ಉದ್ಯೋಗಿಗಳನ್ನು ವಜಾ ಮಾಡಲು ಮುಂದಾದ ಅಮೆಜಾನ್‌; ಕಾರಣಗಳೇನು ಗೊತ್ತಾ!?

|

ಹೌದು, ಅಮೆಜಾನ್ ಈಗಾಗಲೇ ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿದೆ ಎಂದು ತಿಳಿದಿಬಂದಿದೆಯಾದರೂ ಈ ಪ್ರಕ್ರಿಯೆ 2023 ರ ಆರಂಭದಲ್ಲಿ ಮುಂದುವರಿಯುತ್ತದೆ ಎಂದು ಜಾಸ್ಸಿ ಸ್ಪಷ್ಟನೆ ನೀಡಿದ್ದು, ಇದರ ಜೊತೆಗೆ ಇದೊಂದು ಅತ್ಯಂತ ಕಷ್ಟಕರ ನಿರ್ಧಾರ ಎಂದು ಹೇಳಿದ್ದಾರೆ. ಇನ್ನು ಅಮೆಜಾನ್‌ನ ಈ ನಿರ್ಧಾರಕ್ಕೆ ಪ್ರಮುಖ ಸಂಭವನೀಯ ಕಾರಣಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಉದ್ಯೋಗಿ

ಹೌದು, ಅಮೆಜಾನ್ ಈಗಾಗಲೇ ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿದೆ ಎಂದು ತಿಳಿದಿಬಂದಿದೆಯಾದರೂ ಈ ಪ್ರಕ್ರಿಯೆ 2023 ರ ಆರಂಭದಲ್ಲಿ ಮುಂದುವರಿಯುತ್ತದೆ ಎಂದು ಜಾಸ್ಸಿ ಸ್ಪಷ್ಟನೆ ನೀಡಿದ್ದು, ಇದರ ಜೊತೆಗೆ ಇದೊಂದು ಅತ್ಯಂತ ಕಷ್ಟಕರ ನಿರ್ಧಾರ ಎಂದು ಹೇಳಿದ್ದಾರೆ. ಇನ್ನು ಅಮೆಜಾನ್‌ನ ಈ ನಿರ್ಧಾರಕ್ಕೆ ಪ್ರಮುಖ ಸಂಭವನೀಯ ಕಾರಣಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಅಮೆಜಾನ್ ಯಾಕೆ ಈ ನಿರ್ಧಾರ ಮಾಡಿದೆ ಗೊತ್ತಾ?

ಅಮೆಜಾನ್ ಯಾಕೆ ಈ ನಿರ್ಧಾರ ಮಾಡಿದೆ ಗೊತ್ತಾ?

ಕಂಪನಿಯ ವಾರ್ಷಿಕ ವಿಮರ್ಶೆಯಲ್ಲಿ ಉದ್ಯೋಗ ಕಡಿತದ ವಿಷಯ ಮುನ್ನೆಲೆಗೆ ಬಂದಿದೆ. ಯಾಕೆಂದರೆ ಕಂಪೆನಿಯು ಕಳೆದ ಹಲವಾರು ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯ ನೇಮಕ ಪ್ರಕ್ರಿಯೆಗಳನ್ನು ನಡೆಸಿದ್ದು, ಕೇವಲ ಎರಡು ವರ್ಷದಲ್ಲಿ 7,98,000 ರಿಂದ 1.6 ಮಿಲಿಯನ್‌ಗೆ ದ್ವಿಗುಣಗೊಳಿಸಿದೆ. ಪರಿಣಾಮ ಅಮೆಜಾನ್‌ನ ಆರ್ಥಿಕತೆಯು ಸವಾಲಿನಲ್ಲಿದೆ ಎಂಬ ಮಾಹಿತಿಯನ್ನು ಪರಿಗಣಿಸಿ ಅಮೆಜಾನ್‌ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.

ಅಮೆಜಾನ್‌ ಇತಿಹಾಸದಲ್ಲೇ ಈ ನಿರ್ಧಾರ ಮಾಡಿರಲಿಲ್ಲ

ಅಮೆಜಾನ್‌ ಇತಿಹಾಸದಲ್ಲೇ ಈ ನಿರ್ಧಾರ ಮಾಡಿರಲಿಲ್ಲ

ಅಮೆಜಾನ್‌ 2001 ರಲ್ಲಿ ಕೆಲವೇ ಕೆಲವು ಉದ್ಯೋಗಿಗಳನ್ನು ಮಾತ್ರ ಅಮೆಜಾನ್ ವಜಾ ಮಾಡಿತ್ತು. ಅಂದರೆ ಕೇವಲ 1,300 ಉದ್ಯೋಗಿಗಳನ್ನು ಮಾತ್ರ ಆ ವೇಳೆ ಅಮಾನತು ಮಾಡಲಾಗಿತ್ತು. ಆದರೆ, ಈ ಬಾರಿ ಅಚ್ಚರಿ ಬೀಳುವ ಹಾಗೆ ಬರೋಬ್ಬರಿ 10,000 ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಅಮಾನತು ಮಾಡಲಾಗುತ್ತದೆ ಎಂದು ಅಂದಾಜಿಸಲಾಗಿದೆ.

ಯಾವ ತಂಡಗಳಿಗೆ ಎಫೆಕ್ಟ್ ಆಗಲಿದೆ

ಯಾವ ತಂಡಗಳಿಗೆ ಎಫೆಕ್ಟ್ ಆಗಲಿದೆ

ಅಮೆಜಾನ್ ಹಲವಾರು ವಿಧದಲ್ಲಿ ಗ್ರಾಹಕರಿಗೆ ಸೇವೆ ನೀಡುತ್ತಿದ್ದು, ಡಿವೈಸ್‌ ಹಾಗೂ ಬುಕ್ಸ್‌ ವಿಭಾಗ ಸೇರಿದಂತೆ ಅಮೆಜಾನ್‌ನ ಸ್ಟೋರ್‌ಗಳಲ್ಲಿ ಹೆಚ್ಚಿನ ವಜಾ ಪ್ರಕ್ರಿಯೆಗಳು ನಡೆಯಲಿವೆ ಎಂದು ತಿಳಿದುಬಂದಿದೆ.

ಭಾರತದಲ್ಲಿ ಉದ್ಯೋಗಿಗಳ ಗತಿ ಏನು?

ಭಾರತದಲ್ಲಿ ಉದ್ಯೋಗಿಗಳ ಗತಿ ಏನು?

ಭಾರತದಲ್ಲಿನ ಅಮೆಜಾನ್‌ ಉದ್ಯೋಗಿಗಳಲ್ಲಿ ಎಷ್ಟು ಜನ ವಜಾಗೊಳ್ಳುತ್ತಾರೆ ಎಂಬುದನ್ನು ಅಮೆಜಾನ್‌ ಖಚಿತವಾಗಿ ಹೇಳದಿದ್ದರೂ ಭಾರತದಲ್ಲಿ ನೂರಾರು ಉದ್ಯೋಗಿಗಳು ವಜಾಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಪ್ರಮುಖವಾಗಿ ಅಮೆಜಾನ್‌ನ ಬ್ಯಾಕೆಂಟ್‌ ಟೀಮ್‌ಗಳು, ರಿಟೇಲ್‌ ಆಪರೇಷನ್ಸ್‌ ವಿಭಾಗದ ಉದ್ಯೋಗಿಗಳಿದ್ದಾರೆ.

ವಜಾಗೊಳಿಸಿದ ನೌಕರರಿಗೆ ಸಿಗುವ ಲಾಭ ಏನೇನು ಗೊತ್ತಾ?

ವಜಾಗೊಳಿಸಿದ ನೌಕರರಿಗೆ ಸಿಗುವ ಲಾಭ ಏನೇನು ಗೊತ್ತಾ?

ವಜಾಗೊಳಿಸಿದ ನೌಕರರಿಗೆ ಸಾಮನ್ಯವಾಗಿ ಅಲ್ಲೆ ಕೆಲವರಿಗೆ ಉದ್ಯೋಗ ನೀಡಲು ಅಮೆಜಾನ್ ಮುಂದಾಗಿದೆ. ಅಂದರೆ ಯಾವ ವಿಭಾಗದಲ್ಲಿ ಉದ್ಯೋಗಿಗಳ ಸಮಸ್ಯೆ ಇದೆಯೋ ಅಲ್ಲಿಗೆ ಕೆಲವರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ ಎನ್ನಲಾಗಿದೆ. ಜೊತೆಗೆ ವಜಾಗೊಳ್ಳುವ ಉದ್ಯೋಗಿಗಳು ವಿಶೇಷ ಸಂಬಳವನ್ನೂ ಸಹ ಪಡೆದುಕೊಳ್ಳಲಿದ್ದಾರೆ. ಇದಿಷ್ಟೇ ಅಲ್ಲದೆ ಆರೋಗ್ಯ ವಿಮೆ, ಬಾಹ್ಯ ಉದ್ಯೋಗ ಸೌಲಭ್ಯ ಸಹ ಲಭ್ಯವಾಗಲಿದೆ.

ಅಮೆಜಾನ್‌ನ ಭವಿಷ್ಯದ ಯೋಜನೆಗಳೇನು?

ಅಮೆಜಾನ್‌ನ ಭವಿಷ್ಯದ ಯೋಜನೆಗಳೇನು?

ಅಮೆಜಾನ್ ಈ ಹಿಂದೆ ಅನಿಶ್ಚಿತತೆ ಮತ್ತು ಕಷ್ಟಕರ ಆರ್ಥಿಕ ಪರಿಸ್ಥಿತಿಯನ್ನು ಎದುರಿಸಿದ್ದು, ಅಮೆಜಾನ್ ಎಲ್ಲಾ ಪ್ರಮುಖ ವ್ಯವಹಾರಗಳಲ್ಲಿ ದೊಡ್ಡ ಅವಕಾಶಗಳನ್ನು ಹೊಂದಿರಲಿದೆ ಎಂದು ಅಮೆಜಾನ್ ಸಿಇಒ ಆಂಡಿ ಜಾಸ್ಸಿ ತಮ್ಮ ಮೆಮೋ ಮೂಲಕ ಮಾಹಿತಿ ನೀಡಿದ್ದಾರೆ.

ಇನ್ನೂ  ಹೆಚ್ಚಿನ ಉದ್ಯೋಗ ಕಡಿತ ಸಾಧ್ಯತೆ

ಇನ್ನೂ ಹೆಚ್ಚಿನ ಉದ್ಯೋಗ ಕಡಿತ ಸಾಧ್ಯತೆ

ಕಂಪನಿಯ ವಾರ್ಷಿಕ ಯೋಜನಾ ಪ್ರಕ್ರಿಯೆಯು ಹೊಸ ವರ್ಷಕ್ಕೆ ಮುಂದುವರೆಯಲಿದ್ದು, ಆ ನಿರ್ಧಾರಗಳನ್ನು 2023 ರ ಆರಂಭದಲ್ಲಿ ಪ್ರಭಾವಿತ ಉದ್ಯೋಗಿಗಳು ಹಾಗೂ ಸಂಸ್ಥೆಗಳಿಗೆ ಮಾಹಿತಿ ನೀಡಲಾಗುತ್ತದೆ ಎಂದು ಸಿಇಒ ಹೇಳಿದ್ದಾರೆ.

Best Mobiles in India

Read more about:
English summary
In the midst of Amazon's layoff process, see this article explaining why Amazon made this decision.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X