ಡಿ.11ರ ಒಳಗೆ ನಿಮ್ಮ ಟ್ವಿಟ್ಟರ್ ಖಾತೆಗೆ ಲಾಗಿನ್ ಆಗಲು 'ಲಾಸ್ಟ್ ವಾರ್ನಿಂಗ್'!

|

ಇಲ್ಲಿಯವರೆಗೂ ಫೇಕ್ ಖಾತೆಗಳನ್ನಷ್ಟೇ ಡಿಲೀಟ್ ಮಾಡುತ್ತಿದ್ದ ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಇದೀಗ ಬಹಳ ಸಮಯದಿಂದ ಬಳಸದೇ ಇರುವ ಖಾತೆಗಳನ್ನು ಸಹ ಡಿಲೀಟ್ ಮಾಡಲು ಮುಂದಾಗಿದೆ.! ನಿಷ್ಕ್ರಿಯಗೊಂಡಿರುವ ಟ್ವಿಟ್ಟರ್ ಅಕೌಂಟ್ ಗಳನ್ನು ಡಿಲೀಟ್ ಮಾಡುವ ಮೂಲಕ ಸ್ವಚ್ಛತಾ ಅಭಿಯಾನಕ್ಕೆ ಈ ಮೈಕ್ರೋ ಬ್ಲಾಗಿಂಗ್ ಸಂಸ್ಥೆ ಕೈಹಾಕಿದ್ದು, ಈ ಸ್ವಚ್ಛತಾ ಅಭಿಯಾನದ ಹಿಂದೆ ನಕಲಿ ಟ್ವಿಟ್ಟರ್ ಖಾತೆಗಳನ್ನು ಡಿಲೀಟ್ ಮಾಡುವ ಮೂಲಕ ವಿಶ್ವಾಸಾರ್ಹತೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಉದ್ದೇಶವನ್ನು ಕಂಪೆನಿ ಹೊಂದಿದೆ ಎಂದು ಹೇಳಲಾಗಿದೆ.

ಟ್ವಿಟ್ಟರ್

ಹೌದು, ಟ್ವಿಟ್ಟರ್ ಬಳಕೆದಾರರು ತಮ್ಮ ಅಕೌಂಟ್‌ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಮೈಕ್ರೋಬ್ಲಾಗಿಂಗ್ ಸಂಸ್ಥೆ ಈ ವಿನೂತನ ಕ್ರಮವನ್ನು ಪ್ರಕಟಿಸಿದೆ. ಕಳೆದ ಕೆಲವು ಸಮಯಗಳಿಂದ ಚಾಲ್ತಿಯಲ್ಲಿಲ್ಲದ ಟ್ವಿಟ್ಟರ್ ಲಾಗಿನ್ ಗಳನ್ನು ಡಿಲೀಟ್ ಮಾಡುವ ಪ್ರಕ್ರಿಯೆ ಈಗಾಗಲೇ ಪ್ರಾರಂಭಗೊಂಡಿದೆ. ಈ ಕುರಿತಾದ ಮಾಹಿತಿಯನ್ನು ಟ್ವಿಟ್ಟರ್ ಬಳಕೆದಾರರ ಅಧಿಕೃತ ಇ-ಮೇಲ್ ಅಕೌಂಟ್ ಗಳಿಗೆ ಕಳುಹಿಸಿದ ಬಳಿಕವಷ್ಟೇ ಟ್ವಿಟ್ಟರ್ ಸಂಸ್ಥೆಯು ಚಾಲ್ತಿಯಲ್ಲಿಲ್ಲದ ಟ್ವಿಟ್ಟರ್ ಅಕೌಂಟ್ ಗಳನ್ನು ಡಿಲೀಟ್ ಮಾಡುತ್ತಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಟ್ವಿಟ್ಟರ್

ಟ್ವಿಟ್ಟರ್ ಮಾಹಿತಿ ನೀಡಿರುವಂತೆ ಕಳೆದ ಆರು ತಿಂಗಳುಗಳಿಗಿಂತ ಹೆಚ್ಚು ಕಾಲ ಬಳಸದೇ ಇರುವ ಟ್ವಿಟ್ಟರ್ ಖಾತೆಯನ್ನು ಡಿಲೀಟ್ ಮಾಡಲಾಗುತ್ತಿದೆ. ಖಾತೆ ತೆರೆದು ಆರು ತಿಂಗಳಾದರೂ ಅದರಲ್ಲಿ ಯಾವುದೇ ಪೋಸ್ಟ್ ಮಾಡದೇ ಇರುವ, ಕಾಮೆಂಟ್ ಮಾಡದೇ ಇರುವ ಹಾಗೂ ಮರಣಹೊಂದಿರುವವರ ಖಾತೆಗಳು ಡಿಲೀಟ್ ಆಗಲಿವೆ. ಹಾಗೆಂದು ನಿಷ್ಕ್ರಿಯ ಟ್ವಿಟ್ಟರ್ ಖಾತೆಗಳು ಏಕಾಏಕಿ ಡಿಲೀಟ್ ಆಗುವುದಿಲ್ಲ. ನೀವು ಟ್ಟಿಟ್ಟರ್ ಬಳಕೆದಾರರಾಗಿದ್ದಲ್ಲಿ ನಿಮ್ಮ ಅಕೌಂಟ್ ಅನ್ನು ಉಳಿಸಿಕೊಳ್ಳುವ ಸಲುವಾಗಿ ಟ್ವಿಟ್ಟರ್ ಕಾಲಾವಕಾಶವನ್ನು ಸಹ ನೀಡಿದೆ.

ಕೆಲವು ಸಮಯ

ನೀವು ಟ್ಟಿಟ್ಟರ್ ಬಳಕೆದಾರರಾಗಿದ್ದಲ್ಲಿ ಮತ್ತು ಕಳೆದ ಕೆಲವು ಸಮಯಗಳಿಂದ ನಿಮ್ಮ ಅಕೌಂಟ್ ಗೆ ನೀವು ಲಾಗಿನ್ ಆಗಿರದೇ ಇದ್ದಲ್ಲಿ ಇದೇ ಡಿಸೆಂಬರ್ 11ರ ಒಳಗೆ ಲಾಗಿನ್ ಆಗುವ ಮೂಲಕ ನಿಮ್ಮ ಅಕೌಂಟ್ ಅನ್ನು ಉಳಿಸಿಕೊಳ್ಳುವ ಅವಕಾಶವನ್ನು ನಿಮಗೆ ನೀಡಲಾಗಿದೆ. ಒಂದು ವೇಳೆ ಈ ಸಮಯದ ಒಳಗಾಗಿ ನೀವು ಟ್ವಿಟ್ಟರ್ ಖಾತೆಯನ್ನು ಬಳಸದೇ ಇದ್ದರೆ, ನಿಮ್ಮ ಯೂಸರ್ ನೇಮ್ ಅನ್ನು ಹೊಸ ಬಳಕೆದಾರರಿಗೆ ನೀಡಲಾಗುವುದು ಎಂಬ ಸಂದೇಶವನ್ನು ಟ್ವಿಟ್ಟರ್ ತಾನು ಬಳಕೆದಾರರಿಗೆ ಕಳುಹಿಸುತ್ತಿರುವ ಇ-ಮೆಲ್ ನಲ್ಲಿ ನಮೂದಿಸಿದೆ ಎಂದು ತಿಳಿದುಬಂದಿದೆ.

ಡಿಸೆಂಬರ್ 11

ಡಿಸೆಂಬರ್ 11ರಿಂದ ಪ್ರಾರಂಭಗೊಳ್ಳುವ ಈ ಪ್ರಕ್ರಿಯೆ ಮುಂದಿನ ಕೆಲವು ತಿಂಗಳುಗಳವರೆಗೆ ಮುಂದುವರಿಯುವ ಸೂಚನೆಯನ್ನು ಸಂಸ್ಥೆ ನೀಡಿದೆ. ಹಾಗಾಗಿ, ನೀವು ನೀವು ಟ್ವಿಟ್ಟರ್ ಬಳಕೆದಾರರಾಗಿದ್ದು ನಿಮ್ಮ ಅಕೌಂಟ್ ಅನ್ನು ಬಹಳ ಸಮಯದಿಂದ ಬಳಸದೇ ಇದ್ದಿದ್ದರೆ ಇಂದೇ ಲಾಗಿನ್ ಆಗಿ ಇಲ್ಲದಿದ್ದರೇ ನಿಮ್ಮ ಅಕೌಂಟೇ ಡಿಲೀಟ್ ಆಗಿಬಿಡುವ ಸಾಧ್ಯತೆಗಳಿವೆ. ಒಂದು ವೇಳೆ ನಿಮ್ಮ ಟ್ವಿಟ್ ಖಾತೆ ಈಗಾಗಲೇ ಡಿಲೀಟ್ ಆಗಿದ್ದರೆ ಅದೇ ಹೆಸರಿನಲ್ಲಿ ನೀವು ಟ್ವಿಟ್ ಖಾತೆ ತೆರೆಯಬಹುದು. ಆದರೆ, ಆ ಹೆಸರು ಬೇರೆಯವರ ಪಾಲಾಗದೇ ಇದ್ದರೆ ಮಾತ್ರ.!

Most Read Articles
Best Mobiles in India

English summary
Twitter is warning people with inactive accounts that they must log in.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X