ಪ್ರಿಪೇಯ್ಡ್‌ ಪ್ಲ್ಯಾನ್‌ಗಳ ಬೆಲೆ ಏರಿಕೆ ಬೆನ್ನಲ್ಲೇ, ಗ್ರಾಹಕರಿಗೆ ಮತ್ತೆ ಶಾಕ್ ಕೊಟ್ಟ ವಿ ಟೆಲಿಕಾಂ!

|

ದೇಶದ ಟೆಲಿಕಾಂ ವಲಯದಲ್ಲಿ ವಿ ಟೆಲಿಕಾಂ (ವೊಡಾಫೋನ್ ಐಡಿಯಾ) ಹಲವು ಆಕರ್ಷಕ ಪ್ರೀಪೇಯ್ಡ್ ಯೋಜನಗಳ ಮೂಲಕ ಗ್ರಾಹಕರನ್ನು ಸೆಳೆದಿದೆ. ತನ್ನ ಬಹುತೇಕ ಪ್ಲ್ಯಾನ್‌ಗಳಲ್ಲಿ ಅಧಿಕ ಡೇಟಾ ಪ್ರಯೋಜನ ನೀಡುವ ಮೂಲಕ ಜಿಯೋ ಟೆಲಿಕಾಂಗೆ ನೇರ ಟಕ್ಕರ್ ನೀಡಿದೆ. ಮುಖ್ಯವಾಗಿ ಆ ಪೈಕಿ ವಿ ಟೆಲಿಕಾಂನ ತನ್ನ 299ರೂ, 499ರೂ ಮತ್ತು 699ರೂ. ಪ್ರೀಪೇಯ್ಡ್‌ ಯೋಜನಗಳಲ್ಲಿ ಡಬಲ್‌ ಡೇಟಾ ಪ್ರಯೋಜನ ನೀಡಿ, ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಿತ್ತು. ಆದ್ರೆ ಇದೀಗ ವಿ ಟೆಲಿಕಾಂ ತನ್ನ ಯೋಜನೆಗಳ ಬೆಲೆ ಹೆಚ್ಚಳ ಮಾಡಿ ಗ್ರಾಹಕರಿಗೆ ಶಾಕ್ ನೀಡಿದೆ. ಅದರ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ಸಮಾಚಾರ ಹೊರಹಾಕಿದೆ.

ಪ್ರೀಪೇಯ್ಡ್‌

ಹೌದು, ವಿ ಟೆಲಿಕಾಂ (ವೊಡಾಫೋನ್ ಐಡಿಯಾ) 299ರೂ, 499ರೂ ಮತ್ತು 699ರೂ. ಈ ಮೂರು ಪ್ರೀಪೇಯ್ಡ್‌ ಯೋಜನೆಗಳಲ್ಲಿ ಈಗ ಡಬಲ್‌ ಡೇಟಾ ಕೊಡುಗೆಯನ್ನು ನಿಲ್ಲಿಸಿದೆ. ಈ ಯೋಜನೆಗಳು ಮನೆಯಿಂದ ಕೆಲಸ ಮಾಡುವ ನೌಕರರಿಗೆ, ಆನ್‌ಲೈನ್ ಗೇಮಿಂಗ್ ಮತ್ತು ವಿಡಿಯೋ ಸ್ಟ್ರೀಮಿಂಗ್‌ ಮಾಡುವ ಬಳಕೆದಾರರಿಗೆ ಹೆಚ್ಚು ಉಪಯುಕ್ತ ಎನಿಸಿದ್ದವು. ಡಬಲ್‌ ಡೇಟಾ ಪ್ಲ್ಯಾನ್‌ಗಳಲ್ಲಿ ಪ್ರತಿದಿನ 4GB ಡೇಟಾ ಲಭ್ಯ ಇತ್ತು. ಆದ್ರೆ ಇದೀಗ ಬಳಕೆದಾರರು ಕೇವಲ 2GB ಡೇಟಾವನ್ನು ಪಡೆಯುತ್ತಾರೆ. ಆದರೆ ಯಾವ ಟೆಲಿಕಾಂ ವಲಯಗಳಲ್ಲಿ ಈ ಡಬಲ್ ಡೇಟಾ ಪ್ರಯೋಜನಗಳನ್ನು ಸ್ಥಗಿತಗೊಳಿಸಿದ ಎನ್ನುವ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.

ಹೊಸ ದರದ ಜಾರಿ

ಹೊಸ ದರದ ಜಾರಿ

ಈ ವಾರದ ಆರಂಭದಲ್ಲಿ, ವಿ ಟೆಲಿಕಾಂ ತನ್ನ ಪ್ರಿಪೇಯ್ಡ್ ಯೋಜನೆಗಳ ಬೆಲೆ ಹೆಚ್ಚಳವನ್ನು ಘೋಷಿಸಿ ಗ್ರಾಹಕರಿಗೆ ಅಚ್ಚರಿ ಮೂಡಿತು. ವಿ ಟೆಲಿಕಾಂ ಯೋಜನೆಗಳ ಹೊಸ ಬೆಲೆ ಇಂದಿನಿಂದ (ನ.25) ಜಾರಿ ಆಗಲಿವೆ. ವಿ ಟೆಲಿಕಾಂಗಿಂತ ಮುಂಚೆಯೇ ಏರ್‌ಟೆಲ್ ಟೆಲಿಕಾಂ ಸಹ ತನ್ನ ಪ್ರೀಪೇಯ್ಡ್‌ ಯೋಜನಗಳ ದರದವನ್ನು ಏರಿಕೆ ಮಾಡಿದ್ದು, ನಾಳೆಯಿಂದ (ನ.26) ಏರ್‌ಟೆಲ್‌ ಯೋಜನೆಗಳ ಹೊಸ ದರಗಳು ಜಾರಿ ಆಗಲಿವೆ. ವಿ ಟೆಲಿಕಾಂನ ಹೊಸ ಬೆಲೆಯ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿ ಟೆಲಿಕಾಂ 359ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ವಿ ಟೆಲಿಕಾಂ 359ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ವಿ ಟೆಲಿಕಾಂನ 359ರೂ. ಪ್ರೀಪೇಯ್ಡ್‌ ಪ್ಲ್ಯಾನಿನಲ್ಲಿ ಪ್ರತಿದಿನ 2GB ಡೇಟಾ ಸೌಲಭ್ಯ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಜೊತೆಗೆ ಹೆಚ್ಚುವರಿಯಾಗಿ ವಿ ಮ್ಯೂವಿಸ್ ಮತ್ತು ಟಿವಿ ಪ್ರಯೋಜನಗಳು ಲಭ್ಯ ಆಗಲಿವೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

ವಿ ಟೆಲಿಕಾಂ 539ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ವಿ ಟೆಲಿಕಾಂ 539ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ವಿ ಟೆಲಿಕಾಂನ 539ರೂ. ಪ್ರೀಪೇಯ್ಡ್‌ ಪ್ಲ್ಯಾನಿನಲ್ಲಿ ಪ್ರತಿದಿನ 2GB ಡೇಟಾ ಸೌಲಭ್ಯ ದೊರೆಯುತ್ತದೆ. ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಅದರೊಂದಿಗೆ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸೌಲಭ್ಯ ಸಹ ಹೊಂದಿದೆ. ಜೊತೆಗೆ ಹೆಚ್ಚುವರಿಯಾಗಿ ಓಟಿಟಿ ಪ್ರಯೋಜನ ಸಿಗಲಿದೆ. ಹಾಗೂ ವಿ ಮ್ಯೂವಿಸ್ ಮತ್ತು ಟಿವಿ ಪ್ರಯೋಜನಗಳು ಲಭ್ಯ ಆಗಲಿವೆ.

ವಿ ಟೆಲಿಕಾಂ 839ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ವಿ ಟೆಲಿಕಾಂ 839ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ವಿ ಟೆಲಿಕಾಂನ 839ರೂ. ಪ್ರೀಪೇಯ್ಡ್‌ ಪ್ಲ್ಯಾನಿನಲ್ಲಿ ಪ್ರತಿದಿನ 2GB ಡೇಟಾ ಸೌಲಭ್ಯ ದೊರೆಯುತ್ತದೆ. ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಅದರೊಂದಿಗೆ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸೌಲಭ್ಯ ಸಹ ಹೊಂದಿದೆ. ಜೊತೆಗೆ ಹೆಚ್ಚುವರಿಯಾಗಿ ಓಟಿಟಿ ಪ್ರಯೋಜನ ಸಿಗಲಿದೆ. ಹಾಗೂ ವಿ ಮ್ಯೂವಿಸ್ ಮತ್ತು ಟಿವಿ ಪ್ರಯೋಜನಗಳು ಲಭ್ಯ ಆಗಲಿವೆ.

ಡಬಲ್ ಡೇಟಾ ಕೊಡುಗೆ ಪಡೆದಿದ್ದ ಹಳೆ ದರದ ವಿ ಪ್ಲ್ಯಾನ್‌ಗಳು:

ಡಬಲ್ ಡೇಟಾ ಕೊಡುಗೆ ಪಡೆದಿದ್ದ ಹಳೆ ದರದ ವಿ ಪ್ಲ್ಯಾನ್‌ಗಳು:

ವಿ ಟೆಲಿಕಾಂನ 299ರೂ. ಪ್ರೀಪೇಯ್ಡ್‌ ಯೋಜನೆ

ವಿ ಟೆಲಿಕಾಂನ 299ರೂ. ಪ್ರೀಪೇಯ್ಡ್‌ ಪ್ಲ್ಯಾನಿನಲ್ಲಿ ಪ್ರತಿದಿನ 2GB ಡೇಟಾ ಮತ್ತು ಡಬಲ್ ಡೇಟಾ ಆಫರ್‌ನಿಂದಾಗಿ ಹೆಚ್ಚುವರಿ 2GB ಡೇಟಾ ಸೇರಿ ಒಟ್ಟು 4GB ಡೇಟಾ ಸೌಲಭ್ಯ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

ವಿ ಟೆಲಿಕಾಂನ 449ರೂ. ಪ್ರೀಪೇಯ್ಡ್‌ ಯೋಜನೆ

ವಿ ಟೆಲಿಕಾಂನ 449ರೂ. ಪ್ರೀಪೇಯ್ಡ್‌ ಯೋಜನೆ

ವಿ ಟೆಲಿಕಾಂನ ಈ ಪ್ರೀಪೇಯ್ಡ್‌ ಪ್ಲ್ಯಾನ್‌ ಸಹ ಪ್ರತಿದಿನ 2GB ಡೇಟಾ ಲಭ್ಯವಿದೆ. ಆದರೆ ಸದ್ಯ ಈ ಯೋಜನೆಯು ಡಬಲ್ ಡೇಟಾ ಆಫರ್‌ ಪಡೆದಿದೆ. ಹೀಗಾಗಿ ಹೆಚ್ಚುವರಿ 2GB ಡೇಟಾ ಸೇರಲಿದ್ದು, ಒಟ್ಟು 4GB ಡೇಟಾ ಸೌಲಭ್ಯ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

ವಿ ಟೆಲಿಕಾಂನ 699ರೂ. ಪ್ರೀಪೇಯ್ಡ್‌ ಯೋಜನೆ

ವಿ ಟೆಲಿಕಾಂನ 699ರೂ. ಪ್ರೀಪೇಯ್ಡ್‌ ಯೋಜನೆ

ವಿ ಟೆಲಿಕಾಂನ 699ರೂ. ಪ್ಲ್ಯಾನ್‌ ಪ್ರತಿದಿನ 2GB ಡೇಟಾ ಪ್ರಯೋಜನ ಪಡೆದಿದೆ. ಸದ್ಯ ಡಬಲ್ ಡೇಟಾ ಆಫರ್‌ನಿಂದಾಗಿ ಹೆಚ್ಚುವರಿ 2GB ಡೇಟಾ ಸೇರಿ ಒಟ್ಟು 4GB ಡೇಟಾ ಸಿಗುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ವಾಯಿಸ್‌ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

Best Mobiles in India

English summary
Vi Telecom Stops Double Data Offer Prepaid Plans: Plans priced at Rs 299, Rs 449 and Rs 699.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X