ವೊಡಾಫೋನ್‌ನಿಂದ 205ರೂ ಮತ್ತು 225ರೂ. ಪ್ಲ್ಯಾನ್ ಲಾಂಚ್!..ಉಚಿತ ಕರೆ!

|

ಭಾರತೀಯ ಟೆಲಿಕಾಂ ಕ್ಷೇತ್ರವಿಗ ಆಫರ್‌ಗಳಿಂದ ಕೂಡಿದೆ ಎಂದರೇ ತಪ್ಪಾಗಲಾರದು, ಏಕೆಂದರೇ ಟೆಲಿಕಾಂ ಆಪರೇಟಿಂಗ್ ಸಂಸ್ಥೆಗಳ ನಡುವೆ ತೀವ್ರ ಪೈಪೋಟಿ ಇದ್ದು, ಹೀಗಾಗ ಸಂಸ್ಥೆಗಳು ಬೆಸ್ಟ್‌ ಪ್ಲ್ಯಾನ್‌ಗಳನ್ನು ಪರಿಚಯಿಸುತ್ತಿವೆ. ಈ ನಿಟ್ಟಿನಲ್ಲಿ ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು 'ವೊಡಾಫೋನ್ ಐಡಿಯಾ' ಟೆಲಿಕಾಂ ಸಂಸ್ಥೆಯು ಇದೀಗ ಗ್ರಾಹಕರನ್ನು ಸೆಳೆಯಲು ಎರಡು ಹೊಸ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದೆ.

ವೊಡಾಫೋನ್‌ನಿಂದ 205ರೂ ಮತ್ತು 225ರೂ. ಪ್ಲ್ಯಾನ್ ಲಾಂಚ್!..ಉಚಿತ ಕರೆ!

ಹೌದು, ವೊಡಾಫೋನ್ ಐಡಿಯಾ ಕಂಪನಿಯು ಮಾರುಕಟ್ಟೆಯಲ್ಲಿ ಜಿಯೋ ಮತ್ತು ಏರ್‌ಟೆಲ್‌ ಓಟಕ್ಕೆ ಸಮನಾಗಿ ಓಡುವ ಧಾವಂತದಲ್ಲಿದ್ದು, ಅದಕ್ಕಾಗಿ 205ರೂ ಮತ್ತು 225ರೂ. ಬೆಲೆಯ ಎರಡು ಅತ್ಯುತ್ತಮ ವ್ಯಾಲಿಡಿಟಿಯ ಪ್ರೀಪೇಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಅನಿಯಮಿತ ಉಚಿತ ಕರೆಗಳೊಂದಿಗೆ, ಉಚಿತ ಡೇಟಾ ಹಾಗೂ ಉಚಿತ ಎಸ್‌ಎಮ್‌ಎಸ್‌ ಸೇವೆಯ ಪ್ರಯೋಜನಗಳು ಈ ಪ್ಲ್ಯಾನ್‌ಗಳಲ್ಲಿ ಗ್ರಾಹಕರಿಗೆ ದೊರೆಯಲಿವೆ.

ವೊಡಾಫೋನ್‌ನಿಂದ 205ರೂ ಮತ್ತು 225ರೂ. ಪ್ಲ್ಯಾನ್ ಲಾಂಚ್!..ಉಚಿತ ಕರೆ!

ವೊಡಾಫೋನ್ ಹೊಸ 205ರೂ. ರೀಚಾರ್ಜ್ ಪ್ಲ್ಯಾನ್‌ 35 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಇದರೊಂದಿಗೆ ಅನಿಯಮಿತ ಉಚಿತ ಲೋಕಲ್, ರಾಷ್ಟ್ರೀಯ ಮತ್ತು ಎಸ್‌ಟಿಡಿ ಕರೆಗಳನ್ನು ಮಾಡಬಹುದಾಗಿದೆ. ವ್ಯಾಲಿಡಿಟಿ ಅವಧಿಗೆ ಒಟ್ಟು 600 ಉಚಿತ ಎಸ್‌ಎಮ್‌ಎಸ್‌ಗಳು ದೊರೆಯಲಿದ್ದು, ಜೊತೆಗೆ ಉಚಿತ 2GB ಡೇಟಾ ಸೀಗಲಿದೆ. ಡೇಟಾ ಹೆಚ್ಚಾಗಿ ಬಳಸದ ಗ್ರಾಹಕರಿಗೆ ಈ ಪ್ಲ್ಯಾನ್‌ ಉತ್ತಮ ಎನಿಸಲಿದೆ.

ವೊಡಾಫೋನ್‌ನಿಂದ 205ರೂ ಮತ್ತು 225ರೂ. ಪ್ಲ್ಯಾನ್ ಲಾಂಚ್!..ಉಚಿತ ಕರೆ!

ಹಾಗೆಯೇ ವೊಡಾಫೋನ್ 225ರೂ ಪ್ಲ್ಯಾನ್‌ನಲ್ಲಿ ಗ್ರಾಹಕರಿಗೆ ಅನಿಯಮಿತ ಉಚಿತ ಲೋಕಲ್ ಮತ್ತು ಎಸ್‌ಟಿಡಿ ಕರೆಗಳು ದೊರೆಯಲಿದ್ದು ರೋಮಿಂಗ್ ಕರೆಗಳು ಸಹ ಉಚಿತವಾಗಿರಲಿವೆ. 48 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಈ ವ್ಯಾಲಿಡಿಟಿ ವಾಯ್ದೆಯಲ್ಲಿ ಒಟ್ಟು 4GB ಉಚಿತ ಡೇಟಾ ಮತ್ತು 600 ಉಚಿತ ಎಸ್‌ಎಮ್‌ಎಸ್‌ಗಳು ಪ್ರಯೋಜನಗಳು ಗ್ರಾಹಕರಿಗೆ ಲಬ್ಯವಾಗಲಿವೆ. ಹಾಗೂ ವೊಡಾಫೋನ್ ಆಪ್‌ನಲ್ಲಿ ಲೈವ್‌ಟಿವಿ, ಸಿನಿಮಾ ವೀಕ್ಷಿಸಬಹುದು.

ಓದಿರಿ : ನಿಮ್ಮ ವಾಟ್ಸಪ್‌ ಎಷ್ಟು ಸುರಕ್ಷಿತ?..ಈ ಸೆಕ್ಯುರಿಟಿ ಆಯ್ಕೆಗಳನ್ನು ಬಳಸಿದ್ದಿರಾ?ಓದಿರಿ : ನಿಮ್ಮ ವಾಟ್ಸಪ್‌ ಎಷ್ಟು ಸುರಕ್ಷಿತ?..ಈ ಸೆಕ್ಯುರಿಟಿ ಆಯ್ಕೆಗಳನ್ನು ಬಳಸಿದ್ದಿರಾ?

ಸಂಸ್ಥೆಯ ಈ ಎರಡು ಹೊಸ ಪ್ಲ್ಯಾನ್‌ಗಳು ಸದ್ಯ ಕರ್ನಾಟಕ, ಬಿಹಾರ, ಜಾರ್ಖಾಂಡ್, ದೆಹಲಿ ಮತ್ತು ಉತ್ತರ ಪ್ರದೇಶ ಟೆಲಿಕಾಂ ಸರ್ಕಲ್‌ಗಳಲ್ಲಿನ ಗ್ರಾಹಕರಿಗೆ ಮಾತ್ರ ಲಭ್ಯವಿದ್ದು, ಉಳಿದ ರಾಜ್ಯಗಳಿಗೂ ವಿಸ್ತರಿಸಲಿದೆ. ಹಾಗೆಯೇ ಈ ಪ್ಲ್ಯಾನ್‌ಗಳು ಏರ್‌ಟೆಲ್‌ನ ಜನಪ್ರಿಯ 199ರೂ ಮತ್ತು 249ರೂ ಪ್ಲ್ಯಾನ್‌ಗಳಿಗೆ ಹಾಗೂ ಜಿಯೋದ 198ರೂ. ಪ್ಲ್ಯಾನ್‌ಗಳಿಗೆ ಪೈಪೋಟಿ ನೀಡಲಿವೆ ಎನ್ನಲಾಗಿದ್ದು, ಹೆಚ್ಚು ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಉತ್ತಮ.

ಓದಿರಿ : ಟಿಕ್‌ಟಾಕ್‌ ಸೇರಿಕೊಳ್ಳಲಿದೆ ಹೊಸ ಫೀಚರ್‌!..ಏನದು ಗೊತ್ತಾ? ಓದಿರಿ : ಟಿಕ್‌ಟಾಕ್‌ ಸೇರಿಕೊಳ್ಳಲಿದೆ ಹೊಸ ಫೀಚರ್‌!..ಏನದು ಗೊತ್ತಾ?

Best Mobiles in India

English summary
Vodafone prepaid recharge plans offer calling, SMS and data benefits. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X