ಕ್ರಿಕೆಟ್‌ ಬಾಲ್‌ನಂತೆ ಕಂಡರೂ ಇದರಲ್ಲಿ ಕ್ರಿಕೆಟ್‌ ಆಡೋಕೆ ಸಾಧ್ಯವಿಲ್ಲ! ಹಾಗಾದ್ರೆ ಏನಿದು?

|

ಭಾರತದಲ್ಲಿ ಕ್ರಿಕೆಟ್‌ ಪ್ರಿಯರಿಗೇನೂ ಕಡಿಮೆ ಇಲ್ಲ. ಇದೇ ಕಾರಣಕ್ಕೆ ಅನೇಕ ಬ್ರ್ಯಾಂಡ್‌ಗಳು ಕ್ರಿಕೆಟ್‌ ಸಂಬಂಧಿತ ಪ್ರಚಾರದ ಮೂಲಕ ತಮ್ಮ ಪ್ರಾಡಕ್ಟ್‌ಗಳ ಪ್ರಚಾರ ಮಾಡುತ್ತವೆ. ಸದ್ಯ ಇದೀಗ ದೆಹಲಿ ಮೂಲದ ಕಂಪೆನಿಯೊಂದು ಕ್ರಿಕೆಟ್‌ ಪ್ರಿಯರನ್ನು ಸೆಳೆಯುವುದಕ್ಕಾಗಿ ಹೊಸ ಪ್ಲಾನ್‌ ಮಾಡಿದೆ. ಕ್ರಿಕೆಟ್‌ ಪ್ರಿಯರಿಗಾಗಿಯೇ ಹೊಸ ಮಾದರಿಯ ಇಯರ್‌ಬಡ್ಸ್‌ಗಳನ್ನು ಪರಿಚಯಿಸಿದೆ. ಈ ಇಯರ್‌ಬಡ್ಸ್‌ ಥೇಟ್‌ ಕ್ರಿಕೆಟ್‌ ಬಾಲ್‌ ಮಾದರಿಯಲ್ಲಿದೆ. ಕ್ರಿಕೆಟ್‌ ಬಾಲ್‌ನಂತೆ ಕಾಣುವ ಈ ಟ್ರೂಲಿ ಇಯರ್‌ಬಡ್ಸ್‌ ಮ್ಯೂಸಿಕ್‌ ಪ್ರಿಯರ ಗಮನಸೆಳೆಯಲಿದೆ.

ಇಯರ್‌ಬಡ್ಸ್‌

ಹೌದು, ಗ್ರಾಹಕರನ್ನು ಆಕರ್ಷಿಸುವ ದೃಷ್ಟಿಯಿಂದ ಇಯರ್‌ಬಡ್ಸ್‌ಗಳ ವಿನ್ಯಾಸದಲ್ಲಿ ಅಗತ್ಯ ಬದಲಾವಣೆಗಳು ನಡೆಯುತ್ತಲೇ ಇವೆ. ಥೇಟ್‌ ಕ್ರಿಕೆಟ್‌ ಬಾಲ್‌ನಂತೆ ಕಾಣುವ ಈ ಜೋಡಿ ಇಯರ್‌ಬಡ್ಸ್‌ ನಿಮ್ಮ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಲಿದೆ. ದೆಹಲಿ ಮೂಲದ ವೇರಬಲ್ಸ್ ಕಂಪನಿ ಉಬಾನ್ ಕಂಪೆನಿ ಕ್ರಿಕೆಟ್‌ ಬಾಲ್‌ ಮಾದರಿಯ ಇಯರ್‌ಬಡ್ಸ್‌ ಪರಿಚಯಿಸಿದೆ. ಈ ಬಾಲ್‌ ಮೂಲಕ ನೀವು ಕ್ರಿಕೆಟ್‌ ಆಡುವುದಕ್ಕೆ ಸಾದ್ಯವಿಲ್ಲ ಬದಲಿಗೆ ಮ್ಯೂಸಿಕ್‌ ಅನ್ನು ಮಾತ್ರ ಆಲಿಸಬಹುದಾಗಿದೆ. ಹಾಗಾದ್ರೆ ಕ್ರಿಕೆಟ್‌ ಬಾಲ್‌ನಂತೆ ಕಾಣುವ ಇಯರ್‌ಬಡ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಉಬಾನ್

ದೆಹಲಿ ಮೂಲದ ವೇರಬಲ್ಸ್ ಕಂಪನಿ ಉಬಾನ್ ಹೊಸ ಜೋಡಿ ಇಯರ್‌ಬಡ್ಸ್‌ ಲಾಂಚ್‌ ಮಾಡಿದೆ. ಇದನ್ನು ಕ್ರಿಕೆಟ್ ಪ್ರೇಮಿಗಳಿಗಾಗಿಯೇ ವಿನ್ಯಾಸಗೊಳಿಸಲಾಗಿದೆ. ಇದನ್ನು ಉಬಾನ್‌ BT - 210 ಕ್ರಿಕೆಟ್ ಬಾಲ್ ವಾಯರ್‌ಲೆಸ್ ಇಯರ್‌ಬಡ್ಸ್‌ ಎಂದು ಹೆಸರಿಸಲಾಗಿದೆ. ಹಾಗಂತ ಈ ಕ್ರಿಕೆಟ್‌ ಬಾಲ್‌ನಲ್ಲಿ ನಿವು ಕ್ರಿಕೆಟ್‌ ಆಡಲು ಸಾದ್ಯವಲ್ಲ. ಬದಲಿಗೆ ಮ್ಯೂಸಿಕ್‌ ಅನ್ನು ಆಲಿಸುವುದಕ್ಕೆ ಸಾದ್ಯವಾಗಲಿದೆ. UBON BT-210 ಕ್ರಿಕೆಟ್ ಬಾಲ್ ಇಯರ್‌ಬಡ್ಸ್‌ ಡೀಪ್‌ ಬಾಸ್ ಮತ್ತು 20 ಗಂಟೆಗಳ ಅವಧಿಯ ಪ್ಲೇಟೈಮ್‌ ಅನ್ನು ನೀಡಲಿದೆ.

ಉಬಾನ್‌ BT-210 ಕ್ರಿಕೆಟ್ ಬಾಲ್ ವಾಯರ್‌ಲೆಸ್ ಇಯರ್‌ಬಡ್ಸ್‌

ಉಬಾನ್‌ BT-210 ಕ್ರಿಕೆಟ್ ಬಾಲ್ ವಾಯರ್‌ಲೆಸ್ ಇಯರ್‌ಬಡ್ಸ್‌

Ubon BT-210 ಕ್ರಿಕೆಟ್ ಬಾಲ್ ವೈರ್‌ಲೆಸ್ ಇಯರ್‌ಬಡ್ಸ್‌ ಕಾಂಡದ ವಿನ್ಯಾಸವನ್ನು ಹೊಂದಿವೆ. ಕ್ರಿಕೆಟ್‌ ಬಾಲ್‌ ಮಾದರಿಯಲ್ಲಿರುವ ವಿನ್ಯಾಸದಲ್ಲಿ ಕಾಣಲಿದೆ. ಇನ್ನು ಈ ಇಯರ್‌ಬಡ್ಸ್‌ 300mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಸಿಂಗಲ್‌ ಚಾರ್ಜ್‌ನಲ್ಲಿ 20 ಗಂಟೆಗಳ ಪ್ಲೇ ಟೈಂ ಅನ್ನು ನೀಡಲಿದೆ. ಈ ಇಯರ್‌ಬಡ್ಸ್‌ ಬೆವರು ನಿರೋಧಕವಾಗಿದ್ದು, ಜಿಮ್‌, ಸ್ಪೋರ್ಟ್ಸ್‌ ಟೈಂನಲ್ಲಿಯೂ ಬಳಸುವುದಕ್ಕೆ ಸೂಕ್ತವಾಗಿವೆ. ಅಲ್ಲದೆ ನೀವು ಕೆಲಸ ಮಾಡುವಾಗಲೂ ಕೂಡ ಬಳಸಬಹುದಾಗಿದೆ.

ಇಯರ್‌ಬಡ್ಸ್‌

ಇನ್ನು ಈ ಇಯರ್‌ಬಡ್ಸ್‌ ನಲ್ಲಿ ಕರೆಗಳನ್ನು ಸ್ವೀಕರಿಸಲು ಟಚ್ ಕಂಟ್ರೋಲ್ ಫೀಚರ್ಸ್‌ ಅನ್ನು ಕೂಡ ನೀಡಲಿದೆ. ಇದು ಡ್ಯುಯಲ್ ಮೈಕ್ ಬೆಂಬಲವನ್ನು ಕೂಡ ಒಳಗೊಂಡಿದೆ. ಇದಲ್ಲದೆ ಈ ಇಯರ್‌ಬಡ್ಸ್‌ಗಳು ಆಪಲ್‌ನ ಸಿರಿ ಮತ್ತು ಗೂಗಲ್ ಅಸಿಸ್ಟೆಂಟ್‌ನಂತಹ ವರ್ಚುವಲ್ ಅಸಿಸ್ಟೆಂಟ್‌ ಅನ್ನು ಕೂಡ ಬೆಂಬಲಿಸಲಿದೆ. ಇದರೊಂದಿಗೆ ಯಶಸ್ವಿ ಆಟೋ-ಕನೆಕ್ಟ್‌ ನಂತರ ಈ ಇಯರ್‌ಬಡ್‌ಗಳನ್ನು ಪ್ರತ್ಯೇಕವಾಗಿ ಬಳಸುವುದಕ್ಕೆ ಕೂಡ ಅವಕಾಶವಿದೆ.

 ಇಯರ್‌ಬಡ್ಸ್‌

ಈ ಕ್ರಿಕೆಟ್‌ ಬಾಲ್‌ ಮಾದರಿಯ ಇಯರ್‌ಬಡ್ಸ್‌ಗಳ ಬಗ್ಗೆ ಉಬಾನ್‌ ಕಂಪೆನಿಯ ಎಂಡಿ ಮತ್ತು ಸಹ-ಸಂಸ್ಥಾಪಕ ಮಂದೀಪ್ ಅರೋರಾ ಮಾಹಿತಿ ನೀಡಿದ್ದಾರೆ. ನಾವು ವಾಯರ್‌ಲೆಸ್‌ ಇಯರ್‌ಬಡ್ಸ್‌ ವಿಭಾಗದಲ್ಲಿ ವೈವಿಧ್ಯತೆಯನ್ನು ತರುವ ಗುರಿಯೊಂದಿಗೆ, ನಮ್ಮ ಗ್ರಾಹಕರಿಗೆ ಅತ್ಯುತ್ತಮ ಸೇವೆ ಸಲ್ಲಿಸುವ ಪ್ರಯತ್ನ ಮಾಡುತ್ತಿದ್ದೆವೆ. ಈ ನಿಟ್ಟಿನಲ್ಲಿ ಉಬಾನ್‌ BT-210 ಕ್ರಿಕೆಟ್ ಬಾಲ್ ವಾಯರ್‌ಲೆಸ್‌ ಇಯರ್‌ಬಡ್ಸ್‌ ಸೃಜನಶೀಲತೆ ಮತ್ತು ಕಠಿಣ ಪರಿಶ್ರಮಕ್ಕೆ ಒಂದು ಉದಾಹರಣೆಯಾಗಿದೆ. ಇದು ನಮ್ಮ ಉತ್ಪನ್ನದ ವಿನ್ಯಾಸದಲ್ಲಿ ಪ್ರತಿಫಲಿಸುತ್ತದೆ. ಈ ಇಯರ್‌ಬಡ್ಸ್‌ಗಳನ್ನು ನೀವು ವ್ಯಾಯಾಮದ ಸಮಯದಲ್ಲಿ ಜಿಮ್ನಲ್ಲಿ ಕೂಡ ಬಳಸಬಹುದು. ಕ್ರಿಕೆಟ್‌ ನೋಡುತ್ತಾ ಮ್ಯೂಸಿಕ್‌ ಆಲಿಸುವುದಕ್ಕೂ ಇದು ಸೂಕ್ತವಾಗಿದೆ ಎಂದಿದ್ದಾರೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಕ್ರಿಕೆಟ್‌ ಬಾಲ್‌ ವಿನ್ಯಾಸವನ್ನು ಹೊಂದಿರುವ Ubon BT-210 ಕ್ರಿಕೆಟ್ ಬಾಲ್ ವಾಯರ್‌ಲೆಸ್ ಇಯರ್‌ಬಡ್ಸ್‌ ಭಾರತದಲ್ಲಿ 3299 ರೂ. ಬೆಲೆ ಹೊಂದಿದೆ. ಈ ಇಯರ್‌ಬಡ್ಸ್‌ಗಳು ಆರು ತಿಂಗಳ ವಾರಂಟಿಯೊಂದಿಗೆ ಬರುತ್ತವೆ. ಇವುಗಳಲ್ಲಿ ಫ್ಲಿಪ್‌ಕಾರ್ಟ್, ಅಮೆಜಾನ್ ಮತ್ತು UBON ನ ಅಧಿಕೃತ ವೆಬ್‌ಸೈಟ್‌ ಮೂಲಕ ಖರೀದಿಸಬಹುದಾಗಿದೆ. ಜೊತೆಗೆ ನಿಮ್ಮ ಹತ್ತಿರದ ರಿಟೇಲ್‌ ಸ್ಟೋರ್‌ಗಳಲ್ಲಿಯು ಕೂಡ ಖರೀದಿಗೆ ಲಭ್ಯವಾಗಲಿದೆ.

Best Mobiles in India

Read more about:
English summary
Ubon has launched a new pair of earbuds that is designed for cricket enthusiasts

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X