Subscribe to Gizbot

ಸಂಪೂರ್ಣ ಬದಲಾದ ಐಡಿಯಾ ಸೃಷ್ಟಿಸಿದ ಹೊಸ ಅಲೆ: ಜಿಯೋ-ಏರ್‌ಟೆಲ್ ಕೊಚ್ಚಿ ಹೋಗುತ್ತಾ..?

Written By:

ಇಷ್ಟು ದಿನ ಸುಮ್ಮನಿದ್ದ ಐಡಿಯಾ ಒಮ್ಮೆಗೆ ತನ್ನ ಎಲ್ಲಾ ಪ್ಲಾನ್‌ಗಳ ಚಹರೆಯನ್ನ ಬದಲಾವಣೆ ಮಾಡಲು ಮುಂದಾಗಿದೆ. ಈ ಹಿಂದೆ ಜಿಯೋ ತನ್ನ ಬಳಕದಾರಿಗೆ ಪ್ಲಾನ್‌ಗಳನ್ನು ಬದಲಾವಣೆ ಮಾಡಿ ಆಫರ್ ಗಳನ್ನು ನೀಡಿದ ಮಾದರಿಯಲ್ಲಿಯೇ ಐಡಿಯಾ ಸಹ ತನ್ನ ಪ್ಲಾನ್‌ಗಳಿಗೆ ಹೊಸ ರೂಪವನ್ನು ನೀಡಲಿದೆ. ಇದು ಮಾರುಕಟ್ಟೆಯಲ್ಲಿ ಹೊಸ ಅಲೆಗೆ ಕಾರಣವಾಗಲಿದೆ.

ಸಂಪೂರ್ಣ ಬದಲಾದ ಐಡಿಯಾ ಸೃಷ್ಟಿಸಿದ ಹೊಸ ಅಲೆ: ಜಿಯೋ-ಏರ್‌ಟೆಲ್ ಕೊಚ್ಚಿ ಹೋಗುತ್ತಾ..

ಈಗಾಗಲೇ ಜಿಯೋ ಹೊಡತಕ್ಕೆ ಭಾರೀ ನಷ್ಟವನ್ನು ಅನುಭವಿಸಿರುವ ಐಡಿಯಾ, ಸದ್ಯ ಹೊಸತನವನ್ನು ಮೈಗೂಡಿಸಿಕೊಂಡು ಹೊಸ ಆಲೋಚನೆಯೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ಇನ್ನಷ್ಟು ಬಳಕೆದಾರರನ್ನು ತನ್ನ ಬಳಿಗೆ ಸೆಳೆದುಕೊಳ್ಳುವ ಪ್ರಯತ್ನವನ್ನು ಮಾಡಲು ಮುಂದಾಗಿದೆ. ಐಡಿಯಾ ಮಾಡುತ್ತಿರುವ ಬದಲಾವಣೆಯೂ ಹಲವು ಕಂಪನಿಗಳಿಗೆ ಪ್ರೇರಣೆಯನ್ನು ನೀಡಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆರಂಭಿಕ ಪ್ಲಾನ್:

ಆರಂಭಿಕ ಪ್ಲಾನ್:

ಐಡಿಯಾ ಬಳಕೆದಾರರಿಗೆ ಆರಂಭಿಕ ಆಫರ್ ಗಳಾಗಿ ಒಂದು ದಿನ, ಎರಡು ದಿನ, ವಾರ ಮತ್ತು ಹತ್ತು ದಿನಗಳ ವ್ಯಾಲಿಡಿಟಿಯ ಆಫರ್‌ಗಳನ್ನು ಲಾಂಚ್ ಮಾಡಿದೆ. ಇದರಲ್ಲಿ ರೂ.9 ರಿಂದ 93ರ ವರೆಗೆ ಪ್ಲಾನ್‌ಗಳನ್ನು ಕಾಣಬಹುದಾಗಿದೆ. ಪ್ರತಿ ಪ್ಲಾನ್‌ನಲ್ಲಿ ಡೇಟಾ ಆಫರ್ ಮಾತ್ರವೇ ಬದಲಾಗಲಿದ್ದು, ಇನ್ನೆಲ್ಲವೂ ಹಾಗೇ ಇರಲಿದೆ.

1GB ಡೇಟಾ ಆಫರ್:

1GB ಡೇಟಾ ಆಫರ್:

ಐಡಿಯಾ 1GB ಡೇಟಾ ಆಪರ್‌ನಲ್ಲಿ ಬಳಕೆದಾರರಿಗೆ ರೂ.149 ಮತ್ತು ರೂ. 179ರ ಪ್ಲಾನ್ ಬಿಡುಗಡೆ ಮಾಡಿದ್ದು, ಈ ಆಫರ್ ಗಳು ಕ್ರಮವಾಗಿ 21 ದಿನಗಳು ಮತ್ತು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ ಎನ್ನಲಾಗಿದೆ.

ನಿತ್ಯ 1GB ಡೇಟಾ ಪ್ಲಾನ್:

ನಿತ್ಯ 1GB ಡೇಟಾ ಪ್ಲಾನ್:

ಇದಲ್ಲದೇ ಐಡಿಯಾದಲ್ಲಿ ಪ್ರತಿ ನಿತ್ಯ ಒಂದು GB ಡೇಟಾವನ್ನು ಬಳಕೆಗೆ ನೀಡುವ ಆಫರ್ ಗಳು ಲಾಂಚ್ ಆಗಿದೆ ಎನ್ನಲಾಗಿದೆ. ರೂ.199, 398, 449, 509 ಪ್ಲಾನ್‌ಗಳು ಘೋಷಣೆಯಾಗಿದ್ದು, ಇವುಗಳು ಕ್ರಮವಾಗಿ 28, 70, 82, ಮತ್ತು 90 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಪ್ರತಿ ನಿತ್ಯ ಒಂದು GB ಡೇಟಾವನ್ನು ಬಳಕೆಗೆ ನೀಡಲಿದೆ.

ಆಂಡ್ರಾಯ್ಡ್‌ನಲ್ಲಿ Facebook Instagram ವಿಡಿಯೋ ಡೌನ್‌ಲೋಡ್ ಮಾಡುವುದು ಹೇಗೆ..?
ಹೆಚ್ಚಿನ ಡೇಟಾ ಬಳಕೆ ಆಫರ್:

ಹೆಚ್ಚಿನ ಡೇಟಾ ಬಳಕೆ ಆಫರ್:

ಇದಲ್ಲದೇ ಡೇಟಾ ಹೆಚ್ಚು ಬೇಕು ಎನ್ನುವವರಿಗೆ ಐಡಿಯಾ ಹೊಸ ಮಾದರಿಯ ಆಫರ್ ಘೋಷಣೆ ಮಾಡಿದೆ. ಇದರಲ್ಲಿ ಪ್ರತಿ ನಿತ್ಯ 1.5GB, 2GB, 2.5 GB ಮತ್ತು 3.5GB ಡೇಟಾವನ್ನು ನೀಡುವ ಆಫರ್‌ಗಳಿದೆ.

1.5GB/ 2 GB ಪ್ಲಾನ್‌ಗಳು:

1.5GB/ 2 GB ಪ್ಲಾನ್‌ಗಳು:

ರೂ.697ಕ್ಕೆ 70 ದಿನಗಳ ವ್ಯಾಲಿಡಿಟಿಗೆ ಪ್ರತಿನಿತ್ಯ 1.5GB ಡೇಟಾ ಪಡೆಯಲಿದ್ದಾರೆ. ರೂ.357 ಮತ್ತು ರೂ.897 ಆಫರ್ ನಲ್ಲಿ ಬಳಕೆದಾರರು ಕ್ರಮವಾಗಿ 28 ಮತ್ತು 70 ದಿನಗಳ ವ್ಯಾಲಿಡಿಟಿ ಪಡೆಯಲಿದ್ದು, ಪ್ರತಿ ನಿತ್ಯ 2 GB ಡೇಟಾ ಪಡೆಲಿದ್ದಾರೆ.

2.5 GB/ 3.5 GB ಪ್ಲಾನ್‌ಗಳು:

2.5 GB/ 3.5 GB ಪ್ಲಾನ್‌ಗಳು:

ರೂ.599ಕ್ಕೆ ಮತ್ತು ರೂ.1197ಕ್ಕೆ ಪ್ರತಿ ನಿತ್ಯ 2.5GB ಡೇಟಾ ದೊರೆಯಲಿದ್ದು, ಕ್ರಮವಾಗಿ 28 ಮತ್ತು 70 ದಿನಗಳ ವ್ಯಾಲಿಡಿಟಿಯನ್ನು ಪಡೆಯಲಿದ್ದಾರೆ. ರೂ.799ಕ್ಕೆ ಪ್ರತಿ ನಿತ್ಯ 3.5GB ಡೇಟಾವನ್ನು 28 ದಿನಗಳ ಅವಧಿಗೆ ಪಡೆದುಕೊಳ್ಳಲಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Unlimited Packs Offered by Idea Cellular. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot