ವ್ಯೂಸೋನಿಕ್‌ನಿಂದ ಗೇಮಿಂಗ್‌ ಮಾನಿಟರ್‌ ಲಾಂಚ್: 144Hz ರಿಫ್ರೆಶ್ ರೇಟ್!

|

ವ್ಯೂಸೋನಿಕ್ ಈಗಾಗಲೇ ಮಾರುಕಟ್ಟೆಯಲ್ಲಿ ಭಿನ್ನ ಶ್ರೇಣಿಯ ಗ್ಯಾಜೆಟ್‌ಗಳನ್ನು ಪರಿಚಯಿಸಿದೆ. ಇದರ ನಡುವೆ ಅಕ್ಟೋಬರ್‌ 10 ರಂದು ಕೈಗೆಟುಕುವ ಬೆಲೆಯಲ್ಲಿ ಗೇಮಿಂಗ್‌ ಮಾನಿಟರ್‌ ಅನಾವರಣ ಮಾಡಲಾಗಿದೆ. ಈ ಮಾನಿಟರ್‌ನ ಪ್ರಮುಖ ಫೀಚರ್ಸ್‌ಗಳಲ್ಲಿ 144Hz ರಿಫ್ರೆಶ್ ರೇಟ್ ಹೊಂದಿರುವುದು ಆಕರ್ಷಕ ಎನಿಸಿದೆ. 24 ಇಂಚಿನ ಗೇಮಿಂಗ್ ಮಾನಿಟರ್ VX2405-P-MHD ಅನ್ನು ವ್ಯೂಸೋನಿಕ್ ಭಾರತದಲ್ಲಿ ಬಿಡುಗಡೆ ಮಾಡಿದೆ.

ವ್ಯೂಸೋನಿಕ್

ಹೌದು, ಯುಎಸ್‌ ಮೂಲದ ವ್ಯೂಸೋನಿಕ್ ಕಂಪೆನಿಯು ಈ ಗೇಮಿಂಗ್‌ ಮಾನಿಟರ್‌ VX2405-P-MHD ಅನ್ನು ಲಾಂಚ್‌ ಮಾಡಿದೆ. ನಿಖರವಾಗಿ ಯಾವಾಗ ಗ್ರಾಹಕರಿಗೆ ಇದು ಸಿಗಲಿದೆ ಎಂಬುದನ್ನು ತಿಳಿಸಿಲ್ಲವಾದರೂ ಕೆಲವೇ ದಿನಗಳಲ್ಲಿ ಭಾರತದಲ್ಲಿ ಲಭ್ಯವಿರಲಿದೆ ಎನ್ನಲಾಗಿದೆ. ಇದು 24 ಇಂಚಿನ IPS LCD ಡಿಸ್‌ಪ್ಲೇ ಹೊಂದಿದೆ. ಜೊತೆಗೆ 16.7 ಮಿಲಿಯನ್ ಬಣ್ಣಗಳನ್ನು ಬೆಂಬಲಿಸಲಿದೆ. ಹಾಗಾದ್ರೆ ಬನ್ನಿ ಇದರ ಬೆಲೆ ಎಷ್ಟು?, ಫೀಚರ್ಸ್‌ ಏನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಡಿಸ್‌ಪ್ಲೇ ವಿಶೇಷತೆ

ಡಿಸ್‌ಪ್ಲೇ ವಿಶೇಷತೆ

ವ್ಯೂಸೋನಿಕ್ VX2405-P-MHD ಮಾನಿಟರ್‌ AMD ಫ್ರೀಸಿಂಕ್ ಪ್ರೀಮಿಯಂ ಟೆಕ್ನಾಲಜಿ ಜೊತೆಗೆ 24 ಇಂಚಿನ ಫುಲ್‌ HD 1920×1080 ಫಿಕ್ಸೆಲ್‌ ರೆಸಲ್ಯೂಶನ್ ಇರುವ ಡಿಸ್‌ಪ್ಲೇ ಹೊಂದಿದ್ದು, ಇದು ಉತ್ತಮ ಗೇಮಿಂಗ್ ಅನುಭವಕ್ಕಾಗಿ 144Hz ರಿಫ್ರೆಶ್ ರೇಟ್‌ ಪಡೆದಿದೆ. ಹಾಗೆಯೇ IPS LCD ಪ್ಯಾನೆಲ್ ಇದರಲ್ಲಿದೆ. ಇನ್ನುಳಿದಂತೆ ಕಪ್ಪು ಬಣ್ಣದ ಆಯ್ಕೆಯ ಜೊತೆಗೆ ಫ್ಲಾಟ್ ಡಿಸ್‌ಪ್ಲೇನಲ್ಲಿ ಕಂಡುಬರಲಿದ್ದು, ನಯವಾದ ಬಾಡಿ ಮತ್ತು ತೆಳುವಾದ ಬೆಜೆಲ್‌ಗಳಿಂದ ಪ್ಯಾಕ್‌ ಆಗಿದೆ.

ಮಾನಿಟರ್

ಈ ಮಾನಿಟರ್ 80M: 1 ಡೈನಾಮಿಕ್ ಕಾಂಟ್ರಾಸ್ಟ್ ಅನುಪಾತ ಹಾಗೂ ಡಿಸ್‌ಪ್ಲೇಯು 16.7 ಮಿಲಿಯನ್ ಕಲರ್ಸ್‌ ಬೆಂಬಲದ ಫೀಚರ್ಸ್‌ ಪಡೆದಿದ್ದು, ಉತ್ತಮ ಗೇಮಿಂಗ್‌ ಅನುಭವ ನೀಡಲಿದೆ. ಹಾಗೆಯೇ 250nits ಬ್ರೈಟ್‌ನೆಸ್‌ ಆಯ್ಕೆಯ ಜೊತೆಗೆ 178 ಡಿಗ್ರಿ ವೀವಿಂಗ್‌ ಆಂಗಲ್‌ನಲ್ಲೂ ದೃಶ್ಯವನ್ನು ಸ್ಪಷ್ಟವಾಗಿ ವೀಕ್ಷಿಸಬಹುದಾಗಿದೆ. ಡಿಸ್‌ಪ್ಲೇಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂಬ ಉದ್ದೇಶದಿಂದ AMD ಫ್ರೀಸಿಂಕ್ ಪ್ರೀಮಿಯಂ ಬೆಂಬಲದ ಆಯ್ಕೆ ನೀಡಲಾಗಿದೆ.

ಕನೆಕ್ಟಿವಿಟಿ ಆಯ್ಕೆ

ಕನೆಕ್ಟಿವಿಟಿ ಆಯ್ಕೆ

ವ್ಯೂಸೋನಿಕ್ ಗೇಮಿಂಗ್ ಮಾನಿಟರ್ VX2405-P-MHD ಡಿವೈಸ್‌ HDMI ಮತ್ತು ಡಿಸ್‌ಪ್ಲೇ ಪೋರ್ಟ್‌, 35mm ಆಡಿಯೊ ಪೋರ್ಟ್, ಕೆನ್ಸಿಂಗ್ಟನ್ ಲಾಕ್ ಸ್ಲಾಟ್, ಜೊತೆಗೆ ಆಡಿಯೋ ಔಟ್‌ಪುಟ್‌ಗಾಗಿ ಎರಡು 2W ಸ್ಪೀಕರ್‌ಗಳನ್ನು ಒಳಗೊಂಡಿದೆ. ಹಾಗೆಯೇ 1.5 ಮೀಟರ್ ಪವರ್ ಕೇಬಲ್‌ ಹಾಗೂ 1.5 ಮೀಟರ್ HDMI ಕೇಬಲ್ ಸಹ ಇದರಲ್ಲಿದೆ. ಇದೆಲ್ಲವನ್ನು ಒಳಗೊಂಡಂತೆ ಈ ಮಾನಿಟರ್‌ 3.5 ಕೆಜಿ ತೂಕ ಇದೆ. ಇನ್ನು ಈ ವಿಶೇಷ ಮಾನಿಟರ್ ವಿಂಡೋಸ್ ಮತ್ತು ಮ್ಯಾಕೋಸ್ ಆಪರೇಟಿಂಗ್ ಸಿಸ್ಟಮ್‌ಗಳೊಂದಿಗೆ ಕಾರ್ಯನಿರ್ವಹಿಸಲಿದೆ.

ವ್ಯೂಮೋಡ್ ಫೀಚರ್ಸ್

ವ್ಯೂಮೋಡ್ ಫೀಚರ್ಸ್

ಇದರ ಜೊತೆಗೆ ಕಂಪನಿಯ ವಿಶೇಷ ವ್ಯೂಮೋಡ್ ಫೀಚರ್ಸ್‌ ಹೊಂದಿದ್ದು, ಅದು ಗೇಮಿಂಗ್ ಆಡುವಾಗ, ವಿಡಿಯೋ ಅಥವಾ ಫೋಟೊ ಎಡಿಟಿಂಗ್ ಮಾಡುವಾಗ ಹಾಗೂ ಸ್ಟ್ರೀಮಿಂಗ್ ಮಾಡುವಾಗ ಬೇಕಾದ ಆಪ್ಟಿಮೈಸ್ಡ್ ಸ್ಕ್ರೀನ್ ಕಾರ್ಯಕ್ಷಮತೆಯನ್ನು ನೀಡಲಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ವ್ಯೂಸೋನಿಕ್ ನಿಂದ ಲಾಂಚ್‌ ಆಗಿರುವ ಈ ಹೊಸ ಗೇಮಿಂಗ್ ಮಾನಿಟರ್ VX2405-P-MHD ಕೆಲವೇ ದಿನಗಳಲ್ಲಿ ಅಮೆಜಾನ್‌ ಹಾಗೂ ಇತರೆ ರಿಟೇಲ್‌ ಮಳಿಗೆಗಳಲ್ಲಿ ಮಾರಾಟಕ್ಕೆ ಲಭ್ಯವಿರಲಿದೆ ಎನ್ನಲಾಗಿದೆ. ಇದರಲ್ಲಿ ವ್ಯೂಸೋನಿಕ್ 24,930ರೂ. ಗಳನ್ನು ನಿಗದಿ ಮಾಡಲಾಗಿದ್ದು, ಹಬ್ಬದ ಕೊಡುಗೆಯಾಗಿ ಭಾರತದಲ್ಲಿ 12,499ರೂ. ಗಳಿಗೆ ಡಿಸ್ಕೌಂಟ್‌ನಲ್ಲಿ ಖರೀದಿ ಮಾಡಬಹುದಾಗಿದೆ. ಇಷ್ಟೇ ಅಲ್ಲದೆ ಮರು ಖರೀದಿ ಆಯ್ಕೆಯನ್ನು ಸಹ ನೀಡಲಾಗಿದೆ. ಆದರೆ, ಇದು ಯಾವಾಗ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ ಎಂಬ ನಿಖರ ಮಾಹಿತಿಯನ್ನು ಕಂಪೆನಿ ಬಹಿರಂಗಪಡಿಸಿಲ್ಲ.

Best Mobiles in India

English summary
Viewsonic has already introduced a diverse range of gadgets in the market. Meanwhile, Viewsonic has launched the 24 inch gaming monitor VX2405-P-MHD in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X