ಹೊಸದಾಗಿ 5G ಮೊಬೈಲ್‌ ಖರೀದಿಸುವ ಪ್ಲ್ಯಾನ್ ಇದ್ರೆ, ಸ್ವಲ್ಪ ಕಾಯಿರಿ!

|

ಪ್ರಸ್ತುತ ದೇಶಿಯ ಮಾರುಕಟ್ಟೆಗೆ ಪ್ರತಿಷ್ಠಿತ ಬ್ರಾಂಡ್‌ಗಳ ಹೊಸ ಫೋನ್‌ಗಳು ಎಂಟ್ರಿಕೊಡುತ್ತಲೇ ಇದ್ದು, ಅವುಗಳಲ್ಲಿ 5G ಸ್ಮಾರ್ಟ್‌ಫೋನ್‌ಗಳು ಹೆಚ್ಚು ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಳ್ಳುತ್ತಿವೆ. ಇತ್ತೀಚಿನ ಬಹುತೇಕ ಹೊಸ ಸ್ಮಾರ್ಟ್‌ಫೋನ್‌ಗಳು 5G ಸಪೋರ್ಟ್ ಒಳಗೊಂಡಿದ್ದು, ಜೊತೆಗೆ ಅಧಿಕ ಬ್ಯಾಟರಿ, ಬೆಸ್ಟ್‌ ಕ್ಯಾಮೆರಾ, ವೇಗದ ಪ್ರೊಸೆಸರ್‌ ಫೀಚರ್‌ಗಳನ್ನು ಹೊಂದಿರುತ್ತವೆ. ಸದ್ಯ ನೀವೇನಾದರೂ ಹೊಸ 5G ಮೊಬೈಲ್‌ ಖರೀದಿಸುವ ಪ್ಲ್ಯಾನ್ ಇದ್ರೆ, ಸ್ವಲ್ಪ ಕಾಯೋದು ಉತ್ತಮ.

ಅಕ್ಟೋಬರ್

ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಕೆಲವು ಅತ್ಯುತ್ತಮ 5G ಫೋನ್‌ಗಳು ಲಾಂಚ್ ಆಗಿವೆ. ಅದೇ ರೀತಿ ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಮಾರುಕಟ್ಟೆಗೆ ಕೆಲವು ಬೆಸ್ಟ್ 5G ಸ್ಮಾರ್ಟ್‌ಫೋನ್‌ಗಳು ಲಗ್ಗೆ ಇಡಲಿವೆ. ಶಿಯೋಮಿ, ಮೊಟೊ, ಸ್ಯಾಮ್‌ಸಂಗ್‌, ಒನ್‌ಪ್ಲಸ್‌ ಸೇರಿದಂತೆ ಇತರೆ ಕಂಪನಿಗಳ ನೂತನ 5G ಫೋನ್‌ಗಳು ಕೆಲವೊಂದು ಆಕರ್ಷಕ ಫೀಚರ್ಸ್‌ಗಳೊಂದಿಗೆ ಬಿಡುಗಡೆ ಆಗುವ ಸಾಧ್ಯತೆಗಳಿವೆ. ಹೀಗಾಗಿ ಸ್ಪಲ್ವ ಕಾಯ್ದು ಅತ್ಯುತ್ತಮ 5G ಫೋನ್ ಖರೀದಿಸುವುದು ಉತ್ತಮ. ಹಾಗಾದರೇ ಈ ತಿಂಗಳು ಕುತೂಹಲ ಮೂಡಿಸಿರುವ ಕೆಲವು 5G ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಶಿಯೋಮಿ ರೆಡ್ಮಿ ನೋಟ್ 12 ಪ್ರೊ 5G

ಶಿಯೋಮಿ ರೆಡ್ಮಿ ನೋಟ್ 12 ಪ್ರೊ 5G

ಶಿಯೋಮಿ ತನ್ನ ರೆಡ್ಮಿ ನೋಟ್ ಸರಣಿಯಲ್ಲಿ ಹೊಸದಾಗಿ ರೆಡ್ಮಿ ನೋಟ್ 12 ಪ್ರೊ 5G ಫೋನ್ ಎಂಟ್ರಿ ಕೊಡುವ ನಿರೀಕ್ಷೆ ಇದೆ. ಇನ್ನು ಈ ಫೋನ್ 6.67 ಇಂಚಿನ ಡಿಸ್‌ಪ್ಲೇ ಹೊಂದಿರಲಿದ್ದು, ಜೊತೆಗೆ ಮೀಡಿಯಾ ಟೆಕ್ ಡೈಮೆನ್ಸಿಟಿ 1080 ಪ್ರೊಸೆಸರ್ ಪಡೆದಿರಲಿದೆ. ಟ್ರಿಪಲ್ ಕ್ಯಾಮೆರಾ ರಚನೆ ಪಡೆದಿರಲಿದ್ದು, ಅವು ಕ್ರಮವಾಗಿ 50 + 8 + 2 ಮೆಗಾ ಪಿಕ್ಸಲ್‌ ಆಗಿರಲಿವೆ. ಹಾಗೆಯೇ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಇರುವ ಸಾಧ್ಯತೆಗಳಿವೆ.

ಒನ್‌ಪ್ಲಸ್‌ ನಾರ್ಡ್‌ 3 5G

ಒನ್‌ಪ್ಲಸ್‌ ನಾರ್ಡ್‌ 3 5G

ಜನಪ್ರಿಯ ಒನ್‌ಪ್ಲಸ್‌ ತನ್ನ ನಾರ್ಡ್‌ ಸರಣಿಯಲ್ಲಿ ಸದ್ಯದಲ್ಲೇ ಹೊಸದಾಗಿ ಒನ್‌ಪ್ಲಸ್‌ ನಾರ್ಡ್‌ 3 5G ಸ್ಮಾರ್ಟ್‌ಫೋನ್‌ ಪರಿಚಯಿಸುವ ಸಾಧ್ಯತೆಗಳಿವೆ. ಇನ್ನು ಈ ಫೋನ್ 6.67 ಇಂಚಿನ AMOLED ಡಿಸ್‌ಪ್ಲೇ ಹೊಂದಿರಲಿದ್ದು, ಜೊತೆಗೆ ಮೀಡಿಯಾ ಟೆಕ್ ಡೈಮೆನ್ಸಿಟಿ 8100 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಬಹುದು. ಇದರೊಂದಿಗೆ ಈ ಫೋನ್ ತ್ರಿವಳಿ ಕ್ಯಾಮೆರಾ ರಚನೆ ಪಡೆದಿರಲಿದ್ದು, ಅವು ಕ್ರಮವಾಗಿ 50 + 8 + 2 ಮೆಗಾ ಪಿಕ್ಸಲ್‌ ಆಗಿರಲಿವೆ. ಹಾಗೆಯೇ 4500 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಇರುವ ಸಾಧ್ಯತೆಗಳಿವೆ.

ಮೊಟೊ S30 ಪ್ರೊ

ಮೊಟೊ S30 ಪ್ರೊ

ಮೊಟೊರೊಲಾ ಸಂಸ್ಥೆಯು ಸದ್ಯದಲ್ಲೇ ಮಾರುಕಟ್ಟೆಗೆ ಮೊಟೊ S30 ಪ್ರೊ ಹೆಸರಿನ ಫೋನ್ ಲಾಂಚ್ ಮಾಡಲಿದೆ ಎನ್ನಲಾಗಿದೆ. ಇನ್ನು ಈ ಫೋನ್ 6.67 ಇಂಚಿನ OLED ಡಿಸ್‌ಪ್ಲೇ ಹೊಂದಿರಲಿದ್ದು, ಜೊತೆಗೆ ಸ್ನ್ಯಾಪ್‌ಡ್ರಾಗನ್ 888 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಬಹುದು. ಇದರೊಂದಿಗೆ ಈ ಫೋನ್ ತ್ರಿವಳಿ ಕ್ಯಾಮೆರಾ ರಚನೆ ಪಡೆದಿರಲಿದ್ದು, ಅವು ಕ್ರಮವಾಗಿ 50 + 13 + 2 ಮೆಗಾ ಪಿಕ್ಸಲ್‌ ಆಗಿರಲಿದ್ದು, 32 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾ ಇರುವ ನಿರೀಕ್ಷೆಗಳಿವೆ. ಹಾಗೆಯೇ 4500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿರುವ ಸಾಧ್ಯತೆಗಳಿವೆ.

ಐಕ್ಯೂ ನಿಯೋ 6 SE 5G

ಐಕ್ಯೂ ನಿಯೋ 6 SE 5G

ಐಕ್ಯೂ ಕಂಪನಿಯು ಮಾರುಕಟ್ಟೆಗೆ ಸದ್ಯದಲ್ಲೇ ಐಕ್ಯೂ ನಿಯೋ 6 SE 5G ಹೆಸರಿನ ಫೋನ್ ಲಾಂಚ್ ಮಾಡಲಿದೆ ಎನ್ನಲಾಗಿದೆ. ಇನ್ನು ಈ ಫೋನ್ 6.62 ಇಂಚಿನ AMOLED ಡಿಸ್‌ಪ್ಲೇ ಹೊಂದಿರಲಿದ್ದು, ಜೊತೆಗೆ ಸ್ನ್ಯಾಪ್‌ಡ್ರಾಗನ್ 870 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಬಹುದು. ಇದರೊಂದಿಗೆ ಈ ಫೋನ್ ತ್ರಿವಳಿ ಕ್ಯಾಮೆರಾ ರಚನೆ ಪಡೆದಿರಲಿದ್ದು, ಅವು ಕ್ರಮವಾಗಿ 64 + 8 + 2 ಮೆಗಾ ಪಿಕ್ಸಲ್‌ ಆಗಿರಲಿದ್ದು, 16 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾ ಇರುವ ನಿರೀಕ್ಷೆಗಳಿವೆ. ಹಾಗೆಯೇ 4700 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿರುವ ಸಾಧ್ಯತೆಗಳಿವೆ.

Best Mobiles in India

English summary
Here's The list of Upcoming 5G Mobile Phones in India: Check expected specifications.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X