Subscribe to Gizbot

ವಿಶ್ವದ ಬೃಹತ್ ಗ್ಯಾಲೆಕ್ಸಿ ಅನ್ವೇಷಿಸಿದ ಭಾರತೀಯ ಖಗೋಳಶಾಸ್ತ್ರಜ್ಞರು..!!

Written By:

ಭಾರತೀಯ ಖಗೋಳಶಾಸ್ತ್ರಜ್ಞರು ಹೊಸದೊಂದು ಗ್ಯಾಲಾಕ್ಸಿ (ನಕ್ಷತ್ರಪುಂಜ)ಯನ್ನು ಅನ್ವೇಷಿಸಿದ್ದು, ಇದು ವಿಶ್ವದ ಅತೀ ದೊಡ್ಡ ಗ್ಯಾಲೆಕ್ಸಿಯಾಗಿದೆ ಎನ್ನಲಾಗಿದ್ದು, ಇದಕ್ಕೆ ಸರಸ್ವತಿ ನಕ್ಷತ್ರ ಪುಂಜಾ ಎಂದು ಹೆಸರಿಟ್ಟಿದ್ದಾರೆ. ಈ ಗ್ಯಾಲೆಕ್ಸಿ ನಮ್ಮ ಭೂಮಿಯಿಂದ ಸರಿ ಸುಮಾರು 400 ಕೋಟಿ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ ಎಂದು ಖಗೋಳಶಾಸ್ತ್ರಜ್ಞರು ತಿಳಿಸಿದ್ದಾರೆ.

ವಿಶ್ವದ ಬೃಹತ್ ಗ್ಯಾಲೆಕ್ಸಿ ಅನ್ವೇಷಿಸಿದ ಭಾರತೀಯ ಖಗೋಳಶಾಸ್ತ್ರಜ್ಞರು..!!

ಓದಿರಿ: ಅಮೆಜಾನ್ ನಲ್ಲಿ ನೋಕಿಯಾ ಪ್ರೀ ಬುಕಿಂಗ್ ಶುರು: ಭರ್ಜರಿ ಆಫರ್ ಇದೆ..!

ಇದು ವಿಶ್ವದಲ್ಲಿರುವ ಅತ್ಯಂತ ದೊಡ್ಡದಾದ ನಕ್ಷತ್ರಗಳ ಸಮೂಹಗಳಲ್ಲಿ ಒಂದಾಗಿದ್ದು, ಈ ಅನ್ವೇಷಣೆಯೂ ವಿಶ್ವದ ಉಗಮದ ಬಗ್ಗೆ ಇದ್ದ ಸಿದ್ಧಾಂತವನ್ನು ಮರು ಚರ್ಚೆಗೆ ಗುರಿ ಪಡಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಯಾಕೆಂದರೆ ಇದೇ ಕೆಲವು ದಿನಗಳ ಹಿಂದೆ ಇಷ್ಟು ದೊಡ್ಡದಾಗ ಗ್ಯಾಲೆಕ್ಸಿ ಇರುವ ಬಗ್ಗೆ ಯಾರಿಗೂ ಕಲ್ಪನೆಯೂ ಇರಲಿಲ್ಲ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
15 ವರ್ಷದ ಹಿಂದೆ ಇಷ್ಟು ದೊಡ್ಡದಾದ ಕಲ್ಪನೆಯೇ ಇರಲಿಲ್ಲ;

15 ವರ್ಷದ ಹಿಂದೆ ಇಷ್ಟು ದೊಡ್ಡದಾದ ಕಲ್ಪನೆಯೇ ಇರಲಿಲ್ಲ;

ವಿಶ್ವದಲ್ಲಿ ಇಷ್ಟು ದೊಡ್ಡ ಪ್ರಮಾಣದ ನಕ್ಷತ್ರಪುಂಜವೊಂದು ಇರಲಿದೆ ಎನ್ನುವ ಕಲ್ಪನೆಯೇ ನಮ್ಮ ಹಿಂದಿನ ಖಗೋಳಶಾಸ್ತ್ರಜ್ಞರಿಗೆ ಇರಲಿಲ್ಲ ಎಂದು ಪುಣೆಯ ಇಂಟರ್ ಯೂನಿವರ್ಸಿಟಿ ಸೆಂಟರ್‌ ಫಾರ್‌ ಆಸ್ಟ್ರಾನಮಿಯ ತಂಡದ ಮುಖ್ಯಸ್ಥ ಪ್ರೊ. ಸೊಮಕ್‌ ರಾಯ್‌ಚೌಧರಿ ತಿಳಿಸಿದ್ದಾರೆ. ಇತ್ತಿಚೀನ ದಿನದಲ್ಲಿ ತಂತ್ರಜ್ಞಾನ ಬೆಳೆದ ನಂತರದಲ್ಲಿ ಇಷ್ಟು ದೊಡ್ಡ ನಕ್ಷತ್ರಪುಂಜದ ಅನ್ವೇಷಣೆಯಾಗಿದೆ ಎಂದಿದ್ದಾರೆ.

ಇದರಲ್ಲೇ 40 ನಕ್ಷತ್ರಪುಂಜಗಳ ಗುಂಪುಗಳಿವೆ:

ಇದರಲ್ಲೇ 40 ನಕ್ಷತ್ರಪುಂಜಗಳ ಗುಂಪುಗಳಿವೆ:

ಈ ಸರಸ್ವತಿ ಮಹಾ ಸಮೂಹದಲ್ಲಿ ಕನಿಷ್ಠ 40 ದೊಡ್ಡ ನಕ್ಷತ್ರಪುಂಜಗಳ ಗುಂಪುಗಳಿವೆ ಮತ್ತು 10 ಸಾವಿರಕ್ಕೂ ಹೆಚ್ಚು ಸಣ್ಣ ನಕ್ಷತ್ರಪುಂಜಗಳಿವೆ ಎಂದು ವಿಜ್ಞಾನಿಗಳು ಅನ್ವೇಷಿಸಲಾಗಿದೆ.

ಸೂರ್ಯನಿಗಿಂತಲೂ ತೂಕ ಜಾಸ್ತಿ:

ಸೂರ್ಯನಿಗಿಂತಲೂ ತೂಕ ಜಾಸ್ತಿ:

ಸರಸ್ವತಿ ನಕ್ಷತ್ರಪುಂಜಗಳ ಮಹಾಸಮೂಹದ ತೂಕ ಸೂರ್ಯನಿಗಿಂತಲೂ 20 ಶತಕೋಟಿ ಪಟ್ಟು ಹೆಚ್ಚು ಎಂದು ವರದಿಯಾಗಿದೆ.

ಜ್ಯೋತಿರ್ವರ್ಷ ಎಂದರೆ ಏನು..?

ಜ್ಯೋತಿರ್ವರ್ಷ ಎಂದರೆ ಏನು..?

ಒಂದು ವರ್ಷದಲ್ಲಿ ಬೆಳಕಿನ ಕಿರಣ ಸಾಗುವ ದೂರವನ್ನು ಜ್ಯೋತಿರ್ವರ್ಷ ಎಂದು ಕರೆಯುತ್ತಾರೆ. ಭೂಮಿಯಿಂದ ಬೇರೆ ಗ್ರಹಗಳಯ ಮತ್ತು ನಕ್ಷತ್ರಗಳಿಗೆ ಇರುವ ದೂರವನ್ನು ಜ್ಯೋತಿರ್ವರ್ಷ ದಿಂದ ಅಳೆಯಲಾಗುತ್ತದೆ.

ಎರಡು ವಿಶ್ವವಿದ್ಯಾಲಯಗಳ ಖಗೋಳಶಾಸ್ತ್ರಜ್ಞರ ತಂಡ:

ಎರಡು ವಿಶ್ವವಿದ್ಯಾಲಯಗಳ ಖಗೋಳಶಾಸ್ತ್ರಜ್ಞರ ತಂಡ:

ಪುಣೆಯ ಇಂಟರ್ ಯೂನಿವರ್ಸಿಟಿ ಸೆಂಟರ್ ಫಾರ್ ಅಸ್ಟ್ರೋನಮಿ ಅಂಡ್ ಆಸ್ಟ್ರೋಫಿಸಿಕ್ಸ್ ಮತ್ತು ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಷನ್ ಅಂಡ್ ರಿಸರ್ಚ್ ಹಾಗೂ ಇತರೆ ಎರಡು ವಿಶ್ವವಿದ್ಯಾಲಯಗಳ ಖಗೋಳಶಾಸ್ತ್ರಜ್ಞರ ತಂಡ ಸರಸ್ವತಿ ಗ್ಯಾಲೆಕ್ಸಿ ಪತ್ತೆ ಮಾಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Saraswati: Galaxies are themselves made of billions of stars and planets, and a cluster typically contains several hundreds of these galaxies. To Know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot