ಹೊಸ ಇಂಟರ್‌ನ್ಯಾಷನಲ್‌ ರೂಮಿಂಗ್‌ ಪ್ಲಾನ್‌ ಪರಿಚಯಿಸಿದ ವಿ ಟೆಲಿಕಾಂ!

|

ದೇಶದ ಅಗ್ರ ಮೂರು ಟೆಲಿಕಾಂಗಳಲ್ಲಿ ವಿ ಟೆಲಿಕಾಂ ಕೂಡ ಒಂದಾಗಿದೆ. ವಿ ಟೆಲಿಕಾಂ ಈಗಾಗಲೇ ಏರ್‌ಟೆಲ್‌, ಜಿಯೋ ಟೆಲಿಕಾಂಗಳ ಜೊತೆಗೆ ಪೈಪೋಟಿ ನಡೆಸುತ್ತಿದೆ. ಇದೇ ಕಾರಣಕ್ಕೆ ವಿಶೇಷ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ತನ್ನ ಗ್ರಾಹಕರಿಗಾಗಿ ಹೊಸ ಇಂಟರ್‌ನ್ಯಾಷನಲ್‌ ಅನ್‌ಲಿಮಿಟೆಡ್‌ ರೂಮಿಂಗ್‌ ಪ್ಲಾನ್‌ಗಳನ್ನು ಪರಿಚಯಿಸಿದೆ. ಈ ಪ್ಲಾನ್‌ಗಳು 599ರೂ. ಮತ್ತು 5,999ರೂ.ಬೆಲೆಯಲ್ಲಿ ಬರಲಿವೆ.

ವಿ ಟೆಲಿಕಾಂ

ಹೌದು, ವಿ ಟೆಲಿಕಾಂ 599ರೂ. ಮತ್ತು 5,999ರೂ.ಬೆಲೆಯ ಇಂಟರ್‌ ನ್ಯಾಷನಲ್‌ ಅನ್‌ಲಿಮಿಟೆಡ್‌ ಪ್ಲಾನ್‌ಗಳನ್ನು ಪರಿಚಯಿಸಿದೆ. ಇದರಲ್ಲಿ 599ರೂ.ಬೆಲೆಯ ಪ್ಲಾನ್‌ 24 ಗಂಟೆಗಳ ಮಾನ್ಯತೆಯನ್ನು ಹೊಂದಿದೆ. 5999ರೂ.ಬೆಲೆಯ ಪ್ಲಾನ್‌ 28 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತದೆ. ಇನ್ನು ಈ ಎರಡು ಪ್ಲಾನ್‌ಗಳು ಯುಎಇ, ಯುಕೆ, ಯುಎಸ್, ಫ್ರಾನ್ಸ್, ಜರ್ಮನಿ, ಇಂಡೋನೇಷ್ಯಾ, ಇಟಲಿ, ಆಸ್ಟ್ರೇಲಿಯಾ, ಥೈಲ್ಯಾಂಡ್ ಮತ್ತು ಬ್ರೆಜಿಲ್‌ನಂತಹ ದೇಶಗಳಿಗೆ ಪ್ರಯಾಣಿಸುವ ಗ್ರಾಹಕರು ಆಯ್ಕೆ ಮಾಡಬಹುದಾಗಿದೆ. ಇನ್ನುಳಿದಂತೆ ಈ ಪ್ಲಾನ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಿ ಟೆಲಿಕಾಂ

ವಿ ಟೆಲಿಕಾಂ ಹೊಸದಾಗಿ ಪರಿಚಯಿಸಿರುವ ಇಂಟರ್‌ನ್ಯಾಷನಲ್‌ ಅನ್‌ಲಿಮಿಟೆಡ್‌ ರೋಮಿಂಗ್‌ ಪ್ಲಾಕ್‌ಗಳು ಅನಿಯಮಿತ ಧ್ವನಿ ಕರೆ ಬೆಂಬಲ ಮತ್ತು ಪ್ರಯಾಣದ ಸ್ಥಳಗಳಾದ್ಯಂತ ರೋಮಿಂಗ್ ನೆಟ್‌ವರ್ಕ್‌ಗಳಲ್ಲಿ ಡೇಟಾವನ್ನು ನೀಡುತ್ತದೆ. ಇದಲ್ಲದೆ ವಿ ಪೋಸ್ಟ್‌ಪೇಯ್ಡ್ ರೋಮಿಂಗ್ ಪ್ಯಾಕ್‌ಗಳು ಆಲ್‌ವೇಸ್‌ ಆನ್ ಫೀಚರ್ಸ್‌ನೊಂದಿಗೆ ಬರಲಿವೆ. ಇದು ಚಂದಾದಾರರ ಪ್ಯಾಕ್‌ನ ಅವಧಿ ಮುಗಿದ ನಂತರವೂ ಅಂತರರಾಷ್ಟ್ರೀಯ ರೋಮಿಂಗ್‌ನಲ್ಲಿರುವಾಗ ಅತಿಯಾದ ದರಗಳನ್ನು ತಡೆಯಲು ಉದ್ದೇಶಿಸಲಾಗಿದೆ.

ವಿ ಟೆಲಿಕಾಂ

ಪ್ರಸ್ತುತ, ವಿ ಟೆಲಿಕಾಂ ಸ್ಥಳಿಯ ಸೇವಾ ಪೂರೈಕೆದಾರರೊಂದಿಗೆ 81 ದೇಶಗಳಲ್ಲಿ ರೋಮಿಂಗ್ ಸೇವೆಗಳನ್ನು ಒದಗಿಸುತ್ತದೆ. ಅಲ್ಲದೆ ಚಂದಾದಾರರ ಪ್ಲಾನ್‌ಗಳ ಮಾನ್ಯತೆ ಮುಗಿದ ನಂತರವೂ ಚಂದಾದಾರರಿಗೆ ಹೆಚ್ಚಿನ ಶುಲ್ಕ ವಿಧಿಸುವುದಿಲ್ಲ, ಇದಕ್ಕಾಗಿ ಆಲ್‌ವೇಸ್‌ ಆನ್ ಫೀಚರ್ಸ್‌ ಅನ್ನು ಅನಾವರಣಗೊಳಿಸಿದೆ. ಸದ್ಯ ವಿ ಟೆಲಿಕಾಂ ಪರಿಚಯಿಸಿರುವ 599ರೂ.ಬೆಲೆಯ ಪ್ಲಾನ್‌ 24 ಗಂಟೆಗಳ ಮಾನ್ಯತೆಯನ್ನು ಹೊಂದಿದೆ. 5999ರೂ.ಬೆಲೆಯ ಪ್ಲಾನ್‌ 28 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತದೆ.

ವಿ ಟೆಲಿಕಾಂ

ಇದಲ್ಲದೆ ವಿ ಟೆಲಿಕಾಂ ಭಾರತದಲ್ಲಿ 151ರೂ.ಗಳ ಹೊಸ ಪ್ರಿಪೇಯ್ಡ್‌ ಆಡ್‌ ಆನ್‌ ಪ್ಲಾನ್‌ ಅನ್ನು ಪರಿಚಯಿಸಿದೆ. ಈ ಹೊಸ ಪ್ರಿಪೇಯ್ಡ್‌ ಪ್ಲಾನ್‌ನಲ್ಲಿ ಒಟಿಟಿ ಪ್ರಯೋಜನವನ್ನು ಕೂಡ ಪಡೆಯಬಹುದಾಗಿದೆ.ವಿ ಟೆಲಿಕಾಂನ 151ರೂ.ಗಳ ಹೊಸ ಪ್ರಿಪೇಯ್ಡ್‌ ಪ್ಲಾನ್‌ನಲ್ಲಿ ಯಾವುದೇ ಕರೆಗಳು ಅಥವಾ SMS ಪ್ರಯೋಜನಗಳು ಲಭ್ಯವಿಲ್ಲ. ಇದರಲ್ಲಿ ಕೇವಲ ಡೇಟಾ ಪ್ರಯೋಜನವನ್ನು ಮಾತ್ರ ಪಡೆಯಬಹುದಾಗಿದೆ. ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆ ಮತ್ತು ಕೆಲವು ಡೇಟಾವನ್ನು ಬಯಸುವವರಿಗೆ ಈ ಬಜೆಟ್ ಪ್ರಿಪೇಯ್ಡ್ ಯೋಜನೆಯನ್ನು ಪ್ರಾರಂಭಿಸಿದೆ. ಇದು ಮೂರು ತಿಂಗಳ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯೊಂದಿಗೆ ಬರುತ್ತದೆ. ಅಲ್ಲದೆ ಈ ಪ್ಲಾನ್‌ನಲ್ಲಿ ಗ್ರಾಹಕರು ಒಟ್ಟು 8GB ಡೇಟಾವನ್ನು ಸಹ ಪಡೆಯುತ್ತಾರೆ. ಈ ಪ್ಲಾನ್‌ ಯಾವುದೇ ಸೇವಾ ಮಾನ್ಯತೆಯನ್ನು ಹೊಂದಿಲ್ಲ ಎಂದು ವರದಿಯಾಗಿದೆ.

ಪ್ರಿಪೇಯ್ಡ್

ವಿ ಟೆಲಿಕಾಂ ಇತ್ತೀಚಿಗೆ 82ರೂ. ಬೆಲೆಯ ಹೊಸ ಪ್ರಿಪೇಯ್ಡ್ ಆಡ್-ಆನ್ ಪ್ಲಾನ್‌ ಪರಿಚಯಿಸಿದೆ. ಈ ಪ್ಲಾನ್‌ 28 ದಿನಗಳ ಮಾನ್ಯತೆಹೊಂದಿರುವ ಸೋನಿಲೈವ್‌ ಪ್ರೀಮಿಯಂ ಮೊಬೈಲ್-ಒನ್ಲಿ ಚಂದಾದಾರಿಕೆ ಯನ್ನು ನೀಡಲಿದೆ. ಸೋನಿಲೈವ್‌ ಜೊತೆಗೆ ವಿ ಟೆಲಿಕಾಂ ಪಾಲುದಾರಿಕೆಯನ್ನು ಹೊಂದಿರುವುದರಿಂದ ಈ ಪ್ಲಾನ್‌ ಪರಿಚಯಿಸಲಾಗಿದೆ. ಇನ್ನು ಈ ಪ್ಲಾನ್‌ ಪ್ರಿಪೇಯ್ಡ್ ಗ್ರಾಹಕರಿಗೆ ಹೊಸ OTT ವಿಷಯದ ಹೊಸ ಪಟ್ಟಿಯನ್ನು ಒದಗಿಸುವ ಗುರಿಯನ್ನು ಹೊಂದಿದೆ.

ವಿ ಟೆಲಿಕಾಂ

ಇನ್ನು ವಿ ಟೆಲಿಕಾಂ ಕೆಲವು ದಿನಗಳ ಹಿಂದೆ ತನ್ನ ಬಳಕೆದಾರರಿಗೆ ಡೇಟಾ ಡಿಲೈಟ್‌ ಆಫರ್‌ ಅನ್ನು ಪರಿಚಯಿಸಿದೆ. ಇದರಿಂದ ವಿ ಟೆಲಿಕಾಂ ಬಳಕೆದಾರರು ಪ್ರತಿ ತಿಂಗಳು 2GB ವರೆಗೆ ಹೆಚ್ಚುವರಿ ಡೇಟಾವನ್ನು ಪಡೆದುಕೊಳ್ಳಬಹುದು. ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ದೈನಂದಿನ ಡೇಟಾ ಮಿತಿಯ ಮೇಲೆ ಒದಗಿಸಲಾಗುತ್ತದೆ.

Best Mobiles in India

English summary
Vi launches new international roaming plans priced starting from Rs. 599

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X