Vu ಕಂಪೆನಿಯಿಂದ ಹೊಸ ಸ್ಮಾರ್ಟ್‌ಟಿವಿ ಬಿಡುಗಡೆ! ಬೆಲೆ ಎಷ್ಟು? ಫೀಚರ್ಸ್‌ ಹೇಗಿದೆ?

|

ಕಲರ್‌ಫುಲ್‌ ಹಾಗೂ ನವೀನ ಮಾದರಿಯ ಟೆಕ್ನಾಲಜಿ ಸ್ಮಾರ್ಟ್‌ಟಿವಿಗಳಿಗೆ ವಿಯು ಕಂಪೆನಿ ಪ್ರಸಿದ್ಧಿ ಪಡೆದುಕೊಂಡಿದೆ. ಗ್ರಾಹಕರಿಗೆ ಬೇಕಾದ ಹಲವು ಫೀಚರ್ಸ್‌ಗಳನ್ನು ಒಳಗೊಂಡ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ತನ್ನದೇ ಸ್ಥಾನವನ್ನು ಪಡೆದುಕೊಂಡಿದೆ. ಇದೀಗ ತನ್ನ GloLED ಟಿವಿ ಸರಣಿಯಲ್ಲಿ 43-ಇಂಚಿನ Vu GloLED ಟಿವಿಯನ್ನು ಪರಿಚಯಿಸಿದೆ. ಈ ಸ್ಮಾರ್ಟ್‌ಟಿವಿ ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗುವ ಸ್ಮಾರ್ಟ್‌ಟಿವಿ ಎನಿಸಿಕೊಂಡಿದೆ.

ವಿಯು

ಹೌದು, ವಿಯು ಕಂಪೆನಿ ಹೊಸ 43-ಇಂಚಿನ Vu GloLED ಟಿವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು Google TV ಗೆ ಬೆಂಬಲವನ್ನು ಹೊಂದಿದ್ದು, 84W ಸೌಂಡ್‌ ಔಟ್‌ಪುಟ್ ನೀಡಲಿದೆ. ಈ ಸ್ಮಾರ್ಟ್‌ಟಿವಿ ಡ್ಯುಯಲ್-ಕೋರ್ GPU ಜೊತೆಗೆ ಕ್ವಾಡ್-ಕೋರ್ ಪ್ರೊಸೆಸರ್ ವೇಗವನ್ನು ಹೊಂದಿದೆ. ಫಿಲ್ಡ್‌ನಲ್ಲಿ ಗೇಮ್‌ ಆಡಿದಂತ ಅನುಭವ ನೀಡುವುದಕ್ಕಾಗಿ ಅಪ್ಡೇಟ್‌ ಕ್ರಿಕೆಟ್‌ ಮೋಡ್‌ಗೆ ಬೆಂಬಲವನ್ನು ಕೂಡ ನೀಡಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿ ಏನೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೀಚರ್ಸ್‌ ಹೇಗಿದೆ? ಹೊಸತನ ಏನಿದೆ?

ಫೀಚರ್ಸ್‌ ಹೇಗಿದೆ? ಹೊಸತನ ಏನಿದೆ?

Vu GloLED ಸ್ಮಾರ್ಟ್‌ಟಿವಿ ಗ್ಲೋ ಪ್ಯಾನೆಲ್‌ ಹೊಂದಿರುವ 43 ಇಂಚಿನ ಬೆಜೆಲ್-ಲೆಸ್ 4K ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 94% ಬಣ್ಣದ ಹರವು ಹೊಂದಿದೆ. ಇದು 100% ಬಣ್ಣದ ಹರವು ಹೊಂದಿರುವ OLED ಟಿವಿಗೆ ಸಮನಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಇನ್ನು ಡಿಸ್‌ಪ್ಲೇ 400 ನಿಟ್ಸ್ ಬ್ರೈಟ್‌ನೆಸ್‌ ಅನ್ನು ನೀಡಲಿದೆ. ಇದರಿಂದ ವೀಡಿಯೋ ವೀಕ್ಷಣೆಯಲ್ಲಿ ಸಾಕಷ್ಟು ನಿಖರತೆಯನ್ನು ಕಾಣಬಹುದಾಗಿದೆ. ಇದಲ್ಲದೆ Vu Glo AI ಪ್ರೊಸೆಸರ್‌ಗೆ ಬೆಂಬಲವನ್ನು ನೀಡುವುದರಿಂದ OTT ಪ್ಲಾಟ್‌ಫಾರ್ಮ್‌ಗಳ ವೀಡಿಯೊ ವೀಕ್ಷಣೆಯನ್ನು ಹೆಚ್ಚಿಸಬಹುದಾಗಿದೆ.

ಸ್ಮಾರ್ಟ್‌ಟಿವಿ

ಇನ್ನು ಈ ಸ್ಮಾರ್ಟ್‌ಟಿವಿ ಆಂಬಿಯೆಂಟ್ ಲೈಟಿಂಗ್‌ ಬೆಂಬಲವನ್ನು ಸಹ ಪಡೆದಿದೆ. ಇದರಿಂದ ಆಂಬಿಯೆಂಟ್‌ ಲೈಟಿಂಗ್‌ಗೆ ಬೆಂಬಲಿಸಲು ಆಂಬಿಯೆಂಟ್ ಲೈಟ್ ಸೆನ್ಸಾರ್ ಅನ್ನು ನೀಡಲಾಗಿದೆ. ಜೊತೆಗೆ ಇದು MEMC, ALLM (ಆಟೋ ಲೋ ಲೇಟೆನ್ಸಿ ಮೋಡ್) ಮತ್ತು VRR (ವೇರಿಯಬಲ್ ರಿಫ್ರೆಶ್ ರೇಟ್) ಕೂಡ ಒಳಗೊಂಡಿದೆ. ಇದು ಡ್ಯುಯಲ್-ಕೋರ್ GPU ಜೊತೆಗೆ ಕ್ವಾಡ್-ಕೋರ್ ಪ್ರೊಸೆಸರ್ ವೇಗವನ್ನು ಹೊಂದಿದೆ. ಹಾಗೆಯೇ 2GB RAM ಮತ್ತು 16GB ಇನ್‌ಬಿಲ್ಟ್‌ ಸ್ಟೋರೇಜ್‌ ಅನ್ನು ಸಹ ನೀಡಲಾಗಿದೆ.

ಸಬ್‌ವೂಫರ್

ವಿಯು GloLED ಸ್ಮಾರ್ಟ್‌ಟಿವಿ DJ ಸಬ್‌ವೂಫರ್ ಮತ್ತು 2 ಸ್ಪೀಕರ್‌ ಒಳಗೊಂಡ ಇನ್‌ಬಿಲ್ಟ್‌ ಸೌಂಡ್‌ಬಾರ್‌ ಪಡದಿದೆ. ಇದರಿಂದ 84W ಸೌಂಡ್‌ ಔಟ್‌ಪುಟ್‌ ನೀಡಲಿದೆ. ಇದು ಟಿವಿ ವೀಕ್ಷಕರಿಗೆ ಹೋಮ್‌ ಥಿಯಟರ್‌ನ ಅನುಭವವನ್ನು ನೀಡಲಿದೆ. ಇನ್ನು ಈ ಸ್ಮಾರ್ಟ್‌ಟಿವಿ ಗೂಗಲ್‌ ಟಿವಿ ಅನ್ನು ರನ್‌ ಮಾಡಲಿದ್ದು, ಟಿವಿಯಲ್ಲಿ ಕಂಟೆಂಟ್‌ ಅನ್ನು ಬ್ರೌಸ್‌ ಮಾಡುವುದಕ್ಕೆ ಸಾಧ್ಯವಾಗಲಿದೆ. ಇದಲ್ಲದೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಆಪಲ್ ಟಿವಿ+ ಸೇರಿದಂತೆ ಹಲವು OTT ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶ ಪಡೆಯಲು ಅವಕಾಶ ನೀಡಲಿದೆ.

ಸ್ಮಾರ್ಟ್‌ಟಿವಿ

ಇದರೊಂದಿಗೆ ಈ ಸ್ಮಾರ್ಟ್‌ಟಿವಿಯ ವಿಶೇಷತೆಗಳಲ್ಲಿ ಅಡ್ವಾನ್ಡ್‌ ಕ್ರಿಕೆಟ್‌ ಮೋಡ್‌ಗೆ ಬೆಂಬಲ ಕೂಡ ಒಂದಾಗಿದೆ. ಇದರಿಂದ ನೀವು ಸ್ಮಾರ್ಟ್‌ಟಿವಿಯಲ್ಲಿ ಕ್ರಿಕೆಟ್‌ ನೋಡುವಾಗ ಮೈದಾನದಲ್ಲಿ ಕುಳಿತು ಪಂದ್ಯ ನೋಡಿದಂತಹ ಅನುಭವ ಸಿಗಲಿದೆ. ಪ್ರಸ್ತುತ FIFA 2022 ಫುಟ್ಬಾಲ್‌ ವರ್ಲ್ಡ್‌ಕಪ್‌ ಪಂದ್ಯಗಳನ್ನು ನೋಡುವುದಕ್ಕೆ ಸೂಕ್ತವಾಗಿದೆ. ಇದರಲ್ಲಿ ನೀಡಲಾಗಿರುವ ಡಾಲ್ಬಿ ಅಟ್ಮೋಸ್‌ ವರ್ಚುವಲೈಸೇಶನ್ ಸ್ಪಷ್ಟವಾದ ಕಾಮೆಂಟರಿ ಅನುಭವ ನೀಡಲಿದೆ. ಜೊತೆಗೆ ಈ ಸ್ಮಾರ್ಟ್‌ಟಿವಿ ಸಿನಿಮಾ ಮೋಡ್ ಅನ್ನು ಸಹ ಹೊಂದಿದೆ. ಇದರಿಂದ ಸಿನಿಮಾ ವೀಕ್ಷಣೆ ಅನುಭವ ಇನ್ನಷ್ಟು ಉತ್ತಮವಾದ ಅನುಭವ ನೀಡಲಿದೆ.

ಸ್ಮಾರ್ಟ್‌ಟಿವಿ

ಇನ್ನು ಈ ಸ್ಮಾರ್ಟ್‌ಟಿವಿ ಕನೆಕ್ಟಿವಿಟಿ ಆಯ್ಕೆಗಳಲ್ಲಿ 3 HDMI ಪೋರ್ಟ್‌ಗಳು, 2 USB, ಒಂದು AV ಇನ್‌ಪುಟ್, ಆಪ್ಟಿಕಲ್ ಡಿಜಿಟಲ್ ಆಡಿಯೋ ಔಟ್‌ಪುಟ್, eARC/ARC, ನೆಟ್‌ವರ್ಕ್ ಈಥರ್ನೆಟ್ ಪೋರ್ಟ್, 1 ಇಯರ್‌ಫೋನ್ ಜ್ಯಾಕ್, ಬ್ಲೂಟೂತ್ 5.1 ಮತ್ತು ವೈ-ಫೈ ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಬಿಡುಗಡೆಯಾಗಿರುವ 43-ಇಂಚಿನ Vu GloLED ಸ್ಮಾರ್ಟ್ ಟಿವಿ ಪ್ರಸ್ತುತ 29,999ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಇದು ಫ್ಲಿಪ್‌ಕಾರ್ಟ್ ಮೂಲಕ ಇದೇ ನವೆಂಬರ್ 27 ರಿಂದ ಖರೀದಿಗೆ ಬರಲಿದ್ದು, ಸಿಂಗಲ್‌ ಮಿಡ್ನೈಟ್ ಬ್ಲ್ಯಾಕ್‌ ಕಲರ್‌ ಆಯ್ಕೆಯಲ್ಲಿ ದೊರೆಯಲಿದೆ.

Best Mobiles in India

Read more about:
English summary
Vu GloLED 43-Inch TV Launched in India: Price and Specifications

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X