ವಿ ಟೆಲಿಕಾಂನಿಂದ ಹೊಸ ಪ್ರಿಪೇಯ್ಡ್ ಆಡ್-ಆನ್ ಪ್ಯಾಕ್ ಘೋಷಣೆ! ವಿಶೇಷತೆ ಏನು?

|

ವೋಡಾಫೋನ್‌ ಐಡಿಯಾ ಭಾರತದ ಟೆಲಿಕಾಂ ವಲಯದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ಟೆಲಿಕಾಂಗಳಲ್ಲಿ ಒಂದಾಗಿದೆ. ಈಗಾಗಲೇ ತನ್ನ ಆಕರ್ಷಕ ಪ್ರಿಪೇಯ್ಡ್‌ ಮತ್ತು ಪೋಸ್ಟ್‌ಪೇಯ್ಡ್‌ ಪ್ಲಾನ್‌ಗಳ ಮೂಲಕ ಗಮನ ಸೆಳೆದಿದೆ. ಜಿಯೋ, ಏರ್‌ಟೆಲ್‌ ನಡುವೆ ಪೈಪೋಟಿಸುತ್ತಿರುವ ವಿ ಟೆಲಿಕಾಂ ಹೊಸ ಪ್ಲಾನ್‌ಗಳನ್ನು ಕೂಡ ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ 151ರೂ.ಬೆಲೆಯ ಹೊಸ ಪ್ರಿಪೇಯ್ಡ್ ಆಡ್-ಆನ್ ಪ್ಯಾಕ್ ಅನ್ನು ಬಿಡುಗಡೆ ಮಾಡಿದೆ.

ಟೆಲಿಕಾಂ

ಹೌದು, ವಿ ಟೆಲಿಕಾಂ ಭಾರತದಲ್ಲಿ 151ರೂ.ಗಳ ಹೊಸ ಪ್ರಿಪೇಯ್ಡ್‌ ಆಡ್‌ ಆನ್‌ ಪ್ಲಾನ್‌ ಅನ್ನು ಪರಿಚಯಿಸಿದೆ. ಈ ಹೊಸ ಪ್ರಿಪೇಯ್ಡ್‌ ಪ್ಲಾನ್‌ನಲ್ಲಿ ಒಟಿಟಿ ಪ್ರಯೋಜನವನ್ನು ಕೂಡ ಪಡೆಯಬಹುದಾಗಿದೆ. ಈ ಮೂಲಕ ಏರ್‌ಟೆಲ್‌ ಮತ್ತು ಜಿಯೋ ಟೆಲಿಕಾಂಗಳಿಗೆ ಸೆಡ್ಡು ಹೊಡೆಯಲು ಮುಂದಾಗಿದೆ. ಆದರೆ ಈ ಹೊಸ ಪ್ಲಾನ್‌ನಲ್ಲಿ ಯಾವುದೇ ರೀತಿಯ ಕರೆ ಹಾಗೂ ಎಸ್‌ಎಂ ಎಸ್‌ ಪ್ರಯೋಜನ ಲಭ್ಯವಾಗುವುದಿಲ್ಲ ಎನ್ನಲಾಗಿದೆ. ಹಾಗಾದ್ರೆ ವಿ ಟೆಲಿಕಾಂನ ಹೊಸ ಪ್ರಿಪೇಯ್ಡ್‌ ಪ್ಲಾನ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿ ಟೆಲಿಕಾಂ

ವಿ ಟೆಲಿಕಾಂನ 151ರೂ.ಗಳ ಹೊಸ ಪ್ರಿಪೇಯ್ಡ್‌ ಪ್ಲಾನ್‌ನಲ್ಲಿ ಯಾವುದೇ ಕರೆಗಳು ಅಥವಾ SMS ಪ್ರಯೋಜನಗಳು ಲಭ್ಯವಿಲ್ಲ. ಇದರಲ್ಲಿ ಕೇವಲ ಡೇಟಾ ಪ್ರಯೋಜನವನ್ನು ಮಾತ್ರ ಪಡೆಯಬಹುದಾಗಿದೆ. ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆ ಮತ್ತು ಕೆಲವು ಡೇಟಾವನ್ನು ಬಯಸುವವರಿಗೆ ಈ ಬಜೆಟ್ ಪ್ರಿಪೇಯ್ಡ್ ಯೋಜನೆಯನ್ನು ಪ್ರಾರಂಭಿಸಿದೆ. ಇದು ಮೂರು ತಿಂಗಳ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯೊಂದಿಗೆ ಬರುತ್ತದೆ. ಅಲ್ಲದೆ ಈ ಪ್ಲಾನ್‌ನಲ್ಲಿ ಗ್ರಾಹಕರು ಒಟ್ಟು 8GB ಡೇಟಾವನ್ನು ಸಹ ಪಡೆಯುತ್ತಾರೆ. ಈ ಪ್ಲಾನ್‌ ಯಾವುದೇ ಸೇವಾ ಮಾನ್ಯತೆಯನ್ನು ಹೊಂದಿಲ್ಲ ಎಂದು ವರದಿಯಾಗಿದೆ.

ವಿ ಟೆಲಿಕಾಂ

ಇದಲ್ಲದೆ ವಿ ಟೆಲಿಕಾಂ ಇತ್ತೀಚಿಗೆ 82ರೂ. ಬೆಲೆಯ ಹೊಸ ಪ್ರಿಪೇಯ್ಡ್ ಆಡ್-ಆನ್ ಪ್ಲಾನ್‌ ಪರಿಚಯಿಸಿದೆ. ಈ ಪ್ಲಾನ್‌ 28 ದಿನಗಳ ಮಾನ್ಯತೆಹೊಂದಿರುವ ಸೋನಿಲೈವ್‌ ಪ್ರೀಮಿಯಂ ಮೊಬೈಲ್-ಒನ್ಲಿ ಚಂದಾದಾರಿಕೆ ಯನ್ನು ನೀಡಲಿದೆ. ಸೋನಿಲೈವ್‌ ಜೊತೆಗೆ ವಿ ಟೆಲಿಕಾಂ ಪಾಲುದಾರಿಕೆಯನ್ನು ಹೊಂದಿರುವುದರಿಂದ ಈ ಪ್ಲಾನ್‌ ಪರಿಚಯಿಸಲಾಗಿದೆ. ಇನ್ನು ಈ ಪ್ಲಾನ್‌ ಪ್ರಿಪೇಯ್ಡ್ ಗ್ರಾಹಕರಿಗೆ ಹೊಸ OTT ವಿಷಯದ ಹೊಸ ಪಟ್ಟಿಯನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಟೆಲಿಕಾಂ

ಇನ್ನು ವಿ ಟೆಲಿಕಾಂ ಕೆಲವು ದಿನಗಳ ಹಿಂದೆ ತನ್ನ ಬಳಕೆದಾರರಿಗೆ ಡೇಟಾ ಡಿಲೈಟ್‌ ಆಫರ್‌ ಅನ್ನು ಪರಿಚಯಿಸಿದೆ. ಇದರಿಂದ ವಿ ಟೆಲಿಕಾಂ ಬಳಕೆದಾರರು ಪ್ರತಿ ತಿಂಗಳು 2GB ವರೆಗೆ ಹೆಚ್ಚುವರಿ ಡೇಟಾವನ್ನು ಪಡೆದುಕೊಳ್ಳಬಹುದು. ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ದೈನಂದಿನ ಡೇಟಾ ಮಿತಿಯ ಮೇಲೆ ಒದಗಿಸಲಾಗುತ್ತದೆ. ಆದರೆ ಈ ಆಫರ್‌ ಸ್ವಯಂಚಾಲಿತವಾಗಿ ಸಕ್ರಿಯಗೊಳ್ಳುವುದಿಲ್ಲ ಎನ್ನಲಾಗಿದೆ.

ಹೀರೋ

ವಿ ಟೆಲಿಕಾಂ ಹೀರೋ ಅನ್‌ಲಿಮಿಟೆಡ್ ಡೇಟಾ ಪ್ಲಾನ್‌ಗಳಿಗಾಗಿ ಪರಿಚಯಿಸಿರುವ ಡೇಟಾ ಡಿಲೈಟ್‌ ಆಫರ್‌ ಪಡೆಯಲು ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಯಿಂದ 121249 ಅನ್ನು ಡಯಲ್ ಮಾಡಬೇಕಾಗುತ್ತದೆ. ಇಲ್ಲವೇ ವಿ ಅಪ್ಲಿಕೇಶನ್ ಮೂಲಕ ಈ ಆಫರ್‌ ಅನ್ನು ಸಕ್ರಿಯಗೊಳಿಸಬೇಕಾಗುತ್ತದೆ. ಇನ್ನು ವಿ ಟೆಲಿಕಾಂನ ಹೀರೋ ಅನ್‌ಲಿಮಿಟೆಡ್ ಪ್ಲಾನ್‌ಗಳು ವಿಕೆಂಡ್‌ ಡೇಟಾ ರೋಲ್‌ಓವರ್ ಮತ್ತು ಡೈಲಿ ಅನ್‌ಲಿಮಿಟೆಡ್‌ ನೈಟ್‌ ಟೈಂ ಡೇಟಾವನ್ನು ಸಹ ನೀಡುತ್ತವೆ.

ಟೆಲಿಕಾಂ

ಇನ್ನು ವಿ ಟೆಲಿಕಾಂ ಅನ್‌ಲಿಮಿಟೆಡ್‌ ಹಿರೋ ಪ್ಲಾನ್‌ಗಳು 299ರೂ.ಗಳಿಂದ ಪ್ರಾರಂಭವಾಗಲಿದೆ. ಇದಲ್ಲದೆ 359ರೂ. 409ರೂ ಮತ್ತು 475ರೂ. ಬೆಲೆಯಲ್ಲಿ ಡೇಟಾ ರೀಚಾರ್ಜ್ ಪ್ಲಾನ್‌ಗಳು ಲಭ್ಯವಾಗಲಿವೆ. ಇನ್ನು ಡೇಟಾ ಡಿಲೈಟ್ ಆಫರ್‌ನಲ್ಲಿ ದೈನಂದಿನ ಡೇಟಾ ಮಿತಿಯಲ್ಲಿ ಪ್ರತಿ ತಿಂಗಳು 2GB ಡೇಟಾವನ್ನು ಒದಗಿಸುತ್ತದೆ. ಇದಲ್ಲದೆ, ಅನ್‌ಲಿಮಿಟೆಡ್ ಹೀರೋ ಪ್ಲಾನ್‌ಗಳು ಬಿಂಜ್ ಆಲ್ ನೈಟ್ ಪ್ರಯೋಜನವನ್ನು ನೀಡಲಿವೆ. ಇದು ಪ್ರಿಪೇಯ್ಡ್ ಗ್ರಾಹಕರಿಗೆ ರಾತ್ರಿ 12 ರಿಂದ ಬೆಳಗ್ಗೆ 6 ರ ನಡುವೆ ಅನಿಯಮಿತ ಹೈ-ಸ್ಪೀಡ್ ಡೇಟಾಗೆ ಪ್ರವೇಶವನ್ನು ನೀಡಲಿದೆ.

Best Mobiles in India

Read more about:
English summary
vi launches new prepaid plan for just Rs. 151 with disney+ Hotstar subscription

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X