ವೊಡಾಫೋನ್ 129 ರೂ. ಪ್ರಿಪೇಯ್ಡ್ ರೀಚಾರ್ಜ್: ಈಗ ಪ್ರತಿದಿನ 2GB ಡೇಟಾ!

|

ಭಾರತದ ಅತಿದೊಡ್ಡ ಟೆಲಿಕಾಂ ಕಂಪೆನಿ ವೊಡಾಫೋನ್ ತನ್ನ 129 ರೂ.ಗಳ ಪ್ರಿಪೇಯ್ಡ್ ಯೋಜನೆಯನ್ನು ಪರಿಷ್ಕರಿಸಿದೆ. ಏರ್‌ಟೆಲ್‌ಗೆ ಇತ್ತೀಚಿನ 129 ರೂ. ಪ್ಯಾಕ್‌ಗೆ ಹೊಂದಿಕೆಯಾಗುವಂತೆ ವೊಡಾಫೋನ್ ಕೂಡ ಈ 129 ಪ್ರಿಪೇಯ್ಡ್ ರೀಚಾರ್ಜ್ ಪ್ಲ್ಯಾನ್ ಬದಲಾಯಿಸಿಕೊಂಡಿದ್ದು, ದೇಶದ ಎಲ್ಲಾ ವಲಯಗಳಲ್ಲೂ ವೊಡಾಫೋನಿನ 129 ರೂ.ಗಳ ಪ್ರಿಪೇಯ್ಡ್ ಯೋಜನೆ ಇದೀಗ ಹೆಚ್ಚು ಡೇಟಾವನ್ನು ನೀಡುತ್ತಿದೆ. ಅಂದರೆ, ಇದೀಗ ವೊಡಾಫೋನ್ 129 ರೂ. ಪ್ರಿಪೇಯ್ಡ್ ರೀಚಾರ್ಜ್ ಪ್ಯಾಕ್ 28 ದಿನಗಳವರೆಗೆ 2 ಜಿಬಿ ಡೇಟಾವನ್ನು ನೀಡುತ್ತದೆ.

ವೊಡಾಫೋನ್ 129 ರೂ. ಪ್ರಿಪೇಯ್ಡ್ ರೀಚಾರ್ಜ್: ಈಗ ಪ್ರತಿದಿನ 2GB ಡೇಟಾ!

ಇದೀಗ ಪರಿಷ್ಕರಣೆಯ ನಂತರ, ವೊಡಾಫೋನ್‌ನ 129 ರೂ. ಪ್ರಿಪೇಯ್ಡ್ ಯೋಜನೆಯು 2 ಜಿಬಿ 2ಜಿ/ 3ಜಿ/ 4 ಜಿ ಡೇಟಾದೊಂದಿಗೆ ಎಫ್‌ಯುಪಿ ಮಿತಿಯಿಲ್ಲದೆ ಅನಿಯಮಿತ ಧ್ವನಿ ಕರೆಗಳು ಮತ್ತು 300 ಎಸ್‌ಎಂಎಸ್ಗಳನ್ನು ನೀಡುತ್ತಿದೆ. 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಈ ಯೋಜನೆಯಲ್ಲಿ ಕರೆ ಮಾಡಲು ಯಾವುದೇ ಎಫ್‌ಯುಪಿ ಮಿತಿಯಿಲ್ಲದ ಕಾರಣ ಕನಿಷ್ಠ ಡೇಟಾ ಲಾಭ ಮತ್ತು ಭಾರೀ ಕರೆಗಳನ್ನು ಮಾಡಲು ಬಯಸುವ ಮೊಬೈಲ್ ಬಳಕೆದಾರರಿಗೆ ಈ ಯೋಜನೆ ತುಂಬಾ ಉಪಯುಕ್ತವಾದಂತೆ ಕಂಡುಬಂದಿದೆ.

ವೊಡಾಫೋನ್ ಈ ವರ್ಷದ ಫೆಬ್ರವರಿಯಲ್ಲಿ 1.5 ಜಿಬಿ ಡೇಟಾ ಲಾಭ ಮತ್ತು ಅನಿಯಮಿತ ಕರೆ ಪ್ರಯೋಜನಗಳೊಂದಿಗೆ ರೂ 129 ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿತ್ತು. ಇದಾದ ನಂತರ, ಕಂಪನಿಯು ಈ ಯೋಜನೆಗೆ ಎಸ್‌ಎಂಎಸ್ ಪ್ರಯೋಜನವನ್ನು ಸೇರಿಸಿತು. ಇದೀಗ ಮತ್ತೆ ಭಾರ್ತಿ ಏರ್‌ಟೆಲ್‌ಗೆ ಹೊಂದಿಕೆಯಾಗುವಂತೆ ಡೇಟಾ ಪ್ರಯೋಜನವನ್ನು 500MB ಹೆಚ್ಚಿಸಿದೆ. ಇಷ್ಟು ಮಾತ್ರವಲ್ಲದೇ, ಈ 129 ರೂಪಾಯಿಗಳ ಪ್ರಿಪೇಯ್ಡ್ ಯೋಜನೆ ಕಾರ್ಯಾಚರಣೆಯನ್ನು ದೇಶದ ಎಲ್ಲಾ ಟೆಲಿಕಾಂ ವಲಯಗಳಲ್ಲಿ ಮಾನ್ಯ ಮಾಡಿದೆ.

ವೊಡಾಫೋನ್ 129 ರೂ. ಪ್ರಿಪೇಯ್ಡ್ ರೀಚಾರ್ಜ್: ಈಗ ಪ್ರತಿದಿನ 2GB ಡೇಟಾ!

ವಿಶೇಷವೆಂದರೆ, ಭಾರ್ತಿ ಏರ್‌ಟೆಲ್ ಸಹ ಇದೇ ರೀತಿಯ ಪ್ರಿಪೇಯ್ಡ್ ಯೋಜನೆಯನ್ನು 129 ರೂ.ಗಳನ್ನು ಒದಗಿಸುತ್ತಿದೆ. 129 ರೂ.ಗಳ ಯೋಜನೆಯನ್ನು ರೀಚಾರ್ಜ್ ಮಾಡುವ ಏರ್‌ಟೆಲ್ ಗ್ರಾಹಕರಿಗೆ ಅನಿಯಮಿತ ಧ್ವನಿ ಕರೆ, 2 ಜಿಬಿ 4 ಜಿ / 3 ಜಿ / 2 ಜಿ ಡೇಟಾ ಮತ್ತು 300 ಎಸ್‌ಎಂಎಸ್ 28 ದಿನಗಳವರೆಗೆ ಮಾನ್ಯವಾಗಿರುತ್ತದೆ. ಹೊಸ ಪರಿಷ್ಕರಣೆಯ ನಂತರ ವೊಡಾಫೋನ್ ಸಹ ಇದೇ ರೀತಿಯ ಪ್ರಯೋಜನಗಳನ್ನು ಒದಗಿಸುತ್ತಿದೆ. ಜೊತೆಗೆ ಏರ್‌ಟೆಲ್ ಟಿವಿ ಮತ್ತು ವಿಂಕ್ ಮ್ಯೂಸಿಕ್‌ಗೆ ಉಚಿತ ಚಂದಾದಾರಿಕೆ ನೀಡಿದೆ.

ಒಂದುಗೂಡಿದ ಭಾರತ ಮತ್ತು ಚೀನಾ!..ಅಮೆರಿಕಾ ವಿರುದ್ಧ ಡೇಟಾ ಯದ್ಧಕ್ಕೆ ಕ್ಷಣಗಣನೆ!ಒಂದುಗೂಡಿದ ಭಾರತ ಮತ್ತು ಚೀನಾ!..ಅಮೆರಿಕಾ ವಿರುದ್ಧ ಡೇಟಾ ಯದ್ಧಕ್ಕೆ ಕ್ಷಣಗಣನೆ!

ಇನ್ನು ಈ ಎರಡೂ ಟೆಲಿಕಾಂಗಳಿಗೆ ಪೈಪೋಟಿಯಾಗಿರುವ ರಿಲಯನ್ಸ್ ಜಿಯೋ ದೇಶದಲ್ಲಿ ತನ್ನ ಪ್ರಿಪೇಯ್ಡ್ ಯೋಜನೆಗಳನ್ನು ನವೀಕರಿಸಿ ಸುಮಾರು 18 ತಿಂಗಳಾದರೂ ಈಗಲೂ ವೊಡಾಫೋನ್ ಮತ್ತು ಏರ್‌ಟೆಲ್‌ಗಿಂತ ಮುಂದಿದೆ. ರಿಲಯನ್ಸ್ ಜಿಯೋ 98 ರೂ.ಗಳ ಪ್ರಿಪೇಯ್ಡ್ ಯೋಜನೆಯನ್ನು ಹೊಂದಿದ್ದು, 2 ಜಿಬಿ 4ಜಿ ಡೇಟಾ, 300 ಎಸ್‌ಎಂಎಸ್ ಮತ್ತು ಅನಿಯಮಿತ ವಾಯ್ಸ್ ಕಾಲಿಂಗ್ ಅನ್ನು ಒದಗಿಸಿದೆ. ಆದ್ದರಿಂದ ಬೆಲೆ ಪ್ರಕಾರ, ರಿಲಯನ್ಸ್ ಜಿಯೋ ಯೋಜನೆ ಟೆಲಿಕಾಂ ವಲಯಯದಲ್ಲಿ ಈಗಲೂ ಹೆಚ್ಚು ಜನಪ್ರಿಯ ಯೋಜನೆ ಎನ್ನಬಹುದು.

Best Mobiles in India

English summary
Vodafone Revises Rs 129 Prepaid Recharge to Offer More Data. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X