ಇನ್ಮುಂದೆ ವೀಸಾ ಪಡೆಯಲು ಬೇಕು ಫೇಸ್‌ಬುಕ್!

|

ಫೇಸ್‌ಬುಕ್, ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳು ವ್ಯಕ್ತಿಯೋರ್ವನ ಪ್ರತಿಬಿಂಬ ಎಂಬುದನ್ನು ಅಮೆರಿಕಾವು ಒಪ್ಪಿರಬಹುದು. ಏಕೆಂದರೆ, ಇದೀಗ ವಿದೇಶಿಯರು ಅಮೆರಿಕಕ್ಕೆ ಆಗಮಿಸುವ ಮುನ್ನ ಸಾಮಾಜಿಕ ಜಾಲತಾಣಗಳ ಬಳಕೆಯ ಬಗ್ಗೆ ಮಾಹಿತಿ ನೀಡಬೇಕು ಎಂಬ ಹೊಸನೀತಿಯನ್ನು ತರಲಾಗಿದೆ. ಇದು ಭವಿಷ್ಯದಲ್ಲಿ ಹಲವು ಸಮಸ್ಯೆಗಳಿಗೆ ಮುನ್ನುಡಿ ಇಟ್ಟಿದೆ.

ಹೌದು, ನೀವೀಗ ಅಮೆರಿಕಾಕ್ಕೆ ತೆರಳಬೇಕೆಂದರೆ 5 ವರ್ಷಗಳ ಕಾಲ ನಿಮ್ಮ ಸಾಮಾಜಿಕ ಜಾಲತಾಣಗಳ ಬಳಕೆ ಬಗ್ಗೆ ಅಮೆರಿಕಾಕ್ಕೆ ಸಂಪೂರ್ಣ ಮಾಹಿತಿ ನೀಡಬೇಕಿದೆ. ಈ ಹೊಸ ನೀತಿಯಲ್ಲಿ ಜನರ ಸಾಮಾಜಿಕ ಮಾಧ್ಯಮಗಳ ಖಾತೆ ಮಾಹಿತಿ ಪಡೆದು, ಅದನ್ನು ಹಿನ್ನೆಲೆ ಪರಿಶೀಲನೆ ವೇಳೆ ಬಳಸಿಕೊಳ್ಳಲಾಗುತ್ತದೆ ಎಂದು ಅಮೆರಿಕದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ಮುಂದೆ ವೀಸಾ ಪಡೆಯಲು ಬೇಕು ಫೇಸ್‌ಬುಕ್!

ಓರ್ವ ವ್ಯಕ್ತಿಯ ಒಲವು ಮತ್ತು ಇತರೆ ಚಟುವಟಿಕೆಗಳಿಗೆ ಸಂಬಂಧಿಸಿದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಿಗುವ ಮಾಹಿತಿ ಅತ್ಯಂತ ಪರಿಣಾಮಕಾರಿ ಮೂಲ ಎಂದು ಅಮೆರಿಕಾ ಈ ರೀತಿ ನೀತಿಯನ್ನು ತಂದಿದೆ. ಉಗ್ರ ಚಟುವಟಿಕೆ ಮತ್ತು ಅಥವಾ ಉಗ್ರರ ಬಗ್ಗೆ ಒಲವು ಹಾಗೂ ಭಯೋತ್ಪಾದನೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಕಂಡುಕೊಳ್ಳಲು ಈ ಪ್ಲ್ಯಾನ್ ಮಾಡಲಾಗಿದೆ.

ಅಮೆರಿಕ ರೂಪಿಸಿದ ಈ ಹೊಸ ನೀತಿಯ ಪ್ರಕಾರ, ಇನ್ಮುಂದೆ ಅಮೆರಿಕಾಕ್ಕೆ ಹೋಗಲು ಬಯಸುವ ವ್ಯಕ್ತಿಯೋರ್ವವು ಸಾಮಾಜಿಕ ಜಾಲತಾಣಗಳಲ್ಲಿ ವಿಚಿತ್ರ, ಅವಹೇಳನಕಾರಿ ಪೋಸ್ಟ್‌ ಮಾಡಿರುವುದು ಕಂಡುಬಂದೆರೆ ಅಮೆರಿಕದ ವೀಸಾ ಸಿಗುವುದು ಕಷ್ಟವಾಗಲಿದೆ. ಪರೀಶೀಲನೆ ವೇಳೆ ಇಂತಹುಗಳು ಕಂಡುಬಂದರೆ ಆ ವ್ಯಕ್ತಿಗೆ ವೀಸಾ ದೊರೆಯಲು ಸಾಧ್ಯವೇ ಇಲ್ಲವಾಗಿದೆ.

ಇನ್ಮುಂದೆ ವೀಸಾ ಪಡೆಯಲು ಬೇಕು ಫೇಸ್‌ಬುಕ್!

ಸಾಮಾಜಿಕ ಮಾಧ್ಯಮ ಖಾತೆಗಳ ಬಳಕೆ ಕೂಡ ಈಗ ವ್ಯಕ್ತಿತ್ವಕ್ಕೆ ಸಾಕ್ಷಿ ಎಂದಿರುವ ಅಮೆರಿಕದ ಹಿರಿಯ ಅಧಿಕಾರಿಗಳು, ಸಾಮಾಜಿಕವಾಗಿ ಅಪಾಯಕಾರಿ ವ್ಯಕ್ತಿಯನ್ನೂ ಈ ಮೂಲಕ ನಾವು ಸ್ಪಷ್ಟವಾಗಿ ಗುರುತಿಸಬಹುದು ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಇನ್ನಷ್ಟು ವಿಸ್ತಾರವಾಗಿ ಮಾಹಿತಿ ನೀಡಬೇಕು ಎಂಬ ನೀತಿಯನ್ನೂ ತರುವ ಸಾಧ್ಯತೆಗಳ ಬಗ್ಗೆ ಕೂಡ ತಿಳಿಸಿದ್ದಾರೆ.

ಓದಿರಿ: 'ಇಂಟರ್‌ನೆಟ್‌' ಬಳಕೆ ಎಷ್ಟು ಅಪಾಯಕಾರಿ ಸಮಸ್ಯೆ ಗೊತ್ತಾ?

Best Mobiles in India

English summary
All applicants must declare social media profiles under increased surveillance; more checks to hit 15 million applicants. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X