ವಿ ಟೆಲಿಕಾಂನಿಂದ ಹೊಸ ಪ್ರಿಪೇಯ್ಡ್‌ ಪ್ಲಾನ್‌ ಲಾಂಚ್‌! ಏನೆಲ್ಲಾ ಪ್ರಯೋಜನ?

|

ದೇಶದ ಟೆಲಿಕಾಂ ವಲಯದಲ್ಲಿ ಖಾಸಗಿ ಟೆಲಿಕಾಂ ಸಂಸ್ಥೆಗಳು ಮುಂಚೂಣಿಯಲ್ಲಿ ಗುರುತಿಸಿಕೊಂಡಿವೆ. ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಹೊಸ ಹೊಸ ಪ್ಲಾನ್‌ಗಳನ್ನು ಪರಿಚಯಿಸುತ್ತಲೇ ಬಂದಿವೆ. ಈ ಪೈಕಿ ವಿ ಟೆಲಿಕಾಂ ಸಹ ಹಲವು ರೀಚಾರ್ಜ್‌ ಪ್ಲಾನ್‌ಗಳನ್ನು ಪರಿಚಯಿಸಿದೆ. ಇವುಗಳಲ್ಲಿ ಅಗ್ಗದ ಬೆಲೆಯಿಂದ ಹಿಡಿದು ದುಬಾರಿ ಬೆಲೆಯ ಪ್ಲಾನ್‌ಗಳನ್ನು ಸಹ ಒಳಗೊಂಡಿದೆ. ಇದೀಗ ವಿ ಟೆಲಿಕಾಂ ಒಂದು ವರ್ಷದ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಮೊಬೈಲ್‌ ಜೊತೆಗೆ ಪ್ರಿಪೇಯ್ಡ್‌ ರೀಚಾರ್ಜ್‌ ಪ್ಲಾನ್‌ ಅನ್ನು ಪ್ರಾರಂಭಿಸಿದೆ.

ವಿ ಟೆಲಿಕಾಂ

ಹೌದು, ವಿ ಟೆಲಿಕಾಂ ಒಂದು ವರ್ಷದ ಡಿಸ್ನಿ+ ಹಾಟ್ ಸ್ಟಾರ್ ಮೊಬೈಲ್ ಜೊತೆಗೆ ಹೊಸ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್‌ಗಳನ್ನು ಪರಿಚಯಿಸಿದೆ. ಈ ಹೊಸ ಪ್ಲಾನ್‌ಗಳು 501ರೂ, ಮತ್ತು 2,595ರೂ ಬೆಲೆಯನ್ನು ಹೊಂದಿವೆ. ಈ ಹೊಸ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್‌ಗಳೊಂದಿಗೆ ಡೇಟಾ ಹಂಚಿಕೆ, ಅನಿಯಮಿತ ಧ್ವನಿ ಕರೆಗಳು ಮತ್ತು ಉಚಿತ SMS ಪ್ರಯೋಜನಗಳನ್ನು ನೀಡಲಿದೆ. ಇದರೊಂದಿಗೆ ವಿ ಟೆಲಿಕಾಂ ತನ್ನ ಹಳೆಯ ಪ್ರಿಪೇಯ್ಡ್ ಯೋಜನೆಗಳಿಗೆ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ಸೇರಿಸಿದೆ. ಹಾಗಾದ್ರೆ ವಿ ಟೆಲಿಕಾಂನ ಹೊಸ ಪ್ಲಾನ್‌ ವಿವರ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್‌ ಪ್ಲಾನ್‌ ಜೊತೆಗೆ ವಿ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್‌

ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್‌ ಪ್ಲಾನ್‌ ಜೊತೆಗೆ ವಿ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್‌

ವಿ ಟೆಲಿಕಾಂ ನಾಲ್ಕು ಹೊಸ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್‌ಗಳನ್ನು ಒಂದು ವರ್ಷದ ಡಿಸ್ನಿ+ ಹಾಟ್ ಸ್ಟಾರ್ ಮೊಬೈಲ್ ನೊಂದಿಗೆ ನೀಡುತ್ತಿದೆ. ಇದರಲ್ಲಿ 501ರೂ ಗಳ ಪ್ರಿಪೇಯ್ಡ್‌ ಕೂಡ ಒಂದಾಗಿದೆ. ಇದು ಅನಿಯಮಿತ ಕರೆಗಳು, ದಿನಕ್ಕೆ 100 SMS ಮತ್ತು 75GB ಡೇಟಾವನ್ನು 56 ದಿನಗಳ ಮಾನ್ಯತೆಯೊಂದಿಗೆ ನೀಡಲಿದೆ.

ವಿ 701ರೂ ಪ್ರಿಪೇಯ್ಡ್‌ ಪ್ಲಾನ್‌

ವಿ 701ರೂ ಪ್ರಿಪೇಯ್ಡ್‌ ಪ್ಲಾನ್‌

ಇನ್ನು ಡಿಸ್ನಿ+ ಹಾಟ್ ಸ್ಟಾರ್ ಮೊಬೈಲ್ ಪ್ಲಾನ್‌ ಅನ್ನು ಒಂದು ವರ್ಷಕ್ಕೆ ತರುವ ನೀಡುವ ಎರಡನೇ ವಿ ಪ್ರಿಪೇಯ್ಡ್ ಪ್ಲಾನ್‌ ಇದಾಗಿದೆ. ಇದು ಅನಿಯಮಿತ ವಾಯ್ಸ್‌ ಕಾಲ್‌ಗಳು ಮತ್ತು ದಿನಕ್ಕೆ ನೂರು ಎಸ್‌ಎಂಎಸ್‌ ಪ್ರಯೋಜನಗಳನ್ನು ಒಳಗೊಂಡಿದೆ. ಜೊತೆಗೆ 3GB ದೈನಂದಿನ ಡೇಟಾ ಮತ್ತು 32GB ಹೆಚ್ಚುವರಿ ಡೇಟಾವನ್ನು 56 ದಿನಗಳವರೆಗೆ ನೀಡಲಿದೆ.

ವಿ 901ರೂ, ಪ್ರಿಪೇಯ್ಡ್ ಪ್ಲಾನ್‌

ವಿ 901ರೂ, ಪ್ರಿಪೇಯ್ಡ್ ಪ್ಲಾನ್‌

ವಿ 901ರೂ, ಪ್ರಿಪೇಯ್ಡ್ ಪ್ಲಾನ್‌ ಅನಿಯಮಿತ ವಾಯ್ಸ್‌ ಕಾಲ್‌ , 100 ಎಸ್‌ಎಂಎಸ್‌ ಮತ್ತು 3GB ದೈನಂದಿನ ಡೇಟಾ ಹಾಗೂ 48GB ಹೆಚ್ಚುವರಿ ಡೇಟಾವನ್ನು 84 ದಿನಗಳ ಮಾನ್ಯತೆಯೊಂದಿಗೆ ನೀಡಲಿದೆ. ಜೊತೆಗೆ ಒಂದು ವರ್ಷದ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಮೊಬೈಲ್‌ ಪ್ಲಾನ್‌ ನೀಡಲಿದೆ.

ವಿ 2,595ರೂ, ಪ್ರಿಪೇಯ್ಡ್ ಪ್ಲಾನ್‌

ವಿ 2,595ರೂ, ಪ್ರಿಪೇಯ್ಡ್ ಪ್ಲಾನ್‌

ಇನ್ನು ವಾರ್ಷಿಕ ಪ್ಲಾನ್‌ ಆಯ್ಕೆ ಮಾಡಿಕೊಳ್ಳುವವರಿಗೆ ವಿ 2,595ರೂ, ಪ್ರಿಪೇಯ್ಡ್ ಪ್ಲಾನ್‌ ಸೂಕ್ತವಾಗಿದೆ. ಇದು ಅನಿಯಮಿತ ವಾಯ್ಸ್‌ ಕಾಲ್‌, ದಿನಕ್ಕೆ 100 SMS ಮತ್ತು 365 ದಿನಗಳವರೆಗೆ 1.5GB ದೈನಂದಿನ ಡೇಟಾ ಪ್ರಯೋಜನಗಳನ್ನು ನೀಡುತ್ತದೆ. ಜೊತೆಗೆ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಮೊಬೈಲ್‌ ಪ್ಲಾನ್‌ ಅನ್ನು ಒಂದು ವರ್ಷದ ಅವಧಿಗೆ ನೀಡಲಿದೆ.

ಪ್ರಿಪೇಯ್ಡ್

ಇನ್ನು ಈ ಎಲ್ಲಾ ನಾಲ್ಕು ವಿ ಪ್ರಿಪೇಯ್ಡ್ ಯೋಜನೆಗಳು 'ಬಿಂಜ್ ಆಲ್ ನೈಟ್' ಆಫರ್‌ ಅನ್ನು ಒಳಗೊಂಡಿವೆ. ಈ ಆಫರ್‌ ಅಡಿಯಲ್ಲಿ ಬೆಳಿಗ್ಗೆ ಮಧ್ಯರಾತ್ರಿ 12 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಅನಿಯಮಿತ ಡೇಟಾ ನಿಮಗೆ ದೊರೆಯಲಿದೆ. ಅಲ್ಲದೆ ವಾರಾಂತ್ಯದಲ್ಲಿ ಗ್ರಾಹಕರ ದೈನಂದಿನ ಬಳಕೆಯಾಗದ ಡೇಟಾವನ್ನು ಬಳಸುವುದಕ್ಕೆ ಅವಕಾಶ ಕೂಡ ದೊರೆಯಲಿದೆ. ಇದಲ್ಲದೆ, ವಿ ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು, ಲೈವ್ ಟಿವಿ ಮತ್ತು ಸುದ್ದಿಗಳನ್ನು ಹೊಂದಿರುವ ವಿ ಮೂವೀಸ್ ಮತ್ತು ಟಿವಿ ಕ್ಲಾಸಿಕ್ ಸೇವೆಗೆ ಪ್ರವೇಶವನ್ನು ನೀಡುತ್ತಿದೆ.

Most Read Articles
Best Mobiles in India

English summary
Alongside new prepaid plans, Vi has brought a Rs. 601 data add-on plan with one year of Disney+ Hotstar Mobile subscription as well as 75GB data for 56 days.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X