India

ಹುವಾವೇ ಜೊತೆಗೆ ಗೂಗಲ್ ಸಂಬಂಧ ಹೇಗಿದೆ?..ಪಿಚೈಗೆ ಅಮೆರಿಕಾದ ಸೆನೆಟರ್ ಪತ್ರ!

|

ಚೀನಾದ ಹುವಾವೇ ಕಂಪೆನಿಯೊಂದಿಗೆ ಗೂಗಲ್ ಒಡನಾಡಿ ಸಂಬಂಧದ ಬಗ್ಗೆ ಉತ್ತರ ಕೋರಿ ಗೂಗಲ್ ಸಿಇಒ ಸುಂದರ್ ಪಿಚೈ ಅವರಿಗೆ ಅಮೆರಿಕದ ಮೂವರು ಸೆನೆಟರ್‌ಗಳು ಸೇರಿ ಪತ್ರವೊಂದನ್ನು ಬರೆದಿದ್ದಾರೆ. ಗೂಗಲ್ ಮತ್ತು ಹುವಾವೇ ಜಂಟಿಯಾಗಿ ಸ್ಮಾರ್ಟ್ ಸ್ಪೀಕರ್‌ ಉತ್ಪನ್ನ ತಯಾರಿಕೆಗೆ ಸಹಕರಿಸುತ್ತಿದೆ ಎಂಬುದರ ಬಗ್ಗೆ ಹಾಗೂ ಈ ಹಿಂದೆ ಮಾಡಿಕೊಂಡಿದ್ದ ಒಪ್ಪಂದಗಳ ಕುರಿತು ಸ್ಪಷ್ಟನೆ ನೀಡುವಂತೆ ಬುಧವಾರ ಪತ್ರ ಬರೆದು ಪ್ರಶ್ನಿಸಿದ್ದಾರೆ.

ಹುವಾವೇ ಜೊತೆಗೆ ಗೂಗಲ್ ಸಂಬಂಧ ಹೇಗಿದೆ?..ಪಿಚೈಗೆ ಅಮೆರಿಕಾದ ಸೆನೆಟರ್ ಪತ್ರ!

ಗೂಗಲ್ ಹುವಾವೇ ಸ್ಮಾರ್ಟ್ ಸ್ಪೀಕರ್‌ನಲ್ಲಿ ಸಹಕರಿಸುತ್ತಿದೆ. ವಿಶ್ವಾಸಾರ್ಹವಲ್ಲದ ಕಂಪನಿ ತಯಾರಿಸುವ ಸಾಧನಗಳ ಮುಖೇನ ಅಮೆರಿಕನ್ನರ ಸಂಭಾಷಣೆಗಳನ್ನು ಕೇಳಲು ಅನುವು ಮಾಡಿಕೊಡುವುದು ಸಲ್ಲದು. ವಾರಗಳ ಹಿಂದಿನ ನಿಮ್ಮ ಮತ್ತು ಚೀನಾ ಕಂಪನಿಯೊಂದಿಗೆ ಪಾಲ್ಗೊಳ್ಳುವಿಕೆಯ ಪ್ರಯತ್ನ ಹಾಗೂ ಹುವಾಯಿ ಜೊತೆಗಿನ ಹೊಸ ಸಂಬಂಧ ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಸೆನೆಟರ್​ಗಳು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ದಿ ಇನ್ಫಾರ್ಮೇಶನ್‌ನ ವರದಿಯ ಪ್ರಕಾರ, ಗೂಗಲ್ ಮತ್ತು ಹುವಾವೇ ಹೊಸ ಉತ್ಪನ್ನಕ್ಕೆ ಸಹಕರಿಸುತ್ತಿವೆ ಎಂದು ಹೇಳಲಾಗಿತ್ತು. ಹಾಗಾಗಿ, ಹುವಾವೇ ಸ್ಮಾರ್ಟ್ ಸ್ಪೀಕರ್‌ ಸಾಧನಗಳನ್ನು ಲಕ್ಷಾಂತರ ಅಮೆರಿಕನರ ಮನೆಗಳಲ್ಲಿ ಇರಿಸಲು ಸಹಾಯ ಮಾಡುವ ನಿಮ್ಮ ನಿರ್ಧಾರದಿಂದ, ದೇಶಕ್ಕೆ ಲಾಭ ನೀಡುವುದನ್ನು ಬಿಟ್ಟು ಬೇರೆ ಏನಾದರೂ ಇದೆಯಾ ಎಂಬುದನ್ನು ಅರ್ಥೈಸುವುದು ಕಷ್ಟ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಜೊತೆಗೆ ಆಗಸ್ಟ್ 30ರ ಒಳಗೆ ತಮ್ಮ ಪ್ರಶ್ನೆಗಳಿಗೆ ಉತ್ತರಿಸುವಂತೆಯೂ ಗಡುವು ನೀಡಲಾಗಿದೆ.

ಹುವಾವೇ ಜೊತೆಗೆ ಗೂಗಲ್ ಸಂಬಂಧ ಹೇಗಿದೆ?..ಪಿಚೈಗೆ ಅಮೆರಿಕಾದ ಸೆನೆಟರ್ ಪತ್ರ!

ಯುಎಸ್‌ನಲ್ಲಿ ಹುವಾವೇ ಮೇಲೆ ವ್ಯಾಪಾರ ನಿರ್ಬಂಧಗಳನ್ನು ಹೇರಿದ ನಂತರ ಎರಡು ಕಂಪನಿಗಳು ಯೋಜನೆಯನ್ನು ಸ್ಥಗಿತಗೊಳಿಸಿವೆ ಎಂದು ಹೇಳಲಾಗಿದೆ. ಆದರೂ, ಈ ಯೋಜನೆಯ ಕುರಿತಾದ ವರದಿಗಳು ನೀವು ಯೋಜನೆಯನ್ನು ಅಮಾನತುಗೊಳಿಸಿದ್ದೀರಿ? ಮತ್ತು ಹುವಾವೇಯ ಕಪ್ಪುಪಟ್ಟಿಯನ್ನು ತೆಗೆದುಹಾಕಿದರೆ ಹುವಾವೇ ಆಲಿಸುವ ಸಾಧನಗಳನ್ನು ಅಮೆರಿಕಾದ ಮನೆಗಳಲ್ಲಿ ಸ್ಥಾಪಿಸಲು ಸಹಾಯ ಮಾಡಲು ನೀವು ಪುನರಾರಂಭಿಸುತ್ತೀರಾ? ಎಂದು ಸೆನೆಟರ್‌ಗಳು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

43 ಇಂಚಿನ ಆಂಡ್ರಾಯ್ಡ್ ಸ್ಮಾರ್ಟ್‌ಟಿವಿ ಪರಿಚಯಿಸಲಿದೆ ಒನ್‌ಪ್ಲಸ್!43 ಇಂಚಿನ ಆಂಡ್ರಾಯ್ಡ್ ಸ್ಮಾರ್ಟ್‌ಟಿವಿ ಪರಿಚಯಿಸಲಿದೆ ಒನ್‌ಪ್ಲಸ್!

ಹುವಾವೇಯ ಈ ಸಾಧನಗಳು ವಿಶ್ವಾಸಾರ್ಹವಲ್ಲದ ಕಂಪನಿಗಳಿಗೆ ಅಮೆರಿಕನ್ನರ ಸಂಭಾಷಣೆಗಳನ್ನು ಕೇಳಲು ಅನುವು ಮಾಡಿಕೊಡುತ್ತದೆ. ಚೀನಾದಲ್ಲಿ ನಿಮ್ಮ ಒಳಗೊಳ್ಳುವಿಕೆಯನ್ನು ಕಡಿಮೆ ಮಾಡಲು ಮೂರು ವಾರಗಳ ಹಿಂದೆ ನೀವು ಮಾಡಿದ ಪ್ರಯತ್ನಗಳು, ಜೊತೆಗೆ ಹುವಾವೇ ಅವರೊಂದಿಗಿನ ನಿಮ್ಮ ನಿಕಟ ಸಂಬಂಧದ ಬಗ್ಗೆ ಹೊಸ ಬಹಿರಂಗಪಡಿಸುವಿಕೆಗಳು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ ಎಂದು ಸೆನೆಟರ್‌ಗಳು ಹೇಳಿದ್ದಾರೆ

Most Read Articles
Best Mobiles in India

English summary
Three US senators have written to the Google CEO Sundar Pichai demanding answers about the company's relationship with Chinas Huawei. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X