ಏರ್‌ಟೆಲ್‌ನಿಂದ 320GB ಡೇಟಾ ಆಫರ್: ಪಡೆದುಕೊಳ್ಳುವುದು ಹೇಗೆ..?

Written By:

ಟೆಲಿಕಾಂ ದೈತ್ಯ ಕಂಪನಿಗಳಾದ ಏರ್‌ಟೆಲ್ ಮತ್ತು ಜಿಯೋ ಜಿದ್ದಿಗೆ ಬಿದ್ದು ಹೊಸ ಹೊಸ ಆಫರ್ ಗಳನ್ನು ನೀಡಲು ಮುಂದಾಗಿವೆ. ಇದೇ ಮಾದರಿಯಲ್ಲಿ ಜಿಯೋ ಒಪ್ಪೋದೊಂದಿಗೆ ಕೈ ಜೋಡಿಸಿ 100GB ಡೇಟಾ ಆಫರ್ ನೀಡಿದ ಮಾದರಿಯಲ್ಲಿ, ಏರ್‌ಟೆಲ್ ಸಹ 320 GB 4G ಡೇಟಾ ಆಫರ್ ಅನ್ನು ಘೋಷಣೆ ಮಾಡಿದೆ.

ಏರ್‌ಟೆಲ್‌ನಿಂದ 320GB ಡೇಟಾ ಆಫರ್: ಪಡೆದುಕೊಳ್ಳುವುದು ಹೇಗೆ..?

ಓದಿರಿ: ಒಪ್ಪೋ ದೊಂದಿಗೆ ಕೈ ಜೋಡಿಸಿದ ಜಿಯೋ: ಕೊಟ್ಟಿದೆ ಬಂಪರ್ ಆಫರ್

ನೂತನವಾಗಿ ಲಾಂಚ್ ಆಗಿರುವ ಲಿನೊವೊ ಒಡೆತನಕ್ಕೆ ಸೇರಿರುವ ಮೊಟೊರೊಲಾ ಲಾಂಚ್ ಮಾಡಿರುವ ಮೊಟೊ X4 ಸ್ಮಾರ್ಟ್‌ಫೋನ್ ನೊಂದಿಗೆ ಏರ್‌ಟೆಲ್ ಈ ದೊಡ್ಡ ಪ್ರಮಾಣದ ಆಫರ್ ಅನ್ನು ನೀಡಿದೆ. ಈ ಮೂಲಕ ಹೊಸ ಗ್ರಾಹಕರನ್ನು ಸೆಳೆಯುವ ಕ್ರಮಕ್ಕೆ ಮುಂದಾಗಿದೆ. ಇದರಿಂದಾಗಿ ಜಿಯೋಗೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏರ್‌ಟೆಲ್‌ನಿಂದ 320 GB ಡೇಟಾ ಆಫರ್:

ಏರ್‌ಟೆಲ್‌ನಿಂದ 320 GB ಡೇಟಾ ಆಫರ್:

ಏರ್‌ಟೆಲ್ ಮೊಟೊ X4 ಗ್ರಾಹಕರಿಗೆ 320 GB ಡೇಟಾವನ್ನು ನೀಡಲು ಮುಂದಾಗಿದೆ. ಇದರಿಂದಾಗಿ ಏರ್‌ಟೆಲ್ ಹೊಸದಾಗಿ ಗ್ರಾಹಕರನ್ನು ಸೆಳೆಯಲಿದೆ. ಅಲ್ಲದೇ ಈ ಆಫರ್ ರೀಚಾರ್ಜ್ ಮಾಡಿಸಿಕೊಳ್ಳುವುದು, ಆಫರ್ ಮುಂತಾದ ವಿಚಾರಗಳು ಫೋನ್ ಖರೀದಿಸಿದ ನಂತರದಲ್ಲಿ ಏರ್‌ಟೆಲ್ ತಿಳಿಸಲಿದೆ ಎನ್ನಲಾಗಿದೆ.

ಮೊಟೊ X4 ಖರೀದಿಸಿದವರಿಗೆ ಮಾತ್ರ;

ಮೊಟೊ X4 ಖರೀದಿಸಿದವರಿಗೆ ಮಾತ್ರ;

ಮೊಟೊ X4 ಸ್ಮಾರ್ಟ್‌ಫೋನ್ ಖರೀದಿಸಿದವರಿಗೆ ಮಾತ್ರವೇ ಈ ಆಫರ್ ದೊರೆಯಲಿದೆ. ಬೇರೆಯವರಿಗೆ ಈ ಆಫರ್ ದೊರೆಯುವುದಿಲ್ಲ ಎನ್ನಲಾಗಿದೆ. ಫೋನ್ ಖರೀದಿಸಿದ ಸಂದರ್ಭದಲ್ಲಿ ಈ ಆಫರ್ ಆಕ್ಟಿವ್ಟ್ ಆಗಲಿದೆ.

ಎರಡು ಆವೃತ್ತಿಯಲ್ಲಿ ಮೊಟೊ X4 ಸ್ಮಾರ್ಟ್‌ಫೋನ್:

ಎರಡು ಆವೃತ್ತಿಯಲ್ಲಿ ಮೊಟೊ X4 ಸ್ಮಾರ್ಟ್‌ಫೋನ್:

ಮೊಟೊ X4 ಸ್ಮಾರ್ಟ್‌ಫೋನ್ 3GB RAM ಮತ್ತು 32GB ಇಂಟರ್ನಲ್ ಮೆಮೊರಿ ಯೊಂದಿಗೆ ದೊರೆಯಲಿದ್ದು, ರೂ. 20,999 ಆಗಿದೆ. ಇದೇ ಮಾದರಿಯಲ್ಲಿ 4G RAM ಮತ್ತು 64GB ಮೆಮೊರಿಯ ಆವೃತ್ತಿಯೂ ರೂ.22, 999ಕ್ಕೆ ಲಭ್ಯವಿದೆ ಎನ್ನಲಾಗಿದೆ. ಸೂಪರ್ ಬ್ಲಾಕ್ ಮತ್ತು ಬ್ಲೂ ಬಣ್ಣದಲ್ಲಿ ದೊರೆಯಲಿದೆ.

ಮೊಟೊ X4 ಸ್ಮಾರ್ಟ್‌ಫೋನ್ ಲಾಂಚಿಂಗ್ ಆಫರ್:

ಮೊಟೊ X4 ಸ್ಮಾರ್ಟ್‌ಫೋನ್ ಲಾಂಚಿಂಗ್ ಆಫರ್:

ಇದಲ್ಲದೇ ಮೊಟೊ X4 ಲಾಂಚ್ ಆಫರ್ ಆಗಿ HDFC ಕಾರ್ಡ್ ಬಳಕೆದಾರರಿಗೆ 10% ಡಿಸ್‌ಕೌಂಟ್ ದೊರೆಯಲಿದೆ. ಇದಲ್ಲದೇ 50% ಬೈ ಬ್ಯಾಕ್ ಆಫರ್ ಸಹ ದೊರೆಯಲಿದೆ. ಇದರೊಂದಿಗೆ ರೂ.2,500 ವರೆಗೆ ಎಕ್ಸ್‌ಚೇಂಜ್ ಆಫರ್ ಸಹ ಇದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
up to 320GB data on Airtel. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot