ವಿ ಟೆಲಿಕಾಂನ ಈ ಅಗ್ಗದ ಪ್ಲ್ಯಾನಿನಲ್ಲಿ ಈಗ 150GB ಡೇಟಾ ಸಂಪೂರ್ಣ ಉಚಿತ!

|

ದೇಶದ ಟೆಲಿಕಾಂ ವಲಯದಲ್ಲಿ ಮೂರನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿರುವ ವಿ ಟೆಲಿಕಾಂ (ವೊಡಾಫೋನ್‌ ಐಡಿಯಾ) ಈಗಾಗಲೇ ಹಲವು ಆಕರ್ಷಕ ಪ್ರೀಪೇಯ್ಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿ ಗ್ರಾಹಕರನ್ನು ಸೆಳೆದಿದೆ. ಹಾಗೆಯೇ ಕೆಲವು ಅತ್ಯುತ್ತಮ ಪೋಸ್ಟ್‌ಪೇಯ್ಡ್‌ ಯೋಜನೆಗಳ ಆಯ್ಕೆಯನ್ನು ಒಳಗೊಂಡಿದೆ. ಈಗ ವಿ ಟೆಲಿಕಾಂ ತನ್ನದೊಂದು ಬಜೆಟ್‌ ಬೆಲೆಯ ಪೋಸ್ಟ್‌ಪೇಯ್ಡ್‌ ಪ್ಲ್ಯಾನಿನಲ್ಲಿ ಭರ್ಜರಿ ಕೊಡುಗೆ ತಿಳಿಸಿದೆ.

ಮಾಡಿದರೆ

ಹೌದು, ವಿ ಟೆಲಿಕಾಂ ತನ್ನ 399ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನಿನಲ್ಲಿ ಈಗ 150GB ಡೇಟಾ ಹೆಚ್ಚುವರಿಯಾಗಿ ಘೋಷಿಸಿದೆ. ಇನ್ನು ಈ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ ಅನ್ನು ಗ್ರಾಹಕರು ಆನ್‌ಲೈನ್‌ನಲ್ಲಿ ಖರೀದಿ ಮಾಡಿದರೆ 150GB ಬೋನಸ್ ಡೇಟಾವನ್ನು ಜೊತೆಗೆ 40GB ಡೇಟಾವನ್ನು ಪಡೆಯುತ್ತಾರೆ. ಹಾಗೆಯೇ ಈ ಯೋಜನೆಯು ಡೇಟಾ ರೋಲ್‌ಓವರ್ ಸೌಲಭ್ಯವನ್ನು ಪಡೆದಿದ್ದು, ಅಧಿಕ ಡೇಟಾ ಪ್ರಯೋಜನ ನಿರೀಕ್ಷಿಸುವ ಗ್ರಾಹಕರಿಗೆ/ ಚಂದಾದಾರರಿಗೆ ಈ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್ ಹೆಚ್ಚು ಆಕರ್ಷಕ ಎನಿಸುತ್ತದೆ.

ಯೋಜನೆಯು

ವಿ ಟೆಲಿಕಾಂನ 399ರೂ. ಯೋಜನೆಯು ಎಂಟ್ರಿ ಲೆವೆಲ್ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್ ಆಗಿದೆ. ಈ ಯೋಜನೆಯು ಡೇಟಾ ಪ್ರಯೋಜನದ ಜೊತೆಗೆ ಓಟಿಟಿ ಸೌಲಭ್ಯವನ್ನು ಒಳಗೊಂಡಿದ್ದು, ವಾಯಿಸ್‌ ಕರೆ, ಎಸ್‌ಎಮ್‌ಎಸ್‌ ಪ್ರಯೋಜನಗಳು ಸಹ ದೊರೆಯುತ್ತವೆ. ಹಾಗಾದರೇ ವಿ ಟೆಲಿಕಾಂನ 399ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ ಪ್ರಯೋಜನಗಳೆನು ಹಾಗೂ ಇತರೆ ಅತ್ಯುತ್ತಮ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿ ಟೆಲಿಕಾಂನ 399ರೂ. ಪೋಸ್ಟ್‌ಪೇಯ್ಡ್ ಯೋಜನೆಯು

ವಿ ಟೆಲಿಕಾಂನ 399ರೂ. ಪೋಸ್ಟ್‌ಪೇಯ್ಡ್ ಯೋಜನೆಯು

ವಿ ಟೆಲಿಕಾಂನ 399ರೂ. ಪೋಸ್ಟ್‌ಪೇಯ್ಡ್ ಯೋಜನೆಯು ಆರಂಭಿಕ ಪೋಸ್ಟ್‌ಪೇಯ್ಡ್‌ ಯೋಜನೆ ಆಗಿದೆ. ಗ್ರಾಹಕರು ಆನ್‌ಲೈನ್‌ನಲ್ಲಿ ಖರೀದಿ ಮಾಡಿದರೆ 150GB ಬೋನಸ್ ಡೇಟಾ ಲಭ್ಯವಾಗಲಿದ್ದು, ಇದರ ಜೊತೆಗೆ 40GB ಡೇಟಾವನ್ನು ಪಡೆಯುತ್ತಾರೆ. ಈ ಮೂಲಕ ಒಂದು ತಿಂಗಳಿಗೆ ಒಟ್ಟು 190GB ಆಗುತ್ತದೆ. ಅದಲ್ಲದೇ ಗ್ರಾಹಕರು 200GB ಡೇಟಾ ರೋಲ್‌ಓವರ್ ಸೌಲಭ್ಯ ಸಹ ಪಡೆಯುತ್ತಾರೆ. ಇನ್ನುಳಿದಂತೆ ಈ ಯೋಜನೆಯಲ್ಲಿ ಅನಿಯಮಿತ ವಾಯಿಸ್‌ ಕರೆ ಮತ್ತು ತಿಂಗಳಿಗೆ 100 ಎಸ್‌ಎಮ್‌ಎಸ್‌ ಪ್ರಯೋಜನ ಸಹ ಪಡೆಯುತ್ತಾರೆ.

ಹೆಚ್ಚುವರಿ

ಹಾಗೆಯೇ ಈ ಯೋಜನೆಯು ಕೆಲವು ಹೆಚ್ಚುವರಿ ಪ್ರಯೋಜನಗಳನ್ನು ಸಹ ಒಳಗೊಂಡಿದೆ. Vi ಮೂವೀಸ್‌ ಮತ್ತು TV VIP ಚಂದಾದಾರಿಕೆಗೆ ಗ್ರಾಹಕರು ಉಚಿತ ಚಂದಾದಾರಿಕೆಯನ್ನು ಪಡೆಯುತ್ತಾರೆ. ಇದರೊಂದಿಗೆ, ವಿ ಅಪ್ಲಿಕೇಶನ್‌ನಲ್ಲಿ ಆರು ತಿಂಗಳ ಜಾಹೀರಾತು-ಮುಕ್ತ ಹಂಗಾಮಾ ಮ್ಯೂಸಿಕ್ ಸೌಲಭ್ಯ ಲಭ್ಯ. ನೀವು OTT (ಓವರ್-ದಿ-ಟಾಪ್) ಕಂಟೆಂಟ್ ಬಳಕೆಯನ್ನು ಇಷ್ಟಪಡುವವರಾಗಿದ್ದರೆ, ಈ ಯೋಜನೆಯೊಂದಿಗೆ ನೀವು ZEE5 ಪ್ರೀಮಿಯಂ ಅನ್ನು ಸಹ ಉಚಿತವಾಗಿ ಪಡೆಯುತ್ತೀರಿ.

ವಿ ಟೆಲಿಕಾಂ 1449ರೂ. ಪ್ರಿಪೇಯ್ಡ್ ಯೋಜನೆ ಪ್ರಯೋಜನಗಳು

ವಿ ಟೆಲಿಕಾಂ 1449ರೂ. ಪ್ರಿಪೇಯ್ಡ್ ಯೋಜನೆ ಪ್ರಯೋಜನಗಳು

ವಿ ಟೆಲಿಕಾಂನ 1449ರೂ. ಪ್ರಿಪೇಯ್ಡ್ ಯೋಜನೆಯೊಂದಿಗೆ 1.5 GB ದೈನಂದಿನ ಡೇಟಾ ಪ್ರಯೋಜನ ಸಿಗಲಿದೆ. ಹಾಗೆಯೇ ಅನಿಯಮಿತ ವಾಯಿಸ್‌ ಕರೆಗಳನ್ನು ಸೌಲಭ್ಯ ದೊರೆಯಲಿದೆ. ಇನ್ನು ಈ ಯೋಜನೆಯು 180 ದಿನಗಳ ವ್ಯಾಲಿಡಿಟಿ ಪಡೆದಿದೆ. ಇದರೊಂದಿಗೆ ಬಳಕೆದಾರರು ಬಳಕೆದಾರರು 1.5GB ದೈನಂದಿನ ಡೇಟಾ, ಪ್ರತಿದಿನ 100 ಎಸ್‌ಎಮ್‌ಎಸ್‌ ಮತ್ತು ಅನಿಯಮಿತ ವಾಯಿಸ್‌ ಕರೆಯನ್ನು ಎಲ್ಲಾ ವಿ ಹಿರೋ ಅನ್ಲಿಮಿಟೆಡ್ ಪ್ರಯೋಜನಗಳೊಂದಿಗೆ ಪಡೆಯುತ್ತಾರೆ. ಈ ಯೋಜನೆಯಲ್ಲಿ ವಿಕೇಂಡ್ ಡೇಟಾ ರೋಲ್‌ಓವರ್ ಪ್ರಯೋಜನಗಳನ್ನು ಸಹ ಲಭ್ಯವಾಗಲಿದೆ. ಅಲ್ಲದೇ ಹೆಚ್ಚುವರಿಯಾಗಿ ವಿ ಆಪ್ಸ್‌ಗಳು ಲಭ್ಯವಾಗಲಿವೆ. ಈ ಯೋಜನೆಯೊಂದಿಗೆ ಬಳಕೆದಾರರಿಗೆ 50GB ಹೆಚ್ಚುವರಿ ಡೇಟಾವನ್ನು ನೀಡುತ್ತದೆ.

ವಿ ಟೆಲಿಕಾಂ 2889ರೂ. ಪ್ರಿಪೇಯ್ಡ್ ಯೋಜನೆ ಪ್ರಯೋಜನಗಳು

ವಿ ಟೆಲಿಕಾಂ 2889ರೂ. ಪ್ರಿಪೇಯ್ಡ್ ಯೋಜನೆ ಪ್ರಯೋಜನಗಳು

ವಿ ಟೆಲಿಕಾಂನ 2889ರೂ. ಪ್ರಿಪೇಯ್ಡ್ ಯೋಜನೆಯೊಂದಿಗೆ 1.5 GB ದೈನಂದಿನ ಡೇಟಾ ಪ್ರಯೋಜನ ಸಿಗಲಿದೆ. ಹಾಗೆಯೇ ಅನಿಯಮಿತ ವಾಯಿಸ್‌ ಕರೆಗಳನ್ನು ಸೌಲಭ್ಯ ದೊರೆಯಲಿದೆ. ಇನ್ನು ಈ ಯೋಜನೆಯು 365 ದಿನಗಳ ವ್ಯಾಲಿಡಿಟಿ ಪಡೆದಿದೆ. ಇದರೊಂದಿಗೆ ಬಳಕೆದಾರರು ಬಳಕೆದಾರರು 1.5GB ದೈನಂದಿನ ಡೇಟಾ, ಪ್ರತಿದಿನ 100 ಎಸ್‌ಎಮ್‌ಎಸ್‌ ಮತ್ತು ಅನಿಯಮಿತ ವಾಯಿಸ್‌ ಕರೆಯನ್ನು ಎಲ್ಲಾ ವಿ ಹಿರೋ ಅನ್ಲಿಮಿಟೆಡ್ ಪ್ರಯೋಜನಗಳೊಂದಿಗೆ ಪಡೆಯುತ್ತಾರೆ. ಈ ಯೋಜನೆಯಲ್ಲಿ ವಿಕೇಂಡ್ ಡೇಟಾ ರೋಲ್‌ಓವರ್ ಪ್ರಯೋಜನಗಳನ್ನು ಸಹ ಲಭ್ಯವಾಗಲಿದೆ. ಅಲ್ಲದೇ ಹೆಚ್ಚುವರಿಯಾಗಿ ವಿ ಆಪ್ಸ್‌ಗಳು ಲಭ್ಯವಾಗಲಿವೆ. ಈ ಯೋಜನೆಯೊಂದಿಗೆ ಬಳಕೆದಾರರಿಗೆ 75GB ಹೆಚ್ಚುವರಿ ಡೇಟಾವನ್ನು ನೀಡುತ್ತದೆ.

Best Mobiles in India

English summary
Vi Offering 150GB Bonus Data with OTT Benefits for Rs 399 Plan: Details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X