ವಿವೋ T1 5G ಸಿಲ್ಕಿ ವೈಟ್‌ ಫೋನ್‌ ಸೇಲ್‌!..ಬೆಲೆ ಎಷ್ಟು?..ಆಫರ್‌ ಏನು?

|

ವಿವೋ ಕಂಪನಿಯು ಇತ್ತೀಚಿಗೆ ಹೊಸದಾಗಿ ಬಿಡುಗಡೆ ಮಾಡಿರುವ ವಿವೋ T1 5G ಸ್ಮಾರ್ಟ್‌ಫೋನ್‌ ಕೆಲವು ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರ ಗಮನ ಸೆಳೆದಿದೆ. ಈ ಫೋನಿನ ವಿವೋ T1 5G ಸಿಲ್ಕಿ ವೈಟ್‌ ವೇರಿಯಂಟ್‌ ಸಹ ಆಕರ್ಷಕ ಎನಿಸಿದೆ. ಇನ್ನು ಈ ಫೋನ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ ಫ್ಲಿಪ್‌ಕಾರ್ಟ್‌ ಹಾಗೂ ಅಧಿಕೃತ ವಿವೋ ವೆಬ್‌ಸೈಟ್‌ ಮೂಲಕ ಇಂದು ಮಧ್ಯರಾತ್ರಿಯಿಂದ (ಸೆಪ್ಟೆಂಬರ್ 22) ಖರೀದಿಗೆ ಲಭ್ಯವಾಗಲಿದೆ.

ಮಾರುಕಟ್ಟೆಯಲ್ಲಿ

ಹಬ್ಬದ ವಿಶೇಷ ಆವೃತ್ತಿಯಾಗಿ ವಿವೋ ಭಾರತೀಯ ಮಾರುಕಟ್ಟೆಯಲ್ಲಿ ವಿವೋ T1 5G ಸಿಲ್ಕಿ ವೈಟ್‌ ಬಣ್ಣದ ಆಯ್ಕೆಯಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಬಜೆಟ್‌ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದ್ದು, ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 695 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ಈ ಫೋನ್‌ 50 ಮೆಗಾ ಪಿಕ್ಸಲ್‌ನ ಪ್ರಾಥಮಿಕ ಕ್ಯಾಮೆರಾ ಪಡೆದಿದ್ದು, ಜೊತೆಗೆ 5000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ.

ಪಡೆದಿರುವುದು

ವಿವೋ T1 5G ಸಿಲ್ಕಿ ವೈಟ್‌ ವೇರಿಯಂಟ್‌ 4GB + 128GB ಮತ್ತು 6GB + 128GB ಸ್ಟೋರೇಜ್‌ನ ಆಯ್ಕೆಗಳನ್ನು ಪಡೆದಿದ್ದು, 120Hz ರೀಫ್ರೇಶ್ ರೇಟ್‌ ಹಾಗೂ 240Hz ಟಚ್ ಸ್ಯಾಪ್ಲಿಂಗ್ ರೇಟ್ ಪಡೆದಿರುವುದು ಪ್ಲಸ್‌ ಪಾಯಿಂಟ್‌ ಎನಿಸಿದೆ. ಇನ್ನುಳಿದಂತೆ ವಿವೋ T1 5G ಸಿಲ್ಕಿ ವೈಟ್‌ ವೇರಿಯಂಟ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ವಿವೋ T1 5G ಸಿಲ್ಕಿ ವೈಟ್‌ ಸ್ಮಾರ್ಟ್‌ಫೋನ್‌ 1,080x2,408 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.58 ಇಂಚಿನ ಫುಲ್‌ HD+ ಡಿಸ್‌ಪ್ಲೇ ಹೊಂದಿದೆ. ಇದು IPS LCD ಡಿಸ್‌ಪ್ಲೇ ಆಗಿದ್ದು, 120Hz ರಿಫ್ರೆಶ್ ರೇಟ್‌ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಹೊಂದಿದೆ.

ಪ್ರೊಸೆಸರ್‌ ಯಾವುದು?

ಪ್ರೊಸೆಸರ್‌ ಯಾವುದು?

ವಿವೋ T1 5G ಸಿಲ್ಕಿ ವೈಟ್‌ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್‌ 695 5G SoC ಅನ್ನು ಹೊಂದಿದ್ದು, ಆಂಡ್ರಾಯ್ಡ್‌ 12 ಆಧಾರಿತ ಫನ್‌ ಟಚ್‌ OS 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದಿದೆ. ಇದಲ್ಲದೆ ಮೈಕ್ರೊ SD ಕಾರ್ಡ್ ಮೂಲಕ 1TB ವರೆಗೆ ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ವಿಶೇಷ ಏನು

ಕ್ಯಾಮೆರಾ ವಿಶೇಷ ಏನು

ವಿವೋ T1 5G ಸಿಲ್ಕಿ ವೈಟ್‌ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ f/1.8 ಲೆನ್ಸ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್‌ f/2.4 ಲೆನ್ಸ್‌ ಹೊಂದಿದೆ. ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ. ಜೊತೆಗೆ ಸೂಪರ್ ನೈಟ್ ಮೋಡ್ ಮತ್ತು ಮಲ್ಟಿ ಸ್ಟೈಲ್ ಪೋರ್ಟ್ರೇಟ್ ಮೋಡ್ ಅನ್ನು ಒಳಗೊಂಡಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ವಿವೋ T1 5G ಸಿಲ್ಕಿ ವೈಟ್‌ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 18W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ಡ್ಯುಯಲ್-ಬ್ಯಾಂಡ್ Wi-Fi, ಬ್ಲೂಟೂತ್ v5.1, USB ಟೈಪ್-C, ಮತ್ತು USB OTG ಸೇರಿವೆ. ಇದಲ್ಲದೆ ಫಿಂಗರ್‌ಪ್ರಿಂಟ್ ಸೆನ್ಸಾರ್‌, ಲೈಟ್‌ ಸೆನ್ಸಾರ್‌, ಪ್ರಾಕ್ಸಿಮಿಟಿ ಸೆನ್ಸಾರ್‌, ಇ-ದಿಕ್ಸೂಚಿ, ವರ್ಚುವಲ್ ಗೈರೊಸ್ಕೋಪ್ ಸೆನ್ಸಾರ್‌ ಅನ್ನು ಒಳಗೊಂಡಿದೆ.

ವಿವೋ T1 5G ಸಿಲ್ಕಿ ವೈಟ್‌ ವೇರಿಯಂಟ್‌ಗೆ ಪರ್ಯಾಯ

ವಿವೋ T1 5G ಸಿಲ್ಕಿ ವೈಟ್‌ ವೇರಿಯಂಟ್‌ಗೆ ಪರ್ಯಾಯ

ವಿವೋ T1 5G ಸಿಲ್ಕಿ ವೈಟ್‌ ವೇರಿಯಂಟ್‌ಗೆ ಪ್ರಮುಖ ಪರ್ಯಾಯ ಫೋನ್‌ಗಳು ಯಾವವು ಎಂಬುದನ್ನು ನೋಡುವುದಾದರೆ, ಪೊಕೊ X4 ಪ್ರೊ 5G, ರೆಡ್ಮಿ ನೋಟ್ 11T 5G, ರಿಯಲ್‌ಮಿ 9i 5G ಹಾಗೂ ಮೊಟೊ G62 5G ಫೋನ್‌ಗಳು ಪ್ರಬಲ ಸ್ಪರ್ಧೆ ನೀಡುತ್ತವೆ. ಅಂದಹಾಗೇ ಈ ಎಲ್ಲ ಫೋನ್‌ಗಳಲ್ಲಿ ನಾವು ಗಮನಿಸಬಹುದಾದ ಅಂಶವೆಂದರೆ, ಪೊಕೊ X4 ಪ್ರೊ 5G ಮಾತ್ರ AMOLED ಡಿಸ್‌ಪ್ಲೇ ಒಳಗೊಂಡಿದೆ.

Best Mobiles in India

English summary
Vivo T1 5G Silky White Variant goes First Sale Today Midnight (Sep 22) via Flipkart Big Billion Days Sale.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X