ಶೀಘ್ರದಲ್ಲೇ ಈ ಫೋನ್‌ಗಳು ಖರೀದಿಗೆ ಲಭ್ಯ!..ಖರೀದಿಸೋ ಪ್ಲ್ಯಾನ್‌ ಇದ್ರೆ, ನೋಡಿ!

|

ಪ್ರಸ್ತುತ ಸ್ಮಾರ್ಟ್‌ಫೋನ್‌ ಪ್ರತಿಯೊಬ್ಬರ ಅಗತ್ಯ ಡಿವೈಸ್‌ ಆಗಿಬಿಟ್ಟಿದೆ. ಈ ನಿಟ್ಟಿನಲ್ಲಿ ಆಫ್‌ಲೈನ್‌ ಹಾಗೂ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳು ಡಿಮ್ಯಾಂಡ್ ನಲ್ಲಿ ಕಾಣಿಸಿಕೊಂಡಿವೆ. ಪ್ರಮುಖ ಮೊಬೈಲ್‌ ಸಂಸ್ಥೆಗಳು ಭಿನ್ನ ಶ್ರೇಣಿಯ ಫೋನ್‌ಗಳನ್ನು ಪರಿಚಯಿಸಿದ್ದು, ಇದಲ್ಲದೇ ಸದ್ಯದಲ್ಲೇ ಮಾರುಕಟ್ಟೆಗೆ ಹೊಸ ಸರಣಿಯಲ್ಲಿ ಕೆಲವು ಪವರ್‌ಫುಲ್‌ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿವೆ.

ಡಿಸೆಂಬರ್‌ನಲ್ಲಿ

ಹೌದು, ಪ್ರಮುಖ ಮೊಬೈಲ್‌ ಸಂಸ್ಥೆಗಳಾದ ಶಿಯೋಮಿ, ರೆಡ್ಮಿ, ರಿಯಲ್‌ಮಿ, ಮೊಟೊ, ವಿವೋ ಮತ್ತು ಒಪ್ಪೋ ಸಂಸ್ಥೆಗಳು ಇದೇ ಡಿಸೆಂಬರ್‌ನಲ್ಲಿ ಮಾರುಕಟ್ಟೆಗೆ ನೂತನ ಸ್ಮಾರ್ಟ್‌ಫೋನ್‌ ಸರಣಿಯನ್ನು ಲಾಂಚ್ ಮಾಡಲಿವೆ.

ಟ್ರೆಂಡಿಂಗ್‌ನಲ್ಲಿರುವ

ಇನ್ನು ಎಂಟ್ರಿ ಕೊಡಲಿರುವ ಹೊಸ ಫೋನ್‌ಗಳು ಸದ್ಯ ಟ್ರೆಂಡಿಂಗ್‌ನಲ್ಲಿರುವ ಡ್ಯುಯಲ್‌ ಮತ್ತು ಟ್ರಿಪಲ್‌ ಕ್ಯಾಮೆರಾ ಆಯ್ಕೆ, ಪವರ್‌ಫುಲ್ ಪ್ರೊಸೆಸರ್, ಹೈ ಎಂಡ್ RAM ನಂತಹ ಫೀಚರ್ಸ್‌ಗಳು ಇರಲಿವೆ ಎನ್ನುವ ಸೂಚನೆಗಳನ್ನು ಈಗಾಗಲೇ ಕೆಲವು ಲೀಕ್ ಮಾಹಿತಿಗಳು ತಿಳಿಯಪಡಿಸಿವೆ. ಹಾಗಾದರೇ ಮಾರುಕಟ್ಟೆಗೆ ಎಂಟ್ರಿ ಕೊಡಲಿರುವ ಕೆಲವು ಪ್ರಮುಖ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದರ ಮಾಹಿತಿ ತಿಳಿಯಲು ಮುಂದೆ ಓದಿರಿ.

ಶಿಯೋಮಿ ನೋಟ್ 12 ಸ್ಮಾರ್ಟ್‌ಫೋನ್ ಸರಣಿ

ಶಿಯೋಮಿ ನೋಟ್ 12 ಸ್ಮಾರ್ಟ್‌ಫೋನ್ ಸರಣಿ

ಶಿಯೋಮಿ (Xiaomi) ಸಂಸ್ಥೆಯ ಬಹುತೇಕ ಫೋನ್‌ಗಳು ಈಗಾಗಲೇ ಜನಪ್ರಿಯವಾಗಿದ್ದು, ಮುಖ್ಯವಾಗಿ ನೋಟ್ ಸರಣಿಯ ಫೋನ್‌ಗಳು ಹೆಚ್ಚು ಗಮನ ಸೆಳೆದಿವೆ. ಇದೀಗ ಶಿಯೋಮಿ ನೂತನವಾಗಿ ಶಿಯೋಮಿ ನೋಟ್ 12 ಸ್ಮಾರ್ಟ್‌ಫೋನ್ ಸರಣಿ ಪರಿಚಯಿಸಲಿದೆ. ಇನ್ನು ಈ ಸರಣಿಯು ಇದೇ ಡಿಸೆಂಬರ್ 2022 ರಲ್ಲಿ ಭಾರತಕ್ಕೆ ಬರುವ ನಿರೀಕ್ಷೆಯಿದೆ. ಈ ಸರಣಿಯು ರೆಡ್ಮಿ ನೋಟ್ 12, ರೆಡ್ಮಿ ನೋಟ್ 12 ಪ್ರೊ, ರೆಡ್ಮಿ ನೋಟ್ 12 ಪ್ರೊ ಪ್ಲಸ್‌ ಮಾಡೆಲ್‌ ಒಳಗೊಂಡಿರಲಿದೆ ಎನ್ನಲಾಗಿದೆ. ಇದರೊಂದಿಗೆ ಶಿಯೋಮಿ 12i ಹೈಪರ್‌ಚಾರ್ಜ್ ಸ್ಮಾರ್ಟ್‌ಫೋನ್‌ ಸಹ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಗಳಿವೆ.

ಒಪ್ಪೋ ರೆನೋ 9 ಸ್ಮಾರ್ಟ್‌ಫೋನ್‌ ಸರಣಿ

ಒಪ್ಪೋ ರೆನೋ 9 ಸ್ಮಾರ್ಟ್‌ಫೋನ್‌ ಸರಣಿ

ಒಪ್ಪೋ (Oppo) ಸಂಸ್ಥೆಯು ಇತ್ತೀಚಿಗೆ ಚೀನಾದಲ್ಲಿ ಒಪ್ಪೋ ರೆನೋ 9 ಫೋನ್ ಸರಣಿಯನ್ನು ಬಿಡುಗಡೆ ಮಾಡಿದ್ದು, ಈ ಸರಣಿಯನ್ನು ಸದಯದಲ್ಲೇ ಜಾಗತಿಕವಾಗಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ. ಇನ್ನು ಒಪ್ಪೋ ರೆನೋ 9 (Oppo Reno 9) ಸರಣಿಯು ಒಪ್ಪೋ ರೆನೋ 9, ಒಪ್ಪೋ ರೆನೋ 9 ಪ್ರೊ ಮತ್ತು ಒಪ್ಪೋ ರೆನೋ 9 ಪ್ರೊ+ ಮಾಡೆಲ್‌ಗಳನ್ನು ಒಳಗೊಂಡಿದೆ.

ಮಾಡೆಲ್‌ಗಳು

ಇದ್ರಲ್ಲಿ ಒಪ್ಪೋ ರೆನೋ 9 ಪ್ರೊ+ ಮಾಡೆಲ್‌ಗಳು ಸ್ನಾಪ್‌ಡ್ರಾಗನ್ 8+ ಜೆನ್‌ 1 ಚಿಪ್‌ಸೆಟ್‌ ಹೊಂದಿದ್ದು, ರೆನೋ 9 ಮತ್ತು ಒಪ್ಪೋ ರೆನೋ 9 ಪ್ರೊ ಫೋನ್‌ಗಳು ಕ್ರಮವಾಗಿ ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್‌ 778G ಮತ್ತು ಮೀಡಿಯಾ ಟೆಕ್‌ 8100 ಮ್ಯಾಕ್ಸ್‌ ಚಿಪ್‌ಸೆಟ್‌ ಪ್ರೊಸೆಸರ್‌ ಪಡೆದಿವೆ.

ಒನ್‌ಪ್ಲಸ್‌ 11 ಸ್ಮಾರ್ಟ್‌ಫೋನ್

ಒನ್‌ಪ್ಲಸ್‌ 11 ಸ್ಮಾರ್ಟ್‌ಫೋನ್

ಒನ್‌ಪ್ಲಸ್‌ (OnePlus) ಸಂಸ್ಥೆಯ ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ಭಿನ್ನವಾಗಿ ಕಾಣಿಸಿಕೊಂಡು ಗಮನ ಸೆಳೆದಿವೆ. ಇದೀಗ ಒನ್‌ಪ್ಲಸ್‌ ಸಂಸ್ಥೆಯು ನೂತನವಾಗಿ ಒನ್‌ಪ್ಲಸ್‌ 11 (OnePlus 11) ಅನ್ನು ಬಿಡುಗಡೆ ಮಾಡುವ ಲಕ್ಷಣ ಹೊರಹಾಕಿದೆ. ಈ ನೂತನ ಫೋನ್ ಒನ್‌ಪ್ಲಸ್‌ 10 ಸರಣಿಯ ಉತ್ತರಾಧಿಕಾರಿಯನ್ನು ಬಿಡುಗಡೆ ಮಾಡುತ್ತದೆ. ಇನ್ನು ಈ ಫೋನ್ ಸ್ನಾಪ್‌ಡ್ರಾಗನ್ 8 ಜೆನ್‌ 2 ಚಿಪ್‌ಸೆಟ್‌ ಪ್ರೊಸೆಸರ್‌ ಹೊಂದಿದೆ.

ರಿಫ್ರೆಶ್ ರೇಟ್‌

ಜೊತೆಗೆ ಇದು 120Hz ರಿಫ್ರೆಶ್ ರೇಟ್‌ ನೊಂದಿಗೆ 6.7 ಇಂಚಿನ AMOLED QHD+ ಡಿಸ್‌ಪ್ಲೇಯನ್ನು ಹೊಂದಿದೆ. ಇದರೊಂದಿಗೆ ಹಿಂಭಾಗದಲ್ಲಿ ಟ್ರಿಪಲ್‌ ಕ್ಯಾಮೆರಾ ರಚನೆ ಪಡೆದಿರುವ ನಿರೀಕ್ಷೆ ಇದ್ದು, ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಆಗಿರಲಿದೆ ಎನ್ನಲಾಗಿದೆ. ಹಾಗೆಯೇ 32 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇನ್ನು ಈ ಫೋನ್ ಬ್ಲ್ಯಾಕ್‌ ಮತ್ತು ಎಮರಾಲ್ಡ್ ಫಾರೆಸ್ಟ್ ಬಣ್ಣಗಳ ಆಯ್ಕೆಯಲ್ಲಿ ಲಾಂಚ್ ಆಗುವ ಸಾಧ್ಯತೆಗಳಿವೆ.

Best Mobiles in India

English summary
Upcoming Phones in December 2022: Check This List

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X