ವಿ ಟೆಲಿಕಾಂನಿಂದ ಎರಡು ಪ್ಲ್ಯಾನ್ ಲಾಂಚ್; ಜಬರ್ದಸ್ತ್ ವ್ಯಾಲಿಡಿಟಿ!

|

ಭಾರತೀಯ ತೃತೀಯ ಟೆಲಿಕಾಂ ಕಂಪೆನಿಗಳಲ್ಲಿ ವಿ ಟೆಲಿಕಾಂ ಗುರುತಿಸಿಕೊಂಡಿದೆ. ಚಂದಾದಾರರನ್ನು ತನ್ನ ಕಡೆಗೆ ಆಕರ್ಷಿಸುವುದಕ್ಕೆ ಹೊಸ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಪರಿಚಯಿಸುತ್ತಲೇ ಮುನ್ನಡೆದಿದೆ. ಏರ್‌ಟೆಲ್‌, ಜಿಯೋ ಟೆಲಿಕಾಂಗಳ ಪೈಪೋಟಿ ಎದುರಿಸುತ್ತಿರುವ ವಿ ಟೆಲಿಕಾಂ ಇದೀಗ ಹೊಸ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸಿದೆ. ಸದ್ಯ ವೋಡಾಫೋನ್‌ ಐಡಿಯಾ ಭಾರತದಲ್ಲಿ ವಿ 107 ರೂ. ಮತ್ತು ವಿ 111 ರೂ. ಬೆಲೆಯಲ್ಲಿ ಎರಡು ಹೊಸ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಲಾಂಚ್‌ ಮಾಡಿದೆ.

ವಿ ಟೆಲಿಕಾಂನಿಂದ ಎರಡು ಪ್ಲ್ಯಾನ್ ಲಾಂಚ್; ಜಬರ್ದಸ್ತ್ ವ್ಯಾಲಿಡಿಟಿ!

ಹೌದು, ವಿ ಟೆಲಿಕಾಂ ನೂತನವಾಗಿ ಎರಡು ಹೊಸ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸಿದೆ. ಅವುಗಳು ಕ್ರಮವಾಗಿ ವಿ 107 ರೂ. ಮತ್ತು ವಿ 111 ರೂ. ಆಗಿವೆ. ಈ ಎರಡು ಪ್ಲಾನ್‌ಗಳು ಕ್ರಮವಾಗಿ 30 ಮತ್ತು 31 ದಿನಗಳ ವ್ಯಾಲಿಡಿಟಿಯನ್ನು ಪಡೆದಿವೆ. ಅಗ್ಗದ ಬೆಲೆಯಲ್ಲಿ ಅಧಿಕ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಈ ಎರಡು ಪ್ರಿಪೇಯ್ಡ್‌ ಯೋಜನೆಗಳು ಅತ್ಯುತ್ತಮ ಎನಿಸುತ್ತವೆ. ಹಾಗಾದರೇ ವಿ 107 ರೂ. ಮತ್ತು ವಿ 111 ರೂ. ಪ್ಲಾನ್‌ಗಳ ಇತರೆ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿ ಟೆಲಿಕಾಂನಿಂದ ಎರಡು ಪ್ಲ್ಯಾನ್ ಲಾಂಚ್; ಜಬರ್ದಸ್ತ್ ವ್ಯಾಲಿಡಿಟಿ!

ವಿ ಟೆಲಿಕಾಂ ವಿ 107 ರೂ. ಪ್ರಿಪೇಯ್ಡ್‌ ಪ್ಲಾನ್‌ ಪ್ರಯೋಜನಗಳು
ವಿ ಟೆಲಿಕಾಂನ ವಿ 107 ರೂ. ಪ್ರಿಪೇಯ್ಡ್ ಪ್ಲಾನ್‌ ಒಟ್ಟು 30 ದಿನಗಳ ವ್ಯಾಲಿಡಿಟಿ ಪ್ರಯೋಜನವನ್ನು ಪಡೆದಿದೆ. ಹಾಗೆಯೇ ಈ ಯೋಜನೆಯು 200 MB ಡೇಟಾ ಪ್ರಯೋಜನವನ್ನು ಒಳಗೊಂಡಿದೆ. ಇನ್ನು ಈ ಯೋಜನೆಯಲ್ಲಿ ಯಾವುದೇ ಎಸ್‌ಎಮ್‌ಎಸ್‌ ಪ್ರಯೋಜನ ಲಭ್ಯ ಇರುವುದಿಲ್ಲ. ಹಾಗೆಯೇ 107 ರೂ. ಮೌಲ್ಯದ ಟಾಕ್‌ಟೈಮ್‌ ಸಿಗಲಿದ್ದು, ಪ್ರತಿ ನಿಮಿಷಕ್ಕೆ 1 ಪೈಸೆ ಇರುತ್ತದೆ. ಅಗ್ಗದ ಬೆಲೆಯಲ್ಲಿ ಹೆಚ್ಚಿನ ವ್ಯಾಲಿಡಿಟಿ ಬಯಸೋರಿಗೆ ಉತ್ತಮ ಆಗಿದೆ.

ವಿ ಟೆಲಿಕಾಂನಿಂದ ಎರಡು ಪ್ಲ್ಯಾನ್ ಲಾಂಚ್; ಜಬರ್ದಸ್ತ್ ವ್ಯಾಲಿಡಿಟಿ!

ವಿ ಟೆಲಿಕಾಂ ವಿ 111 ರೂ. ಪ್ರಿಪೇಯ್ಡ್‌ ಪ್ಲಾನ್‌ ಪ್ರಯೋಜನಗಳು
ವಿ ಟೆಲಿಕಾಂನ ವಿ 111 ರೂ. ಪ್ರಿಪೇಯ್ಡ್ ಪ್ಲಾನ್‌ ಒಟ್ಟು 31 ದಿನಗಳ ವ್ಯಾಲಿಡಿಟಿ ಪ್ರಯೋಜನವನ್ನು ಪಡೆದಿದೆ. ಹಾಗೆಯೇ ಈ ಯೋಜನೆಯು 200 MB ಡೇಟಾ ಪ್ರಯೋಜನವನ್ನು ಒಳಗೊಂಡಿದೆ. ಇನ್ನು ಈ ಯೋಜನೆಯಲ್ಲಿ ಯಾವುದೇ ಎಸ್‌ಎಮ್‌ಎಸ್‌ ಪ್ರಯೋಜನ ಲಭ್ಯ ಇರುವುದಿಲ್ಲ. ಹಾಗೆಯೇ 111 ರೂ. ಮೌಲ್ಯದ ಟಾಕ್‌ಟೈಮ್‌ ಸಿಗಲಿದ್ದು ಪ್ರತಿ ನಿಮಿಷಕ್ಕೆ 1 ಪೈಸೆ ಇರುತ್ತದೆ. ಅಗ್ಗದ ಬೆಲೆಯಲ್ಲಿ ಹೆಚ್ಚಿನ ವ್ಯಾಲಿಡಿಟಿ ಬಯಸೋರಿಗೆ ಉತ್ತಮ ಆಗಿದೆ.

ಹಾಗೆಯೇ ವಿ ಟೆಲಿಕಾಂ ಇತ್ತೀಚಿಗೆ ಎರಡು ನೂತನ ಪ್ರಿಪೇಯ್ಡ್‌ ಯೋಜನೆಗಳನ್ನು ಪರಿಚಯಿಸಿದೆ. ಅವು ಕ್ರಮವಾಗಿ ವಿ ಟೆಲಿಕಾಂ 327ರೂ. ಮತ್ತು ವಿ ಟೆಲಿಕಾಂ 337 ರೂ ಆಗಿವೆ. ಆ ಪೈಕಿ ವಿ ಟೆಲಿಕಾಂನ ಹೊಸ 327ರೂ.ಗಳ ಪ್ರಿಪೇಯ್ಡ್ ಪ್ಲಾನ್‌ ಅನಿಯಮಿತ ಧ್ವನಿ ಕರೆಗಳು, ದೈನಂದಿನ ಆಧಾರದ ಮೇಲೆ 100 ಎಸ್‌ಎಮ್‌ಎಸ್‌ ಸಂದೇಶಗಳು ಮತ್ತು ಒಟ್ಟು 25 GB ಡೇಟಾಗೆ ಪ್ರವೇಶವನ್ನು ನೀಡಲಿದೆ. ಈ ಪ್ಲಾನ್‌ 30 ದಿನಗಳ ಮಾನ್ಯತೆಯನ್ನು ನೀಡಲಿದೆ. ಇದಲ್ಲದೆ Vi ಮೂವೀಸ್‌ ಮತ್ತು ಟಿವಿ ಚಂದಾದಾರಿಕೆಯನ್ನು ನೀಡಲಿವೆ.

ಇನ್ನು ವಿ ಟೆಲಿಕಾಂನ 337ರೂ. ಪ್ರಿಪೇಯ್ಡ್ ಪ್ಲಾನ್‌ 31 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಪ್ಲಾನ್‌ನಲ್ಲಿ ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಸಂದೇಶಗಳ ಪ್ರಯೋಜನ ಪಡೆಯಬಹುದು.ಇದಲ್ಲದೆ ಒಟ್ಟು 28GB ಡೇಟಾ ಪ್ರಯೋಜನವನ್ನು ಕೂಡ ಪಡೆಯಬಹುದಾಗಿದೆ. ಇದಲ್ಲದೆ ಈ ರೀಚಾರ್ಜ್ ಪ್ಲಾನ್‌ಗಳನ್ನು ಆಯ್ಕೆ ಮಾಡುವ ಗ್ರಾಹಕರು ವಿ ಮೂವೀಸ್‌ ಮತ್ತು TV ​​ಅಪ್ಲಿಕೇಶನ್‌ಗೆ ಪೂರಕ ಚಂದಾದಾರಿಕೆಯನ್ನು ಸಹ ಪಡೆಯುತ್ತಾರೆ.

Best Mobiles in India

English summary
Vi Launches Two New Validity Vouchers of Rs 107 and Rs 111.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X