ಜಿಯೋ, ಏರ್‌ಟೆಲ್‌ ಚಂದಾದಾರರ ಸಂಖ್ಯೆಯಲ್ಲಿ ಹೆಚ್ಚಳ; ವಿ ಟೆಲಿಕಾಂಗೆ ಭಾರೀ ನಷ್ಟ!

|

ದೂರಸಂಪರ್ಕ ನಿಯಂತ್ರಕ ಟ್ರಾಯ್ (TRAI) ಅಂಕಿ-ಅಂಶಗಳ ಪ್ರಕಾರ, ಭಾರತದ ಅತಿ ದೊಡ್ಡ ಟೆಲಿಕಾಂ ಆಪರೇಟರ್ ಜಿಯೋ ಹಾಗೂ ಭಾರ್ತಿ ಏರ್‌ಟೆಲ್‌ ತಿಂಗಳಿಂದ ತಿಂಗಳಿಗೆ ಬಳಕೆದಾರರ ಸಂಖ್ಯೆಯನ್ನು ಹೆಚ್ಚು ಮಾಡಿಕೊಂಡಿವೆ. ಇನ್ನು ಮೂರನೇ ದೊಡ್ಡ ಟೆಲಿಕಾಂ ಆಗಿ ಗುರುತಿಸಿಕೊಂಡಿರುವ ವಿ ಟೆಲಿಕಾಂನ (ವೊಡಾಫೋನ್ ಐಡಿಯಾ) ಗ್ರಾಹಕರ ಸಂಖ್ಯೆಯ ಇಳಿಕೆ ಆಗುವುದರೊಂದಿಗೆ ಭಾರತದಲ್ಲಿ ಒಟ್ಟು ಚಂದಾದಾರರ ನೆಲೆಯು ಸೆಪ್ಟೆಂಬರ್ ತಿಂಗಳಲ್ಲಿ 3.6 ಮಿಲಿಯನ್ (36 ಲಕ್ಷ ಕುಸಿದಿದೆ).

ರಿಲಯನ್ಸ್‌ ಜಿಯೋ ಮಾರುಕಟ್ಟೆ

ಅಂದಹಾಗೆ ರಿಲಯನ್ಸ್‌ ಜಿಯೋ ಮಾರುಕಟ್ಟೆಯಲ್ಲಿನ ತನ್ನ ಸ್ಥಾನವನ್ನು ಮತ್ತಷ್ಟು ಭದ್ರ ಮಾಡಿಕೊಂಡಿದ್ದು, ಸೆಪ್ಟೆಂಬರ್ನಲ್ಲಿ 7.2 ಲಕ್ಷ ವೈರ್ಲೆಸ್ ಚಂದಾದಾರರನ್ನು ಸೇರ್ಪಡೆ ಮಾಡಿಕೊಂಡಿದೆ. ಇನ್ನು ಭಾರ್ತಿ ಏರ್‌ಟೆಲ್‌ ತನ್ನ ಮೊಬೈಲ್ ಬಳಕೆದಾರರ ಸಂಖ್ಯೆಯನ್ನು 4.12 ಲಕ್ಷ ಹೆಚ್ಚಿಸಿದೆ.

32.81 ಲಕ್ಷ ಚಂದಾದಾರ

ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ, ಜಿಯೋ ನೇತೃತ್ವದಲ್ಲಿ ಉಳಿದ ಟೆಲಿಕಾಂ ಕಂಪನಿ ಚಂದಾದಾರನ್ನು ಸೇರ್ಪಡೆ ಮಾಡಿಕೊಂಡಿದ್ದರೂ ದೂರಸಂಪರ್ಕ ಕಂಪನಿಗಳ ನಿವ್ವಳ ಸೇರ್ಪಡೆಯು ಆಗಸ್ಟ್‌ ನಲ್ಲಿ ಗಳಿಸಿದ 32.81 ಲಕ್ಷ ಚಂದಾದಾರರಿಗಿಂತ ಕಡಿಮೆಯಾಗಿದೆ.

ಗ್ರಾಹಕ

ಆರ್ಥಿಕ ಸಮಸ್ಯೆ ಸೇರಿದಂತೆ ನಾನಾ ಸಂಕಷ್ಟಗಳನ್ನು ಎದುರಿಸುತ್ತಿರುವ ವೊಡಾಫೋನ್ ಐಡಿಯಾದ ಚಂದಾದಾರರ ಸಂಖ್ಯೆಯಲ್ಲಿ ಭಾರೀ ಕುಸಿತ ಆಗಿದೆ. ಗ್ರಾಹಕ ನೆಲೆಯು 40 ಲಕ್ಷ ಕುಸಿದು, ಸೆಪ್ಟೆಂಬರ್ನಲ್ಲಿ 24.91 ಕೋಟಿಗೆ ತಲುಪಿದೆ.

ಟ್ರಾಯ್

'ಒಟ್ಟು ವೈರ್‌ಲೆಸ್‌ ಚಂದಾದಾರರು 2022 ರ ಅಂತ್ಯದ ವೇಳೆಗೆ 1,149.11 ಮಿಲಿಯನ್‌ನಿಂದ 2022ರ ಸೆಪ್ಟೆಂಬರ್ ಅಂತ್ಯದ ವೇಳೆಗೆ 1,145.45 ಮಿಲಿಯನ್‌ಗೆ ಇಳಿದಿದ್ದು, ಇದರಿಂದಾಗಿ ಮಾಸಿಕ ಕುಸಿತದ ದರ ಶೇಕಡಾ 0.32 ರಷ್ಟಿದೆ,' ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಚಂದಾದಾರಿಕೆಯ ಸೆಪ್ಟೆಂಬರ್ ಡೇಟಾ ಬಿಡುಗಡೆ ಮಾಡಿದೆ.

ಚಂದಾದಾರರು

ಒಟ್ಟಾರೆಯಾಗಿ, ಭಾರತದಲ್ಲಿ ಟೆಲಿಫೋನ್ ಚಂದಾದಾರರ ಸಂಖ್ಯೆ (ಮೊಬೈಲ್ ಮತ್ತು ಲ್ಯಾಂಡ್‌ಲೈನ್‌ ಒಟ್ಟಿಗೆ) 2022ರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಸುಮಾರು 117.19 ಕೋಟಿಗೆ ಇಳಿದಿದ್ದು, ಇದು ಮಾಸಿಕ ಕುಸಿತ ದರ ಶೇ 0.27 ಎಂದಾಗುತ್ತದೆ. 2022 ರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಒಟ್ಟು ಬ್ರಾಡ್ಬ್ಯಾಂಡ್ ಚಂದಾದಾರರು 81.6 ಕೋಟಿಗೆ ಏರಿದ್ದಾರೆ ಎಂದು ಟ್ರಾಯ್ (TRAI) ಹೇಳಿದ್ದು, ಮಾಸಿಕ ಬೆಳವಣಿಗೆ ದರ ಶೇ 0.28 ಆಗಿದೆ.

ಭಾರ್ತಿ ಏರ್‌ಟೆಲ್‌

ಟಾಪ್ ಐದು ಸೇವಾ ಪೂರೈಕೆದಾರ ಸಂಸ್ಥೆಗಳು 2022ರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಒಟ್ಟು ಬ್ರಾಡ್ಬ್ಯಾಂಡ್ ಚಂದಾದಾರರಲ್ಲಿ ಶೇ 98.36 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿವೆ. 'ಈ ಸೇವಾ ಪೂರೈಕೆದಾರರು ರಿಲಯನ್ಸ್ ಜಿಯೋ ಇನ್ಫೋಕಾಮ್ (426.80 ಮಿಲಿಯನ್), ಭಾರ್ತಿ ಏರ್‌ಟೆಲ್‌ (225.09 ಮಿಲಿಯನ್), ವೊಡಾಫೋನ್ ಐಡಿಯಾ (123.20 ಮಿಲಿಯನ್), ಬಿಎಸ್ಎನ್ಎಲ್ (25.62 ಮಿಲಿಯನ್) ಮತ್ತು ಆಟ್ರಿಯಾ ಕನ್ವರ್ಜೆನ್ಸ್ (2.14 ಮಿಲಿಯನ್),' ಎಂದು ಟ್ರಾಯ್ ಹೇಳಿದೆ.

4G ವೇಗದಲ್ಲಿಯೂ ಜಿಯೋ ನಂಬರ್‌ ಒನ್‌

4G ವೇಗದಲ್ಲಿಯೂ ಜಿಯೋ ನಂಬರ್‌ ಒನ್‌

ಸದ್ಯ ದೇಶದಲ್ಲಿ 5G ಪರ್ವ ಪ್ರಾರಂಭವಾಗಿದ್ದು, ಜಿಯೋ ಟೆಲಿಕಾಂ ಸಹ ಈಗಾಗಲೇ ಕೆಲವು ನಗರಗಳಲ್ಲಿ ಜಿಯೋ ಟ್ರೂ 5G ಸೇವೆಯನ್ನು ಶುರು ಮಾಡಿದೆ. 5G ​​ರೋಲ್-ಔಟ್ ನಡುವೆ, ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಇತ್ತೀಚಿಗೆ ಅಕ್ಟೋಬರ್ ತಿಂಗಳ 4G ವೇಗ ಪರೀಕ್ಷೆಯ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದು, ಮುಖೇಶ್ ಅಂಬಾನಿಯವರ ಕಂಪನಿ ರಿಲಯನ್ಸ್ ಜಿಯೋ ಸರಾಸರಿ 4G ಡೌನ್‌ಲೋಡ್ ವೇಗದೊಂದಿಗೆ ಅಪ್‌ಲೋಡ್ ವೇಗದಲ್ಲೂ ಮೊದಲ ಸ್ಥಾನದಲ್ಲಿದೆ.

ಎಂಬಿಪಿಎಸ್

TRAI ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಜಿಯೋದ ಸರಾಸರಿ 4G ಡೌನ್‌ಲೋಡ್ ವೇಗದಲ್ಲಿ 1.2 ಎಂಬಿಪಿಎಸ್ (mbps)​ ಜಿಗಿತ ಕಂಡು ಬಂದಿದೆ. ಸೆಪ್ಟೆಂಬರ್ ತಿಂಗಳಲ್ಲಿ 19.1 ಎಂಬಿಪಿಎಸ್ (mbps)​ ಇದ್ದ ವೇಗ ಅಕ್ಟೋಬರ್ ತಿಂಗಳಲ್ಲಿ 20.3 ಎಂಬಿಪಿಎಸ್ (mbps)​ ತಲುಪಿದೆ.

Best Mobiles in India

English summary
Vi loses subscribers as Jio, Airtel strengthen user tally in Sept: TRAI data.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X