ಪಬ್ಲಿಕ್‌ ವೈಫೈ ಬಳಸುವ ಮುನ್ನ ಎಚ್ಚರ..! ಮಾಹಿತಿ ಸೋರಿಕೆಯ ಹೆದ್ದಾರಿ..!

By Gizbot Bureau
|

ಸದ್ಯದ ಇಂಟರ್‌ನೆಟ್‌ ಯುಗದಲ್ಲಿ ವೈಫೈಗೆ ಭಾರೀ ಅಂದ್ರೆ ಭಾರೀ ಮಹತ್ವ ಸಿಕ್ಕಿದೆ. ಎಲ್ಲಾದರೂ ಉಚಿತ ವೈಫೈ ಸಿಕ್ಕಿತೆಂದರೆ ಸಾಕು. ಅಲ್ಲಿಯೇ ಕುಳಿತುಕೊಂಡು ಬಿಡುವುದು ಈಗಿನ ಯುವಜನಾಂಗಕ್ಕೆ ಅಭ್ಯಾಸವಾಗಿಬಿಟ್ಟಿದೆ. ಆದರೆ, ಸಾರ್ವಜನಿಕ ವೈಫೈನಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಬಹಳಷ್ಟು ಜನಕ್ಕೆ ಗೊತ್ತಿಲ್ಲ ಎಂಬುದು ಕೂಡ ಸತ್ಯ. ಸಾರ್ವಜನಿಕ ವೈಫೈ ಬಳಸುವಾಗ ಒಂದಿಷ್ಟು ಎಚ್ಚರಿಕೆಯಿಂದ ಇರಬೇಕಾಗಿರುವುದು ಉತ್ತಮ. ಹ್ಯಾಕರ್‌ಗಳು ಸಾರ್ವಜನಿಕ ವೈಫೈ ಮೂಲಕ ಜನರ ಮಾಹಿತಿಯನ್ನು ಕದಿಯಲು ಕಾಯುತ್ತಿರುತ್ತಾರೆ. ಹ್ಯಾಕರ್‌ಗಳ ಕಪಿಮುಷ್ಟಿಯಿಂದ ಪಾರಾಗಲು ಜನ ಒಂದಿಷ್ಟು ಸಲಹೆಗಳನ್ನು ಅನುಸರಿಸಬೇಕು.

ನಂಬಿಕಾರ್ಹ ವೈಫೈ ಬಳಸಿ

ನಂಬಿಕಾರ್ಹ ವೈಫೈ ಬಳಸಿ

ಸಿಕ್ಕ ಸಿಕ್ಕ ಕಡೆಯೆಲ್ಲಾ ಉಚಿತ ವೈಫೈ ಬಳಸುವುದಕ್ಕಿಂತ ನಂಬಿಕಾರ್ಹ ವೈಫೈಗಳನ್ನು ಬಳಸಿ. ಜನಪ್ರಿಯ ನೆಟ್‌ವರ್ಕ್‌ಗಳಾದ ಸ್ಟಾರ್‌ಬಕ್ಸ್‌ನಂತಹ ವೈಫೈಗಳು ನಂಬಿಕೆಗೆ ಹೆಚ್ಚು ಅರ್ಹವಾಗಿರುತ್ತವೆ. ಏಕೆಂದರೆ, ವೈಫೈ ನೀಡುವ ಕಂಪನಿಗಳು ನಿಮ್ಮಿಂದ ಹಣವನ್ನು ಪಡೆಯುತ್ತಿರುತ್ತವೆ. ಹೊಸ ನಗರಗಳಲ್ಲಿನ ಕಾಫಿ ಶಾಪ್‌ಗಳಲ್ಲಿ ಲಾಗಿನ್‌ ಆಗುವ ಮುನ್ನ ಒಂದಿಷ್ಟು ಎಚ್ಚರಿಕೆಯಿಂದ ಇರಬೇಕಾಗಿದ್ದು ಅವಶ್ಯ.

ಹೆಚ್‌ಟಿಟಿಪಿಎಸ್‌ ವಿಧಾನ ಬಳಸಿ

ಹೆಚ್‌ಟಿಟಿಪಿಎಸ್‌ ವಿಧಾನ ಬಳಸಿ

ವೈಫೈ ಬಳಸುವಾಗ ಹೆಚ್‌ಟಿಟಿಪಿಎಸ್‌ ವೆಬ್‌ಸೈಟ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಿ. ಹೆಚ್‌ಟಿಟಿಪಿಎಸ್‌ ಭದ್ರತೆ ಇರುವ ವೆಬ್‌ಸೈಟ್‌ಗಳಿಂದ ಮಾಹಿತಿ ಸೋರಿಕೆಯಾಗುವುದು ಕಡಿಮೆ. ಭದ್ರತೆ ಇಲ್ಲದ ವೆಬ್‌ಸೈಟ್‌ಗಳಿಂದ ನಿಮ್ಮ ಮಾಹಿತಿಗೆ ಕನ್ನ ಬೀಳುವ ಸಾಧ್ಯತೆ ಹೆಚ್ಚು. ಆದ್ದರಿಂದ ಹೆಚ್‌ಟಿಟಿಪಿಎಸ್‌ ಇರುವ ವೆಬ್‌ಸೈಟ್‌ಗಳನ್ನು ಬಳಸುವುದು ಉತ್ತಮ.

ಹೆಚ್ಚಿನ ಮಾಹಿತಿ ನೀಡಬೇಡಿ

ಹೆಚ್ಚಿನ ಮಾಹಿತಿ ನೀಡಬೇಡಿ

ಸಾರ್ವಜನಿಕ ವೈಫೈಗಳನ್ನು ಬಳಸುವ ಸಂದರ್ಭದಲ್ಲಿ ವೈಯಕ್ತಿಕ ಮಾಹಿತಿಯನ್ನು ಹೆಚ್ಚಾಗಿ /ನೀಡಬೇಡಿ. ಬ್ಯಾಂಕ್‌ ವ್ಯವಹಾರಗಳನ್ನು ಸಾರ್ವಜನಿಕ ವೈಫೈನಲ್ಲಿ ಮಾಡುವುದನ್ನು ನಿಲ್ಲಿಸಿ. ಬ್ಯಾಂಕ್‌ ವಿವರ, ಕ್ರೆಡಿಟ್ / ಡೆಬಿಟ್‌ ಕಾರ್ಡ್‌ ವಿವರಗಳನ್ನು ನಮೂದಿಸಬೇಡಿ.

ಎಲ್ಲೆಲ್ಲಿ ಲಾಗಿನ್‌..?

ಎಲ್ಲೆಲ್ಲಿ ಲಾಗಿನ್‌..?

ಸಾರ್ವಜನಿಕ ವೈಫೈ ಬಳಸುವಾಗ ಯಾವೆಲ್ಲಾ ಅಕೌಂಟ್‌ಗಳಿಗೆ ಲಾಗಿನ್‌ ಆಗಿದ್ದೀರಾ..? ಎಂಬುದನ್ನು ಗಮನಿಸಿ. ಸಾಮಾಜಿಕ ಜಾಲತಾಣಗಳು ಸಹ ನಮ್ಮ ಮಾಹಿತಿ ಕಣಜವಾಗಿರುವುದರಿಂದ ಡೇಟಾ ಸೋರಿಕೆಯ ಭೀತಿ ಕಾಣುತ್ತದೆ. ಮತ್ತು ಬ್ಯಾಂಕಿಂಗ್‌ನಂತಹ ಪ್ರಮುಖ ಆಪ್‌ಗಳಲ್ಲಿ ಪಬ್ಲಿಕ್‌ ವೈಫೈ ಮೂಲಕ ಲಾಗಿನ್‌ ಆಗಬೇಡಿ.

ವಿಪಿಎನ್ ಬಳಸಿ

ವಿಪಿಎನ್ ಬಳಸಿ

ಪಬ್ಲಿಕ್‌ ವೈಫೈ ಬಳಸುವಾಗ ವಿಪಿಎನ್‌ ಬಳಸಿ. ವರ್ಚುವಲ್‌ ಪ್ರೈವೇಟ್‌ ನೆಟ್‌ವರ್ಕ್‌ ಬಳಸುವುದರಿಂದ ಡೇಟಾ ಸೋರಿಕೆಯ ಭಯವಿರುವುದಿಲ್ಲ. ಅದಲ್ಲದೇ ನೀವು ಬಳಸುವ ಮಾಹಿತಿಯನ್ನು ಎನ್‌ಕ್ರಿಪ್ಟ್‌ ಮಾಡುವುದರಿಂದ ನಿಮ್ಮ ಡೇಟಾಗೆ ರಕ್ಷಣೆ ಸಿಗುತ್ತದೆ. ಪ್ಲೇ ಸ್ಟೋರ್‌ನಲ್ಲಿ ಅನೇಕ್‌ ವಿಪಿಎನ್‌ ಆಪ್‌ಗಳಿದ್ದು, ಬೇಕಾಗಿದ್ದನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

Best Mobiles in India

Read more about:
English summary
Using Public Wi-Fi? Use These Tips To Stay Safe

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X