ಇಂದು ಎಂಟ್ರಿ ಕೊಡಲಿದೆ ವಿವೋ X90 ಫೋನ್‌ ಸರಣಿ!..ಅಚ್ಚರಿಯ ಫೀಚರ್ಸ್‌!

|

ಜನಪ್ರಿಯ ವಿವೋ (Vivo) ಸಂಸ್ಥೆಯು ಇಂದು (ನವೆಂಬರ್ 22 ರಂದು) ನೂತನವಾಗಿ ವಿವೋ X90 ಸ್ಮಾರ್ಟ್‌ಫೋನ್‌ (Vivo X90) ಸರಣಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಇನ್ನು ಕಂಪನಿಯ ಈ ನೂತನ ಸ್ಮಾರ್ಟ್‌ಫೋನ್ ಸರಣಿಯು ವಿವೋ X90, ವಿವೋ X90 ಪ್ರೊ ಹಾಗೂ ವಿವೋ X90 ಪ್ರೊ ಪ್ಲಸ್‌ ಮಾಡೆಲ್‌ಗಳನ್ನು ಒಳಗೊಂಡಿರಲಿದೆ. ಈ ಫೋನ್‌ಗಳ ಲೀಕ್‌ ಮಾಹಿತಿಗಳು ಈಗಾಗಲೇ ಭಾರೀ ಕುತೂಹಲ ಮೂಡಿಸಿವೆ.

ವಿವೋ X90

ಹೌದು, ವಿವೋ ಸಂಸ್ಥೆಯು ವಿವೋ X90, ವಿವೋ X90 ಪ್ರೊ ಹಾಗೂ ವಿವೋ X90 ಪ್ರೊ ಪ್ಲಸ್‌ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಈ ಫೋನ್‌ಗಳ ಬಗ್ಗೆ ಈಗಾಗಲೇ ಕೆಲವು ಲೀಕ್‌ ಮಾಹಿತಿಗಳು ಸದ್ದು ಮಾಡಿವೆ. ಲೀಕ್ ಮಾಹಿತಿ ಪ್ರಕಾರ ವಿವೋ X90, ವಿವೋ X90 ಪ್ರೊ ಫೋನ್‌ಗಳು ಮೀಡಿಯಾ ಟೆಕ್ ಡೈಮೆನ್ಸಿಟಿ 9200 SoC ಪ್ರೊಸೆಸರ್‌ ಹೊಂದಿದ್ದು, ಇನ್ನು ವಿವೋ X90 ಪ್ರೊ ಪ್ಲಸ್‌ ಫೋನ್‌ ಸ್ನಾಪ್‌ಡ್ರಾಗನ್ 8 ಜೆನ್‌ 2 ಪ್ರೊಸೆಸರ್‌ ಪಡೆದಿರಲಿದೆ. ಹಾಗಾದರೆ ಈ ಫೋನ್‌ಗಳ ನಿರೀಕ್ಷಿತ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಸ್ಟೊರೇಜ್‌ ಆಯ್ಕೆಗಳು

ಸ್ಟೊರೇಜ್‌ ಆಯ್ಕೆಗಳು

ವಿವೋ X90 ಸರಣಿಯ ಸ್ಟೊರೇಜ್‌ ಆಯ್ಕೆಗಳು ಆನ್‌ಲೈನ್‌ನಲ್ಲಿ ಬಹಿರಂಗವಾಗಿರುವ ಮಾಹಿತಿಯ ಪ್ರಕಾರ ವಿವೋ X90 ಸರಣಿ ಸ್ಮಾರ್ಟ್‌ಫೋನ್‌ಗಳಲ್ಲಿ ವಿವೋ X90 ಸ್ಮಾರ್ಟ್‌ಫೋನ್‌ 8GB RAM + 128 GB, 8GB RAM + 256 GB, 12GB RAM + 256GB, 12 GB RAM + 512 GB, ಸ್ಟೋರೇಜ್‌ ಆಯ್ಕೆಯಗಳಲ್ಲಿ ಬರಲಿದೆ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್‌ ಕೆಂಪು, ಐಸ್ ನೀಲಿ ಮತ್ತು ಕಪ್ಪು ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ.

ವಿವೋ X90 ಸ್ಮಾರ್ಟ್‌ಫೋನ್‌

ವಿವೋ X90 ಸ್ಮಾರ್ಟ್‌ಫೋನ್‌

ವಿವೋ X90 ಸ್ಮಾರ್ಟ್‌ಫೋನ್‌ 6.78 ಇಂಚಿನ FHD+ ಡಿಸ್‌ಪ್ಲೇ ಹೊಂದಿರಲಿದ್ದು, ಈ ಡಿಸ್‌ಪ್ಲೇಯ ಪಿಕ್ಸಲ್ ರೆಸಲ್ಯೂಶ್‌ 2800×1260 ಆಗಿರಲಿದೆ. ಹಾಗೆಯೇ ಈ ಫೋನ್ AMOLED ಡಿಸ್‌ಪ್ಲೇಯನ್ನು ಹೊಂದಿರುತ್ತದೆ. ಜೊತೆಗೆ ವಿವೋ X90 ಪ್ರೊ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 9200 SoC ಪ್ರೊಸೆಸರ್‌ ಹೊಂದಿರಲಿದ್ದು, ಪ್ರಮುಖ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿರಲಿದೆ.

ವಿವೋ X90 ಪ್ರೊ ಸ್ಮಾರ್ಟ್‌ಫೋನ್‌

ವಿವೋ X90 ಪ್ರೊ ಸ್ಮಾರ್ಟ್‌ಫೋನ್‌

ವಿವೋ X90 ಪ್ರೊ ಸ್ಮಾರ್ಟ್‌ಫೋನ್‌ ಸಹ 6.78 ಇಂಚಿನ FHD+ ಡಿಸ್‌ಪ್ಲೇ ಹೊಂದಿರಲಿದ್ದು, ಈ ಡಿಸ್‌ಪ್ಲೇಯ ಪಿಕ್ಸಲ್ ರೆಸಲ್ಯೂಶ್‌ 2800×1260 ಆಗಿರಲಿದೆ. ಹಾಗೆಯೇ ಈ ಫೋನ್ AMOLED ಡಿಸ್‌ಪ್ಲೇಯನ್ನು ಹೊಂದಿರುತ್ತದೆ. ಜೊತೆಗೆ ವಿವೋ X90 ಪ್ರೊ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 9200 SoC ಪ್ರೊಸೆಸರ್‌ ಹೊಂದಿದ್ದು, ಮೂರು ರೀತಿಯ ಸ್ಟೋರೇಜ್‌ ಆಯ್ಕೆಗಳಲ್ಲಿ ದೊರೆಯಲಿದೆ. ಇದರಲ್ಲಿ 8GB RAM + 256GB, 12GB RAM + 256GB, 12GB RAM + 512GB ಇಂಟರ್‌ ಸ್ಟೋರೇಜ್‌ ಆಯ್ಕೆಗಳಲ್ಲಿ ಬರಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಕಪ್ಪು ಮತ್ತು ಕೆಂಪು ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ವಿವೋ X90 ಪ್ರೊ+ ಸ್ಮಾರ್ಟ್‌ಫೋನ್‌

ವಿವೋ X90 ಪ್ರೊ+ ಸ್ಮಾರ್ಟ್‌ಫೋನ್‌

ವಿವೋ X90 ಪ್ರೊ+ ಸ್ಮಾರ್ಟ್‌ಫೋನ್‌ 6.78 ಇಂಚಿನ FHD+ ಡಿಸ್‌ಪ್ಲೇ ಹೊಂದಿರಲಿದ್ದು, ಈ ಡಿಸ್‌ಪ್ಲೇಯ ಪಿಕ್ಸಲ್ ರೆಸಲ್ಯೂಶ್‌ 2800×1260 ಆಗಿರಲಿದೆ. ಇನ್ನು ಈ ಫೋನ್ ಸ್ನಾಪ್‌ಡ್ರಾಗನ್ 8 ಜೆನ್‌ 2 ಪ್ರೊಸೆಸರ್‌ ಹೊಂದಿರಲಿದ್ದು, ಎರಡು ಸ್ಟೋರೇಜ್‌ ಕಾನ್ಫಿಗರೇಶನ್‌ಗಳಲ್ಲಿ ಬರಲಿದೆ ಎಂದು ಹೇಳಲಾಗಿದೆ. ಇದರಲ್ಲಿ 12GB RAM + 256GB, 12GB RAM + 512GB ಇನ್‌ಬಿಲ್ಟ್‌ ಸ್ಟೋರೇಜ್‌ ಆಯ್ಕೆಗಳಲ್ಲಿ ಬರಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಕಪ್ಪು ಮತ್ತು ಕೆಂಪು ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
Vivo X90, Vivo X90 Pro, Vivo X90 Pro Launch Today: Here's what to expect.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X