ಭಯೋತ್ಪಾದನೆ ತಡೆಗೆ ಫೇಸ್‌ಬುಕ್ ಕಾರ್ಯಕ್ಕೆ ಮೆಚ್ಚುಗೆ!!..ಏನು ಮಾಡುತ್ತಿದೆ ಗೊತ್ತಾ?

Written By:

ಫೇಸ್‌ಬುಕ್ 200 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಸುದ್ದಿಯ ಜೊತೆಯಲ್ಲಿಯೇ ಭಯೋತ್ಪಾದನೆ ತಡೆಗೆ ಫೇಸ್‌ಬುಕ್ ಕೈಗೊಂಡಿರುವ ಕ್ರಮ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗುತ್ತಿದೆ.! ಭಯೋತ್ಪಾದನೆ ನಿಗ್ರಹಕ್ಕೆ ಫೇಸ್‌ಬುಕ್ ಯಾವ ಕ್ರಮ ಕೈಗೊಂಡಿದೆ, ಅದರ ಪಾತ್ರವೇನು ಎಂದು ಸಾಮಾಜಿಕ ಜಾಲತಾಣದ ಬಳಕೆದಾರ ಪ್ರಶ್ನೆಗೆ ಭಯೋತ್ಪಾದನೆ ನಿಗ್ರಹದಲ್ಲಿ ಫೇಸ್‌ಬುಕ್ ಪಾತ್ರವೇನು ಎಂಬುದಕ್ಕೆ ಸ್ಪಷ್ಟ ಉತ್ತರ ಸಿಕ್ಕಿದೆ.!!

ಭಯೋತ್ಪಾದನೆ ನಿಗ್ರಹದಲ್ಲಿ ಫೇಸ್‌ಬುಕ್ ಪಾತ್ರ ಕ್ಕೆ ಉತ್ತರ ನೀಡಿರುವ ಫೇಸ್‌ಬುಕ್, ಭಯೋತ್ಪಾದನೆಯನ್ನು ತಡೆಯುವುದಕ್ಕೆ ಕೃತಕ ಬುದ್ಧಿಮತ್ತೆಯನ್ನು ಬಳಕೆ ಮಾಡುವುದಾಗಿ ಹೇಳಿದೆ. ಫೇಸ್‌ಬುಕ್‌ನಲ್ಲಿ ಪ್ರಕಟವಾಗುವ ಭಯೋತ್ಪಾದನೆಗೆ ಸಂಬಂಧಿಸಿದ ಅಂಶಗಳನ್ನು ತೆಗೆದುಹಾಕುವ ರೀತಿಯ ಕೃತಕ ಬುದ್ಧಿಮತ್ತೆಯನ್ನು ಬಳಕೆ ಮಾಡುವುದಾಗಿ ಹೇಳಿದೆ.!!

ಹಾಗಾದರೆ, ಫೇಸ್‌ಬುಕ್ ಬಳಸುತ್ತಿರುವ ಕೃತಕ ಬುದ್ಧಿಮತ್ತೆ ಮೂಲಕ ಭಯೋತ್ಪಾದನೆ ನಿಗ್ರಹ ಚಟುವಟಿಕೆಗಳು ಸಾಧ್ಯವೇ? ಕೃತಕ ಬುದ್ಧಿಮತ್ತೆ ಕಾರ್ಯಗಳು ಹೇಗೆ ನಡೆಯುತ್ತವೆ? ಎಂಬ ಎಲ್ಲಾ ಕುತೋಹಲಕಾರಿ ವಿಷಯಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಇಮೇಜ್-ಮ್ಯಾಚಿಂಗ್!!

ಇಮೇಜ್-ಮ್ಯಾಚಿಂಗ್!!

ಭಯೋತ್ಪಾದಕರ ಫೋಟೊ ಅಥವಾ ವಿಡಿಯೋಗಳನ್ನು ಪ್ರಚಾರ ಮಾಡಲು ಯತ್ನಿಸಿದರೆ ಅದು ಪ್ರಚಲಿತದಲ್ಲಿರುವ ಭಯೋತ್ಪಾದಕರ ಚಿತ್ರಗಳಿಗೆ ಹೋಲಿಕೆಯಾಗುತ್ತದೆಯೇ ಇಲ್ಲವೇ ಎಂಬುದನ್ನು ಇಮೇಜ್- ಮ್ಯಾಚಿಂಗ್ ತಂತ್ರಜ್ಞಾನದ ಮೂಲಕ ಪರಿಶೀಲಿಸುತ್ತದೆ, ಉಗ್ರವಾದವನ್ನು ಪ್ರಚೋದಿಸುವ ವಿಡಿಯೋ ಮತ್ತು ಫೋಟೊವನ್ನು ಪುನರಾವರ್ತನೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಫೇಸ್‌ಬುಕ್ ತಿಳಿಸಿದೆ.

ಕೃತಕ ಅಕ್ಷರ ಬುದ್ಧಿಮತ್ತೆ ಬಳಕೆ.!!

ಕೃತಕ ಅಕ್ಷರ ಬುದ್ಧಿಮತ್ತೆ ಬಳಕೆ.!!

ಭಯೋತ್ಪಾದಕ ಸಂಘಟನೆಗಳಿಗೆ ಸಂಬಂಧಿಸಿದ ಬರಹಗಳನ್ನು ಸಾಮಾಜಿಕ ಜಾಲತಾಣದಿಂದ ತೆಗೆದುಹಾಕುವುದಕ್ಕೆ ಕೃತಕ ಬುದ್ಧಿಮತ್ತೆ ಬಳಕೆ ಮಾಡಲು ಪ್ರಾರಂಭಿಸಿರುವುದು ಇತ್ತೀಚೆಗಷ್ಟೇ ಆದರೂ ಸಹ ಕೃತಕ ಬುದ್ಧಿಮತೆ ಬಳಕೆಯ ವಿಧಾನವನ್ನು ಬದಲಾವಣೆ ಮಾಡಿಕೊಳ್ಳುತ್ತಿದೆ ಎಂದು ಸಂಸ್ಥೆ ಹೇಳಿದೆ.!!

ಭಯೋತ್ಪಾದಕ ಅಪರಾಧಿ ನಿರ್ಧರಿಸುತ್ತದೆ.!!

ಭಯೋತ್ಪಾದಕ ಅಪರಾಧಿ ನಿರ್ಧರಿಸುತ್ತದೆ.!!

ಭಯೋತ್ಪಾದನೆ ವಿರುದ್ಧ ಹೋರಾಡಲು ಫೇಸ್‌ಬುಕ್ ಮಾಡುತ್ತಿರುವ ಇನ್ನೊಂದು ವಿಧಾನವೆಂದರೆ ಪುನರಾವರ್ತನೆಯ ಅಪರಾಧಿಗಳನ್ನು ನಿರ್ಧರಿಸುವುದು!! ಭಯೋತ್ಪಾದಕರು ನಿರಂತರವಾಗಿ ತಮ್ಮ ವಿಧಾನಗಳನ್ನು ಹೆಚ್ಚಿಸುತ್ತಿದ್ದರೆ ಅಂತವರನ್ನು ಗುರುತಿಸಿ ನಿಶೇಧಿಸುವುದು.!!

ಭಯೋತ್ಪಾದನೆ ಗುಣಲಕ್ಷಣಕ್ಕೆ ತಡೆ

ಭಯೋತ್ಪಾದನೆ ಗುಣಲಕ್ಷಣಕ್ಕೆ ತಡೆ

ಭಯೋತ್ಪಾದನೆ ವಿಷಯದಲ್ಲಿ ನಿಷ್ಕ್ರಿಯಗೊಳಿಸಲಾಗಿರುವ ಸಂಖ್ಯೆಯ ಖಾತೆಗಳೊಂದಿಗೆ ಯಾರಾದರೂ ಸ್ನೇಹಿತರಾಗಿದ್ದಲ್ಲಿ ಅಥವಾ ಆ ಖಾತೆಯಂತೆ ಅದೇ ಗುಣಲಕ್ಷಣಗಳನ್ನು ಹಂಚಿಕೊಳ್ಳುತ್ತದೆಯೇ ಎಂಬ ಸಂಕೇತಗಳನ್ನು ಬಳಸುತ್ತೇವೆ ಎಂದು ಫೆಸ್‌ಬುಕ್ ತಿಳಿಸಿದೆ.!!

ಓದಿರಿ:ಫೇಸ್‌ಬುಕ್ ಪ್ರೊಫೈಲ್ ಚಿತ್ರ ಪ್ರೊಟೆಕ್ಟ್ ಮಾಡುವುದು ಹೇಗೆ? ಹೀಗೆ ಮಾಡಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
ಸಾಮಾಜಿಕ ಜಾಲತಾಣದ ಬಳಕೆದಾರ ಪ್ರಶ್ನೆಗೆ ಭಯೋತ್ಪಾದನೆ ನಿಗ್ರಹದಲ್ಲಿ ಫೇಸ್‌ಬುಕ್ ಪಾತ್ರವೇನು ಎಂಬುದಕ್ಕೆ ಸ್ಪಷ್ಟ ಉತ್ತರ ಸಿಕ್ಕಿದೆ.!!
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot