ಜಿಯೋ ಮಣಿಸಲು 25 ಸಾವಿರ ಕೋಟಿ ಹೂಡಿಕೆ ಮಾಡುತ್ತಿದೆ 'ವೊಡಾಫೋನ್ ಐಡಿಯಾ'!

|

ಪ್ರತಿ ತಿಂಗಳಿಗೆ ಕೇವಲ 130 ರೂ. ದರದಲ್ಲಿ 46 ಗಂಟೆ ಯುಟ್ಯೂಬ್ ವಿಡಿಯೋಗಳನ್ನು ನೋಡುವಷ್ಟು ಡಾಟಾ ಒದಗಿಸುವಂತಹ ಪ್ಯಾಕೇಜ್ ನೀಡುತ್ತಿರುವ ಮುಕೇಶ್ ಅಂಬಾನಿ ಅವರ ಜಿಯೋ ಇನ್ಫೊಕಾಮ್ ಸಂಸ್ಥೆಯ ಎದುರು ಸ್ಪರ್ಧಿಸಲು ವೊಡಾಫೋನ್ ಐಡಿಯಾ ಕಂಪೆನಿ ಮುಂದಾಗಿದೆ. ಹಾಗಾಗಿ, ಅಂಬಾನಿ ಒಡೆತನದ ಜಿಯೋ ಸಂಸ್ಥೆಗೆ ಸೆಡ್ಡು ಹೊಡೆಯಲು ವೊಡಾಫೋನ್ ಐಡಿಯಾ ಲಿಮಿಟೆಡ್ ಕಂಪೆನಿ ಇದೀಗ ಭರ್ಜರಿ ಹೂಡಿಕೆಗೆ ಮುಂದಾಗಿದೆ.

ಹೌದು, ಜಿಯೋದ ಕಡಿಮೆ ಬೆಲೆಯ ಸಮರಕ್ಕೆ ಎದೆಯೊಡ್ಡಲು ವೊಡಾಫೋನ್ ಮತ್ತು ಐಡಿಯಾ ಕಂಪೆನಿಗಳು ಸೇರಿಕೊಂಡು ಭಾರತದ ಅತಿ ದೊಡ್ಡ ಟೆಲಿಕಾಂ ಆಗಿ 'ವೊಡಾಫೋನ್ ಐಡಿಯಾ' ಹುಟ್ಟಿಕೊಂಡಿದ್ದಾಯಿತು. ಇದೀಗ ಜಿಯೋ ಮಣಿಸುವ ಸಲುವಾಗಿ ಭರ್ಜರಿ ಹೂಡಿಕೆಗೆ ವೊಡಾಫೋನ್ ಐಡಿಯಾ ಲಿಮಿಟೆಡ್ ಮುಂದಾಗಿದೆ. ಜಿಯೋ ಅಬ್ಬರಕ್ಕೆ ಕಡಿವಾಣ ಹಾಕಲು ಕಂಪೆನಿ ಸುಮಾರು 25 ಸಾವಿರ ಕೋಟಿ ರೂಪಾಯಿ ಹೂಡಿಕೆ ಹೆಚ್ಚಳಕ್ಕೆ ಉದ್ದೇಶಿಸಿದೆ.

ಜಿಯೋ ಮಣಿಸಲು 25 ಸಾವಿರ ಕೋಟಿ ಹೂಡಿಕೆ ಮಾಡುತ್ತಿದೆ 'ವೊಡಾಫೋನ್ ಐಡಿಯಾ'!

ಭಾರತದ ಅತಿ ದೊಡ್ಡ ಟೆಲಿಕಾಂ 'ವೊಡಾಫೋನ್ ಐಡಿಯಾ' ಕಂಪೆನಿಯ ಈ ಹೂಡಿಕೆಯಲ್ಲಿ ವೊಡಾಫೋನ್ ಸಮೂಹ ಸಂಸ್ಥೆ ಸ ಅಂದಾಜು 11 ಸಾವಿರ ಕೋಟಿ ರೂ. ಹೂಡಿಕೆ ಮಾಡಲಿದ್ದರೆ, ಆದಿತ್ಯ ಬಿರ್ಲಾ ಗ್ರೂಪ್ 7,250 ಕೋಟಿ ರೂ. ಹೂಡಿಕೆ ಮಾಡಲಿದೆ ಎಂದು ಹೇಳಿಕೆಯೊಂದು ತಿಳಿಸಿದೆ. ರೈಟ್ಸ್ ಆಫರಿಂಗ್ ಹೆಲ್ಪ್ ಮೂಲಕ ಸುಮಾರು 25 ಸಾವಿರ ಕೋಟಿ ರೂಪಾಯಿ ಹೂಡಿಕೆ ಹೆಚ್ಚಿಸಲಾಗುತ್ತಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ.

ವೊಡಾಫೋನ್ ಐಡಿಯಾ ಸಂಸ್ಥೆಯು ಜಿಯೋದ ಸ್ಪರ್ಧೆಯನ್ನು ತಗ್ಗಿಸಲು ಈ ನಿಧಿಯನ್ನು ಬಳಸಿ 4ಜಿ ಸುಧಾರಣೆಗೆ ನೆಟ್‌ವರ್ಕ್ ಕ್ಷೇತ್ರದಲ್ಲಿ ಹೂಡಿಕೆ ಮಾಡಲಿದೆ ಎಂದು ಹೇಳಲಾಗಿದೆ.ಜೊತೆಗೆ ಪ್ರತ್ಯೇಕವಾಗಿ ಭಾರ್ತಿ ಇನ್ಫ್ರಾಟೆಲ್ ಲಿಮಿಟೆಡ್ ಮತ್ತು ಆದಿತ್ಯ ಬಿರ್ಲಾ ಟೆಲಿಕಾಂ ಜೊತೆ ಜಂಟಿ ಪಾಲುದಾರಿಕೆ ಹೊಂದಿರುವ ಸೆಲ್ ಫೋನ್ ಟವರ್ ಇಂಡಸ್ ಟವರ್ಸ್ ಲಿಮಿಟೆಡ್‌ನಲ್ಲಿ ಸಹ ಶೇ 11.5ರಷ್ಟು ಷೇರು ಖರೀದಿಗೆ ಕೂಡ ವೊಡಾಫೋನ್ ಐಡಿಯಾ ಚಿಂತನೆ ನಡೆಸಿದೆ.

ಜಿಯೋ ಮಣಿಸಲು 25 ಸಾವಿರ ಕೋಟಿ ಹೂಡಿಕೆ ಮಾಡುತ್ತಿದೆ 'ವೊಡಾಫೋನ್ ಐಡಿಯಾ'!

ಗ್ರಾಹಕರಿಗೆ ಕಡಿಮೆ ದರದಲ್ಲಿ ಹೈಸ್ಪೀಡ್ 4ಜಿ ಇಂಟರ್ನೆಟ್ ಒದಗಿಸುವ ಮೂಲಕ ಇತರೆ ಖಾಸಗಿ ದೂರಸಂಪರ್ಕ ಸಂಸ್ಥೆಗಳಿಗೆ ಆಘಾತ ನೀಡಿರುವ ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೋ ಕಳೆದ ಎರಡು ವರ್ಷಗಳಿಂದಲೂ ದಿಗ್ಗಜನಾಗಿ ಮೆರೆಯುತ್ತಿದೆ. ಜಿಯೋ ಕುಣಿಸಿದಂತೆ ಕುಣಿಯಬೇಕಾದ ಪರಿಸ್ಥಿತಿ ಇತರ ಟೆಲಿಕಾಂಗಳಿಗೆ ಒದಗಿಬಂದಿದೆ. ಇನ್ನು ಕಳೆದ ತ್ರೈಮಾಸಿಕದ ವೇಳೆಗೆ 26 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದುವ ಮೂಲಕ ಜಿಯೋ ಅವುಗಳಿಗೆ ಸಾಕಷ್ಟು ಭಯ ಮೂಡಿಸಿದೆ.

Best Mobiles in India

English summary
Separately, Vodafone Idea is also planning to sell its 11.5 per cent stake in Indus Towers Ltd. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X