ಸದ್ಯದಲ್ಲೇ ಆಧಾರ್‌ ಜೊತೆಗೆ ಲಿಂಕ್‌ ಆಗಲಿದೆ ಜನನ ಮತ್ತು ಮರಣ ದಾಖಲೆ ವಿವರ!

|

ಆಧಾರ್‌ ಕಾರ್ಡ್‌ ಪ್ರತಿಯೊಬ್ಬ ಭಾರತೀಯ ನಾಗರಿಕನು ಹೊಂದಿರಬೇಕಾದ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವುದಕ್ಕೆ ಆಧಾರ್‌ ವಿವರವನ್ನು ನಮೂದಿಸುವುದು ಅಗತ್ಯವಾಗಿದೆ. ಇದಲ್ಲದೆ ಬ್ಯಾಂಕಿಂಗ್‌ ಹಾಗೂ ಇತರೆ ವಲಯಗಳಲ್ಲಿಯೂ ಕೂಡ ಆಧಾರ್‌ ಕಾರ್ಡ್‌ ಬಳಸುವುದು ಸಾಮಾನ್ಯವಾಗಿದೆ. ಇದೀಗ ಯುಐಡಿಎಐ ಆಧಾರ್‌ ಕಾರ್ಡ್‌ ಮೂಲಕ ಜನನ ಹಾಗೂ ಮರಣ ದಾಖಲೆಗಳನ್ನು ಲಿಂಕ್‌ ಮಾಡಲು ಪ್ಲಾನ್‌ ಮಾಡಿದೆ.

ಆಧಾರ್‌

ಹೌದು, ಆಧಾರ್‌ ಕಾರ್ಡ್‌ ಬಳಸಿಕೊಂಡು ಜನನ ಮತ್ತು ಮರಣಕ್ಕೆ ಸಂಬಂಧಿಸಿದ ವಿವರಗಳನ್ನು ಲಿಂಕ್‌ ಮಾಡುವುದಕ್ಕೆ UIDAI ಮುಂದಾಗಿದೆ. ಸರಕಾರಿ ಯೋಜನೆಯಡಿ ದಾಖಲೆ ದುರ್ಬಳಕೆಯನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ. ಯುಐಡಿಎಐ ಶೀಘ್ರದಲ್ಲೇ ಭಾರತದಲ್ಲಿ ಈ ಒಂದು ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಿದೆ ಎಂದು ಹೇಳಲಾಗಿದೆ. ಹಾಗಾದ್ರೆ ಆಧಾರ್‌ ಜೊತೆಗೆ ಜನನ ಮತ್ತು ಮರಣದ ವಿವರಗಳನ್ನು ಲಿಂಕ್‌ ಮಾಡುವುದರಿಂದ ಏನು ಪ್ರಯೋಜನವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಶೀಘ್ರದಲ್ಲೇ

UIDAI ಶೀಘ್ರದಲ್ಲೇ ಎರಡು ಪ್ರಾಯೋಗಿಕ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ಮುಂದಾಗಿದೆ. ಇದರಲ್ಲಿ ಒಂದು ಮಗುವಿನ ಜನನದ ಮೇಲೆ ಆಧಾರ್ ಸಂಖ್ಯೆಯನ್ನು ನೀಡುವುದರ ಮೂಲಕ ಜನನ ಪ್ರಮಾಣದ ದಾಖಲೆಗಳನ್ನು ಲಿಂಕ್‌ ಮಾಡಿದರೆ, ಮತ್ತೊಂದು ವ್ಯಕ್ತಿಯ ಮರಣವನ್ನು ಪತ್ತೆಹಚ್ಚುವುದರ ಮೂಲಕ ಮರಣ ದಾಖಲೆಗಳನ್ನು ಲಿಂಕ್‌ ಮಾಡುವುದು ಸೇರಿದೆ. ಇದರಿಂದ ಸತ್ತ ವ್ಯಕ್ತಿಯ ಆಧಾರ್‌ ಅನ್ನು ಬೇರೆಯವರು ದುರುಪಯೋಗಪಡಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಇದರಿಂದ ಆಧಾರ್ ಆಧಾರಿತ ಯೋಜನೆಗಳ ದುರುಪಯೋಗವನ್ನು ತಡೆಯಬಹುದಾಗಿದೆ. ವ್ಯಕ್ತಿ ಮರಣವನ್ನು ಹೊಂದಿದ್ದರೂ ಆತನ ಹೆಸರಿನಲ್ಲಿ ಸರ್ಕಾರದ ಸೌಲಭ್ಯ ಪಡೆದುಕೊಳ್ಳುವುದನ್ನು ತಪ್ಪಿಸಬಹುದಾಗಿದೆ.

ಜನನದ ಸಮಯದಲ್ಲಿ ಆಧಾರ್

ಜನನದ ಸಮಯದಲ್ಲಿ ಆಧಾರ್

ಯಾವುದೇ ಒಂದು ಮಗುವಿನ ಜನನದ ಸಮಯದಲ್ಲಿ ಮಕ್ಕಳಿಗೆ ಬಾಲ್ ಆಧಾರ್ ಅನ್ನು ನೀಡಲಾಗುತ್ತದೆ. ಪ್ರಸ್ತುತ ಲಭ್ಯವಿರುವ ವರದಿಯ ಪ್ರಕಾರ, 5 ರಿಂದ 18 ವರ್ಷ ವಯಸ್ಸಿನ ಸುಮಾರು 93% ಮಕ್ಕಳು ಆಧಾರ್ ಹೊಂದಿದ್ದಾರೆ. ಆದರೆ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾಲು ಭಾಗದಷ್ಟು ಮಕ್ಕಳು ಮಾತ್ರ ಆಧಾರ್‌ ಡೇಟಾಬೇಸ್‌ನಲ್ಲಿ ನೋಂದಾಯಿಸಲ್ಪಟ್ಟಿದ್ದಾರೆ. ಇದರಿಂದ UIDAI, ಪ್ರಾಯೋಗಿಕ ಕಾರ್ಯಕ್ರಮದ ಭಾಗವಾಗಿ, ಮಗು ಜನಿಸಿದ ತಕ್ಷಣವೇ ತಾತ್ಕಾಲಿಕ ಆಧಾರ್ ಕಾರ್ಡ್‌ಗಳನ್ನು ನೀಡುವುದಕ್ಕೆ ಮುಂದಾಗಿದೆ. ಇದರಿಂದ ಈ ತಾತ್ಕಾಲಿಕ ಆಧಾರ್ ಬಳಸಿ ಮಗುವಿನ ಕುಟುಂಬ ಸದಸ್ಯರು ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯುವುದಕ್ಕೆ ಸಾಧ್ಯವಾಗಲಿದೆ.

UIDAI

ಇದಕ್ಕಾಗಿ UIDAI ಐದು ವರ್ಷ ವಯಸ್ಸಿನ ಮಕ್ಕಳಿಂದ ಮೊದಲ ಸೆಟ್ ಬಯೋಮೆಟ್ರಿಕ್ ಡೇಟಾವನ್ನು ಸಂಗ್ರಹಿಸಲಿದೆ. ಬಯೋಮೆಟ್ರಿಕ್ ಡೇಟಾವನ್ನು ದಾಖಲಿಸಲು ಮತ್ತು ಶಾಶ್ವತ ಆಧಾರ್ ಸಂಖ್ಯೆಯನ್ನು ನೀಡಲು ಮಕ್ಕಳನ್ನು ಭೇಟಿ ಮಾಡಿದಾಗ, ಮಗುವಿಗೆ 18 ವರ್ಷ ತುಂಬಿದಾಗ, ಬಯೋಮೆಟ್ರಿಕ್ ಡೇಟಾವನ್ನು ರಿ ಎಂಟ್ರಿ ಮಾಡಲಾಗುತ್ತದೆ ಎನ್ನಲಾಗಿದೆ. ಅಲ್ಲದೆ ಒಂದೇ ಮಗುವಿಗೆ ಅನೇಕ ಆಧಾರ್ ಸಂಖ್ಯೆಗಳನ್ನು ಕ್ರಿಯೆಟ್‌ ಮಾಡುವ ಪ್ರಶ್ನೆಯೇ ಇಲ್ಲ ಎಂದು ಖಚಿತಪಡಿಸುತ್ತದೆ. ಇದರಿಂದ ಮಗು ಜನಿಸಿದಾಗಲೇ ಜನನ ಪ್ರಮಾಣದ ದಾಖಲೆಯ ವಿವರಗಳನ್ನು ಆಧಾರ್‌ನೊಂದಿಗೆ ಲಿಂಕ್‌ ಮಾಡುವುದಕ್ಕೆ ಸಾಧ್ಯವಾಗಲಿದೆ.

ಮರಣ ಹೊಂದಿದ ವ್ಯಕ್ತಿಗಳ ಆಧಾರ್ ಟ್ರ್ಯಾಕಿಂಗ್

ಮರಣ ಹೊಂದಿದ ವ್ಯಕ್ತಿಗಳ ಆಧಾರ್ ಟ್ರ್ಯಾಕಿಂಗ್

ಇನ್ನು UIDAI ಮರಣ ಹೊಂದಿದ ವ್ಯಕ್ತಿಗಳ ಆಧಾರ್ ಸಂಖ್ಯೆಯನ್ನು ಸಹ ಟ್ರ್ಯಾಕ್ ಮಾಡಲು ಮುಂದಾಗಿದೆ. ಇದಕ್ಕಾಗಿ ನಗರ ಮತ್ತು ರಾಜ್ಯದ ಜನನ ಮತ್ತು ಮರಣ ನೋಂದಣಿ ಡೇಟಾಬೇಸ್‌ಗಳೊಂದಿಗೆ ಆಧಾರ್‌ ಡೇಟಾವನ್ನು ಪರಿಶೀಲಿಸುವುದಕ್ಕೆ ಮುಂದಾಗಿದೆ. ಇದಲ್ಲದೆ ಮರಣ ಹೊಂದಿದ ವ್ಯಕ್ತಿಗಳ ಡೇಟಾ ಸಂಗ್ರಹಣೆ ಮಾಡುವುದಕ್ಕಾಗಿ ಖಾಸಗಿ ಮತ್ತು ಸಾರ್ವಜನಿಕ ಆಸ್ಪತ್ರೆಗಳನ್ನು ಸಂಪರ್ಕಿಸಲು ಯೋಜಿಸಿದೆ. ಇತ್ತೀಚೆಗೆ ವ್ಯಕ್ತಿ ನಿಧನ ಹೊಂದಿದ್ದರು ಕೂಡ ಅವರ ಹೆಸರಿನಲ್ಲಿ ಬೇರೆಯವರು ಪಿಂಚಣಿಯನ್ನು ಪಡೆಯುತ್ತಿರುವ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎನ್ನಲಾಗಿದೆ. ಈ ಹೊಸ ಪ್ಲಾನ್‌ನಿಂದ ಸತ್ತವರ ಆಧಾರ್ ಅನ್ನು ಸರ್ಕಾರಿ ಸವಲತ್ತುಗಳನ್ನು ಪಡೆಯಲು ಬೇರೆಯವರು ಬಳಸುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಲಾಗಿದೆ.

ಆಧಾರ್‌

ಇದಲ್ಲದೆ ಇತ್ತೀಚಿನ ದಿನಗಳಲ್ಲಿ ಬೇರೆಯವರ ಆಧಾರ್‌ ಕಾರ್ಡ್‌ ಸಂಖ್ಯೆಯನ್ನು ಬಳಸಿ ವಂಚನೆ ಮಾಡುವ ಸಂಖ್ಯೆ ಹೆಚ್ಚಾಗುತ್ತಿದೆ. ಆದರಿಂದ ನಿಮ್ಮ ಆಧಾರ್‌ ಕಾರ್ಡ್‌ ಸಂಖ್ಯೆ ಎಲ್ಲೆಲ್ಲಿ ಬಳಕೆ ಆಗಿದೆ ಅನ್ನೊದನ್ನ ಆಗಾಗ ಪರಿಶೀಲಿಸುವುದು ಉತ್ತಮ. ಆಧಾರ್‌ ಬಳಕೆ ಆಗಿರುವುದರ ಬಗ್ಗೆ ಆಧಾರ್ ಕಾರ್ಡ್‌ ಹಿಸ್ಟರಿ ಮೂಲಕ ಪರಿಶೀಲಿಸಬಹುದಾಗಿದೆ. ಯಾವುದೇ ರೀತಿಯ ವಂಚನೆಯನ್ನು ತಪ್ಪಿಸಲು ಜನರು ಯಾವಾಗಲೂ ತಮ್ಮ ಆಧಾರ್ ಕಾರ್ಡ್ (Aadhaar Card) ಹಿಸ್ಟರಿ ಮೇಲಿಂದ ಮೇಲೆ ಪರಿಶೀಲಿಸುವುದು ಉತ್ತಮವಾಗಿದೆ.

ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆ ಆಗಿದೆ ತಿಳಿಯಲು ಈ ಕ್ರಮ ಅನುಸರಿಸಿ:

ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆ ಆಗಿದೆ ತಿಳಿಯಲು ಈ ಕ್ರಮ ಅನುಸರಿಸಿ:

ಹಂತ 1: UIDAI ನ ಅಧಿಕೃತ ವೆಬ್‌ಸೈಟ್‌ uidai.gov.in ಗೆ ಭೇಟಿ ನೀಡಿ
ಹಂತ 2: ವೆಬ್‌ಸೈಟ್‌ನ ಮುಖಪುಟದ ಮೇಲೆ ಕ್ಲಿಕ್ ಮಾಡಿ, ನಂತರ ಮೈ ಆಧಾರ್ (My Aadhaar) ಆಯ್ಕೆ ಮೇಲೆ ಕ್ಲಿಕ್ ಮಾಡಿ
ಹಂತ 3: ಒಮ್ಮೆ ನೀವು ಮೈ ಆಧಾರ್ ಅನ್ನು ಕ್ಲಿಕ್ ಮಾಡಿದರೆ ನೀವು ಆಧಾರ್ ದೃಢೀಕರಣ ಹಿಸ್ಟರಿ ಆಯ್ಕೆಯನ್ನು ಕಾಣಬಹುದು.
ಹಂತ 4: ಈಗ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಭರ್ತಿ ಮಾಡಿ ಮತ್ತು ನಂತರ ಕ್ಯಾಪ್ಚಾವನ್ನು ಭರ್ತಿ ಮಾಡಿ
ಹಂತ 5: ಈಗ ನೀವು OTP ಪರಿಶೀಲನೆ ಆಯ್ಕೆಯನ್ನು ಕ್ಲಿಕ್ ಮಾಡಬೇಕು
ಹಂತ 6: ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ನೀವು OTP ಅನ್ನು ಸ್ವೀಕರಿಸುತ್ತೀರಿ
ಹಂತ 7: ಈಗ ನಿಮ್ಮ ಮುಂದೆ ಟ್ಯಾಬ್ ತೆರೆಯುತ್ತದೆ ಅಲ್ಲಿ ನೀವು ಆಧಾರ್ ಕಾರ್ಡ್ ಇತಿಹಾಸವನ್ನು ನೋಡಲು ಬಯಸುವ ದಿನಾಂಕಗಳನ್ನು ಭರ್ತಿ ಮಾಡಬೇಕು.
ಹಂತ 8: ಬಳಕೆದಾರರು ತಮ್ಮ ಸ್ವಂತ ಆದ್ಯತೆಗಳ ಪ್ರಕಾರ ಆಧಾರ್ ಇತಿಹಾಸವನ್ನು ಡೌನ್‌ಲೋಡ್ ಮಾಡಬಹುದು

Most Read Articles
Best Mobiles in India

English summary
UIDAI plans to link details pertaining to the birth and death of an individual using Aadhaar.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X