ಜಿಯೋಗೆ ಬ್ಯಾಡ್ ನ್ಯೂಸ್!..ಮೂರು ವರ್ಷಗಳ ಬಳಿಕ ಲಾಭದತ್ತ ಏರ್‌ಟೆಲ್!!

|

ಭಾರತದ ಟೆಲಿಕಾಂ ಲೋಕಕ್ಕೆ ಜಿಯೋ ಕಾಲಿಟ್ಟ ನಂತರ ದರ ಸಮರಕ್ಕೆ ನಲುಗಿದ್ದ ಇತರೆ ಟೆಲಿಕಾಂ ಕಂಪೆನಿಗಳಿ ನಿಟ್ಟುಸಿರುಬಿಟ್ಟಿವೆ. ದೇಶದ ದೂರ ಸಂಪರ್ಕ ಮಾರುಕಟ್ಟೆಯಲ್ಲಿ ದರ ಸಮರದಿಂದ ಕಂಗೆಟ್ಟಿದ್ದ ಏರ್‌ಟೆಲ್, ವೊಡಾಫೋನ್ ಸೇರಿದಂತೆ ಇತರೆ ಟೆಲಿಕಾಂ ಕಂಪನಿಗಳು ನಿಧಾನಕ್ಕೆ ಚೇತರಿಸಿಕೊಂಡು ಮೂರು ವರ್ಷಗಳ ಬಳಿಕ ಇದೇ ಮೊದಲು ಲಾಭದತ್ತ ಮುಖಮಾಡಿವೆ ಎಂದು ಇತ್ತೀಚಿನ ರಿಪೋರ್ಟ್ ಒಂದು ತಿಳಿಸಿದೆ.

ಹೌದು, ಮಾರ್ಚ್​ಗೆ ಕೊನೆಗೊಂಡ ಮೂರು ತಿಂಗಳ ವೊಡಾಫೋನ್- ಐಡಿಯಾ (ವಿಐಎಲ್) ಮತ್ತು ಭಾರ್ತಿ ಏರ್​ಟೆಲ್​ ಮೊಬೈಲ್ ಸೇವಾ ಆದಾಯ 11ನೇ ತ್ರೈಮಾಸಿಕದ ಬಳಿಕ ಮೊದಲ ಬಾರಿಗೆ ಆದಾಯ ಹೆಚ್ಚಳವಾಗಿದೆ. ಸಿಮ್​ ಸೇವೆ ಮುಂದುವರಿಸುವ ಕನಿಷ್ಠ ಪುನರ್​ಭರ್ತಿ ಪಾವತಿ ಯೋಜನೆ, ಸುಂಕದಲ್ಲಿನ ಸ್ಥಿರತೆ ಹಾಗೂ ಸುಧಾರಿತ ಹಣಗಳಿಕೆ ಮಾರ್ಗಗಳು ಟೆಲಿಕಾಂ ಕಂಪೆನಿಗಳ ಆದಾಯಕ್ಕೆ ಕಾರಣವಾಗಿದೆ ಎಂದು ರಿಪೋರ್ಟ್ ತಿಳಿಸಿದೆ.

ಜಿಯೋಗೆ ಬ್ಯಾಡ್ ನ್ಯೂಸ್!..ಮೂರು ವರ್ಷಗಳ ಬಳಿಕ ಲಾಭದತ್ತ ಏರ್‌ಟೆಲ್!!

ಸುಂಕದಲ್ಲಿನ ಸ್ಥಿರತೆ ಹಾಗೂ ಸುಧಾರಿತ ಹಣಗಳಿಕೆ ಮಾರ್ಗಗಳು ಏರ್​ಟೆಲ್​ ಹಾಗೂ ವೊಡಾಫೋನ್ ಐಡಿಯಾ​ ಅನ್ನು ಮರಳಿ ಲಾಭದ ಹಳಿ ಮೇಲೆ ಸಾಗಲು ನೆರವಾಗಿವೆ ಎಂದು ಹೇಳಲಾಗಿದ್ದು, ಏರ್​ಟೆಲ್​ನ ನಾಲ್ಕನೇ ತ್ರೈಮಾಸಿಕ ಆದಾಯದ ಪ್ರಮಾಣ ಶೇ.4ರಷ್ಟು ಏರಿಕೆ ಆಗಲಿದೆ. ಇನ್ನು ವೊಡಾಫೋನ್ ಐಡಿಯಾ​ ಸಂಸ್ಥೆಯದ್ದು ಶೇ.1ರಷ್ಟು ವೃದ್ಧಿಸಲಿದೆ ಎಂದು ಮಾರುಕಟ್ಟೆ ತಜ್ಞರು 3 ತಿಂಗಳ ಹಿಂದಿನ ಆದಾಯದ ಆಧಾರದ ಮೇಲೆ ವಿಶ್ಲೇಷಿಸಿದ್ದಾರೆ.

ಜಿಯೋ ಟೆಲಿಕಾಂಗೆ ಲಗ್ಗೆ ಇಟ್ಟ ಬಳಿಕ ಅದುವರೆಗೂ ಪಾರುಪತ್ಯ ಸಾಧಿಸಿ ಮಾರುಕಟ್ಟೆಯ ಸಾಮ್ರಾಟನಾಗಿದ್ದ ಭಾರ್ತಿ ಏರ್​ಟೆಲ್​ ಆದಾಯ ಸತತವಾಗಿ ಕ್ಷೀಣಿಸಿತ್ತು.ಸಣ್ಣ ಪುಟ್ಟ ದೂರ ಸಂವಹನ ಸೇವೆ ನೀಡುತ್ತಿದ್ದ ಕಂಪನಿಗಳು ಸಹ ದಿವಾಳಿಯಾಗಿ ಬಾಗಿಲು ಮುಚ್ಚಿದವು. ವೋಡಾಫೋನ್​, ಐಡಿಯಾ ರೀತಿಯ ಕಂಪನಿಗಳು ಒಲ್ಲದ ಮನಸ್ಸಿಂದ ವಿಲೀನಕ್ಕೆ ಒಪ್ಪಿದವು. ಆದರೂ, ಜಿಯೋಗೆ ಸೆಡ್ಡು ಹೊಡೆಯಲು ಸಾಧ್ಯವಾಗದೇ ದರಸಮರದ ವಿರುದ್ಧ ಪೈಪೋಟಿಗೆ ಇಳಿದಿದ್ದವು.

ಜಿಯೋಗೆ ಬ್ಯಾಡ್ ನ್ಯೂಸ್!..ಮೂರು ವರ್ಷಗಳ ಬಳಿಕ ಲಾಭದತ್ತ ಏರ್‌ಟೆಲ್!!

ಆದರೆ, ಮೂರು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಏರ್​ಟೆಲ್​ ಹಾಗೂ ವೊಡಾಫೋನ್ ಐಡಿಯಾ ಲಾಭದತ್ತ ಮುಖಮಾಡಿವೆ. ನಿವ್ವಳ ಲಾಭದ ಮೇಲೆ ನೇರ ಪರಿಣಾಮ ಬೀರಿ ತಮ್ಮ ಅಸ್ತಿತ್ವಕ್ಕಾಗಿ ವಿಲೀನದ ಮೊರೆ ಹೋಗಿದ್ದ ವೊಡಾಫೋನ್ ಐಡಿಯಾ ಚೆತರಿಸಿಕೊಳ್ಳುತ್ತಿದೆ. ಜಿಯೋ ಸೆಡ್ಡು ಹೊಡೆಯಲು ಅಗ್ಗದ ಡೇಟಾ ಮತ್ತು ಕರೆ ಯೋಜನಾ ಸೇವೆ ನೀಡಿ ಗಮನಸೆಳೆದ ಏರ್‌ಟೆಲ್ ಕೂಡ ಸಿಮ್​ ಸೇವೆ ಮುಂದುವರಿಸುವ ಕನಿಷ್ಠ ಪುನರ್​ಭರ್ತಿ ಪಾವತಿ ಯೋಜನೆ ಮೂಲಕ ಗೆದ್ದಿದೆ.

Best Mobiles in India

English summary
Vodafone Idea, Airtel may post first mobile revenue growth in 3 years ... three months, while BNP predicts VIL's mobile revenue will grow 1%.. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X