ಮಾಹಿತಿ ಸೋರಿಕೆಯಾದರೆ ತಕ್ಷಣ ತಿಳಿಸುತ್ತೆ ಈ ಬ್ರೌಸರ್‌..!

By Gizbot Bureau
|

ನಿಮ್ಮ ವೈಯಕ್ತಿಕ ಡೇಟಾವನ್ನು ಇಂಟರ್‌ನೆಟ್‌ನಲ್ಲಿಡುವುದು ತುಂಬಾ ಅಸುರಕ್ಷಿತ ಸ್ಥಳ. ಏಕೆಂದರೆ, ಆ ಮಾಹಿತಿ ಯಾವಾಗ ಬೇಕಾದರೂ ಹ್ಯಾಕರ್‌ಗಳ ಕಣ್ಣಿಗೆ ಬಲಿಯಾಗುತ್ತದೆ. ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಂದ ವ್ಯಕ್ತಿಯವರೆಗಿನ ಡೇಟಾವು ಹ್ಯಾಕರ್‌ಗಳ ದುರುದ್ದೇಶಪೂರಿತ ಬಳಕೆಗೆ ಸರಕು ಆಗಬಹುದು. ಫೇಸ್‌ಬುಕ್‌ನ ಕೇಂಬ್ರಿಡ್ಜ್ ಅನಾಲಿಟಿಕಾ ಹಗರಣ ಮತ್ತು ವನ್ನಾಕ್ರೈ ಹಾಗೂ ಪೇಟ್ಯ ರ್ಯಾನ್‌ಸಮ್‌ವೇರ್‌ ಮೂಲಕ ದೊಡ್ಡ ಸಂಸ್ಥೆಗಳ ನೌಕರರು ಬಳಸುವ ಸಾಧನಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತದೆ. ಆದರೆ, ಈಗ ವಿಶ್ವದ ಪ್ರಮುಖ ಸರ್ಚ್ ಇಂಜಿನ್‌ಗಳು ಈ ಸಮಸ್ಯೆಗಳನ್ನು ಎದುರಿಸಲು ತಯಾರಾಗಿದ್ದು, ಮೊಜಿಲ್ಲಾ ಮತ್ತು ಗೂಗಲ್ ಸಂಸ್ಥೆಗಳು ಹೊಸ ಫೀಚರ್‌ನೊಂದಿಗೆ ಬರುತ್ತಿವೆ.

ಫೈರ್‌ಫಾಕ್ಸ್ 70

ಫೈರ್‌ಫಾಕ್ಸ್ 70

ಅಮೇರಿಕನ್ ಸಂಸ್ಥೆಯಾದ ಮೊಜಿಲ್ಲಾದ ಇತ್ತೀಚಿನ ಬ್ರೌಸರ್ ಆವೃತ್ತಿಯಾದ ಫೈರ್‌ಫಾಕ್ಸ್ 70 ಯನ್ನು ಸಾಮಾಜಿಕ ಟ್ರ್ಯಾಕಿಂಗ್ ರಕ್ಷಣೆ, ಗೌಪ್ಯತೆ ಸಂರಕ್ಷಣಾ ವರದಿ ಮತ್ತು ಪಾಸ್‌ವರ್ಡ್ ನಿರ್ವಹಣಾ ಸಾಧನಗಳಂತಹ ಹೊಸ ಫೀಚರ್‌ಗಳೊಂದಿಗೆ ನವೀಕರಿಸಲಾಗಿದೆ. ಮಾಹಿತಿ ಸೋರಿಕೆಯಾದಾಗ ಬ್ರೌಸರ್‌ ನಿಮ್ಮನ್ನು ಎಚ್ಚರಿಸುತ್ತದೆ.

ಟ್ರ್ಯಾಕಿಂಗ್‌ ಪ್ರೊಟೆಕ್ಷನ್

ಟ್ರ್ಯಾಕಿಂಗ್‌ ಪ್ರೊಟೆಕ್ಷನ್

ಮೊಜಿಲ್ಲಾ ತನ್ನ ಅಪ್‌ಡೇಟೆಡ್‌ ಟ್ರ್ಯಾಕಿಂಗ್ ಪ್ರೊಟೆಕ್ಷನ್ ಫೀಚರ್‌ಗೆ ಸಾಮಾಜಿಕ ಮಾಧ್ಯಮ ಟ್ರ್ಯಾಕರ್‌ಗಳನ್ನು ಸೇರಿಸಿದೆ. ಅಂದರೆ ಫೇಸ್‌ಬುಕ್, ವಾಟ್ಸ್‌ಆಪ್, ಇನ್‌ಸ್ಟಾಗ್ರಾಂ, ಟ್ವಿಟರ್, ಯೂಟ್ಯೂಬ್ ಮತ್ತು ಲಿಂಕ್ಡ್‌ಇನ್‌ನಂತಹ ಪ್ರಮುಖ ಪ್ಲಾಟ್‌ಫಾರ್ಮ್‌ಗಳ ಎಲ್ಲಾ ಟ್ರ್ಯಾಕಿಂಗ್ ವಿನಂತಿಗಳನ್ನು ಬ್ರೌಸರ್‌ ತಿರಸ್ಕರಿಸಸಿ, ನಿರ್ಬಂಧಿಸುತ್ತದೆ.

ಗೌಪ್ಯತೆ ಸಂರಕ್ಷಣಾ ವರದಿ

ಗೌಪ್ಯತೆ ಸಂರಕ್ಷಣಾ ವರದಿ

ಗೌಪ್ಯತೆ ಸಂರಕ್ಷಣಾ ವರದಿಯು ನಿಮ್ಮ ಬ್ರೌಸಿಂಗ್ ಚಟುವಟಿಕೆಯನ್ನು ಪ್ರವೇಶಿಸಲು ಪ್ರಯತ್ನಿಸಿದ ಟ್ರ್ಯಾಕರ್‌ಗಳನ್ನು ಪಟ್ಟಿ ಮಾಡುತ್ತದೆ. ನಿಮ್ಮ ಸೇವ್‌ ಮಾಡಿದ ಲಾಗಿನ್ ಡೇಟಾ ಸೋರಿಕೆಯಾದಾಗ ನಿಮ್ಮನ್ನು ಎಚ್ಚರಿಸುವ ಲಾಕ್‌ವೈಸ್ ಪಾಸ್‌ವರ್ಡ್ ನಿರ್ವಹಣಾ ಸಾಧನವಿದೆ. ವಿಂಡೋಸ್, ಮ್ಯಾಕ್ ಮತ್ತು ಲಿನಕ್ಸ್ ಪ್ಲಾಟ್‌ಫಾರ್ಮ್‌ಗಳಿಗಾಗಿ ಫೈರ್‌ಫಾಕ್ಸ್ 70 ಬ್ರೌಸರ್‌ನ್ನು ಬಿಡುಗಡೆ ಮಾಡಲಾಗಿದೆ.

ಗೂಗಲ್ ಕ್ರೋಮ್ 78

ಗೂಗಲ್ ಕ್ರೋಮ್ 78

ಸರ್ಚ್ ಎಂಜಿನ್ ದೈತ್ಯ ಗೂಗಲ್ ಕೂಡ ತನ್ನ ಇತ್ತೀಚಿನ ಬ್ರೌಸರ್‌ ಆವೃತ್ತಿ ಕ್ರೋಮ್ 78ಗೆ ಪಾಸ್‌ವರ್ಡ್ ಚೆಕಪ್ ಟೂಲ್‌ ಸೇರಿಸಿದೆ. ಕ್ರೋಮ್‌ 78 ಬ್ರೌಸರ್‌ನ್ನು ಈ ವಾರದಲ್ಲಿ ಬಿಡುಗಡೆ ಮಾಡಲಾಗಿದೆ.

ಫೈರ್‌ಫಾಕ್ಸ್‌ ಬೆಸ್ಟ್‌

ಫೈರ್‌ಫಾಕ್ಸ್‌ ಬೆಸ್ಟ್‌

ಮಾಹಿತಿ ಭದ್ರತೆಗಾಗಿ ಜರ್ಮನ್ ಫೆಡರಲ್ ಆಫೀಸ್ ಮೊಜಿಲ್ಲಾ ಫೈರ್‌ಫಾಕ್ಸ್ ಬ್ರೌಸರ್‌ನ್ನು ಕ್ರೋಮ್, ಎಡ್ಜ್ ಮತ್ತು ಇಂಟರ್ನೆಟ್ ಎಕ್ಸ್‌ಪ್ಲೋರರ್‌ಗಿಂತ ಹೆಚ್ಚು ಸುರಕ್ಷಿತ ಇಂಟರ್‌ನೆಟ್ ಬ್ರೌಸರ್ ಆಗಿದೆ ಎಂದು ವರದಿಯಾಗಿದೆ. ಏಜೆನ್ಸಿ ಫೈರ್‌ಫಾಕ್ಸ್‌ನ್ನು ಸಫಾರಿ, ಒಪೇರಾ ಹಾಗೂ ಮತ್ತಿತರ ಬ್ರೌಸರ್‌ಗಳೊಂದಿಗೆ ಹೋಲಿಸಿಲ್ಲ.

ಫೈರ್‌ಫಾಕ್ಸ್‌ ಬಳಸಲು ಸೂಚನೆ

ಫೈರ್‌ಫಾಕ್ಸ್‌ ಬಳಸಲು ಸೂಚನೆ

ಈ ಸಂಸ್ಥೆ ಜರ್ಮನಿಯ ಸರ್ಕಾರಿ ಅಧಿಕಾರಿಗಳಿಗೆ ಸೈಬರ್ ಸುರಕ್ಷತೆಯ ಅಪಾಯಗಳ ಬಗ್ಗೆ ಸಲಹೆ ನೀಡುತ್ತದೆ. ಹಾಗೂ ಫೈರ್‌ಫಾಕ್ಸ್ ಬಳಕೆಗೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಇಂಟರ್‌ನೆಟ್ ಎಕ್ಸ್‌ಪ್ಲೋರರ್‌ನಲ್ಲಿ ಯಾವುದೇ ಅಂತರ್ನಿರ್ಮಿತ ನವೀಕರಣ ವ್ಯವಸ್ಥೆ ಇಲ್ಲದಂತಹ ವಿಷಯಗಳ ಜೊತೆ ಕ್ರೋಮ್, ಎಡ್ಜ್ ಮತ್ತು ಇಂಟರ್ನೆಟ್ ಬ್ರೌಸರ್‌ಗಳು ಮಾಸ್ಟರ್ ಪಾಸ್‌ವರ್ಡ್ ಕಾರ್ಯವಿಧಾನಕ್ಕೆ ಬೆಂಬಲಿಸದೆ ವಿಫಲವಾಗಿವೆ. ಈ ಮೂರು ಬ್ರೌಸರ್‌ಗಳಲ್ಲಿ, ಟೆಲಿಮೆಟ್ರಿ ಸಂಗ್ರಹವನ್ನು ನಿರ್ಬಂಧಿಸಲು ಯಾವುದೇ ಅವಕಾಶವಿಲ್ಲ ಮತ್ತು ಸಾಂಸ್ಥಿಕ ಪಾರದರ್ಶಕತೆಯ ಕೊರತೆಯಿದೆ ಎಂದು ವರದಿ ಹೇಳಿದೆ.

Best Mobiles in India

Read more about:
English summary
Want To Know If Your Online Data Gets Stolen; Use These Browsers

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X