ಸದ್ಯದಲ್ಲೇ ಗ್ರ್ಯಾಂಡ್‌ ಎಂಟ್ರಿ ಕೊಡಲಿರುವ ಟಾಪ್‌ ಸ್ಮಾರ್ಟ್‌ಫೋನ್‌ಗಳು!

|

ಪ್ರಮುಖ ಸ್ಮಾರ್ಟ್‌ಫೋನ್ ತಯಾರಕರು ಕಂಪನಿಗಳು ಮಾರುಕಟ್ಟೆಗೆ ಅಪ್‌ಡೇಟ್ ಆವೃತ್ತಿಯ ನೂತನ ಫೋನ್‌ಗಳ ಅನಾವರಣ ಮಾಡುತ್ತವೆ. ಅವುಗಳಲ್ಲಿ ಕೆಲವು ಸಂಸ್ಥೆಗಳು ಈಗಾಗಲೇ ಜನಪ್ರಿಯ ಆಗಿರುವ ತಮ್ಮ ಸ್ಮಾರ್ಟ್‌ಫೋನ್‌ ಸರಣಿಗಳ ಹೆಸರಿನಲ್ಲಿಯೇ ನೂತನ ಹೆಸರಿನ ಆವೃತ್ತಿಯಲ್ಲಿ ಫೋನ್ ಬಿಡುಗಡೆ ಮಾಡುತ್ತವೆ. ಪ್ರಸಕ್ತ ವರ್ಷದಲ್ಲಿ ಹಲವು ಫೋನ್‌ಗಳಿ ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿವೆ. ಹಾಗೆಯೇ ಈ ವರ್ಷದ ಅಂತ್ಯದಲ್ಲಿಯೂ ಫೋನ್‌ಗಳು ಲಾಂಚ್ ಆಗಲಿವೆ.

ಡಿಸೆಂಬರ್‌

ಹೌದು, 2020 ರ ಡಿಸೆಂಬರ್‌ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಗೆ ಎಂಟ್ರಿ ಪಡೆದುಕೊಳ್ಳಲಿರುವ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್‌ಗಳ ಲಿಸ್ಟ್‌ ಅನ್ನು ಇಂದಿನ ಲೇಖನದಲ್ಲಿ ತಿಳಿಸಲಾಗಿದೆ. ಬರಲಿರುವ ನೂತನ ಸ್ಮಾರ್ಟ್‌ಫೋನ್‌ಗಳು ಪವರ್‌ಫುಲ್ ಬ್ಯಾಟರಿ, ವೇಗದ ಪ್ರೊಸೆಸರ್‌, ಹೈ ಸೆನ್ಸಾರ್ ಕ್ಯಾಮೆರಾ ರಚನೆ ಹಾಗೂ ಆಕರ್ಷಿಕ ಡಿಸೈನ್‌ನಂತಹ ಫೀಚರ್ಸ್‌ಗಳನ್ನು ಒಳಗೊಂಡಿರುವ ಬಗ್ಗೆ ಲೀಕ್ ಮಾಹಿತಿಗಳಿಂದ ತಿಳಿದುಬಂದಿದೆ. ಹಾಗಾದರೇ ಸದ್ಯದಲ್ಲೇ ಲಾಂಚ್ ಆಗಲಿರುವ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ರಿಯಲ್‌ ಮಿ Q2

ರಿಯಲ್‌ ಮಿ Q2

ಈ ಸ್ಮಾರ್ಟ್‌ಫೋನ್ 6.5 ಇಂಚಿನ ಡಿಸ್‌ಪ್ಲೇ ಹೊಂದಿರಲಿದ್ದು, ಮೀಡಿಯಾ ಟೆಕ್‌ ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿರಲಿದೆ. ಹಾಗೆಯೇ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್‌ ರಚನೆ ಪಡೆದಿರಲಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿರಲಿದೆ. 5000mAh ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿರುವ ಸಾಧ್ಯತೆಗಳು ಇವೆ.

ಇನ್‌ಫಿನಿಕ್ಸ್‌ ನೋಟ್ 7 ಲೈಟ್

ಇನ್‌ಫಿನಿಕ್ಸ್‌ ನೋಟ್ 7 ಲೈಟ್

ಇನ್‌ಫಿನಿಕ್ಸ್‌ ನೋಟ್ 7 ಲೈಟ್ ಸ್ಮಾರ್ಟ್‌ಫೋನ್ 6.6 ಇಂಚಿನ ಡಿಸ್‌ಪ್ಲೇ ಹೊಂದಿರಲಿದ್ದು, ಮೀಡಿಯಾ ಟೆಕ್‌ ಹಿಲಿಯೊ ಪಿ22 ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿರಲಿದೆ. ಹಾಗೆಯೇ ಈ ಪೋನ್ ಸಹ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್‌ ರಚನೆ ಪಡೆದಿರಲಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿರಲಿದೆ. 8ಎಂಪಿ ಸೆಲ್ಫಿ ಜೊತೆಗೆ 5000mAh ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿರುವ ಸಾಧ್ಯತೆಗಳು ಇವೆ.

ವಿವೋ Z6 5G

ವಿವೋ Z6 5G

ವಿವೋ ಕಂಪನಿಯ ವಿವೋ Z6 5G ಫೋನ್ 6.5 ಇಂಚಿನ ಡಿಸ್‌ಪ್ಲೇ ಒಳಗೊಂಡಿರಲಿದ್ದು, ಹಾಗೆಯೇ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿರಲಿದೆ. ಸೆಲ್ಫಿಗಾಗಿ 32ಎಂಪಿ ಸೆನ್ಸಾರ್‌ ಕ್ಯಾಮೆರಾ ಇರಲಿದ್ದು, 4500mAh ಬ್ಯಾಟರಿ ಪವರ್‌ ಪಡೆದಿರಲಿದೆ. ಇನ್ನು ಸ್ನ್ಯಾಪ್‌ಡ್ರಾಗನ್ 765 ಪ್ರೊಸೆಸರ್‌ ಈ ಫೋನ್ ಹೊಂದಿರಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A51 5G

ಸ್ಯಾಮ್‌ಸಂಗ್ ಗ್ಯಾಲಕ್ಸಿ A51 5G

ಜನಪ್ರಿಯ ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ A51 5G ಫೋನ್ 6.5 ಇಂಚಿನ ಡಿಸ್‌ಪ್ಲೇ ಒಳಗೊಂಡಿರಲಿದೆ. ಹಾಗೆಯೇ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿರಲಿದ್ದು, ಮುಖ್ಯ ಕ್ಯಾಮೆರಾ 48ಎಂಪಿ ಸೆನ್ಸಾರ್‌ನಲ್ಲಿರಲಿದೆ. ಸೆಲ್ಫಿಗಾಗಿ 32ಎಂಪಿ ಸೆನ್ಸಾರ್‌ ಕ್ಯಾಮೆರಾ ಇರಲಿದ್ದು, 4500mAh ಬ್ಯಾಟರಿ ಪವರ್‌ ಪಡೆದಿರಲಿದೆ. ಇನ್ನು ಈ ಫೋನ್ ಫಾಸ್ಟ್‌ ಚಾರ್ಜಿಂಗ್ ವ್ಯವಸ್ಥೆ ಪಡೆದಿರಲಿದೆ.

ರೆಡ್ಮಿ 10x

ರೆಡ್ಮಿ 10x

ರೆಡ್ಮಿ 10x ಸ್ಮಾರ್ಟ್‌ಫೋನ್ 6.5 ಇಂಚಿನ ಡಿಸ್‌ಪ್ಲೇ ಒಳಗೊಂಡಿರಲಿದ್ದು, ಹಾಗೆಯೇ ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿರಲಿದೆ. ಸೆಲ್ಫಿಗಾಗಿ 16ಎಂಪಿ ಸೆನ್ಸಾರ್‌ ಕ್ಯಾಮೆರಾ ಇರಲಿದ್ದು, 4500mAh ಬ್ಯಾಟರಿ ಪವರ್‌ ಪಡೆದಿರಲಿದೆ. ಇನ್ನು ಮೀಡಿಯಾ ಟೆಕ್ ಹಿಲಿಯೊ ಪ್ರೊಸೆಸರ್‌ ಅನ್ನು ಈ ಫೋನ್ ಹೊಂದಿರಲಿದೆ.

Best Mobiles in India

English summary
Upcoming top five Android Smartphones in India. Expected date and spec.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X