ಬಳಕೆದಾರರಿಗೆ ಡೇಟಾ ಡಿಲೈಟ್‌ ಆಫರ್‌ ಘೋಷಣೆ ಮಾಡಿದ ವಿ ಟೆಲಿಕಾಂ!

|

ವಿ ಟೆಲಿಕಾಂ ದೇಶದ ಟಿಲಿಕಾಂ ವಲಯದಲ್ಲಿ ಮುಂಚೂಣಿಯಲ್ಲಿರುವ ಕಾಣಿಸಿಕೊಂಡಿರುವ ಕಂಪೆನಿಗಳಲ್ಲಿ ಒಂದಾಗಿದೆ. ತನ್ನ ಆಕರ್ಷಕ ಪ್ರಿಪೇಯ್ಡ್‌ ಪ್ಲಾನ್‌ಗಳ ಮೂಲಕ ಏರ್‌ಟೆಲ್‌ ಮತ್ತು ಜಿಯೋ ಟೆಲಿಕಾಂ ಜೊತೆ ಪೈಪೋಟಿ ನಡೆಸುತ್ತಿದೆ. ಇನ್ನು ತನ್ನ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈಗಾಗಲೇ ಹಲವು ಪ್ರಿಪೇಯ್ಡ್‌ ಮತ್ತು ಪೋಸ್ಟ್‌ಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸಿದೆ. ಸದ್ಯ ಇದೀಗ ತನ್ನ ಹೀರೋ ಅನ್‌ಲಿಮಿಟೆಡ್ ಡೇಟಾ ರೀಚಾರ್ಜ್ ಪ್ಲಾನ್‌ಗಳಿಗಾಗಿ ಡೇಟಾ ಡಿಲೈಟ್ ಆಫರ್‌ ಅನ್ನು ಅನಾವರಣಗೊಳಿಸಿದೆ.

ವಿ ಟೆಲಿಕಾಂ

ಹೌದು, ವಿ ಟೆಲಿಕಾಂ ತನ್ನ ಬಳಕೆದಾರರಿಗೆ ಡೇಟಾ ಡಿಲೈಟ್‌ ಆಫರ್‌ ಅನ್ನು ಪರಿಚಯಿಸಿದೆ. ಇದರಿಂದ ವಿ ಟೆಲಿಕಾಂ ಬಳಕೆದಾರರು ಪ್ರತಿ ತಿಂಗಳು 2GB ವರೆಗೆ ಹೆಚ್ಚುವರಿ ಡೇಟಾವನ್ನು ಪಡೆದುಕೊಳ್ಳಬಹುದು. ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ದೈನಂದಿನ ಡೇಟಾ ಮಿತಿಯ ಮೇಲೆ ಒದಗಿಸಲಾಗುತ್ತದೆ. ಆದರೆ ಈ ಆಫರ್‌ ಸ್ವಯಂಚಾಲಿತವಾಗಿ ಸಕ್ರಿಯಗೊಳ್ಳುವುದಿಲ್ಲ ಎನ್ನಲಾಗಿದೆ. ಹಾಗಾದ್ರೆ ವೋಡಾಫೋನ್‌ ಐಡಿಯಾದ ಡೇಟಾ ಡಿಲೈಟ್‌ ಆಫರ್‌ನ ವಿಶೇಷತೆ ಏನು? ಇದನ್ನು ಸಕ್ರಿಯಗೊಳಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿ ಟೆಲಿಕಾಂ

ವಿ ಟೆಲಿಕಾಂ ಹೀರೋ ಅನ್‌ಲಿಮಿಟೆಡ್ ಡೇಟಾ ಪ್ಲಾನ್‌ಗಳಿಗಾಗಿ ಪರಿಚಯಿಸಿರುವ ಡೇಟಾ ಡಿಲೈಟ್‌ ಆಫರ್‌ ಪಡೆಯಲು ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಯಿಂದ 121249 ಅನ್ನು ಡಯಲ್ ಮಾಡಬೇಕಾಗುತ್ತದೆ. ಇಲ್ಲವೇ ವಿ ಅಪ್ಲಿಕೇಶನ್ ಮೂಲಕ ಈ ಆಫರ್‌ ಅನ್ನು ಸಕ್ರಿಯಗೊಳಿಸಬೇಕಾಗುತ್ತದೆ. ಇನ್ನು ವಿ ಟೆಲಿಕಾಂನ ಹೀರೋ ಅನ್‌ಲಿಮಿಟೆಡ್ ಪ್ಲಾನ್‌ಗಳು ವಿಕೆಂಡ್‌ ಡೇಟಾ ರೋಲ್‌ಓವರ್ ಮತ್ತು ಡೈಲಿ ಅನ್‌ಲಿಮಿಟೆಡ್‌ ನೈಟ್‌ ಟೈಂ ಡೇಟಾವನ್ನು ಸಹ ನೀಡುತ್ತವೆ.

ವಿ ಟೆಲಿಕಾಂ

ಇನ್ನು ವಿ ಟೆಲಿಕಾಂ ಅನ್‌ಲಿಮಿಟೆಡ್‌ ಹಿರೋ ಪ್ಲಾನ್‌ಗಳು 299ರೂ.ಗಳಿಂದ ಪ್ರಾರಂಭವಾಗಲಿದೆ. ಇದಲ್ಲದೆ 359ರೂ. 409ರೂ ಮತ್ತು 475ರೂ. ಬೆಲೆಯಲ್ಲಿ ಡೇಟಾ ರೀಚಾರ್ಜ್ ಪ್ಲಾನ್‌ಗಳು ಲಭ್ಯವಾಗಲಿವೆ. ಇನ್ನು ಡೇಟಾ ಡಿಲೈಟ್ ಆಫರ್‌ನಲ್ಲಿ ದೈನಂದಿನ ಡೇಟಾ ಮಿತಿಯಲ್ಲಿ ಪ್ರತಿ ತಿಂಗಳು 2GB ಡೇಟಾವನ್ನು ಒದಗಿಸುತ್ತದೆ. ಇದಲ್ಲದೆ, ಅನ್‌ಲಿಮಿಟೆಡ್ ಹೀರೋ ಪ್ಲಾನ್‌ಗಳು ಬಿಂಜ್ ಆಲ್ ನೈಟ್ ಪ್ರಯೋಜನವನ್ನು ನೀಡಲಿವೆ. ಇದು ಪ್ರಿಪೇಯ್ಡ್ ಗ್ರಾಹಕರಿಗೆ ರಾತ್ರಿ 12 ರಿಂದ ಬೆಳಗ್ಗೆ 6 ರ ನಡುವೆ ಅನಿಯಮಿತ ಹೈ-ಸ್ಪೀಡ್ ಡೇಟಾಗೆ ಪ್ರವೇಶವನ್ನು ನೀಡಲಿದೆ.

ವಿ ಟೆಲಿಕಾಂ

ಇದಲ್ಲದೆ ವಿ ಟೆಲಿಕಾಂ ಇತ್ತೀಚಿಗೆ 82ರೂ. ಬೆಲೆಯ ಹೊಸ ಪ್ರಿಪೇಯ್ಡ್ ಆಡ್-ಆನ್ ಪ್ಲಾನ್‌ ಪರಿಚಯಿಸಿದೆ. ಈ ಪ್ಲಾನ್‌ 28 ದಿನಗಳ ಮಾನ್ಯತೆಹೊಂದಿರುವ ಸೋನಿಲೈವ್‌ ಪ್ರೀಮಿಯಂ ಮೊಬೈಲ್-ಒನ್ಲಿ ಚಂದಾದಾರಿಕೆ ಯನ್ನು ನೀಡಲಿದೆ. ಸೋನಿಲೈವ್‌ ಜೊತೆಗೆ ವಿ ಟೆಲಿಕಾಂ ಪಾಲುದಾರಿಕೆಯನ್ನು ಹೊಂದಿರುವುದರಿಂದ ಈ ಪ್ಲಾನ್‌ ಪರಿಚಯಿಸಲಾಗಿದೆ. ಇನ್ನು ಈ ಪ್ಲಾನ್‌ ಪ್ರಿಪೇಯ್ಡ್ ಗ್ರಾಹಕರಿಗೆ ಹೊಸ OTT ವಿಷಯದ ಹೊಸ ಪಟ್ಟಿಯನ್ನು ಒದಗಿಸುವ ಗುರಿಯನ್ನು ಹೊಂದಿದೆ.

ವಿ ಟೆಲಿಕಾಂ

ವಿ ಟೆಲಿಕಾಂ 82ರೂ. ಪ್ರಿಪೇಯ್ಡ್‌ ಪ್ಲಾನ್‌ ಸೋನಿಲೈವ್‌ ಪ್ರೀಮಿಯಂ ಮೊಬೈಲ್‌ ಓನ್ಲಿ ಚಂದಾದಾರಿಕೆ ನೀಡಲಿದೆ. ಇನ್ನು ವಿ ಟೆಲಿಕಾಂ ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ ವಿ ಮೂವೀಸ್‌ ಮತ್ತು ಟಿವಿ ​​ಚಂದಾದಾರಿಕೆಯನ್ನು ಸಹ ನೀಡಲಿದೆ. ಜೊತೆಗೆ ಇತರ OTT ಅಪ್ಲಿಕೇಶನ್‌ಗಳಿಂದ ಪ್ರೀಮಿಯಂ ವಿಷಯ ಸೇರಿದಂತೆ 450 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳಿಗೆ ಪ್ರವೇಶವನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಇನ್ನು 82ರೂ.ಗಳ ವಿ ಪ್ರಿಪೇಯ್ಡ್ ಆಡ್-ಆನ್ ಪ್ಯಾಕ್ UEFA ಚಾಂಪಿಯನ್ಸ್ ಲೀಗ್, WWE, ಬುಂಡೆಸ್ಲಿಗಾ ಮತ್ತು UFC ನಂತಹ ವಿವಿಧ ಕ್ರೀಡಾ ಸ್ಟ್ರೀಮ್‌ಗಳಿಗೆ ಪ್ರವೇಶವನ್ನು ನೀಡಲಿದೆ. ಇನ್ನು ಈ ಪ್ಲಾನ್‌ನಲ್ಲಿ ಲಭ್ಯವಾಗುವ ಸೋನಿಲೈವ್‌ ಚಂದಾದಾರಿಕೆ ಪ್ರಯೋಜನ ಕೇವಲ ಮೊಬೈಲ್ ಡಿವೈಸ್‌ಗಳಿಗೆ ಮಾತ್ರ ಸೀಮಿತವಾಗಿದೆ.

Best Mobiles in India

English summary
Vi Hero Unlimited Prepaid Plan With Data Delight Offer Launched

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X