ವಿವೋ 5G: ಇದೇ ತಿಂಗಳಿನಲ್ಲಿ ವಿವೋ ಫೋನ್‌ಗಳಲ್ಲಿ 5G ಸಾಫ್ಟ್‌ವೇರ್ ಅಪ್‌ಡೇಟ್‌ ಲಭ್ಯ!

|

ಭಾರತದ ಕೆಲವು ಪ್ರಮುಖ ಮಹಾ ನಗರಗಳಲ್ಲಿ ಜಿಯೋ ಮತ್ತು ಏರ್‌ಟೆಲ್ ಈಗಾಗಲೇ ತಮ್ಮ 5G ನೆಟ್‌ವರ್ಕ್ ಸೇವೆಯನ್ನು ಪ್ರಾರಂಭಿಸಿವೆ. ಏರ್‌ಟೆಲ್ ಟೆಲಿಕಾಂ, ಏರ್‌ಟೆಲ್‌ 5G ಪ್ಲಸ್ ಸೇವೆಯನ್ನು ಸದ್ಯ ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್, ಸಿಲಿಗುರಿ, ನಾಗ್ಪುರ ಮತ್ತು ವಾರಣಾಸಿ ಒಳಗೊಂಡಂತೆ ಎಂಟು ನಗರಗಳಲ್ಲಿ ಲೈವ್ ಮಾಡಿದೆ. ಜಿಯೋ ಮುಂಬೈ, ದೆಹಲಿ, ಕೋಲ್ಕತ್ತಾ ಮತ್ತು ವಾರಣಾಸಿ ನಗರಗಳಲ್ಲಿ 5G ಸೇವೆಯನ್ನು ಪ್ರಾಯೋಗಿಕವಾಗಿ ಪರಿಚಯಿಸಿದೆ.

ಈಗಾಗಲೇ

ಇದಕ್ಕೆ ಪೂರಕವಾಗಿ ಈಗಾಗಲೇ ಕೆಲವು ಮೊಬೈಲ್‌ ಫೋನ್‌ಗಳು 5G ಸಪೋರ್ಟ್ ಪಡೆದಿವೆ. ಸ್ಯಾಮ್‌ಸಂಗ್‌ ನವೆಂಬರ್‌ನಲ್ಲಿ ಹಾಗೂ ಆಪಲ್‌ ಡಿಸೆಂಬರ್‌ನಲ್ಲಿ 5G ಸಪೋರ್ಟ್‌ಗಾಗಿ ಸಾಫ್ಟ್‌ವೇರ್ ಅಪ್‌ಡೇಟ್‌ ಮಾಡುವುದಾಗಿ ಹೇಳಿವೆ. ಅದೇ ರೀತಿ ವಿವೋ (Vivo) ಕಂಪನಿಯು ಇದೇ ತಿಂಗಳಿನಲ್ಲಿ (ಅಕ್ಟೋಬರ್) 5G ಸಪೋರ್ಟ್‌ ರೋಲ್‌ಔಟ್‌ ಮಾಡುವುದಾಗಿ ಹೇಳಿದೆ.

ಸೇವೆಗಳಿಗಾಗಿ

ವಿವೋ ಕಂಪನಿಯು 5G ಸೇವೆಗಳಿಗಾಗಿ ಸುಮಾರು 30 ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇವು ಸ್ವತಂತ್ರವಲ್ಲದ 5G ನೆಟ್‌ವರ್ಕ್‌ಗೆ (non-standalone 5G) ಹೊಂದಿಕೊಳ್ಳುತ್ತವೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಸ್ಮಾರ್ಟ್‌ಫೋನ್‌ಗಳು

'ನಮ್ಮ ಆರಕ್ಕೂ ಹೆಚ್ಚು ಸ್ಮಾರ್ಟ್‌ಫೋನ್‌ಗಳು 5G SA (ಸ್ವತಂತ್ರ) ನೆಟ್‌ವರ್ಕ್ ಅನ್ನು ಬೆಂಬಲಿಸುತ್ತಿವೆ. ನಮ್ಮ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು NSA (ಸ್ವತಂತ್ರವಲ್ಲದ ನೆಟ್‌ವರ್ಕ್) ನೊಂದಿಗೆ ಹೊಂದಿಕೊಳ್ಳುತ್ತವೆ. ನಾವು ಈ ತಿಂಗಳು ಸಾಫ್ಟ್‌ವೇರ್ ನವೀಕರಣಗಳನ್ನು ಬಿಡುಗಡೆ ಮಾಡುತ್ತೇವೆ. ಅದು ನಮ್ಮ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳನ್ನು 5G SA ನೊಂದಿಗೆ ಹೊಂದಿಕೊಳ್ಳುತ್ತದೆ' ವಿವೋ ಇಂಡಿಯಾ ಬ್ಯುಸಿನೆಸ್ ಸ್ಟ್ರಾಟಜಿ ಹೆಡ್ ಪೈಗಮ್ ಡ್ಯಾನಿಶ್ ತಿಳಿಸಿದರು.

ರೋಲ್‌ಔಟ್‌

ಇನ್ನು ಮೊಟೊ ಕಂಪನಿಯು ಸಹ ತನ್ನ ಮೊಟೊ ಸ್ಮಾರ್ಟ್‌ಫೋನ್‌ಗಳಿಗೆ 5G ಸಪೋರ್ಟ್‌ ರೋಲ್‌ಔಟ್‌ ಮಾಡಲಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಮೊಟೊ ಎಡ್ಜ್ 30 ಅಲ್ಟ್ರಾ: ರೋಲ್‌ಔಟ್‌ ದಿನಾಂಕ ಅಕ್ಟೋಬರ್ 10
ಮೊಟೊ ಎಡ್ಜ್ 30 ಫ್ಯೂಷನ್: ರೋಲ್‌ಔಟ್‌ ದಿನಾಂಕ ಅಕ್ಟೋಬರ್ 11
ಮೊಟೊ G62 5G: ರೋಲ್‌ಔಟ್‌ ದಿನಾಂಕ ಅಕ್ಟೋಬರ್ 25 ಲಭ್ಯವಾಗಲಿದೆ.
ಮೊಟೊ G82 5G: ರೋಲ್‌ಔಟ್‌ ದಿನಾಂಕ ಅಕ್ಟೋಬರ್ 25 ಲಭ್ಯವಾಗಲಿದೆ.

ನವೆಂಬರ್

ಮೊಟೊ ಎಡ್ಜ್ 30: ರೋಲ್‌ಔಟ್‌ ದಿನಾಂಕ ಅಕ್ಟೋಬರ್ 25 ಲಭ್ಯವಾಗಲಿದೆ.
ಮೊಟೊ G71 5G: ರೋಲ್‌ಔಟ್‌ ದಿನಾಂಕ ಅಕ್ಟೋಬರ್ 25 ಲಭ್ಯವಾಗಲಿದೆ.
ಮೊಟೊ ಎಡ್ಜ್ 30 ಪ್ರೊ: ರೋಲ್‌ಔಟ್‌ ದಿನಾಂಕ ನವೆಂಬರ್ 5 ಲಭ್ಯವಾಗಲಿದೆ.

ಲಭ್ಯವಾಗಲಿದೆ

ಮೊಟೊ G51 5G: ರೋಲ್‌ಔಟ್‌ ದಿನಾಂಕ ನವೆಂಬರ್ 5 ಲಭ್ಯವಾಗಲಿದೆ.
ಮೊಟೊ ಎಡ್ಜ್ 20 ಪ್ರೊ: ರೋಲ್‌ಔಟ್‌ ದಿನಾಂಕ ನವೆಂಬರ್ 5 ಲಭ್ಯವಾಗಲಿದೆ.
ಮೊಟೊ ಎಡ್ಜ್ 20: ರೋಲ್‌ಔಟ್‌ ದಿನಾಂಕ ನವೆಂಬರ್ 5 ಲಭ್ಯವಾಗಲಿದೆ.
ಮೊಟೊ ಎಡ್ಜ್ 20 ಫ್ಯೂಷನ್: ರೋಲ್‌ಔಟ್‌ ದಿನಾಂಕ ನವೆಂಬರ್ 5 ಲಭ್ಯವಾಗಲಿದೆ.

ಸ್ಮಾರ್ಟ್‌ಫೋನ್‌ನಲ್ಲಿ 5G ಆಕ್ಟಿವ್‌ ಮಾಡುವುದು ಹೇಗೆ ಗೊತ್ತಾ?

ಸ್ಮಾರ್ಟ್‌ಫೋನ್‌ನಲ್ಲಿ 5G ಆಕ್ಟಿವ್‌ ಮಾಡುವುದು ಹೇಗೆ ಗೊತ್ತಾ?

* ನಿಮ್ಮ ಸ್ಮಾರ್ಟ್‌ಫೋನ್‌ ನಲ್ಲಿ ಸೆಟ್ಟಿಂಗ್‌ಗಳ ಅಪ್ಲಿಕೇಶನ್ ಅನ್ನು ಟ್ಯಾಪ್ ಮಾಡಿ
* ಮೊಬೈಲ್ ನೆಟ್‌ವರ್ಕ್ ಆಯ್ಕೆಗೆ ನ್ಯಾವಿಗೇಟ್ ಮಾಡಿ
* ನೆಟ್‌ವರ್ಕ್ ಮೋಡ್ > 5G / 4G/ 3G/ 2G ಆಯ್ಕೆಯನ್ನು ಆಯ್ಕೆ ಮಾಡಿ

5G ವೇಗ ಎಷ್ಟಿರುತ್ತದೆ?

5G ವೇಗ ಎಷ್ಟಿರುತ್ತದೆ?

5G ನೆಟ್‌ವರ್ಕ್‌ ವೇಗವು ಸದ್ಯದ 4G ನೆಟ್‌ವರ್ಕ್‌ ಗಿಂತ ಕನಿಷ್ಠ 20 ರಿಂದ 30 ಅಧಿಕ ವೇಗದಲ್ಲಿ ಇರುತ್ತದೆ.

ಏರ್ಟೆಲ್ 5G ಲಭ್ಯವಿರುವ ನಗರಗಳು

ಏರ್ಟೆಲ್ 5G ಲಭ್ಯವಿರುವ ನಗರಗಳು

ಮೊದಲ ಹಂತದಲ್ಲಿ, ಏರ್ಟೆಲ್ 5G ಸೇವೆಯು ದೆಹಲಿ, ಮುಂಬೈ, ವಾರಣಾಸಿ, ಬೆಂಗಳೂರು, ಚೆನ್ನೈ, ಹೈದರಾಬಾದ್, ನಾಗ್ಪುರ ಮತ್ತು ಸಿಲಿಗುರಿ ಸೇರಿದಂತೆ ಎಂಟು ನಗರಗಳಲ್ಲಿ ಲಭ್ಯವಿದೆ.

ಜಿಯೋ ಮತ್ತು ವಿ ಟೆಲಿಕಾಂ 5G ಸೇವೆ

ಜಿಯೋ ಮತ್ತು ವಿ ಟೆಲಿಕಾಂ 5G ಸೇವೆ

ಜಿಯೋ ಟೆಲಿಕಾಂ ದೀಪಾವಳಿ ವೇಳಗೆ 5G ಸೇವೆಯನ್ನು ಪ್ರಾರಂಭಿಸುವುದಾಗಿ ಹೇಳಿದೆ. ಹಾಗೆಯೇ 5G ಸೇವೆಗಳು ಕೈಗೆಟುಕುವ ದರದಲ್ಲಿ ಇರಲಿದೆ ಎಂದು ಹೇಳಿದೆ. ಇನ್ನು ವೊಡಾಫೋನ್ ಐಡಿಯಾ ಟೆಲಿಕಾಂ (ವಿ ಟೆಲಿಕಾಂ) 5G ಅನ್ನು ಯಾವಾಗ ಪ್ರಾರಂಭಿಸಲಿದೆ ಎನ್ನುವ ಬಗ್ಗೆ ಅಧಿಕೃತ ದಿನಾಂಕ ತಿಳಿಸಿಲ್ಲ.

Best Mobiles in India

English summary
5G Rollout: Vivo To Release Software Updates For Its Devices This Month To Support 5G Services.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X