ಮಾರುಕಟ್ಟೆಗೆ ವಿವೋ Y53t ಸ್ಮಾರ್ಟ್‌ಫೋನ್ ಎಂಟ್ರಿ!..ಇದು ಪಕ್ಕಾ ಬಜೆಟ್‌ ಫೋನ್‌!

|

ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಸಂಸ್ಥೆಗಳಲ್ಲಿ ಒಂದಾದ ವಿವೋ ಕಂಪೆನಿ ಈಗಾಗಲೇ ಹಲವು ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿದೆ. ಕಂಪನಿಯು ಇದೀಗ ಹೊಸದಾಗಿ ವಿವೋ Y53t (Vivo Y53t) ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಡ್ಯುಯಲ್‌ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 13 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ. ಹಾಗೆಯೇ ಅಧಿಕ ಬ್ಯಾಟರಿ ಬಾಳಿಕೆಯನ್ನು ಹೊಂದಿರುವುದು ಆಕರ್ಷಕ ಎನಿಸಿಕೊಂಡಿದೆ.

ಸ್ಮಾರ್ಟ್‌ಫೋನ್‌

ಹೌದು, ವಿವೋ ಸ್ಮಾರ್ಟ್‌ಫೋನ್‌ ಕಂಪೆನಿ ತನ್ನ ಹೊಸ ವಿವೋ Y53t ಸ್ಮಾರ್ಟ್‌ಫೋನ್‌ ಅನ್ನು ಚೀನಾದ ಮೊಬೈಲ್‌ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 700 ಪ್ರೊಸೆಸರ್‌ ವೇಗವನ್ನು ಪಡೆದುಕೊಂಡಿದೆ. 4GB + 128GB ಮತ್ತು 6GB + 128GB ಸ್ಟೋರೇಜ್ ವೇರಿಯಂಟ್‌ನ ಆಯ್ಕೆಗಳನ್ನು ಒಳಗೊಂಡಿದೆ. ಇದಕ್ಕೆ ಪೂರಕವಾಗಿ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿದೆ. ಹಾಗಾದರೇ ವಿವೋ Y53t ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ ಪಡೆದಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ವಿವೋ Y53t ಸ್ಮಾರ್ಟ್‌ಫೋನ್‌ ಅಧಿಕ ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.51 ಇಂಚಿನ ಫುಲ್‌ ಹೆಚ್‌ಡಿ+ ಡಿಸ್‌ಪ್ಲೇಯನ್ನ ಹೊಂದಿದೆ. ಅಲ್ಲದೆ ಈ ಡಿಸ್‌ಪ್ಲೇಯು ವಾಟರ್‌ ಡ್ರಾಪ್‌ ನಾಚ್‌ ವಿನ್ಯಾಸವನ್ನ ಹೊಂದಿದ್ದು, 1500:1 ಡಿಸ್‌ಪ್ಲೇ ಕಾಂಟ್ರಾಸ್ಟ್‌ ಅನುಪಾತವನ್ನ ಒಳಗೊಂಡಿದೆ. ಸ್ಕ್ರೀನ್ 60Hz ರೀಫ್ರೇಶ್ ರೇಟ್ ಹೊಂದಿದೆ. 164.05 × 75.60 × 8.15ಎಂಎಂ ಸುತ್ತಳತೆ ಪಡೆದಿದ್ದು, 189 ಗ್ರಾಂ ತೂಕವನ್ನು ಹೊಂದಿದೆ.

ಪ್ರೊಸೆಸರ್‌ ಕಾರ್ಯ ಏನು

ಪ್ರೊಸೆಸರ್‌ ಕಾರ್ಯ ಏನು

ವಿವೋ Y53t ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 700 ಪ್ರೊಸೆಸರ್‌ ವೇಗವನ್ನು ಪಡೆದುಕೊಂಡಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೇಯೇ ಈ ಸ್ಮಾರ್ಟ್‌ಫೋನ್‌ 4GB + 128GB ಮತ್ತು 6GB + 128GB ಸ್ಟೋರೇಜ್ ಆಂತರಿಕ ಸಂಗ್ರಹ ಸಾಮರ್ಥ್ಯದ ಆಯ್ಕೆಗಳನ್ನು ಒಳಗೊಂಡಿದೆ.

ಡ್ಯುಯಲ್‌ ಕ್ಯಾಮೆರಾ ವಿನ್ಯಾಸ

ಡ್ಯುಯಲ್‌ ಕ್ಯಾಮೆರಾ ವಿನ್ಯಾಸ

ವಿವೋ Y53t ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾವು 2 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇನ್ನು 5 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು

ವಿವೋ Y53t ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, 15W ಫಾಸ್ಟ್‌ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಯ್ಕೆ ಪಡೆದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ ವೈ-ಫೈ, GPS ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ನಲ್ಲಿ ಅಕ್ಸೆಲೆರೊಮೀಟರ್ ಅನ್ನು ಸಹ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ವಿವೋ Y53t ಸ್ಮಾರ್ಟ್‌ಫೋನ್‌ 4GB + 128GB ಸ್ಟೋರೇಜ್‌ ವೇರಿಯಂಟ್‌ ಬೆಲೆಯು ಚೀನಾದಲ್ಲಿ RMB 999 (ಭಾರತದಲ್ಲಿ ಅಂದಾಜು 12,000ರೂ.) ಎನ್ನಲಾಗಿದೆ. 6GB + 128GB ವೇರಿಯಂಟ್ ಬೆಲೆಯು RMB 1099 (ಭಾರತದಲ್ಲಿ ಅಂದಾಜು 13,200ರೂ.) ಎನ್ನಲಾಗಿದೆ. ಇನ್ನು ಈ ಫೋನ್ ಬ್ಲ್ಯಾಕ್‌ ಮತ್ತು ಆರೆಂಜ್‌ ಬಣ್ಣಗಳಲ್ಲಿ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಭಾರತದಲ್ಲಿ ಯಾವಾಗ ಲಭ್ಯ ಎನ್ನುವ ಬಗ್ಗೆ ಸಂಸ್ಥೆಯು ಮಾಹಿತಿ ಹೊರಹಾಕಿಲ್ಲ.

Best Mobiles in India

English summary
Vivo Y53t with MediaTek Dimensity 700 Launched: Price, Specifications.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X