ಸದ್ಯದಲ್ಲಿಯೇ ಮಾರುಕಟ್ಟೆಗೆ ಲಗ್ಗೆ ಇಡಲಿರುವ ರೆಡ್ಮಿ ಸ್ಮಾರ್ಟ್‌ಫೋನ್‌ಗಳು!

|

ಮೊಬೈಲ್ ಮಾರುಕಟ್ಟೆಯಲ್ಲಿ ಶಿಯೋಮಿ ಕಂಪನಿಯ ಸ್ಮಾರ್ಟ್‌ಫೋನ್‌ಗಳು ಗ್ರಾಹಕರ ಗಮನ ಸೆಳೆದಿವೆ. ಪ್ರಸಕ್ತ 2020 ವರ್ಷ ಅಗ್ಗದ ಪ್ರೈಸ್‌ಟ್ಯಾಗ್‌ನಲ್ಲಿ ಈಗಾಗಲೇ ಹಲವು ಸರಣಿಯಗಳನ್ನು ಪರಿಚಯಿಸಿ ಸೈ ಅನಿಸಿಕೊಂಡಿರುವ ಶಿಯೋಮಿ ಬರುವ ಹೊಸ ವರ್ಷದಲ್ಲಿಯೂ (2021) ಆಕರ್ಷಕ ಬಜೆಟ್‌ ಫೋನ್‌ಗಳನ್ನು ಅನಾವರಣ ಮಾಡುವ ಮುನ್ಸೂಚನೆ ಹೊರಹಾಕಿದೆ. ಮುಂಬರುವ ನೂತನ ಫೋನ್‌ಗಳು ಗ್ರಾಹಕರಲ್ಲಿ ಕುತೂಹಲ ಮೂಡಿವೆ.

ಮೊಬೈಲ್

ಹೌದು, ಶಿಯೋಮಿ ಮೊಬೈಲ್ ಕಂಪನಿಯು 2021ರಲ್ಲಿ ತನ್ನ ಜನಪ್ರಿಯ ಸ್ಮಾರ್ಟ್‌ಫೋನ್‌ ಸರಣಿಗಳನ್ನು ಮುಂದುವರಿಸುವ ಜೊತೆಗೆ ಕೆಲವು ಹೊಸ ಮಾಡೆಲ್‌ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಲಿದೆ. ಅವುಗಳಲ್ಲಿ ರೆಡ್ಮಿ ನೋಟ್ 10 ಸರಣಿ, ರೆಡ್ಮಿ K40, ಮಿ ನೋಟ್ 10 ಲೈಟ್ ಫೋನ್‌ಗಳು ಸೇರಿದಂತೆ ಫ್ಲ್ಯಾಗ್‌ಶಿಪ್‌ ಮಾದರಿಯ ಹಾಗೂ ಫೋಲ್ಡೆಬಲ್ ರಚನೆಯ ಸ್ಮಾರ್ಟ್‌ಫೋನ್‌ಗಳು ಸಹ 2021ರಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಹಾಗಾದರೇ ಮುಂಬರುವ ಟಾಪ್‌ ಐದು ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ರೆಡ್ಮಿ K40 ಪ್ರೊ

ರೆಡ್ಮಿ K40 ಪ್ರೊ

ಶಿಯೋಮಿ ಜನಪ್ರಿಯ K ಸರಣಿಯ ಮುಂದುವರಿದ ಭಾಗವಾಗಿ ರೆಡ್ಮಿ K40 ಪ್ರೊ ಸ್ಮಾರ್ಟ್‌ಫೋನ್ ಅನಾವರಣ ಮಾಡುವ ಸಾಧ್ಯತೆಗಳಿವೆ. ಇನ್ನು ಈ ಸ್ಮಾರ್ಟ್‌ಫೋನ್ 108 ಎಂಪಿ ಪ್ರೈಮರಿ ಕ್ಯಾಮೆರಾ ಸೆನ್ಸಾರ್‌ ನೊಂದಿಗೆ ಬರಲಿದೆ. ಹಾಗೆಯೇ ರೆಡ್ಮಿ K40 ಪ್ರೊ 120Hz ರಿಫ್ರೆಶ್ ರೇಟ್ ಅನ್ನು ಸ್ಕ್ರೀನ್‌ ಹೊಂದಿರಲಿದೆ. ಸ್ನಾಪ್‌ಡ್ರಾಗನ್ 888 ಪ್ರೊಸೆಸರ್‌ ಹಾಗೂ 12 ಜಿಬಿ RAM ಇರಲಿದೆ. 5ಜಿ ಕನೆಕ್ಟಿವಿಟಿ ಸೇರಿದಂತೆ ಇನ್ನು ಹೆಚ್ಚಿನ ಸೌಲಭ್ಯಗಳನ್ನು ಹೊಂದಿರಲಿದೆ.

ರೆಡ್ಮಿ ನೋಟ್ 9 ಪ್ರೊ 5G

ರೆಡ್ಮಿ ನೋಟ್ 9 ಪ್ರೊ 5G

ರೆಡ್ಮಿ ನೋಟ್ 9 ಪ್ರೊ 5G ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್‌ 750 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 6GB RAM ಆಯ್ಕೆ ಹೊಂದಿರಲಿದೆ. ಇನ್ನು ಈ ಸ್ಮಾರ್ಟ್‌ಫೋನ್ 6.67 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಮಾದರಿಯನ್ನು ಹೊಂದಿರಲಿದ್ದು, 120Hz ರೀಫ್ರೇಶ್‌ ರೇಟ್ ಪಡೆದಿರಲಿದೆ. ಜೊತೆಗೆ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್‌ ಇರಲಿದ್ದು, ಮುಖ್ಯ ಕ್ಯಾಮೆರಾವು 108ಎಂಪಿ ಸೆನ್ಸಾರ್‌ನಲ್ಲಿರಲಿದೆ ಎನ್ನಲಾಗಿದೆ. ಇದರೊಂದಿಗೆ 4820 mAh ಬ್ಯಾಟರಿ ಬಲ ಹಾಗೂ ಫ್ಲ್ಯಾಶ್‌ ಚಾರ್ಜಿಂಗ್ ಸೌಲಭ್ಯ ಪಡೆಯಲಿದೆ.

ರೆಡ್ಮಿ ನೋಟ್ 10

ರೆಡ್ಮಿ ನೋಟ್ 10

ರೆಡ್ಮಿ ನೋಟ್ 10 ಸ್ಮಾರ್ಟ್‌ಫೋನ್ 6.67 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಮಾದರಿಯನ್ನು ಹೊಂದಿರಲಿದೆ. ಹಾಗೆಯೇ ಸ್ನ್ಯಾಪ್‌ಡ್ರಾಗನ್‌ 750G ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 4 GB RAM ಆಯ್ಕೆ ಹೊಂದಿರಲಿದೆ. ಇನ್ನು ಈ ಸ್ಮಾರ್ಟ್‌ಫೋನ್ ಜೊತೆಗೆ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್‌ ಇರಲಿದ್ದು, ಅವುಗಳು ಕ್ರಮವಾಗಿ 64ಎಂಪಿ + 8ಎಂಪಿ + 2ಎಂಪಿ + 2ಎಂಪಿ ಸೆನ್ಸಾರ್‌ನಲ್ಲಿರಲಿವೆ ಎನ್ನಲಾಗಿದೆ. ಇದರೊಂದಿಗೆ 4820mAh ಬ್ಯಾಟರಿ ಬಲ ಪಡೆಯಲಿದೆ.

ರೆಡ್ಮಿ K40

ರೆಡ್ಮಿ K40

ರೆಡ್ಮಿ K40 ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 64 GB + 256 GB ಸ್ಟೋರೇಜ್ ಆಯ್ಕೆ ಇರಲಿದೆ. ಇನ್ನು ಈ ಸ್ಮಾರ್ಟ್‌ಫೋನ್ 6.67 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಮಾದರಿಯನ್ನು ಹೊಂದಿರಲಿದೆ. ಜೊತೆಗೆ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್‌ ಇರಲಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್‌ನಲ್ಲಿರಲಿದೆ ಎನ್ನಲಾಗಿದೆ. ಇದರೊಂದಿಗೆ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಪಡೆಯಲಿದೆ.

ರೆಡ್ಮಿ ನೋಟ್ 10 ಪ್ರೊ

ರೆಡ್ಮಿ ನೋಟ್ 10 ಪ್ರೊ

ರೆಡ್ಮಿ ನೋಟ್ 10 ಪ್ರೊ ಸ್ಮಾರ್ಟ್‌ಫೋನ್ 6.67 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಮಾದರಿಯನ್ನು ಹೊಂದಿರಲಿದೆ. ಹಾಗೆಯೇ ಸ್ನ್ಯಾಪ್‌ಡ್ರಾಗನ್‌ 765 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 6GB RAM ಆಯ್ಕೆ ಹೊಂದಿರಲಿದೆ. ಇನ್ನು ಈ ಸ್ಮಾರ್ಟ್‌ಫೋನ್ ಜೊತೆಗೆ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್‌ ಇರಲಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್‌ನಲ್ಲಿರಲಿದೆ ಎನ್ನಲಾಗಿದೆ. ಇದರೊಂದಿಗೆ 5100mAh ಬ್ಯಾಟರಿ ಬಲ ಪಡೆಯಲಿದೆ.

Best Mobiles in India

English summary
Upcoming Top Five Redmi Smartphones In 2021.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X