Just In
Don't Miss
- News
ಬರಲಿವೆ ಎಲಿವೇಟೆಡ್ ಇಂಟರ್ಸಿಟಿ ಸೆಮಿ-ಹೈಸ್ಪೀಡ್ ರೈಲುಗಳು: ಭಾರತ ಹಾಗೂ ಕರ್ನಾಟಕದ ಯಾವ ನಗರಗಳ ನಡುವೆ ಸಂಚಾರ?
- Automobiles
ಗ್ರಾಹಕರೇ... ಮಾರುತಿ ಸುಜುಕಿಯಿಂದ ಮಹತ್ವದ ಘೋಷಣೆ
- Movies
ವಾಣಿ ಜಯರಾಂ ಸಾವು: ಮರಣೋತ್ತರ ಪರೀಕ್ಷೆ ವಿವರ ಬಹಿರಂಗ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Sports
IND vs AUS: ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಆಸ್ಟ್ರೇಲಿಯಾವನ್ನು ಬೆಂಬಲಿಸಿದ ಶ್ರೀಲಂಕಾ ಲೆಜೆಂಡ್
- Finance
Twitter: ಟ್ವಿಟ್ಟರ್ನಲ್ಲಿ ಗೋಲ್ಡ್ ಬ್ಯಾಡ್ಜ್ ಉಳಿಸಿಕೊಳ್ಳಬೇಕಾದರೆ ಇಷ್ಟು ಮೊತ್ತ ಪಾವತಿಸಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಆನ್‌ಲೈನಿನಲ್ಲಿ ಹಣಗಳಿಸುವ ಮಾರ್ಗಗಳ ಸಂಪೂರ್ಣ ಮಾಹಿತಿ ಇಲ್ಲಿದೆ!
ಆನ್‌ಲೈನ್ ಜಗತ್ತು ಬೆಳೆದಂತೆಲ್ಲ ಮನುಷ್ಯನ ಜೀವನಶೈಲಿಯು ಬದಲಾಗುತ್ತಾ ಸಾಗಿದೆ. ಮೊದಲೆಲ್ಲಾ ಕೆಲಸ ಮಾಡಬೇಕೆಂದರೆ ಒಂದು ನಿರ್ದಿಷ್ಟ ಸ್ಥಳದಲ್ಲಿ ಸೇರಬೇಕಾಗಿತ್ತು. ಇಂತಿಷ್ಟೇ ಗಂಟೆ ಕಾರ್ಯನಿರ್ವಹಿಸಬೇಕು ಎಂಬುದು ನಿಯಮವಾಗಿತ್ತು. ಆದರೆ, ಇಂಟರ್‌ನೆಟ್ ಎಲ್ಲರಿಗೂ ದೊರೆತ ನಂತರವಂತೂ ಉದ್ಯೋಗದ ಪರಿಕಲ್ಪನೆಯೇ ಬದಲಾಗಿ ಹೋಗಿದೆ. ಅಂದರೆ, ಅಂತರ್ಜಾಲ ಎಂಬ ಅದ್ಭುತ ಮಾಯಾಜಗತ್ತು ಕೈ ತುಂಬಾ ಹಣ ಗಳಿಸುವ ಹಲವಾರು ಅವಕಾಶಗಳನ್ನು ತೆರದಿಟ್ಟಿದೆ ಎಂದರೆ ತಪ್ಪಾಗುವುದಿಲ್ಲ. .

ಹಾಗಾಗಿಯೇ ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಮೂಲಕ ಕೆಲಸ ಮಾಡುವ ಟ್ರೆಂಡ್ ಹೆಚ್ಚುತ್ತಿದೆ. ಅದರಂತೆ ಪಾರ್ಟ್‌ಟೈಂ ಕೆಲಸಗಳು ಕೂಡ ಸೃಷ್ಟಿಯಾಗುತ್ತಿದ್ದು, ನಿಮ್ಮ ಪ್ರತಿಭೆ, ಕೌಶಲಕ್ಕೆ ಸಂಬಂಧಿಸಿದ ಕೆಲಸವನ್ನು ಮಾಡುವ ಅವಕಾಶವು ಸೃಷ್ಟಿಯಾಗಿದೆ.ಇಲ್ಲಿ ನೀವು ಹೇಗೆ ಕಾರ್ಯನಿರ್ವಹಿಸುತ್ತೀರಿ ಎಂಬುದರ ಆಧಾರದಲ್ಲಿ ನಿಮ್ಮ ಸಂಪಾದನೆಯು ನಿರ್ಧಾರವಾಗುತ್ತದೆ. ಹಾಗಾಗಿ, ನಿಮಗೆ ಸಹಾಯವಾಗಲಿ ಎಂದೇ ಆನ್‌ಲೈನ್‌ನಲ್ಲಿ ಏನೆಲ್ಲಾ ಕೆಲಸ ಮಾಡಿ ಕೈ ತುಂಬಾ ಹಣ ಗಳಿಸಬಹುದು ಎಂಬುದನ್ನು ಇಲ್ಲಿ ತಿಳಿಸುವ ಪ್ರಯತ್ನ ಮಾಡಿದ್ದೇವೆ.

ಭಾಷಾಂತರ
ಪ್ರಸ್ತುತ ಭಾಷಾಂತರಕಾರರಿಗೆ ಬಹಳಷ್ಟು ಬೇಡಿಕೆ ಇದೆ. ಒಂದಕ್ಕಿಂತ ಹೆಚ್ಚು ಭಾಷೆಗಳು ನಿಮಗೆ ಗೊತ್ತಿದ್ದರೆ ಭಾಷಾಂತರಕಾರರಾಗಿ ಕಾರ್ಯನಿರ್ವಹಿಸಬಹುದು. ಇಂಗ್ಲಿಷ್ ಭಾಷೆಯಲ್ಲಿ ಹಿಡಿತ ಹಾಗೂ ಒಂದೇರಡು ಪ್ರಾದೇಶಿಕ ಭಾಷೆಗಳ ಬಗ್ಗೆ ಉತ್ತಮ ಜ್ಞಾನ ನಿಮ್ಮಲಿದ್ದರೆ ಈ ಕೆಲಸ ಉತ್ತಮ. ಜತೆಗೆ ಯಾವುದಾದರೊಂದು ಭಾಷೆಯಲ್ಲಿ ತರಬೇತಿ ಪಡೆದು, ಪ್ರಾವಿಣ್ಯತೆ ಹೊಂದಿದ್ದರೆ ಹೆಚ್ಚಿನ ಗಳಿಕೆ ಮಾಡಬಹುದು. ಉತ್ತಮ ಭಾಷಾಂತರ ಕಲೆ ನಿಮ್ಮಲ್ಲಿದ್ದರೆ ಬಹಳಷ್ಟು ಅಂತಾರಾಷ್ಟ್ರೀಯ ಕಂಪನಿಗಳು, ವಿದ್ವಾಂಸರು, ಲೇಖಕರು ನಿಮ್ಮ ಸೇವೆಯನ್ನು ಪಡೆಯಬಹುದು. ಭಾಷಾಂತರಕಾರರಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹಾಗೂ ಆಸಕ್ತಿ ನಿಮ್ಮಲಿದ್ದರೆ fiverr.com ಮತ್ತು upwork.com ನಂತಹ ವೆಬ್‌ಸೈಟ್‌ಗಳಲ್ಲಿ ನಿಮ್ಮ ಭಾಷಾ ಕೌಶಲವನ್ನು ನೀಡಿ ಸೈನ ಅಪ್ ಮಾಡಿ.

ಬ್ಲಾಗಿಂಗ್
ಆನ್‌ಲೈನ್ ಮೂಲಕ ಹಣ ಗಳಿಸುವ ಮತ್ತೊಂದು ಪ್ರಮುಖ ಮಾರ್ಗವೆಂದರೆ ಬ್ಲಾಗಿಂಗ್. ಬ್ಲಾಗ್ ಬರೆಯುವ ಮತ್ತು ನಿರ್ವಹಿಸುವ ಪರಿಣಿತಿ ಹೊಂದಿದ್ದರೆ ನೀವು ಹಣವನ್ನು ಸಂಪಾದಿಸಬಹುದು. ನಿಮ್ಮ ಬ್ಲಾಗ್‌ನ್ನು ಗೂಗಲ್ ಆಡ್‌ಸೆನ್ಸ್ ಜತೆ ಟೈಅಪ್ ಮಾಡಿಕೊಂಡರೆ ನಿಮ್ಮ ಬ್ಲಾಗ್‌ನಲ್ಲಿ ಗೂಗಲ್ ಜಾಹೀರಾತುಗಳನ್ನು ನೀಡುತ್ತದೆ. ನಿಮ್ಮ ಬ್ಲಾಗ್ ಏನಾದರೂ ಗೂಗಲ್ ಆಡ್‌ಸೆನ್ಸ್ ಅನುಮೋದಿಸಿದರೆ ನಿರಂತರ ಹಣವನ್ನು ಗಳಿಸಬಹುದು. ಅದಲ್ಲದೇ, ಅಮೆಜಾನ್ ಮತ್ತಿತರ ವೆಬ್‌ಸೈಟ್‌ಗಳು ಜಾಹೀರಾತುಗಳನ್ನು ನೀಡುತ್ತವೆ. ಬ್ಲಾಗ್‌ನಲ್ಲಿನ ಜಾಹೀರಾತುಗಳನ್ನು ಎಷ್ಟು ಬಾರಿ ಕ್ಲಿಕ್ ಮಾಡಲಾಗಿದೆ ಹಾಗೂ ಎಷ್ಟು ಬಾರಿ ವೀಕ್ಷಿಸಲಾಗಿದೆ ಎಂಬ ಆಧಾರದಲ್ಲಿ ಗೂಗಲ್ ಹಣ ಪಾವತಿಸುತ್ತದೆ.

ಯೂಟ್ಯೂಬ್ ವಿಡಿಯೋ
ಸದ್ಯ ಯೂಟ್ಯೂಬ್ ಅತ್ಯಂತ ಜನಪ್ರಿಯ ವಿಡಿಯೋ ಮಾಧ್ಯಮವಾಗಿದೆ. ವಿಡಿಯೋಗ್ರಾಫಿಯಲ್ಲಿ ಉತ್ತಮ ಜ್ಞಾನವಿದ್ದರೆ ಯೂಟ್ಯೂಬ್ ಮೂಲಕ ನೀವು ಸಂಪಾದಿಸಬಹುದು. ಜಗತ್ತಿನಲ್ಲಿ ಹೆಚ್ಚು ಜನಕ್ಕೆ ಇಷ್ಟವಾಗುವ ಮತ್ತು ಅವರು ಬಯಸುವ, ಹುಡುಕಾಡುವ ಹಾಗೂ ಕುತೂಹಲಕಾರಿ ವಿಷಯದ ವಿಡಿಯೋಗಳನ್ನು ಮಾಡಿ, ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿ. ಅಡುಗೆ ರೆಸಿಪಿಗಳಿಂದ ಹಿಡಿದು ರಾಜಕೀಯ ಸಂದರ್ಶನಗಳವರೆಗೆ ಹಲವಾರು ವಿಷಯಗಳು ಜನರನ್ನು ಸೆಳೆಯುತ್ತವೆ. ನಿಮ್ಮ ಚಾನೆಲ್‌ನ ವೀಕ್ಷಕರು ಹಾಗೂ ಚಂದಾದಾರರ ಸಂಖ್ಯೆಯ ಆಧಾರದಲ್ಲಿ ಹಣ ಬಂದು ನಿಮ್ಮ ಕೈ ಸೇರುತ್ತದೆ.

ಕಂಟೆಂಟ್ ರೈಟಿಂಗ್
ಹವ್ಯಾಸಿ ಕೆಲಸಗಳಲ್ಲಿ ಕಂಟೆಂಟ್ ರೈಟಿಂಗ್ ಕೂಡ ಒಂದು. ಇದು ಅತ್ಯಂತ ಜನಪ್ರಿಯವಾಗಿದ್ದು, ಸಂಶೋಧನಾತ್ಮಕ ಹಾಗೂ ಉತ್ತಮ ಶೈಲಿಯಲ್ಲಿ ಬರೆಯುವ ವೆಬ್ ಕಂಟೆಂಟ್‌ಗೆ ಭಾರೀ ಬೇಡಿಕೆ ಇದೆ. ವೆಬ್ ರಿಕ್ರ್ಯೂಟರ್‌ಗಳು ಹೆಚ್ಚು ಸಂಖ್ಯೆಯಲ್ಲಿ ಓದುಗರನ್ನು ಸೆಳೆಯಬಲ್ಲ, ವಿನೂತನ ಕಂಟೆಂಟ್ ಬರೆಯುವವರ ಶೋಧನೆಯಲ್ಲಿರುತ್ತಾರೆ. Fiverr.com, Upwork.com, Freelancer.com, Elance.com Worknhire.com ಮತ್ತು Lekhaka.com ನಂತಹ ಅನೇಕ ವೆಬ್‌ಸೈಟ್‌ಗಳಲ್ಲಿ ರಿಜಿಸ್ಟರ್ ಆಗುವ ಮೂಲಕ ಕಂಟೆಂಟ್ ರೈಟಿಂಗ್ ಕೆಲಸ ಆರಂಭಿಸಬಹುದು.

ವೆಬ್ ಡೆವಲಪಮೆಂಟ್
ನೀವು ವೆಬ್ ಡಿಸೈನ್ ಹಾಗೂ ಕೋಡಿಂಗ್ ಜ್ಞಾನ ಹೊಂದಿದ್ದರೆ ನಿಮ್ಮ ಮನೆಯಿಂದಲೇ ವೆಬ್ ಡಿಸೈನರ್ ಆಗಿ ಕಾರ್ಯನಿರ್ವಹಿಸಬಹುದು. ಕಂಪನಿಗಳು ಸಾಮಾನ್ಯವಾಗಿ ವೆಬ್ ಡಿಸೈನ್ ಕೆಲಸವನ್ನು ಹೊರ ಗುತ್ತಿಗೆಯಲ್ಲಿ ಮಾಡಿಸಿಕೊಳ್ಳುವುದರಿಂದ ಈ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ. ನೀವು ವೆಬ್ ಡಿಸೈನ್ ಕಲಿಯುವವರಾಗಿದ್ದರೂ ಸಹ ಅನೇಕ ಆನ್‌ಲೈನ್ ಟ್ಯುಟೋರಿಯಲ್‌ಗಳ ಮೂಲಕ ನೀವು ಪರಿಣಿತಿ ಸಾಧಿಸಬಹುದು.

ಆನ್‌ಲೈನ್ ಟ್ಯೂಷನ್ಸ್
ನೀವು ಶಿಕ್ಷಕರಾಗಿದ್ದರೆ ಅಥವಾ ನಿರ್ದಿಷ್ಟ ವಿಷಯವನ್ನು ಕಲಿಸುವ ನೈಪುಣ್ಯತೆ ಹೊಂದಿದ್ದರೆ ಆನ್‌ಲೈನ್ ಟ್ಯೂಷನ್ ಆರಂಭಿಸಬಹುದು. MyPrivateTutor.com, BharatTutors.com, tutorindia.net ನಂತಹ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ, ಆನ್‌ಲೈನ್ ಆನ್ಲೈನ್ ಟ್ಯೂಟರ್ ಆಗಿ ನೊಂದಣಿ ಮಾಡಿಕೊಳ್ಳಿ. ನಿಮ್ಮ ಕೌಶಲಗಳು, ಪ್ರಾವೀಣ್ಯತೆ ಹೊಂದಿರುವ ವಿಷಯಗಳು, ಅನುಭವ, ವಿದ್ಯಾರ್ಹತೆ ಮುಂತಾದ ವಿವರಗಳನ್ನು ನಮೂದಿಸಬೇಕಾಗುತ್ತದೆ.

ಆನ್‌ಲೈನ್ ಮೂಲಕ ವಸ್ತುಗಳ ಮಾರಾಟ
ಆನ್‌ಲೈನ್ ಮೂಲಕ ನಿಮ್ಮದೇ ವಸ್ತುಗಳನ್ನು ಮಾರಿ ಹಣ ಗಳಿಸಬಹುದು. ಮೊದಲು ಯಾವ ವಸ್ತುಗಳನ್ನು ಮಾರಬೇಕೆಂದು ನಿರ್ಧರಿಸಿ, ಅವುಗಳನ್ನು ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ಖರೀದಿಸಿ ಸಂಗ್ರಹಿಸಿಟ್ಟುಕೊಳ್ಳಿ. ನಂತರ ಅವುಗಳಿಗೆ ದರ ನಿಗದಿಪಡಿಸಿ ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಿ. ಇಲ್ಲವೆಂದರೆ ಅಮೆಜಾನ್, ಇಬೇಯಂತಹ ಪೋರ್ಟಾಲ್‌ಗಳಲ್ಲಿ ನೊಂದಣಿ ಮಾಡಿಕೊಂಡು ಉತ್ಪನ್ನಗಳನ್ನು ಮಾರಬಹುದು. ನಿಮ್ಮ ವಸ್ತುಗಳನ್ನು ವೆಬ್‌ಸೈಟ್‌ನಲ್ಲಿ ಲಿಸ್ಟಿಂಗ್ ಮಾಡಲು ಸಣ್ಣ ಮೊತ್ತದ ಶುಲ್ಕ ಪಾವತಿಸಬೇಕಾಗುತ್ತದೆ. ನಿಮ್ಮ ವಸ್ತುಗಳ ಗುಣಮಟ್ಟ ಹಾಗೂ ದರ ಆಧರಿಸಿ ನಿಮ್ಮ ಗಳಿಕೆ ಆರಂಭವಾಗುತ್ತದೆ.

ವರ್ಚ್ಯುವಲ್ ಅಸಿಸ್ಟಂಟ್ (Virtual assistant)
ಒಂದು ಕಂಪನಿಯ ದಿನನಿತ್ಯದ ಕೆಲಸಗಳನ್ನು ಆನ್‌ಲೈನ್ ಮೂಲಕ ಮಾಡುವುದು ವರ್ಚ್ಯುವಲ್ ಅಸಿಸ್ಟಂಟ್‌ನ ಕೆಲಸ ಆಗಿರುತ್ತದೆ. ಮೀಟಿಂಗ್ ಆಯೋಜಜನೆ, ಗ್ರಾಹಕರು ಹಾಗೂ ಹೂಡಿಕೆದಾರರ ಜತೆ ಉತ್ತಮ ಸಂಪರ್ಕ ಸಾಧನೆ, ಆರ್ಡರ್ ಫಾಲೋಅಪ್, ಪವರ್ ಪಾಯಿಂಟ್ ಮತ್ತು ಎಕ್ಸೆಲ್ ಶೀಟ್‌ಗಳ ಮೂಲಕ ಬಿಸಿನೆಸ್ ಡಾಕ್ಯೂಮೆಂಟ್ ತಯಾರಿ, ಬ್ಲಾಗ್ ಮತ್ತು ವೆಬ್‌ಸೈಟ್‌ಗಳ ನಿರ್ವಹಣೆ ಸೇರಿ ಅನೇಕ ಕೆಲಸಗಳನ್ನು ವರ್ಚ್ಯುವಲ್ ಅಸಿಸ್ಟಂಟ್ ಕೆಲಸ ಒಳಗೊಂಡಿದೆ. ಎಲ್ಲಾ ಕೆಲಸಗಳಿಗೆ ಒಬ್ಬೊಬ್ಬರನ್ನು ನೇಮಿಸಿದರೆ ಕಂಪನಿಗೆ ಅಧಿಕ ವೆಚ್ಚವಾಗುತ್ತದೆ. ಅದಕ್ಕಾಗಿಯೇ ಕೆಲಸಗಳನ್ನು ವಿಂಗಡಿಸಿ ಹೀಗೆ ವರ್ಚ್ಯುವಲ್ ಅಸಿಸ್ಟಂಟ್‌ಗಳ ಮೂಲಕ ಮಾಡಿಸುತ್ತಾರೆ. ವರ್ಚ್ಯುವಲ್ ಅಸಿಸ್ಟಂಟ್ ಆಗಿ ಕಾರ್ಯನಿರ್ವಹಿಸಲು ನಿರ್ದಿಷ್ಟ ಶೈಕ್ಷಣಿಕ ಅರ್ಹತೆ ಹಾಗೂ ತರಬೇತಿ ಕೆಲವೊಮ್ಮೆ ಅವಶ್ಯಕವಾಗುತ್ತದೆ. ಉತ್ತಮ ಸಂವಹನ ಕೌಶಲ ಹಾಗೂ ಎಂಎಸ್ ಆಫೀಸ್ನಂತಹ ಇತರೆ ಸಾಫ್ಟ್‌ವೇರ್‌ಗಳ ಬಗ್ಗೆ ಅರಿವಿರಬೇಕಾಗುತ್ತದೆ. elance.com ಮತ್ತು zirtual.com ನಂತಹ ವೆಬ್‌ಸೈಟ್‌ಗಳಲ್ಲಿ ಲಾಗ್‌ಇನ್ ಆಗುವ ಮೂಲಕ ವರ್ಚ್ಯುವಲ್
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470