ವಡಾಫೋನಿನ ಈ ರೀಚಾರ್ಜ್ ಮಾಡಿಸಿಕೊಳ್ಳಿ- 16,000 ರುಪಾಯಿ ಲಾಭ ಪಡೆಯಿರಿ

By Gizbot Bureau
|

ದೇಶದ ಪ್ರಮುಖ ಟೆಲಿಕಾಂ ಆಪರೇಟರ್ ವಡಾಫೋನ್ ತನ್ನ ಚಂದಾದಾರರಿಗೆ ಸಿಹಿಸುದ್ದಿಯನ್ನು ನೀಡುತ್ತಿದೆ. ವಡಾಫೋನ್ ರೆಡ್ ಪೋಸ್ಟ್ ಪೇಯ್ಡ್ ಪ್ಲಾನ್ ಹೊಂದಿರುವವರಿಗೆ ಟೆಲಿಕಾಂ ಆಪರೇಟರ್ 16,000 ರುಪಾಯಿ ಬೆಲೆಬಾಳುವ ಬೆನಿಫಿಟ್ ಗಳನ್ನು ಆಫರ್ ಮಾಡುತ್ತಿದೆ. ಈ ಬೆನಿಫಿಟ್ ನಲ್ಲಿ ಐಪೋನ್ ಎಕ್ಸ್ ಚೇಂಜ್ ಆಫರ್, ಸ್ಟ್ರೀಮಿಂಗ್ ಸರ್ವೀಸ್, ಮೊಬೈಲ್ ಪ್ರೊಟೆಕ್ಷನ್ ಪ್ಲಾನ್ ಮತ್ತು ಇತ್ಯಾದಿಗಳು ಸೇರಿವೆ. ಇದೆಲ್ಲದರ ಜೊತೆಗೆ ಎಲ್ಲಾ ಪ್ಲಾನ್ ಗಳು ಅನಿಯಮಿತ ರಾಷ್ಟ್ರೀಯ ಮತ್ತು ಸ್ಥಳೀಯ ಕರೆಗಳು ಜೊತೆಗೆ ಅನಿಯಮಿತ ಎಸ್ಎಂಎಸ್ ಸೇವೆಯನ್ನು ಒದಗಿಸುತ್ತದೆ. ಹಾಗಾದ್ರೆ ಈ ಬೆನಿಫಿಟ್ ಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವ ಪ್ರಮುಖ ಅಂಶಗಳ ಪಟ್ಟಿ ಇಲ್ಲಿದೆ ನೋಡಿ.

ವಡಾಫೋನ್ ರೆಡ್ 399 ಪ್ಲಾನ್

ವಡಾಫೋನ್ ರೆಡ್ 399 ಪ್ಲಾನ್

ಅತ್ಯಂತ ಕಡಿಮೆ ಬೆಲೆಯ ರುಪಾಯಿ 399 ಪ್ಲಾನ್ ನಲ್ಲಿ 40ಜಿಬಿ ಡಾಟಾ ಮತ್ತು 499 ರುಪಾಯಿ ಬೆಲೆಬಾಳು 12 ತಿಂಗಳ ವಡಾಫೋನ್ ಪ್ಲೇ ಆಕ್ಸಿಸ್ ಉಚಿತವಾಗಿ ಇರುತ್ತದೆ. ಇದರ ಜೊತೆಗೆ ಬಳಕೆದಾರರಿಗೆ ಉಚಿತವಾದ ಝೀ5, ಅಮೇಜಾನ್ ಪ್ರೈಮ್ ಮೆಂಬರ್ ಶಿಪ್ ಕೂಡ ಸಿಗಲಿದ್ದು ಇದರ ಬೆಲೆ 999 ರುಪಾಯಿ ಆಗಿರುತ್ತದೆ. ಅಂದರೆ ಒಂದು ವರ್ಷದ ಮೆಂಮರ್ ಶಿಪ್ ಸಿಗುತ್ತದೆ. ಈ 399 ರುಪಾಯಿ ಪ್ಲಾನಿನ ಅಡಿಯಲ್ಲಿ ಒಟ್ಟಾರೆ 1,498 ರುಪಾಯಿಯ ಬೆನಿಫಿಟ್ ನ್ನು ಗ್ರಾಹಕರು ಪಡೆದುಕೊಳ್ಳಬಹುದಾಗಿದೆ.

ವಡಾಫೋನ್ ರೆಡ್ 499 ಪ್ಲಾನ್

ವಡಾಫೋನ್ ರೆಡ್ 499 ಪ್ಲಾನ್

499 ರುಪಾಯಿ ಪ್ಲಾನಿನ ಅಡಿಯಲ್ಲಿ ವಡಾಫೋನ್ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ 75ಜಿಬಿ ಡಾಟಾ ಜೊತೆಗೆ ಅನಿಯಮಿತವಾದ ಉಚಿತ ಸ್ಥಳೀಯ, ರಾಷ್ಟ್ರೀಯ ಕರೆಗಳಿಗೆ ಅವಕಾಶವಿರುತ್ತದೆ. ಇದರ ಜೊತೆಗೆ ವಡಾಫೋನ್ ಪ್ಲೇ, ಝಿ5 ಮತ್ತು ಅಮೇಜಾನ್ ಪ್ರೈಮ್ ಗೆ ಒಂದು ವರ್ಷದ ಚಂದಾದಾರಿಕೆ ಉಚಿತವಾಗಿ ಸಿಗುತ್ತದೆ. 3,000 ರುಪಾಯಿ ಬೆಲೆಬಾಳುವ ಮೊಬೈಲ್ ಪ್ರೊಟೆಕ್ಷನ್ ಪ್ಲಾನ್ ನ್ನು ಕೂಡ ಈ ಪ್ಲಾನಿನ ಅಡಿಯಲ್ಲಿ ನೀಡಲಾಗುತ್ತದೆ.

ಅಂದರೆ ಒಟ್ಟಾರೆ 499 ರುಪಾಯಿ ಪ್ಲಾನಿನ ಅಡಿಯಲ್ಲಿ ಗ್ರಾಹಕರು 4,498 ರುಪಾಯಿ ಬೆಲೆಬಾಳುವ ಬೆನಿಫಿಟ್ ಗಳನ್ನು ಪಡೆದುಕೊಳ್ಳಬಹುದಾಗಿದೆ. ಮೊಬೈಲ್ ಪ್ರೊಟೆಕ್ಷನ್ ಪ್ಲಾನ್ ನಲ್ಲಿ ಅಪಘಾತದ ಡ್ಯಾಮೇಜ್ ಮತ್ತು ಮೊಬೈಲ್ ಕಳೆದುಹೋದಾಗ ಸಿಗುವ ಬೆನಿಫಿಟ್ ಗಳು ಕೂಡ ಸೇರಿರುತ್ತದೆ. ಪ್ಲೇ ಸ್ಟೋರ್ ಅಥಾ ಆಪ್ ಸ್ಟೋರ್ ನಿಂದ ವಡಾಫೋನ್ ಮೊಬೈಲ್ ಶೀಲ್ಡ್ ಆಪ್ ನ್ನು ಡೈನ್ ಲೋಡ್ ಮಾಡಿ ಗ್ರಾಹಕರು ಈ ಪ್ಲಾನ್ ನ್ನು ಆಕ್ಟಿವೇಟ್ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ.

ವಡಾಫೋನ್ ರೆಡ್ 649 ಪ್ಲಾನ್

ವಡಾಫೋನ್ ರೆಡ್ 649 ಪ್ಲಾನ್

ಐಫೋನ್ ಅಪ್ ಗ್ರೇಡ್ ಮಾಡಿಕೊಳ್ಳಲು ಇಚ್ಛಿಸುವವರಿಗೆ ರುಪಾಯಿ 649 ರ ವಡಾಫೋನ್ ಪ್ಲಾನ್ ಹೇಳಿಮಾಡಿಸಿದ್ದಾಗಿದೆ. ಈ ಪ್ಲಾನಿನ ಅಡಿಯಲ್ಲಿ 90ಜಿಬಿ ಡಾಟಾ ಜೊತೆಗೆ ಉಚಿತವಾಗ ವಡಾಫೋನ್ ಪ್ಲೇ, ಝಿ5, ಅಮೇಜಾನ್ ಪ್ರೈಮಿನ ಒಂದು ವರ್ಷದ ಚಂದಾದಾರಿಕೆ ಉಚಿತವಾಗಿ ಸಿಗುತ್ತದೆ. ಐಫೋನ್ ಫಾರ್ ಎವರ್ ಪ್ರೊಗ್ರಾಮ್ ನ್ನು ಕೂಡ ಆಯೋಜಿಸಿದ್ದು ಇದು 10,000 ರುಪಾಯಿ ಬೆಲೆಬಾಳುತ್ತದೆ.

ಅಂದರೆ ಒಟ್ಟಾರೆ 11,498 ರುಪಾಯಿ ಬೆನಿಫಿಟ್ ನ್ನು ನೀವು 649 ರುಪಾಯಿ ರೀಚಾರ್ಜ್ ಮಾಡಿಕೊಳ್ಳುವುದರಿಂದಾಗಿ ಪಡೆದುಕೊಳ್ಳುತ್ತೀರಿ. ಐಫೋನ್ ಫಾರ್ ಎವರ್ ಪ್ರೋಗ್ರಾಂನ ಅಡಿಯಲ್ಲಿ ವಡಾಫೋನ್ ಪೋಸ್ಟ್ ಪೇಯ್ಡ್ ಬಳಕೆದಾರರು ಐಫೋನ್ ರಿಪೇರಿ ಅಥವಾ ರಿಪ್ಲೇಸ್ ನ್ನು ಕೇವಲ 2,000+ ಜಿಎಸ್ ಟಿ ಪಾವತಿಸುವ ಮೂಲಕ ಮಾಡಿಕೊಳ್ಳಬಹುದು. ಇದರ ಜೊತೆಗೆ ಬುಯ್ ಬ್ಯಾಕ್ ಆಫರ್ ಕೂಡ ಇದ್ದು ಹಳೆಯ ಐಫೋನ್ ನ್ನು ಮಾರಿ ಹೊಸ ಐಫೋನ್ ಖರೀದಿಗೂ ಕೂಡ ಅವಕಾಶವಿದೆ.

ವಡಾಫೋನ್ ರೆಡ್ 999,1,299 ಪ್ಲಾನ್

ವಡಾಫೋನ್ ರೆಡ್ 999,1,299 ಪ್ಲಾನ್

ಈ ಎರಡೂ ಪ್ಲಾನ್ ಗಳು ಒಟ್ಟು 15,498 ರುಪಾಯಿ ಲಾಭವನ್ನು ಪೋಸ್ಟ್ ಪೇಯ್ಡ್ ಬಳಕೆದಾರರಿಗೆ ಮಾಡಿಕೊಡುತ್ತದೆ. ಇತರೆ ಪ್ಲಾನ್ ಗಳಂತೆ ಇದರಲ್ಲೂ ಕೂಡ ಅಮೇಜಾನ್ ಪ್ರೈಮ್, ವಡಾಫೋನ್ ಪ್ಲೇ,

ಝಿ5 ಗೆ ಉಚಿತ ಚಂದಾದಾರಿಕೆಯು ಒಂದು ವರ್ಷದ ಅವಧಿಗೆ ಲಭ್ಯವಾಗುತ್ತದೆ. ಇದರ ಜೊತೆಗೆ ಐಫೋನ್ ಫಾರ್ ಎವರ್ ಪ್ರೋಗ್ರಾಮ್ ಕೂಡ ಲಭ್ಯವಿದೆ. ಈ ಪ್ಲಾನ್ ಪಡೆದ ವಡಾಫೋನ್ ಗ್ರಾಹಕರಿಗೆ 1,000 ರುಪಾಯಿ ಬೆಲೆಬಾಳುವ ನೆಟ್ ಫ್ಲಿಕ್ಸ್ ಚಂದಾದಾರಿಕೆ ಸಿಗುತ್ತದೆ.999 ರುಪಾಯಿ ಪ್ಲಾನಿನ ಅಡಿಯಲ್ಲಿ 100ಜಿಬಿ ಡಾಟಾ ಮತ್ತು 1,299 ರುಪಾಯಿ ಪ್ಲಾನಿ ಅಡಿಯಲ್ಲಿ 125ಜಿಬಿ ಡಾಟಾ ಸಿಗುತ್ತದೆ.

ವಡಾಫೋನ್ ರೆಡ್ 1,999 ಪ್ಲಾನ್

ವಡಾಫೋನ್ ರೆಡ್ 1,999 ಪ್ಲಾನ್

1,999 ರುಪಾಯಿ ವಡಾಫೋನ್ ಪ್ಲಾನಿನ ಅಡಿಯಲ್ಲಿ ಗ್ರಾಹಕರು 15,998 ರುಪಾಯಿ ಬೆಲೆಬಾಳುವ ಲಾಭವನ್ನು ಪಡೆಯಬಹುದು. ಈ ಪ್ಲಾನ್ ನಲ್ಲಿ ಒಂದು ವರ್ಷದ ಅವಧಿಯ ಅಮೇಜಾನ್ ಪ್ರೈಮ್, ಝಿ5 ಮತ್ತು ವಡಾಫೋನ್ ಪ್ಲೇ ಮತ್ತು ಐಫೋನ್ ಫಾರ್ ಎವರ್ ಪ್ಲಾನ್ ಸಿಗುತ್ತದೆ. ಮೂರು ತಿಂಗಳ ಅವಧಿಯ ನೆಟ್ ಫ್ಲಿಕ್ಸ್ ಚಂದಾದಾರಿಕೆ ಸಿಗುತ್ತದೆ ಮತ್ತು 200GB ಡಾಟಾ ಲಭ್ಯವಾಗಲಿದ್ದು ಇದರಲ್ಲಿ ಡಾಟಾ ರೋಲ್ ಓವರ್ ಆಯ್ಕೆಯೂ ಇರುತ್ತದೆ.

Most Read Articles
Best Mobiles in India

Read more about:
English summary
Vodafone is offering benefits worth Rs 16,000 to these users

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X