5G ಸೇವೆ ಪಡೆಯುವ ಅವಸರದಲ್ಲಿ ಈ ಲಿಂಕ್‌ ಕ್ಲಿಕ್‌ ಮಾಡಿದ್ರೆ ನಿಮ್ಮ ಕಥೆ ಅಷ್ಟೆ... ಎಚ್ಚರಿಕೆ ವಹಿಸಿ!

|

ಈಗ ಎಲ್ಲಿನೋಡಿದರೂ 5G ಸದ್ದು, 5G ವಿಷಯ ಎಷ್ಟು ವೇಗವಾಗಿ ಹರಡಿತ್ತು ಎಂದರೆ 5G ಸೇವೆ ಆರಂಭವಾಗುವ ಮುನ್ನವೇ 5G ಬೆಂಬಲಿಸುವ ಅದೆಷ್ಟೋ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದವು. ಇದರ ಭಾಗವಾಗಿಯೇ ಏರ್‌ಟೆಲ್‌ ಹಾಗೂ ಜಿಯೋ ಮೆಟ್ರೋ ನಗರಗಳಲ್ಲಿ ಈ ಸೇವೆ ನೀಡುತ್ತಾ ಬರುತ್ತಿದ್ದು, ಇದರಷ್ಟೇ ವೇಗದಲ್ಲಿ ಮೋಸದ ಘಟನೆಗಳು ಸಹ ಸಂಭವಿಸುತ್ತಿವೆ.

5G

ಹೌದು, ಯಾರು ತಾನೇ 5G ಸೇವೆ ಬೇಡ ಎನ್ನುತ್ತಿದ್ದಾರೆ ಹೇಳಿ. ಇದನ್ನೇ ಆಧಾರವಾಗಿರಿಸಿಕೊಂಡು ಕೆಲವು ಕಿಡಿಗೇಡಿಗಳು ವೋಡಾಫೋನ್‌ ಬಳಕೆದಾರರನ್ನು ವಂಚಿಸುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ. ಇದು ವಿ ಗ್ರಾಹಕರಿಗಷ್ಟೇ ಅಲ್ಲದೆ ಈಗಾಗಲೇ ಈ ಸೇವೆ ನೀಡುತ್ತಿರುವ ಏರ್‌ಟೆಲ್‌ ಹಾಗೂ ಜಿಯೋ ಗ್ರಾಹಕರ ಮೇಲೂ ಪರಿಣಾಮ ಬೀರುತ್ತಿದೆ. ಹಾಗಿದ್ರೆ 5G ಹೆಸರಲ್ಲಿ ಆಗುತ್ತಿರುವ ವಂಚನೆ ಏನು?, ವಿ ಗ್ರಾಹಕರು ಏನು ಮಾಡಬೇಕು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಗ್ರಾಹಕರೇ ಎಚ್ಚರ...

ಗ್ರಾಹಕರೇ ಎಚ್ಚರ...

ವೊಡಾಫೋನ್-ಐಡಿಯಾ ಬಳಕೆದಾರರಿಗೆ ಕಿಡಿಗೇಡಿಗಳು 5G ಗೆ ಅಪ್‌ಗ್ರೇಡ್ ಮಾಡುವ ಭರವಸೆ ನೀಡುತ್ತಿದ್ದಾರೆ. ಈ ಮೂಲಕ ಅವರು ಹಣ ಹಾಗೂ ಸೂಕ್ಷ್ಮ ಡೇಟಾ ಕದಿಯಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಗ್ರಾಹಕರು ಮೊಬೈಲ್‌ಗೆ ಎಸ್‌ಎಮ್‌ಎಸ್‌ ಹಾಗೂ ವಾಟ್ಸಾಪ್‌ನಲ್ಲಿ ಈ ರೀತಿಯ ಮೆಸೇಜ್‌ಗಳನ್ನು ಕಳುಹಿಸಲಾಗುತ್ತಿದ್ದು, ಎಚ್ಚರಿಕೆ ವಹಿಸಿ ಎಂದು ವಿ ಮಾಹಿತಿ ನೀಡಿದೆ.

ಸಂದೇಶದಲ್ಲಿರುವ ಲಿಂಕ್‌ ಕ್ಲಿಕ್‌ ಮಾಡಿದ್ರೆ ಕಥೆ ಅಷ್ಟೇ

ಸಂದೇಶದಲ್ಲಿರುವ ಲಿಂಕ್‌ ಕ್ಲಿಕ್‌ ಮಾಡಿದ್ರೆ ಕಥೆ ಅಷ್ಟೇ

ಕಿಡಿಗೇಡಿಗಳು ನಿಮ್ಮ ಫೋನ್‌ಗೆ 5G ಗೆ ಅಪ್‌ಗ್ರೇಡ್ ಸಂಬಂಧದ ಸಂದೇಶದ ಜೊತೆಗೆ ಒಂದು ಲಿಂಕ್‌ ಅನ್ನು ಸಹ ಕಳುಹಿಸುತ್ತಿದ್ದು, ಇದನ್ನೇನಾದರೂ ಕ್ಲಿಕ್‌ ಮಾಡಿದರೆ ನಿಮ್ಮ ಡೇಟಾ ಹಾಗೂ ಹಣ ಹ್ಯಾಕರ್‌ಗಳ ವಶವಾಗುತ್ತದೆ. ಈಗಾಗಲೇ ಹಲವಾರು ಗ್ರಾಹಕರು ಈ ರೀತಿಯ ಸಂದೇಶಗಳನ್ನು ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ.

ಮೆಸೆಜ್‌ನಲ್ಲಿ ಇರುವ ಮಾಹಿತಿ ಏನು?

ಮೆಸೆಜ್‌ನಲ್ಲಿ ಇರುವ ಮಾಹಿತಿ ಏನು?

'Vi 5G ನೆಟ್‌ವರ್ಕ್ ಲೈವ್ ಆಗಿದೆ. ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ ಅಥವಾ ಅಪ್‌ಗ್ರೇಡ್ ಮಾಡಲು XXXXXX ಸಂಖ್ಯೆಗೆ ಕರೆ ಮಾಡಿ,' ಎಂದು ಬರೆದಿರಲಾಗುತ್ತದೆ. ಇನ್ನು ಇಲ್ಲಿ ಅಡಕ ಮಾಡಲಾದ ಲಿಂಕ್‌ ಕ್ಲಿಕ್‌ ಮಾಡಿದರೆ ಅದು ಪೇಟಿಎಮ್‌ ಪೇಜ್‌ ತೆರೆದುಕೊಳ್ಳುತ್ತದೆ.

 ವೋಡಾಫೋನ್‌ ಇನ್ನೂ  5G ಸೇವೆ ಆರಂಭಿಸಿಲ್ಲ

ವೋಡಾಫೋನ್‌ ಇನ್ನೂ 5G ಸೇವೆ ಆರಂಭಿಸಿಲ್ಲ

ಪ್ರಮುಖವಾಗಿ ಗಮನಿಸಬೇಕಾದ ಅಂಶ ಎಂದರೆ ಏರ್‌ಟೆಲ್‌ ಹಾಗೂ ಜಿಯೋ ಹೊರತು ಪಡಿಸಿ ವಿ ಈವರೆಗೂ ಸಹ ಈ ಸೇವೆ ನೀಡುವುದಾಗಿ ಮಾಹಿತಿ ನೀಡಿಲ್ಲ. ಅಂದರೆ ವಿ ಗ್ರಾಹಕರಿಗೆ ಬರುವ 5G ಅಪ್‌ಗ್ರೇಡ್ ನೀಡುವುದಾಗಿ ಹೇಳಿಕೊಳ್ಳುವ ಎಲ್ಲಾ ಸಂದೇಶಗಳು/ಕರೆಗಳು ವಂಚನೆಯ ಮಾರ್ಗಗಳೇ ಆಗಿವೆ.

ಏರ್‌ಟೆಲ್‌, ವಿ ಬಳಕೆದಾರರಿಗೂ ಮೋಸ

ಏರ್‌ಟೆಲ್‌, ವಿ ಬಳಕೆದಾರರಿಗೂ ಮೋಸ

ಇನ್ನು ಕೇವಲ ವಿ ಗ್ರಾಹಕರಿಗೆ ಮಾತ್ರವಲ್ಲದೆ ಈಗಾಗಲೇ ಈ ಸೇವೆ ನೀಡುತ್ತಿರುವ ಜಿಯೋ ಹಾಗೂ ಏರ್‌ಟೆಲ್‌ ಗ್ರಾಹಕರಿಗೂ ಈ ರೀತಿಯ ಸಂದೇಶ ರವಾನೆಯಾಗುತ್ತಿವೆ. ಈ ಸಂದೇಶಗಳಲ್ಲೂ ಸಹ ಲಿಂಕ್‌ ನೀಡಲಾಗುತ್ತಿದ್ದು, ಗ್ರಾಹಕರು ಏನಾದರೂ ಲಿಂಕ್‌ ಕ್ಲಿಕ್‌ ಮಾಡಿ ಅವರು ಕೇಳಿರುವ ಮಾಹಿತಿ ಭರ್ತಿ ಮಾಡಿದರು ಎಂದಾದರೆ ಹ್ಯಾಕರ್‌ಗಳ ಬೆಲೆ ಬಿದ್ದಂತೆ. ಇದರಲ್ಲಿ ಗ್ರಾಹಕರು ಗಮನಿಸಬೇಕಾದ ಮಾಹಿತಿ ಏನೆಂದರೆ ಈ ಎರಡೂ ಟೆಲಿಕಾಂ ಸೇವೆಗಳು ಕೆಲವು ಪ್ರದೇಶದಲ್ಲಿ ಮಾತ್ರ ಈ ಸೇವೆ ನೀಡುತ್ತಿವೆ.

ವೊಡಾಫೋನ್ ಹೇಳುವುದೇನು?

ವೊಡಾಫೋನ್ ಹೇಳುವುದೇನು?

ವಿ ಈ ಸಂಬಂಧ ಅನೇಕ ನಗರಗಳಿಗೆ 5G ಸೇವೆ ನೀಡಲು ತನ್ನ ಪಾಲುದಾರರೊಂದಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ನಮ್ಮ ಯೋಜನೆಗಳ ಕುರಿತು ನಮ್ಮಿಂದ ಮಾತ್ರ ಮಾಹಿತಿ ನಿರೀಕ್ಷಿಸಿ ಎಂದು ಎಚ್ಚರಿಸಿದೆ. ಹಾಗೆಯೇ 5G ಸೇವೆಗಳನ್ನು ಪಡೆಯಲು ಹೊಸ ಸಿಮ್ ಕಾರ್ಡ್‌ಗಳ ಅಗತ್ಯವಿಲ್ಲ ಎಂದು ಇದು ಬಳಕೆದಾರರಿಗೆ ತಿಳಿಸಿದೆ.

Best Mobiles in India

English summary
Vodafone, Airtel and Jio users here's a 5G warning for you.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X