ಆಧಾರ್‌ ಡೀಲಿಂಕ್‌ಗೆ ಪ್ಲಾನ್‌ ಪರಿಚಯಿಸಿದ ಟೆಲಿಕಾಂ ಕಂಪನಿಗಳು..!

|

ಆಧಾರ್ ಕಾರ್ಡ್ ಆಧಾರಿತ ದೃಢೀಕರಣವನ್ನು ನಿಲ್ಲಿಸುವ ನಿರ್ಧಾರವನ್ನು ಏರ್ ಟೆಲ್, ವಡಾಫೋನ್ ಮತ್ತು ರಿಲಯನ್ಸ್ ಜಿಯೋ ಗಳು ಕೈಗೊಂಡಿವೆ. ಈ ಮುಂಚೆ ಈ ಎಲ್ಲಾ ಟೆಲಿಕಾಂ ಸಂಸ್ಥೆಗಳು ವಿಶಿಷ್ಟ ಗುರುತಿನ ಪ್ರಾಧಿಕಾರದ ಆದೇಶಗಳನ್ನು ಅನುಸರಿಸಿದ್ದರು.

ಆದರೆ ಈ ಮೂರು ಟೆಲಿಕಾಂ ಸಂಸ್ಥೆಗಳು ಬೇರೆ ರೀತಿಯ ಅಥವಾ ಪರ್ಯಾಯ ದೃಢೀಕರಣವನ್ನು ಮಾಡಲು ಟೆಲಿಕಾಂ ಇಲಾಖೆಯೊಂದಿಗೆ ಕಾರ್ಯ ನಿರ್ವಹಿಸುತ್ತಿವೆ. ಆದರೆ ಹಠಾತ್ ಆಗಿ ಹೊಸ ಯೋಜನೆಯನ್ನು ತರುವುದಕ್ಕೆ ಹೆಚ್ಚಿನ ಆರ್ಥಿಕ ನೆರವು ಬೇಕಾಗುತ್ತದೆ. ಇದು ಟೆಲಿಕಾಂ ಕಂಪೆನಿಗಳಿಗೆ ಈಗಿನ ಪರಿಸ್ಥಿತಿಯಲ್ಲಿ ಭರಿಸುವುದು ಕಷ್ಟವಾಗುತ್ತದೆ.

ಆಧಾರ್‌ ಡೀಲಿಂಕ್‌ಗೆ ಪ್ಲಾನ್‌ ಪರಿಚಯಿಸಿದ ಟೆಲಿಕಾಂ ಕಂಪನಿಗಳು..!

ಕಳೆದ ತಿಂಗಳು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಅನುಸರಿಸುತ್ತಿದ್ದರೂ ಕೂಡ ಆಧಾರ್ ಆಧಾರಿತ ದೃಢೀಕರಣವನ್ನು ಸಂಪೂರ್ಣವಾಗಿ ನಿಲ್ಲಿಸಿದರೂ ಕೂಡ ಇ-ಕೆವೈಸಿಯಲ್ಲಿನ ಇದುವರೆಗಿನ ಎಲ್ಲಾ ಹೂಡಿಕೆಯನ್ನು ಕಡಿತಗೊಳಿಸಲಾಗುವುದು ಎಂದು ಒಬ್ಬರು ಆಪರೇಟರ್, ರೆಗ್ಯುಲೇಟರ್ ಗೆ ಪತ್ರ ಬರೆದಿದ್ದಾರೆ.

ಕೆವೈಸಿಗಾಗಿ ಯುಐಡಿಎಐ ಗೆ ದೊಡ್ಡ ಮೊತ್ತದ ಹೂಡಿಕೆಯನ್ನುಮಾಡಲಾಗಿತ್ತು. ಆಪರೇಟರ್ ಗಳು ಬಯೋಮೆಟ್ರಿಕ್ ಡಿವೈಸ್ ಗಳಿಗೆ ಮತ್ತು ವರ್ಕ್ ಫೋರ್ಸ್ ಟ್ರೈನಿಂಗ್ ಗಾಗಿ ದೊಡ್ಡ ಮೊತ್ತದಲ್ಲಿ ಹೂಡಿಕೆಯನ್ನು ಮಾಡಿದ್ದರು. ಅವರು ಈಗಾಗಲೇ ಆರ್ಥಿಕ ಒತ್ತಡದಲ್ಲಿದ್ದಾರೆ ಮತ್ತು ಹಾಗಾಗಿ ಇದು ಅವರಿಗೆ ದೊಡ್ಡ ನಷ್ಟವನ್ನುಂಟು ಮಾಡುತ್ತದೆ ಎಂದು ಟೆಲ್ಕೊದಲ್ಲಿನ ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಗ್ರಾಮೀಣ ಮಾರುಕಟ್ಟೆಗಳಲ್ಲಿ ಆಧಾರ್ ಆಧಾರಿತ ದೃಢೀಕರಣವು ಹೆಚ್ಚು ಪ್ರಚಲಿತದಲ್ಲಿತ್ತು ಮತ್ತು ಯಶಸ್ಸು ಗಳಿಸಿತ್ತು. ಆದರೆ ಇದೀಗ ಪ್ರರ್ಯಾಯ ಮಾರ್ಗಸೂಚಿಗಳನ್ನು ಅವರು ಅಳವಡಿಸಿಕೊಳ್ಳಬೇಕಾಗುತ್ತದೆ. ಮತ್ತು ಆ ನಿಟ್ಟಿನಲ್ಲಿ ಗ್ರಾಹಕರಿಗೂ ತಿಳಿಸಬೇಕು ಜೊತೆಗೆ ವರ್ಕ್ ಫೋರ್ಸ್ ಗಾಗಿ ಮತ್ತೆ ಹೂಡಿಕೆಯನ್ನು ಮಾಡಬೇಕಾಗುತ್ತದೆ. ಆದರೆ ಈ ವಿಚಾರವು ಸ್ಪರ್ದಾತ್ಮಕ ಮಾರುಕಟ್ಟೆಯಲ್ಲಿ ಹೆಚ್ಚು ಸವಾಲುಗಳನ್ನು ಒಡ್ಡುತ್ತದೆ ಎಂದು ಟೆಲ್ಕೋದ ಮತ್ತೊಬ್ಬರು ಅಧಿಕಾರಿಯು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.ಪರ್ಯಾಯ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದು ಕೆಲವು ಟೆಲಿಕಾಂ ಆಪರೇಟರ್ ಗಳು ಇನ್ನು ಹೆಚ್ಚಿನ ಸಮಯವನ್ನು ಬೇಡಿದ್ದಾರೆ.

ಆಧಾರ್‌ ಡೀಲಿಂಕ್‌ಗೆ ಪ್ಲಾನ್‌ ಪರಿಚಯಿಸಿದ ಟೆಲಿಕಾಂ ಕಂಪನಿಗಳು..!

ಇತ್ತೀಚೆಗಷ್ಟೇ ಖಾಸಗಿ ಕಂಪೆನಿಗಳು ದೃಢೀಕರಣಕ್ಕಾಗಿ ಆಧಾರ್ ಬಳಕೆ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಬಯೋಮೆಟ್ರಿಕ್ ಭಾರತದ ಟೆಲಿಕಾಂ ಸಲಹಾ ಮಂಡಳಿ ಅದರಲ್ಲಿ COAI ಅಂದರೆ ಸೆಲ್ಯುಲರ್ ಆಪರೇಟರ್ಸ್ ಆಫ್ ಇಂಡಿಯಾ ದೃಢೀಕರಣಕ್ಕಾಗಿ ಪರ್ಯಾಯ ವ್ಯವಸ್ಥೆ ಏನು ಮಾಡಬಹುದು ಎಂದು ಚರ್ಚೆ ನಡೆಸಿತ್ತು. ಬಯೋಮೆಟ್ರಿಕ್ ವ್ಯವಸ್ಥೆಯನ್ನು ಮಾಡುವ ಬಗ್ಗೆ ಯೋಚನೆಯನ್ನೂ ಮಾಡಲಾಗಿತ್ತು.

ಬಯೋಮೆಟ್ರಿಕ್ ರೆಗ್ಯುಲೇಟರಿ ಬಾಡಿಯು ಹೇಳಿರುವಂತೆ ಎಲ್ಲಾ ಆಪರೇಟರ್ ಗಳು ಮೊಬೈಲ್ ನಂಬರ್ ನಿಂದ ಆಧಾರ್ ಡಿಲೀಂಕ್ ಮಾಡುವ ಬಗೆಗಿನ ಎಲ್ಲಾ ವಿನಂತಿಗಳನ್ನು ಸ್ವೀಕರಿಸಬೇಕು ಮತ್ತು ಹೊಸ ಕೆವೈಸಿಯನ್ನು 6 ತಿಂಗಳ ಅವಧಿಯೊಳಗೆ ಮಾಡಬೇಕು. ಈಗಾಗಲೇ ಖಾಸಗಿ ಕಂಪೆನಿಗಳು ಆಧಾರ್ ನ್ನು ದೃಢೀಕರಣಕ್ಕಾಗಿ ಬಳಸುವುದನ್ನು ಅಸಂವಿಧಾನಿಕ ಎಂದು ಹೇಳಿರುವುದರ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.

Best Mobiles in India

English summary
Vodafone Idea, Airtel and Reliance Jio submit Aadhaar delinking plans. to know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X