ನೀವು ಆಧಾರ್‌ ಕಾರ್ಡ್‌ ಪಡೆದು 10 ವರ್ಷ ಆಗಿದ್ರೆ ಕೂಡಲೇ ಅಪ್‌ಡೇಟ್‌ ಮಾಡಿ?

|

ಆಧಾರ್‌ ಕಾರ್ಡ್‌ ಪಡೆದು ಹತ್ತು ವರ್ಷಗಳಾಗಿರುವ ನಾಗರಿಕರಿಗೆ UIDAI ಹೊಸ ಆದೇಶವನ್ನು ನೀಡಿದೆ. ನೀವು ಆಧಾರ್‌ ಕಾರ್ಡ್‌ ಪಡೆದು ಹತ್ತು ವರ್ಷವಾಗಿದ್ದರೆ ಕೂಡಲೇ ನಿಮ್ಮ ಆಧಾರ್‌ ದಾಖಲೆಗಳನ್ನು ಅಪ್ಡೇಟ್‌ ಮಾಡಬೇಕೆಂದು ಸೂಚನೆ ನೀಡಿದೆ. 10 ವರ್ಷಗಳ ಹಿಂದೆ ಆಧಾರ್ ಕಾರ್ಡ್‌ ಮಾಡಿಸಿ, ಇಲ್ಲಿಯವರೆಗೆ ಯಾವುದೇ ಅಪ್ಡೇಟ್‌ ಮಾಡದ ನಾಗರಿಕರು ತಮ್ಮ ಡಾಕ್ಯುಮೆಂಟ್ ಅನ್ನು ಅಪ್ಡೇಟ್‌ ಮಾಡಲು ವಿನಂತಿಸಲಾಗಿದೆ ಎಂದು UIDAI ತಮ್ಮ ಪ್ರಕಟಣೆಯಲ್ಲಿ ತಿಳಿಸಿದೆ.

ಆಧಾರ್‌

ಹೌದು, UIDAI ಭಾರತದ ನಾಗರಿಕರಿಗೆ ಹೊಸ ಸೂಚನೆ ನೀಡಿದೆ. ಅದರಂತೆ ನೀವು ಆಧಾರ್‌ ಕಾರ್ಡ್‌ ಪಡೆದು ಹತ್ತು ವರ್ಷಗಳಾಗಿದ್ದರೆ ಕೂಡಲೇ ಅಪ್ಡೇಟ್‌ ಮಾಡಿಕೊಳ್ಳುವುದು ಸೂಕ್ತ. ಆಧಾರ್‌ಗೆ ಸಂಬಂಧಿಸಿದ ದಾಖಲೆಗಳನ್ನು ಅಪ್ಡೇಟ್‌ ಮಾಡುವುದು ಕಡ್ಡಾಯ ಅಂತಾ UIDAI ಹೇಳದಿದ್ದರೂ ಡಾಕ್ಯುಮೆಂಟ್ ಅಪ್ಡೇಟ್‌ ಮಾಡುವುದು ಅತ್ಯಗತ್ಯವಾಗಿದೆ. ಏಕೆಂದರೆ ಈ ಹತ್ತು ವರ್ಷಗಳ ಅವಧಿಯಲ್ಲಿ ನಿಮ್ಮ ವಿಳಾಸ ಬದಲಾಗಿರುವ ಸಾಧ್ಯತೆಯಿದೆ. ಹಾಗಾದ್ರೆ UIDAI ಆಧಾರ್‌ ಕಾರ್ಡ್‌ ಹೊಂದಿರುವವರಿಗೆ ನೀಡಿದ ಸೂಚನೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಧಾರ್‌

ಆಧಾರ್‌ ಕಾರ್ಡ್‌ ಇಂದಿನ ದಿನಗಳಲ್ಲಿ ಸರ್ಕಾರಿ ಸೌಲಭ್ಯ ಪಡೆದುಕೊಳ್ಳುವುದಕ್ಕೆ ಅತ್ಯಗತ್ಯವಾಗಿ ಬೇಕಾದ ದಾಖಲೆ ಆಗಿದೆ. ಇದೇ ಕಾರಣಕಕೆ ಪ್ರತಿಯೊಬ್ಬರೂ ಕೂಡ ಆಧಾರ್‌ ಕಾರ್ಡ್‌ ಪಡೆಯಲು ಬಯಸುತ್ತಾರೆ. ಅಲ್ಲದೆ UIDAI ಕೂಡ ಆಧಾರ್‌ ಕಾರ್ಡ್‌ ಬಳಕೆದಾರರ ಅನುಕೂಲಲಕ್ಕಾಗಿ ಹೊಸ ಹೊಸ ಅಪ್ಡೇಟ್‌ಗಳನ್ನು ನೀಡುತ್ತಾ ಬಂದಿದೆ. ಸದ್ಯ ಇದೀಗ ಹತ್ತು ವರ್ಷದಿಂದ ಯಾವುದೇ ಅಪ್ಡೇಟ್‌ ಇಲ್ಲದೆ ಆಧಾರ್‌ ಬಳಸುವವರಿಗೆ ಹೊಸ ಅಪ್ಡೇಟ್‌ ಮಾಡಿಸಲು ಅವಕಾಶ ನೀಡಿದೆ.

ಆಧಾರ್

ಹತ್ತು ವರ್ಷದಿಂದ ಆಧಾರ್ ಸಂಖ್ಯೆ ಹೊಂದಿರುವವರು ತಮ್ಮ ಪರ್ಸನಲ್ ಐಡೆಂಟಿಟಿ ಪ್ರೂಫ್ ಅನ್ನು ಅಪ್ಡೇಟ್‌ ಮಾಡಬಹುದು. ಇದಲ್ಲದೆ ತಮ್ಮ ಆಧಾರ್ ಡೇಟಾದಲ್ಲಿ ನೀಡಿರುವ ಅಡ್ರೆಸ್‌ ಪ್ರೂಫ್‌ ಅನ್ನು ಕೂಡ ಅಪ್ಡೇಟ್‌ ಮಾಡಲು ಅವಕಾಶ ನೀಡಲಿದೆ. ಇದಕ್ಕಾಗಿ ನೀವು ಆನ್‌ಲೈನ್‌ನಲ್ಲಿ UIDAIಯ ಆಧಾರ್ ಪೋರ್ಟಲ್ ಅಥವಾ https://myaadhaar.uidai.gov.in/ ವೆಬ್‌ಸೈಟ್‌ಗೆ ಬೇಟಿ ನೀಡಬಹುದು. ಇಲ್ಲವೆ ತಮ್ಮ ದಾಖಲೆಗಳನ್ನು ಅಪ್ಡೇಟ್‌ ಮಾಡಲು ನಿಮ್ಮ ಹತ್ತಿರದ ಆಧಾರ್‌ ಸೇವಾ ಸೆಂಟರ್‌ಗೆ ಬೇಟಿ ನೀಡಬಹುದಾಘಿದೆ.

ಆಧಾರ್‌

ಇನ್ನು ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ದೇಶದ ಬಹುತೇಕ ನಾಗರಿಕರ ಗುರುತಿನ ಚೀಟಿಯಾಗಿ ಆಧಾರ್‌ ಕಾರ್ಡ್‌ ಗುರುತಿಸಿಕೊಂಡಿದೆ. ದೇಶದ ಎಲ್ಲಾ ರಾಜ್ಯ ಸರ್ಕಾರಗಳು ಕೂಡ ಸರ್ಕಾರು ಸೌಲಭ್ಯವನ್ನು ನೀಡಲು ಆಧಾರ್‌ ಕಾರ್ಡ್‌ ಅನ್ನು ಅತ್ಯಗತ್ಯ ದಾಖಲೆ ಎಂದು ಪರಿಗಣಿಸಿವೆ. ಇದೇ ಕಾರಣಕ್ಕೆ ಆಧಾರ್‌ ಕಾರ್ಡ್‌ ಅನ್ನು ಸರ್ಕಾರದ ವಿವಿಧ ಯೋಜನೆಗಳು ಮತ್ತು ಸೇವೆಗಳನ್ನು ಪಡೆಯಲು ಬಳಸಲಾಗುತ್ತಿದೆ. ಇದೆಲ್ಲವನ್ನು ಗಮನಿಸಿರುವ UIDAI ಹತ್ತು ವರ್ಷಗಳ ಹಿಂದೆ ಪಡೆದ ಆಧಾರ್ ಡೇಟಾವನ್ನು ಅಪ್ಡೇಟ್‌ ಮಾಡಿಸಿಕೊಳ್ಳಿ ಎಂದು ಹೇಳಿದೆ. ಇದಕ್ಕೆ ಆನ್‌ಲೈನ್‌ನಲ್ಲಿ ಕೂಡ ಅವಕಾಶವನ್ನು ನೀಡಿದೆ.

ಆನ್‌ಲೈನ್‌ ಮೂಲಕ ನಿಮ್ಮ ಆಧಾರ್‌ ವಿಳಾಸವನ್ನು ಅಪ್ಡೇಟ್‌ ಮಾಡಲು ಈ ಕ್ರಮಗಳನ್ನು ಅನುಸರಿಸಿ!

ಆನ್‌ಲೈನ್‌ ಮೂಲಕ ನಿಮ್ಮ ಆಧಾರ್‌ ವಿಳಾಸವನ್ನು ಅಪ್ಡೇಟ್‌ ಮಾಡಲು ಈ ಕ್ರಮಗಳನ್ನು ಅನುಸರಿಸಿ!

ಹಂತ:1 ಮೊದಲಿಗೆ ಅಧಿಕೃತ UIDAI ವೆಬ್‌ಸೈಟ್‌ಗೆ ಭೇಟಿ ನೀಡಿ.
ಹಂತ:2 ಮೇನ್‌ ಪೇಜ್‌ನಲ್ಲಿ MY ಆಧಾರ್ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ:3 ಇದೀಗ ‘ಅಪ್ಡೇಟ್‌ ಆಧಾರ್ ಕಾರ್ಡ್ ಆನ್‌ಲೈನ್‌' ಕ್ಲಿಕ್ ಮಾಡಿ.
ಹಂತ:4 ಇದರಲ್ಲಿ 'ಅಪ್ಡೇಟ್‌ ಅಡ್ರೆಸ್‌ ಇನ್‌ ಯುವರ್ ಆಧಾರ್‌' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ:5 ನಂತರ ಲಾಗಿನ್ ಪೇಜ್‌ನಲ್ಲಿ, ನಿಮ್ಮ ಆಧಾರ್ ಸಂಖ್ಯೆಯನ್ನು ಟೈಪ್ ಮಾಡಿ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.
ಹಂತ:6 ಇದೀಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವ OTP ಅನ್ನು ನಮೂದಿಸಿ.

ಅಪ್‌ಡೇಟ್

ಹಂತ:7 ನಂತರ ಡ್ಯಾಶ್‌ಬೋರ್ಡ್‌ನಲ್ಲಿ, 'ಅಪ್‌ಡೇಟ್ ಆಧಾರ್ ಆನ್‌ಲೈನ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ:8 ನೀವು ಅಪ್ಡೇಟ್‌ ಮಾಡಲು ಬಯಸುವ ಆಧಾರ್ ಡೇಟಾ ಕ್ಷೇತ್ರದಲ್ಲಿ ವಿಳಾಸವನ್ನು ಆಯ್ಕೆಮಾಡಿ ಮತ್ತು ಪ್ರೊಸಿಡ್‌ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ:9 ಇದೀಗ, ಅಡ್ರೆಸ್‌ ಪ್ರೂಫ್‌ ಅನ್ನು ಅಪ್‌ಲೋಡ್ ಮಾಡಿ ಮತ್ತು ನಂತರ 'ಪ್ರೊಸಿಡ್‌ ಟು ಆಧಾರ್ ಅಪ್ಡೇಟ್‌' ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ:10 ನಂತರ ನಿಮ್ಮನ್ನು ಪಾವತಿ ಪೋರ್ಟಲ್‌ಗೆ ರಿಡೈರೆಕ್ಟ್‌ ಮಾಡಲಾಗುತ್ತದೆ. ಇದರಲ್ಲಿ ನೀವು ಪ್ರಕ್ರಿಯೆ ಶುಲ್ಕ ಪಾವತಿಸಬೇಕು.
ಹಂತ:11 ಪಾವತಿ ಯಶಸ್ವಿಯಾದರೆ, ನಿಮ್ಮ ಅಪ್ಡೇಟ್‌ ಸ್ಟೆಟಸ್‌ ಅನ್ನು ಟ್ಯಾಕ್‌ ಮಾಡಲು ವಿನಂತಿ ಸಂಖ್ಯೆ (URN) ಯನ್ನು ನೀವು ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
UIDAI suggesting users with 10 year old aadhaar number to update their documents

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X