ಭಾರತದಲ್ಲಿ ವಿ ಟೆಲಿಕಾಂನಿಂದ ವಿ ಗೇಮ್ಸ್‌ ಸೇವೆ ಪ್ರಾರಂಭ! ವಿಶೇಷತೆ ಏನು?

|

ಭಾರತದ ಟೆಲಿಕಾಂ ವಲಯದಲ್ಲಿ ವಿ ಟೆಲಿಕಾಂ ಕೂಡ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಏರ್‌ಟೆಲ್‌ ಮತ್ತು ಜಿಯೋ ಟೆಲಿಕಾಂಗಳಿಗೆ ಪೈಪೋಟಿಯನ್ನು ನಡೆಸುತ್ತಾ ಬಂದಿದೆ. ಇದೇ ಕಾರಣಕ್ಕೆ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಅನೇಕ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸಿದೆ. ಸದ್ಯ ಇದೀಗ ತನ್ನ ಬಳಕೆದಾರರಿಗೆ ವಿ ಗೇಮ್ಸ್‌ ಎಂದು ಕರೆಯಲ್ಪಡುವ ಹೊಸ ಗೇಮಿಂಗ್ ಸೇವೆಯನ್ನು ಪ್ರಾರಂಭಿಸಿದೆ. ಇನ್ನು ಈ ವಿ ಗೇಮ್ಸ್‌ ಅನ್ನು ಭಾರತ ಮೂಲದ ಗೇಮಿಂಗ್ ಕಂಪನಿಯಾದ Nazara Technologies ಸಹಭಾಗಿತ್ವದಲ್ಲಿ ಪ್ರಾರಂಭಿಸಿದೆ.

ವಿ

ಹೌದು, ವಿ ಟೆಲಿಕಾಂ ಭಾರತದಲ್ಲಿ ಹೊಸದಾಗಿ ವಿ ಗೇಮ್ಸ್‌ ಸೇವೆಯನ್ನು ಪ್ರಾರಂಭಿಸಿದೆ. ಈ ಸೇವೆಯ ಮೂಲಕ ವಿ ಟೆಲಿಕಾಂ ಬಳಕೆದಾರರು ವಿ ಅಪ್ಲಿಕೇಶನ್‌ನಲ್ಲಿ 1,200 ಮೊಬೈಲ್ ಗೇಮ್‌ಗಳಿಗೆ ಪ್ರವೇಶವನ್ನು ನೀಡುತ್ತದೆ. ಇನ್ನು ಈ ಹೊಸ ಸೇವೆಯು ವಿ ಅಪ್ಲಿಕೇಶನ್‌ನಲ್ಲಿನ ಗೇಮ್ಸ್‌ ಟ್ಯಾಬ್ ಮೂಲಕ ಲಭ್ಯವಿರುತ್ತದೆ. ಇದರಲ್ಲಿ ಆಕ್ಷನ್, ಸಾಹಸ, ಆರ್ಕೇಡ್, ಕ್ಯಾಶುಯಲ್, ಶಿಕ್ಷಣ, ವಿನೋದ, ಒಗಟು, ರೇಸಿಂಗ್, ಕ್ರೀಡೆಗಳು ಮತ್ತು ತಂತ್ರಗಳನ್ನು ಒಳಗೊಂಡಿರುವ 10 ಜನಪ್ರಿಯ ಪ್ರಕಾರಗಳು ಲಭ್ಯವಿರುತ್ತದೆ. ಹಾಗಾದ್ರೆ ವಿ ಟೆಲಿಕಾಂ ಪರಿಚಯಿಸಿರುವ ಹೊಸ ವಿ ಗೇಮ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿ ಗೇಮ್ಸ್‌

ವಿ ಟೆಲಿಕಾಂನ ಹೊಸ ವಿ ಗೇಮ್ಸ್‌ ವಿ ಅಪ್ಲಿಕೇಶನ್‌ನಲ್ಲಿ 1,200 ಮೊಬೈಲ್ ಗೇಮ್‌ಗಳಿಗೆ ಪ್ರವೇಶವನ್ನು ನೀಡಲಿದೆ. ಇದು ಆಂಡ್ರಾಯ್ಡ್ ಮತ್ತು HTML5-ಆಧಾರಿತ ಮೊಬೈಲ್ ಗೇಮ್‌ಗಳ ತಲ್ಲೀನಗೊಳಿಸುವ ಗೇಮಿಂಗ್ ಅನುಭವವನ್ನು ನೀಡಲಿದೆ. ಇದಲ್ಲದೆ, ವಿ ಗೇಮ್ಸ್‌ ಸೇವೆ ಆರಂಭದಲ್ಲಿ ಕ್ಯಾಶುಯಲ್ ಗೇಮಿಂಗ್ ವಿಷಯವನ್ನು ಹೊಂದಿರುತ್ತದೆ. ಜೊತೆಗೆ ಭವಿಷ್ಯದಲ್ಲಿ ಕ್ರಮೇಣವಾಗಿ ಸಾಮಾಜಿಕ ಗೇಮಿಂಗ್ ಮತ್ತು ಇಸ್ಪೋರ್ಟ್ಸ್ ಈವೆಂಟ್‌ಗಳನ್ನು ಹೋಸ್ಟ್ ಮಾಡುವ ಸಾಮರ್ಥ್ಯವನ್ನು ಒಳಗೊಂಡಿರುತ್ತದೆ ಎನ್ನಲಾಗ್ತಿದೆ.

ಗೇಮ್ಸ್‌

ಇನ್ನು ವಿ ಟೆಲಿಕಾಂನ ಹೊಸ ವಿ ಗೇಮ್ಸ್‌ನಲ್ಲಿನ ವಿಷಯವು ಫ್ರೀ ಗೇಮ್ಸ್‌, ಪ್ಲಾಟಿನಂ ಗೇಮ್ಸ್‌ ಮತ್ತು ಗೋಲ್ಡ್ ಗೇಮ್ಸ್‌ಗಳನ್ನು ಒಳಗೊಂಡಿರುವ ಮೂರು ವಿಭಾಗಗಳ ಭಾಗವಾಗಿ ಲಭ್ಯವಿರುತ್ತದೆ ಎಂದು ವಿ ಟೆಲಿಕಾಂ ಹೇಳಿಕೊಂಡಿದೆ. ಹಾಗೆಯೇ ವಿ ಗೇಮ್ಸ್‌ 250 ಕ್ಕೂ ಹೆಚ್ಚು ಫ್ರೀ ಗೇಮ್‌ಗಳನ್ನು ಆಯೋಜಿಸುತ್ತದೆ. ಇದಕ್ಕಾಗಿ ಯಾವುದೇ ಶುಲ್ಕಗಳು ಅಥವಾ ಗೇಮ್‌ನಲ್ಲಿನ ಖರೀದಿಗಳನ್ನು ಹೊಂದಿರುವುದಿಲ್ಲ ಎಂದು ಕಂಪನಿ ಹೇಳಿದೆ. ಇನ್ನು ಪ್ಲಾಟಿನಮ್ ಗೇಮ್ಸ್ ಪ್ಲಾಟಿನಮ್ ಪಾಸ್ ಮೂಲಕ ಪೇ ಪರ್ ಡೌನ್‌ಲೋಡ್ ಆಧಾರದ ಮೇಲೆ ಲಭ್ಯವಿರುತ್ತದೆ. ಇದು ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ 25ರೂ. ಮತ್ತು ಪ್ರಿಪೇಯ್ಡ್ ಬಳಕೆದಾರರಿಗೆ 26ರೂ. ಶುಲ್ಕದಲ್ಲಿ ದೊರೆಯಲಿದೆ.

ವಿ ಗೇಮ್ಸ್‌

ಇದಲ್ಲದೆ ವಿ ಗೇಮ್ಸ್‌ ಗೋಲ್ಡ್ ಗೇಮ್ಸ್ ಗೋಲ್ಡ್ ಪಾಸ್ ಮೂಲಕ ಲಭ್ಯವಾಗಲಿದೆ. ಇದು ಪೋಸ್ಟ್‌ಪೇಯ್ಡ್ ಚಂದಾದಾರರಿಗೆ 50ರೂ. ಮತ್ತು ಪ್ರಿಪೇಯ್ಡ್ ಚಂದಾದಾರರಿಗೆ 56ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಇದರಲ್ಲಿ ನೀವು 30 ಗೋಲ್ಡ್ ಗೇಮ್‌ಗಳನ್ನು ಪ್ರವೇಶಿಸಬಹುದಾಗಿದೆ. ಇದು ನಿಮಗೆ 30 ದಿನಗಳ ವ್ಯಾಲಿಡಿಟಿಯೊಂದಿಗೆ ಬರಲಿದೆ. ಇನ್ನು ಹೆಚ್ಚುವರಿಯಾಗಿ, 499ರೂ ಬೆಲೆಯ ಯೋಜನೆಗಳನ್ನು ಆಯ್ಕೆ ಮಾಡುವ ಪೋಸ್ಟ್‌ಪೇಯ್ಡ್ ಬಳಕೆದಾರರು ಪ್ರತಿ ತಿಂಗಳು ಐದು ಫ್ರೀ ಗೋಲ್ಡ್‌ ಗೇಮ್‌ಗಳಿಗೆ ಪ್ರವೇಶವನ್ನು ಪಡೆದಯಲಿದ್ದಾರೆ.

ಗೇಮಿಂಗ್

ನಾವು ಗೇಮಿಂಗ್ ಅನ್ನು ನಮ್ಮ ಡಿಜಿಟಲ್ ಕಂಟೆಂಟ್ ತಂತ್ರದ ಪ್ರಮುಖ ಫೋಕಸ್ ಪ್ರದೇಶವಾಗಿ ನೋಡುತ್ತೇವೆ. ಪ್ರಾಸಂಗಿಕ ಮತ್ತು ಗಂಭೀರ ಗೇಮರುಗಳಿಗಾಗಿ Vi ಅನ್ನು ಆದ್ಯತೆಯ ತಾಣವಾಗಿ ಸ್ಥಾಪಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ವಿ ಟೆಲಿಕಾಂ ಹೇಳಿಕೊಂಡಿದೆ. ಇದಕ್ಕಾಗಿ Nazara ಟೆಕ್ನಾಲಜೀಸ್‌ನೊಂದಿಗಿನ ನಮ್ಮ ಪಾಲುದಾರಿಕೆಯು ನಮ್ಮ ಬಳಕೆದಾರರಿಗೆ Vi ಅಪ್ಲಿಕೇಶನ್‌ನಲ್ಲಿ ಲಭ್ಯವಿರುವ ವಿಶೇಷ ಗೇಮ್‌ಗಳ ಅತ್ಯುತ್ತಮ ಅನುಭವವನ್ನು ನೀಡಲಿದೆ ಎಂದು ವೊಡಾಫೋನ್ ಐಡಿಯಾ, ಮುಖ್ಯ ಮಾರ್ಕೆಟಿಂಗ್ ಅಧಿಕಾರಿ, ಅವನೀಶ್ ಖೋಸ್ಲಾ ವಿ ಗೇಮ್ಸ್‌ ಘೋಷಣೆಯ ಸಂದರ್ಭದಲ್ಲಿ ತಿಳಿಸಿದ್ದಾರೆ.

Best Mobiles in India

English summary
Vi Games Now Offers Free Games From Disney And Pixar In India Via Vi App

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X