ಲಾ ಪ್ರಯತ್ನಗಳನ್ನು ಮುಂದುವರಿಸಿದೆ ಎಂದು ಟ್ವಿಟರ್ ವಕ್ತಾರರು ತಿಳಿಸಿದ್ದಾರೆ.

ತಂತ್ರಜ್ಞಾನ

ಕಳೆದ ಕೆಲವು ತಿಂಗಳುಗಳಿಂದ ಟ್ವಿಟರ್ ಹಾಗೂ ಕೇಂದ್ರ ಸರ್ಕಾರದ ನಡುವೆ ಹಲವು ವಿಷಯಗಳ ಬಗ್ಗೆ ಸಂಘರ್ಷ ಏರ್ಪಟ್ಟಿದೆ. ಈ ತಿಂಗಳ ತಂತ್ರಜ್ಞಾನಆರಂಭದಲ್ಲಿ, ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊಸ ಮಾಹಿತಿ ನಿಯಮಗಳನ್ನು ಪಾಲಿಸುವಂತೆ ಕೋರಿ ಟ್ವಿಟರ್‌ಗೆ ಕೊನೆಯ ನೋಟೀಸ್ ನೀಡಿತ್ತು.

ಕಾನೂನಿನಲ್ಲಿ

ಹೊಸ ಐಟಿ ನಿಯಮಗಳ ಬಗ್ಗೆ ಭಾರತ ಸರ್ಕಾರದೊಂದಿಗೆ ದೀರ್ಘಕಾಲದ ಸಂಘರ್ಷದ ನಂತರ ಈ ನವೀಕರಣವು ಬಂದಿದೆ. ಹೊಸ ಕಾನೂನಿನಲ್ಲಿ ವಾಟ್ಸಾಪ್, ಫೇಸ್‌ಬುಕ್, ಗೂಗಲ್ ಮತ್ತು ಇತರ ಸಾಮಾಜಿಕ ತಾಣಗಳು ಸೇರಿದಂತೆ ಭಾರತದ ಟೆಕ್ ಕಂಪೆನಿಗಳು, ಮುಖ್ಯ ಅನುಸರಣೆ ಅಧಿಕಾರಿ, ನೋಡಲ್ ಅಧಿಕಾರಿ ಮತ್ತು ಕುಂದುಕೊರತೆ ಅಧಿಕಾರಿಗಳನ್ನು ನೇಮಕ ಮಾಡಬೇಕಾಗಿತ್ತು.

ಆರಂಭದಲ್ಲಿ

ಮೇ 25 ರಿಂದ ಜಾರಿಗೆ ಬಂದ ಹೊಸ ಐಟಿ ನಿಯಮಗಳನ್ನು ಅನುಸರಿಸಲು ಹೆಚ್ಚಿನ ಸಮಯವನ್ನು ಕೋರಲು ಟ್ವಿಟರ್ ಇಂಡಿಯಾ ಈ ಹಿಂದೆ ಸರ್ಕಾರವನ್ನು ಸಂಪರ್ಕಿಸಿತ್ತು. ಹೊಸ ಐಟಿ ನಿಯಮಗಳನ್ನು ಸರ್ಕಾರವು ಫೆಬ್ರವರಿಯಲ್ಲಿ ಮೊದಲು ಘೋಷಿಸಿತು. ವಾಟ್ಸಾಪ್ ಮತ್ತು ಫೇಸ್‌ಬುಕ್ ಈ ತಿಂಗಳ ಆರಂಭದಲ್ಲಿ ಭಾರತಕ್ಕೆ ತಮ್ಮ ಕುಂದುಕೊರತೆ ಅಧಿಕಾರಿಗಳನ್ನು ನೇಮಿಸಿವೆ. ಮತ್ತೊಂದೆಡೆ, ಟ್ವಿಟರ್, ದೇಶದ ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ಹೇಳಿದೆ.

ಅಧಿಕಾರಿ

ಟ್ವಿಟರ್ ಸಂಸ್ಥೆಯು ಭಾರತದಲ್ಲಿ ಮುಖ್ಯ ಅನುಸರಣೆ ಅಧಿಕಾರಿ, ನೋಡಲ್ ಅಧಿಕಾರಿ ಮತ್ತು ಕುಂದುಕೊರತೆ ಅಧಿಕಾರಿ ಹುದ್ದೆಗಾಗಿ ಲಿಂಕ್ಡ್‌ಇನ್‌ನಲ್ಲಿ ಉದ್ಯೋಗಾವಕಾಶಗಳನ್ನು ಪ್ರಕಟಿಸಿತು.

Best Mobiles in India

English summary
The micro-blogging platform says it continues to make every effort to comply with the new guidelines.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X