ಅರಮನೆ ನಗರಿಯಲ್ಲಿ ವೋಡಾಫೋನ್ 4ಜಿ ಹವಾ

By Shwetha
|

ವೋಡಾಫೋನ್ ಇಂಡಿಯಾ ಹೆಚ್ಚು ವೇಗದ 4ಜಿ ನೆಟ್‌ವರ್ಕ್ ಅನ್ನು ಕರ್ನಾಟಕದಲ್ಲಿ ಪ್ರಾರಂಭಿಸಿದ್ದು ಮೈಸೂರಿನಲ್ಲಿ ಇದಕ್ಕೆ ಚಾಲನೆ ದೊರಕಿದೆ. ಡಿಸೆಂಬರ್ 2015 ರಲ್ಲಿ ಕೇರಳದಲ್ಲಿ ಲಾಂಚ್ ನಡೆದ ಬೆನ್ನಿಗೆ ಇದು ಮೈಸೂರಿನಲ್ಲಿ ತನ್ನ ಸೇವೆಯನ್ನು ಆರಂಭಿಸಿದೆ.

ಓದಿರಿ: ಕ್ಯಾನ್ಸರ್‌ ಸಂಶೋಧನೆಗೆ ವೋಡಾಫೋನ್‌ ಡ್ರೀಮ್‌ಲ್ಯಾಬ್ ಅಪ್ಲಿಕೇಶನ್‌

ಮೈಸೂರಿನಲ್ಲಿ ತನ್ನ ಸೇವೆಯನ್ನು ಆರಂಭಿಸುವುದರ ಮೂಲಕ, ವೋಡಾಫೋನ್ ರಾಜ್ಯಾದ್ಯಂತ ಆದಷ್ಟು ಶೀಘ್ರದಲ್ಲಿ 4ಜಿ ಕವರೇಜ್ ಅನ್ನು ವಿಸ್ತರಿಸಲಿದ್ದು ಮುಖ್ಯವಾದ ವ್ಯವಹಾರ ಮತ್ತು ಪ್ರವಾಸೀ ಕೇಂದ್ರಗಳನ್ನು ಒಳಗೊಂಡಂತೆ ಬೆಂಗಳೂರು, ಮಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಸೇವೆಯನ್ನು ಆರಂಭಿಸಲಿದೆ. ಕೆಳಗಿನ ಸ್ಲೈಡರ್‌ಗಳಲ್ಲಿ ಈ ಕುರಿತು ಮತ್ತಷ್ಟು ಸುದ್ದಿಗಳನ್ನು ನೋಡಿ

ವೋಡಾಫೋನ್ 4ಜಿ ಸೇವೆ

ವೋಡಾಫೋನ್ 4ಜಿ ಸೇವೆ

ವೋಡಾಫೋನ್‌ನ ಮುಖ್ಯ ಬೆಳವಣಿಗೆಗೆ ಕರ್ನಾಟಕ ಪ್ರಮುಖ ವೇದಿಕೆ ಎಂದೆನಿಸಿದ್ದು 20% ದಷ್ಟು ಒಟ್ಟು ಆದಾಯವನ್ನು ಕರ್ನಾಟಕವೇ ನೀಡುತ್ತಿದ್ದು ವಾರ್ಷಿಕವಾಗಿ 50% ದಷ್ಟು ಇದು ಬೆಳವಣಿಗೆಯನ್ನು ಕಾಣುತ್ತಿದೆ.

ವೋಡಾಫೋನ್ 4ಜಿ ಸೇವೆ

ವೋಡಾಫೋನ್ 4ಜಿ ಸೇವೆ

ವೋಡಾಫೋನ್‌ನ 4ಜಿ ನೆಟ್‌ವರ್ಕ್ ವೋಡಾಫೋನ್ 4ಜಿ ಗ್ರಾಹಕರಿಗೆ ಇಂಟರ್ನೆಟ್ ಅನ್ನು ಮೊಬೈಲ್ ಮೂಲಕ ಪ್ರವೇಶಿಸುವ ವ್ಯವಸ್ಥೆಯನ್ನು ಒದಗಿಸುತ್ತಿದ್ದು ವೈಫೈ ಸೇರಿದಂತೆ ಸ್ಮಾರ್ಟ್ ಡಿವೈಸ್‌ಗಳನ್ನು ಪ್ರವೇಶಿಸಬಹುದಾಗಿದೆ.

ವೋಡಾಫೋನ್ 4ಜಿ ಸೇವೆ

ವೋಡಾಫೋನ್ 4ಜಿ ಸೇವೆ

ವೋಡಾಫೋನ್ 4ಜಿ ಸೇವೆಯನ್ನು 4ಜಿ ಸಕ್ರಿಯಗೊಂಡಿರುವ ಹ್ಯಾಂಡ್‌ಸೆಟ್‌ಗಳಿಂದ ಪ್ರವೇಶಿಸಬಹುದಾಗಿದ್ದು ಇದನ್ನು ಆಪಲ್, ಸ್ಯಾಮ್‌ಸಂಗ್, ಮೈಕ್ರೋಮ್ಯಾಕ್ಸ್ ಮತ್ತು ಲಾವಾ ಈ ಸೇವೆಯನ್ನು ಒದಗಿಸುತ್ತಿದೆ.

ವೋಡಾಫೋನ್ 4ಜಿ ಸೇವೆ

ವೋಡಾಫೋನ್ 4ಜಿ ಸೇವೆ

ಮೈಸೂರಿನಲ್ಲಿ 4ಜಿ ಸೇವೆಯು ಹೆಚ್ಚು ಪ್ರಬಲವಾಗಿದ್ದು, ತನ್ನದೇ 3ಜಿ ಸೇವೆಗಳಿಗೂ ಇದು ಬೆಂಬಲವನ್ನು 2100MHZ ನೆಟ್‌ವರ್ಕ್‌ನಲ್ಲಿ ಒದಗಿಸುತ್ತಿದೆ.

ವೋಡಾಫೋನ್ 4ಜಿ ಸೇವೆ

ವೋಡಾಫೋನ್ 4ಜಿ ಸೇವೆ

ಲಾಂಚ್‌ನೊಂದಿಗೆ ವೋಡಾಫೋನ್ ಕೂಡ ಕರ್ನಾಟಕದಲ್ಲಿ ಒಂದು ಪ್ರಮುಖ ಟೆಲಿಕಾಮ್ ಆಪರೇಟರ್ ಎಂಬ ಖ್ಯಾತಿಗೆ ಪಾತ್ರವಾಗಲಿದ್ದು ತನ್ನ ರೇಡಿಯೊ ತಂತ್ರಜ್ಞಾನ ಸೇವೆಗಳಲ್ಲಿ ಇದು 2ಜಿ/3ಜಿ/4ಜಿ ಸೇವೆಗಳನ್ನು ಒದಗಿಸುತ್ತದೆ.

ವೋಡಾಫೋನ್ 4ಜಿ ಸೇವೆ

ವೋಡಾಫೋನ್ 4ಜಿ ಸೇವೆ

ಮುಂಬೈನಲ್ಲಿರುವ ತನ್ನ ಪ್ರೀಮಿಯಮ್ ಹೈ ವಾಲ್ಯೂಮ್ ಗ್ರಾಹಕರಿಗಾಗಿ 4ಜಿ ಸಿದ್ಧ ಸಿಮ್‌ಗಳ ವಿತರಣೆಯನ್ನು ಹೋಮ್ ಡೆಲಿವರಿಯಲ್ಲಿ ಇದು ಮಾಡುತ್ತಿದೆ.

ವೋಡಾಫೋನ್ 4ಜಿ ಸೇವೆ

ವೋಡಾಫೋನ್ 4ಜಿ ಸೇವೆ

ತನ್ನೆಲ್ಲಾ ಗ್ರಾಹಕರಿಗೆ ತನ್ನ ಹೊಸ ಸೇವೆಯ ಕುರಿತಾದ ಮಾಹಿತಿಯನ್ನು ಕಂಪೆನಿ ಶೀಘ್ರದಲ್ಲಿಯೇ ನೀಡಲಿದೆ ಎಂಬುದಾಗಿ ಹೇಳಿಕೆಯಲ್ಲಿ ತಿಳಿಸಿದೆ.

Best Mobiles in India

English summary
Vodafone India has rolled out high-speed 4G network in Karnataka beginning with Mysuru, following the launch of its services in Kerala circle in December 2015.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X