ನೀವಿಗ ಉಚಿತವಾಗಿ VIP ಅಥವಾ ಫ್ಯಾನ್ಸಿ ನಂಬರ್‌ ಪಡೆಯಬಹುದು!

|

ಕೆಲವು ಗ್ರಾಹಕರು ಏನಾದರೂ ಖರೀದಿ ಮಾಡುವಾಗ ಭಿನ್ನವಾಗಿ ಅಥವಾ ವಿಶೇಷವಾಗಿ ಇರಬೇಕು ಎನ್ನುವ ಯೋಚನೆ ಹೊಂದಿರುತ್ತಾರೆ. ಅದೇ ರೀತಿ ಅನೇಕರು ಅವರ ಮೊಬೈಲ್‌ ನಂಬರ್ ಸಹ ಫ್ಯಾನ್ಸಿ ಅಥವಾ ವಿಐಪಿ ಆಗಿರಬೇಕು ಎಂದು ಬಯಸುತ್ತಾರೆ. ಕ್ರೇಜ್ ಇರುತ್ತದೆ. ಈ ರೀತಿ ನೀವು ವಿಐಪಿ ಅಥವಾ ಫ್ಯಾನ್ಸಿ ನಂಬರ್ ಹೊಂದುವ ಬಯಕೆ ಇದ್ರೆ, ಇದೀಗ ಉಚಿತವಾಗಿ ಪಡೆಯಬಹುದು.

ಪೋಸ್ಟ್‌ಪೇಯ್ಡ್

ಹೌದು, ಭಾರತೀಯ ಟೆಲಿಕಾಂ ವಲಯದಲ್ಲಿ ಮೂರನೇ ದೊಡ್ಡ ಟೆಲಿಕಾಂ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ವಿ ಟೆಲಿಕಾಂ (VI) ಉಚಿತವಾಗಿ VIP ಅಥವಾ ಫ್ಯಾನ್ಸಿ ನಂಬರ್‌ ಲಭ್ಯ ಮಾಡಿದೆ. ಪೋಸ್ಟ್‌ಪೇಯ್ಡ್ ಅಥವಾ ಪ್ರಿಪೇಯ್ಡ್ ಸಂಖ್ಯೆಗಳಲ್ಲಿ ಆಸಕ್ತಿ ಹೊಂದಿರುವ ಬಳಕೆದಾರರು ಉಚಿತವಾಗಿ ಫ್ಯಾನ್ಸಿ ನಂಬರ್‌ ಪಡೆಯಬಹುದಾಗಿದೆ.

ವೆಬ್‌ಸೈಟ್‌ಗೆ

ವಿ ಟೆಲಿಕಾಂ ತನ್ನ ವಿಐಪಿ ಅಥವಾ ಫ್ಯಾನ್ಸಿ ಸಂಖ್ಯೆಯನ್ನು ಪ್ರಿಪೇಯ್ಡ್ ಅಥವಾ ಪೋಸ್ಟ್‌ಪೇಯ್ಡ್ ಕನೆಕ್ಷನ್ ಪಡೆಯುವ ಎರಡೂ ಗ್ರಾಹಕರಿಗೆ ನೀಡುತ್ತದೆ. ವಿ ಟೆಲಿಕಾಂನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಮತ್ತು ಹೆಡರ್ ಮೆನುವಿನಲ್ಲಿ ಹೊಸ ಸಂಪರ್ಕ ವರ್ಗವನ್ನು ಪರಿಶೀಲಿಸಿ. ಅಲ್ಲಿ ಫ್ಯಾನ್ಸಿ ಸಂಖ್ಯೆಗಳ ವರ್ಗವನ್ನು ಆಯ್ಕೆ ಮಾಡಿರಿ. ಹಾಗೆಯೇ ಗ್ರಾಹಕರು ಪ್ರಿಪೇಯ್ಡ್ ಅಥವಾ ಪೋಸ್ಟ್‌ಪೇಯ್ಡ್ ಸಂಪರ್ಕ ವನ್ನು ಪಡೆಯಲು ಬಯಸುತ್ತೀರಾ ಎಂದು ನಿರ್ಧರಿಸಬಹುದಾದ ಪೇಜ್‌ ಕಾಣಿಸುತ್ತದೆ.

ಒದಗಿಸಿದ

ಗ್ರಾಹಕರು ಮೊಬೈಲ್ ಸಂಖ್ಯೆಯೊಂದಿಗೆ ವಾಸಸ್ಥಳದ ಪಿನ್ ಕೋಡ್ ಅನ್ನು ನಮೂದಿಸಬೇಕಾಗುತ್ತದೆ. ನಂತರ ನಿಮಗೆ ಬೇಕಾದ ಸಂಖ್ಯೆಯನ್ನು ಸರ್ಚ್ ಮಾಡಲು ಕೇಳಲಾಗುತ್ತದೆ. ಅಥವಾ Vi ಒದಗಿಸಿದ ಸಂಖ್ಯೆಗಳ ಉಚಿತ ಲಿಸ್ಟ್‌ನಿಂದ ಒಂದನ್ನು ಆಯ್ಕೆ ಮಾಡಿ. ಗ್ರಾಹಕರು ಉಚಿತ ಮತ್ತು ಪ್ರೀಮಿಯಂ ಸಂಖ್ಯೆಗಳ ನಡುವೆ ಆಯ್ಕೆ ಮಾಡಬಹುದು. ಒಂದು ವೇಳೆ ಗ್ರಾಹಕರು ಪ್ರೀಮಿಯಂ ಸಂಖ್ಯೆಗಳನ್ನು ಆಯ್ಕೆ ಮಾಡುವುದಾದರೆ, 500 ರೂ. ಪಾವತಿಸಬೇಕಾಗುತ್ತದೆ.

ಮಾಡಬಹುದು

ಗ್ರಾಹಕರು ತಾವು ಬಯಸುವ ಫ್ಯಾನ್ಸಿ ಸಂಖ್ಯೆಯನ್ನು ಪಡೆಯಬೇಕಿದ್ದರೆ, ಪ್ರೀಮಿಯಂ ಆಯ್ಕೆಗೆ ಹೋಗಬಹುದು. ಇಲ್ಲದಿದ್ದರೆ, ಉಚಿತವಾಗಿ ಲಭ್ಯವಾಗುವ ಫ್ಯಾನ್ಸಿ ನಂಬರ್‌ಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು. ಅಗತ್ಯ ಸಂಖ್ಯೆಯನ್ನು ಆಯ್ಕೆ ಮಾಡಿದ ನಂತರ, ನಿಮ್ಮ ವಿಳಾಸವನ್ನು ನಮೂದಿಸಿ. ನಂತರ ಸಿಮ್ ಅನ್ನು ನಿಮಗೆ ಮನೆಗೆ ತಲುಪಿಸಲಾಗುತ್ತದೆ. ವಿ ಟೆಲಿಕಾಂನ ಕೆಲವು ಜನಪ್ರಿಯ ಯೋಜನೆಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ವಿ ಟೆಲಿಕಾಂನ 399ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ವಿ ಟೆಲಿಕಾಂನ 399ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 42 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹೆಚ್ಚುವರಿಯಾಗಿ ವಿ ಆಪ್ಸ್‌ಗಳ ಸೇವೆಗಳು ಲಭ್ಯ ಆಗಲಿವೆ.

ವಿ ಟೆಲಿಕಾಂನ 479ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ವಿ ಟೆಲಿಕಾಂನ 479ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹೆಚ್ಚುವರಿಯಾಗಿ ವಿ ಆಪ್ಸ್‌ಗಳ ಸೇವೆಗಳು ಲಭ್ಯ ಆಗಲಿವೆ.

ವಿ ಟೆಲಿಕಾಂನ 599ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ವಿ ಟೆಲಿಕಾಂನ 599ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 70 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹೆಚ್ಚುವರಿಯಾಗಿ ವಿ ಆಪ್ಸ್‌ಗಳ ಸೇವೆಗಳು ಲಭ್ಯ ಆಗಲಿವೆ.

ವಿ ಟೆಲಿಕಾಂನ 719ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ವಿ ಟೆಲಿಕಾಂನ 719ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹೆಚ್ಚುವರಿಯಾಗಿ ವಿ ಆಪ್ಸ್‌ಗಳ ಸೇವೆಗಳು ಲಭ್ಯ ಆಗಲಿವೆ.

Best Mobiles in India

English summary
Vi Customers can Choose Fancy or VIP Numbers for Free: Details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X