ಬ್ಲೂಟೂತ್ ಕನೆಕ್ಟ್‌ ಮಾಡುವ ಮುನ್ನ ಎಚ್ಚರ!..ಎಂದಿಗೂ ಈ ತಪ್ಪು ಮಾಡಬೇಡಿ!

|

ಪ್ರಸ್ತುತ ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಗ್ಯಾಜೆಟ್‌ಗಳು ಹೊಸ ತಂತ್ರಜ್ಞಾನಕ್ಕೆ ಅಪ್‌ಡೇಟ್‌ ಹೊಂದುತ್ತಿದ್ದು, ಜನರು ವಾಯರ್‌ಲೆಸ್‌ ಕನೆಕ್ಷನ್‌ ಸೌಲಭ್ಯದ ಡಿವೈಸ್‌ಗಳನ್ನು ಬಳಕೆ ಮಾಡಲು ಮುಂದಾಗುತ್ತಿದ್ದಾರೆ. ಇನ್ನು ಡಿವೈಸ್‌ಗಳನ್ನು ಕನೆಕ್ಟ್ ಮಾಡಲು ಮುಖ್ಯವಾಗಿ ಬ್ಲೂಟೂತ್‌ನ ವೈರ್‌ಲೆಸ್ ಕನೆಕ್ಷನ್‌ ಅನ್ನು ನೆಚ್ಚಿಕೊಳ್ಳಲಾಗುತ್ತಿದೆ. ಆದರೆ ಬ್ಲೂಟೂತ್‌ನ ವೈರ್‌ಲೆಸ್ ಕನೆಕ್ಷನ್‌ ಬಳಕೆಯಿಂದ ಅಪಾಯ ಎದುರಾಗುವ ಸಾಧ್ಯತೆಗಳಿವೆ.

ಬ್ಲೂಬಗ್ಗಿಂಗ್

ಹೌದು, ಇತ್ತೀಚಿಗೆ ಬ್ಲೂಟೂತ್ ಆಧಾರಿತ ಡಿವೈಸ್‌ಗಳ ಬಳಕೆ ಹೆಚ್ಚಾಗಿದೆ. ಆದರೆ ಈಗ ಬ್ಲೂಟೂತ್‌ ಡಿವೈಸ್‌ಗಳ ಮೂಲಕ ಸಹ ಬ್ಲೂಬಗ್ಗಿಂಗ್ ಸೈಬರ್ದಾ ಳಿ ಆಗುತ್ತಿವೆ. ಇನ್ನು ಬ್ಲೂಟೂತ್ ಹ್ಯಾಕಿಂಗ್ ಅಥವಾ ಬ್ಲೂಬಗ್ಗಿಂಗ್ (Bluebugging) ಅಥವಾ ಬ್ಲೂಜಾಕಿಂಗ್ ಎನ್ನುವುದು ಹ್ಯಾಕಿಂಗ್ ಪ್ರಕ್ರಿಯೆಯಾಗಿದ್ದು, ಹ್ಯಾಕರ್‌ಗಳು ಬ್ಲೂಟೂತ್ ಸಂಪರ್ಕವನ್ನು ಹೊಂದಿರುವ ಡಿವೈಸ್‌ಗಳಿಗೆ ಪ್ರವೇಶವನ್ನು ಪಡೆಯುತ್ತಾರೆ.

ಲ್ಯಾಪ್‌ಟಾಪ್

ಹ್ಯಾಕರ್‌ಗಳು ಬಳಕೆದಾರರ ಫೋನ್ ಅಥವಾ ಲ್ಯಾಪ್‌ಟಾಪ್ ಮೂಲಕ ತಮ್ಮ ಸಾಧನವನ್ನು ಜೋಡಿಸಬಹುದು ಮತ್ತು ಸೂಕ್ಷ್ಮ ಡೇಟಾವನ್ನು ಕದಿಯಬಹುದು ಮತ್ತು ಅವರಿಗೆ ತಿಳಿಯದೆ ಅವರ ಡಿವೈಸ್‌ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿರುತ್ತಾರೆ.

ಏನಿದು ಬ್ಲೂಬಗ್ಗಿಂಗ್? ಇದು ಹೇಗೆ ಕೆಲಸ ಮಾಡುತ್ತದೆ?

ಏನಿದು ಬ್ಲೂಬಗ್ಗಿಂಗ್? ಇದು ಹೇಗೆ ಕೆಲಸ ಮಾಡುತ್ತದೆ?

ಬ್ಲೂಟೂತ್ ಬಳಕೆದಾರರಿಗೆ ಪತ್ತೆಯಾದಾಗ ಮತ್ತು ಡಿವೈಸ್‌ 10 ಮೀಟರ್ ದೂರದಲ್ಲಿರುವಾಗ ಹ್ಯಾಕರ್ ಸಾಧನವನ್ನು ಹ್ಯಾಕ್ ಮಾಡಬಹುದಾದ ಸಾಧ್ಯತೆಗಳಿರುತ್ತವೆ. ಡಿವೈಸ್‌ ಕನೆಕ್ಟ್‌ ಮಾಡಲು, ಅವರು ಬ್ರೂಟ್ ಫೋರ್ಸ್ ಜೋಡಣೆಯನ್ನು ಬಳಸುತ್ತಾರೆ. ಇದರರ್ಥ ಕನೆಕ್ಟಿವಿಟಿ ಕೋಡ್ ಅನ್ನು ಭೇದಿಸಲು ಸಾಧ್ಯವಿರುವ ಎಲ್ಲಾ ಪಾಸ್‌ವರ್ಡ್‌ಗಳನ್ನು ಪ್ರಯತ್ನಿಸುವುದು.

ಡೇಟಾವನ್ನು

ಫೋನ್ ಕನೆಕ್ಟ್‌ ಆದ ನಂತರ, ಸೂಕ್ಷ್ಮ ಡೇಟಾವನ್ನು ಕದಿಯಲು, ಕರೆಗಳು, ಸಂದೇಶಗಳಿಗೆ ಪ್ರವೇಶವನ್ನು ಪಡೆಯಲು ಮತ್ತು ಸಂಪರ್ಕಗಳನ್ನು ಮಾರ್ಪಡಿಸಲು ಹ್ಯಾಕರ್‌ಗಳು ಮಾಲ್‌ವೇರ್ ಅನ್ನು ಇನ್‌ಸ್ಟಾಲ್‌ ಮಾಡುತ್ತಾರೆ. ಅವರು ಬ್ಯಾಂಕಿಂಗ್ ಆಪ್‌ಗಳಿಂದ ಹಣವನ್ನು ವಹಿವಾಟು ಮಾಡಬಹುದು ಅಥವಾ ಫೋನ್‌ನಿಂದ ಅವರ ಖಾಸಗಿ ವೀಡಿಯೊಗಳನ್ನು ಕದಿಯುವ ಸಾಧ್ಯತೆಗಳಿರುತ್ತವೆ.

ಬ್ಲೂಬಗ್ಗಿಂಗ್‌ಗೆ ಗುರಿಯಾಗುವ ಪ್ರಮುಖ ಡಿವೈಸ್‌ಗಳು ಇವು

ಬ್ಲೂಬಗ್ಗಿಂಗ್‌ಗೆ ಗುರಿಯಾಗುವ ಪ್ರಮುಖ ಡಿವೈಸ್‌ಗಳು ಇವು

ಬ್ಲೂಟೂತ್ ಅನ್ನು ಬೆಂಬಲಿಸುವ ಯಾವುದೇ ಡಿವೈಸ್‌ ಬ್ಲೂ ಬಗ್‌ ಆಗಿರಬಹುದು. TWS (ಟ್ರೂ ವೈರ್‌ಲೆಸ್ ಸ್ಟಿರಿಯೊ) ಅಥವಾ ವೈರ್‌ಲೆಸ್ ಇಯರ್‌ಬಡ್ಸ್ ಹೆಡ್‌ಫೋನ್‌ಗಳು, ಕರೆಗಳನ್ನು ರೆಕಾರ್ಡ್ ಮಾಡಬಹುದಾದ ಸ್ಮಾರ್ಟ್‌ವಾಚ್‌ಗಳು ಬ್ಲೂಟೂತ್ ಹ್ಯಾಕಿಂಗ್‌ಗೆ ಗುರಿಯಾಗುತ್ತವೆ. ಫೋನ್‌ಗಳು TWS ಅಥವಾ ವೈರ್‌ಲೆಸ್ ಡಿವೈಸ್‌ಗಳೊಂದಿಗೆ ಕನೆಕ್ಟ್‌ ಮಾಡಲು ನೆರವಾಗುವ ಆಪ್‌ಗಳು ಸಹ ಸ್ಮಾರ್ಟ್‌ಫೋನ್‌ಗಳನ್ನು ಹ್ಯಾಕಿಂಗ್ ಅಪಾಯಕ್ಕೆ ದೂಡುವ ಸಾಧ್ಯತೆಗಳಿರುತ್ತವೆ. ಈ ನಿಟ್ಟಿನಲ್ಲಿ ಬಳಕೆದಾರರು ಮುನ್ನೆಚ್ಚರಿಕೆಗಳನ್ನು ಅನುಸರಿಸುವುದು ಉತ್ತಮ.

ಬ್ಲೂಬಗ್ಗಿಂಗ್‌ ಸಾಧ್ಯತೆಗಳನ್ನು ತಡೆಯಲು ಹೀಗೆ ಮಾಡಿ:

ಬ್ಲೂಬಗ್ಗಿಂಗ್‌ ಸಾಧ್ಯತೆಗಳನ್ನು ತಡೆಯಲು ಹೀಗೆ ಮಾಡಿ:

* ಡಿವೈಸ್‌ ಬಳಕೆಯಲ್ಲಿಲ್ಲದಿದ್ದಾಗ ಯಾವಾಗಲೂ ನಿಮ್ಮ ಬ್ಲೂಟೂತ್ ಅನ್ನು ಆಫ್ ಮಾಡಿ.
* ಬ್ಲೂಟೂತ್ ಸೆಟ್ಟಿಂಗ್‌ನಲ್ಲಿ ಇತರ ಡಿವೈಸ್‌ಗಳಿಗೆ ಗೋಚರಿಸುವ ನಿಮ್ಮ (ಡಿವೈಸ್‌) ಅನ್ನು ಆಫ್ ಮಾಡಿ.
* ಇತ್ತೀಚಿನ ಸಾಫ್ಟ್‌ವೇರ್ ಮತ್ತು ಲಭ್ಯವಿರುವ ಭದ್ರತಾ ಪ್ಯಾಚ್‌ಗಳೊಂದಿಗೆ ನಿಮ್ಮ ಡಿವೈಸ್‌ ಅನ್ನು ಅಪ್‌ಡೇಟ್‌ ಮಾಡಿರಿ.
* ತೆರೆದ ಸಾರ್ವಜನಿಕ ವೈ-ಫೈ ಬಳಸದಂತೆ ನಿಮ್ಮನ್ನು ನಿರ್ಬಂಧಿಸಿ.

ಆಕ್ಸಸ್‌

* ಸಾರ್ವಜನಿಕವಾಗಿ ಅಥವಾ ಅಪರಿಚಿತ ಡಿವೈಸ್‌ನಿಂದ ಬ್ಲೂಟೂತ್ ಲಿಂಕ್ ರಿಕ್ವೇಸ್ಟ್‌ ಎಂದಿಗೂ ಸ್ವೀಕರಿಸಬೇಡಿ.
* ನೀವು ಸಾರ್ವಜನಿಕ Wi-Fi ಅನ್ನು ಆಕ್ಸಸ್‌ ಮಾಡಿದಾಗ ನಿಮ್ಮ ಡಿವೈಸ್‌ ಅನ್ನು ರೀಬೂಟ್ ಮಾಡಿ.
* ನಿಮ್ಮ ಸ್ವಂತ ಹೆಸರಿನೊಂದಿಗೆ ನಿಮ್ಮ ಬ್ಲೂಟೂತ್ ಡಿವೈಸ್‌ ಅನ್ನು ಹೆಸರಿಸದಿರಲು ಪ್ರಯತ್ನಿಸಿ.

ಅಪ್ಲಿಕೇಶನ್

* ನಿಮ್ಮ ಡಿವೈಸ್‌ನಲ್ಲಿ ಆಂಟಿವೈರಸ್ ಅಪ್ಲಿಕೇಶನ್ ಅನ್ನು ಬಳಸಿ ಮತ್ತು ವೈರಸ್ ಮತ್ತು ಮಾಲ್‌ವೇರ್‌ಗಾಗಿ ನಿಮ್ಮ ಡಿವೈಸ್‌ಗಳನ್ನು ನಿಯಮಿತವಾಗಿ ಸ್ಕ್ಯಾನ್ ಮಾಡಿ.
* ನಿಮ್ಮ ಬ್ಲೂಟೂತ್‌ನಲ್ಲಿ ಸಂಪರ್ಕಗೊಂಡಿರುವ ಎಲ್ಲಾ ಡಿವೈಸ್‌ಗಳನ್ನು ಪರಿಶೀಲಿಸಿ ಮತ್ತು ಉಳಿಸಿದ ಡಿವೈಸ್‌ಗಳು ಬಳಕೆಯಲ್ಲಿಲ್ಲದಿದ್ದರೆ ಅವುಗಳನ್ನು ತೆಗೆದುಹಾಕಿ.
* ಬ್ಲೂಟೂತ್ ಮೂಲಕ ಸೂಕ್ಷ್ಮ ಡೇಟಾವನ್ನು ಹಂಚಿಕೊಳ್ಳದಿರಲು ಅಥವಾ ವರ್ಗಾಯಿಸಲು ಪ್ರಯತ್ನಿಸಿ.

Best Mobiles in India

English summary
Using bluetooth? Save Your Device from Bluebugging.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X